ಯಾವುದೇ ಅಭ್ಯಾಸವು ಹೆಚ್ಚಾದರೆ ಅದು ಕೆಟ್ಟ ಅಭ್ಯಾಸವಾಗಿ ನಂತರ ಚಟವಾಗಿ ಬದಲಾಗಿ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ಅನೇಕ ಚಟಗಳಿಗೆ ಮನುಷ್ಯರು ಬಲಿಯಾಗುತ್ತಿದ್ದಾರೆ. ಕೆಲವು ಚಟಗಳು ಅವರನ್ನೇ ಕಾಡಿದರೆ, ಕೆಲವು ಚಟಗಳು ಕುಟುಂಬದ ಹಾಗೂ ಸಮಾಜದ ನೆಮ್ಮದಿಯನ್ನು ಹಾಳು ಮಾಡಬಹುದು ಹಾಗಾಗಿ ಇಂತಹ ಚಟಗಳಿಗೆ ದಾಸರಾಗಿರವರನ್ನು ಸಂಭಾಳಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ಅದರಲ್ಲೂ ಕುಡಿತದ ಚಟದ ಗಳಿಗೆ ದಾಸರಾದರಂತೂ ಅವರಿಂದ ಅವರ ತಾಯಿ ತಂದೆ ಹೆಂಡತಿ ಮಕ್ಕಳು ಎಲ್ಲರೂ ಸಹ ದುಃಖ ಪಡಬೇಕಾಗುತ್ತದೆ.
ಕೆಲವೊಮ್ಮೆ ಕುಡಿತಕ್ಕೆ ದಾಸರಾಗಿ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳಿರುವವರು ಇದ್ದಾರೆ. ಎಲ್ಲ ಚಟಗಳಿಗಿಂತ ಬಹಳ ಕೆಟ್ಟ ಚಟ ಇದೇ ಎನ್ನಬಹುದು ಗಾಂಧೀಜಿಯವರಿಗೆ ಒಂದು ಮಹದಾಸೆ ಇತ್ತು ಅದೇನೆಂದರೆ, ನನ್ನ ದೇಶ ಬಡತನದಲ್ಲಿ ಇದ್ದರೂ ಪರವಾಗಿಲ್ಲ, ಕುಡಿತ ಮುಕ್ತವಾಗಿ ಇರಬೇಕು ಎಂದು. ಅವರು ಪಾನಮುಕ್ತ ಗ್ರಾಮ ಮುಂತಾದ ಕನಸುಗಳನ್ನು ಕಂಡಿದ್ದರು. ಇಂದು ದೇಶ ಉನ್ನತಿಯತ್ತ ಹೋಗುತ್ತಿದೆ, ಜನರು ವಿದ್ಯಾವಂತರಾಗಿ ನಾಗರಿಕರಾಗುತ್ತಿದ್ದಾರೆ.
ಆದರೂ ಕೂಡ ಈ ದುಷ್ಚಟಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಇದರಿಂದ ಕುಟುಂಬದವರು ನೋವು ಅವಮಾನ ಅನುಭವಿಸಿದರೆ ಸ್ವತಃ ದಾಸರಾಗಿರುವವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಕೊನೆಗೆ ಪ್ರಾಣ ಕೂಡ ಹೋಗಬಹುದು. ಆದ್ದರಿಂದ ಅತಿಯಾಗಿ ಮದ್ಯಪಾನ ಮಾಡುವವರನ್ನು ಯಾರು ಸಹಿಸುವುದಿಲ್ಲ, ಅವರಿಗೆ ಗೌರವವನ್ನು ಕೊಡುವುದಿಲ್ಲ. ಒಂದು ರೀತಿಯಲ್ಲಿ ಈ ಸಮಾಜದಲ್ಲಿ ಅವರಿಗೆ ಮೂರು ಪೈಸೆ ಮರ್ಯಾದೆ ಕೂಡ ಇಲ್ಲ ಎನ್ನಬಹುದು.
ಈ ರೀತಿ ಅತಿಯಾಗಿ ಕುಡಿತದ ಅಡಿಕ್ಷನ್ಗೆ ಒಳಗಾಗಿರುವವರನ್ನು ಅದರಿಂದ ಆಚೆ ತರದೆ ಅವರನ್ನು ಉದ್ದಾರ ಮಾಡಲು ಆಗುವುದಿಲ್ಲ. ಅದಕ್ಕಾಗಿ ಈ ರೀತಿ ಚಟಕ್ಕೆ ಒಳಗಾಗಿರುವ ಆತ್ಮೀಯರ ಬಳಿ ಒಳ್ಳೆ ಮಾತುಗಳನ್ನು ಹೇಳಿಸುತ್ತಾರೆ. ಕೆಲವೊಮ್ಮೆ ಆಸ್ಪತ್ರೆಗಳು ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಮಾಡಿಸುತ್ತಾರೆ. ಹಲವು ಮಾತ್ರೆ ಔಷಧಿಗಳನ್ನು ಕೂಡ ಕೊಡುತ್ತಾರೆ .ಜೊತೆಗೆ ಡಿ ಆಡಿಕ್ಷನ್ ಕೇಂದ್ರಗಳಿಗೂ ಸೇರಿಸಿ ಅಲ್ಲಿ ಆದರೂ ಇದನ್ನು ಬಿಡಿಸುತ್ತಾರೆ ಎಂದು ಪ್ರಯತ್ನಪಟ್ಟಿರುತ್ತಾರೆ. ಇಷ್ಟೆಲ್ಲಾ ಹರಸಾಹಸ ಮಾಡಿಯೂ ಕೂಡ ಫಲಿತಾಂಶ ಕಾಣದೆ ಎಷ್ಟೋ ಜನ ಬೇಸರ ಹೊಂದಿದ್ದಾರೆ.
ಅಂತವರಿಗೆಲ್ಲ ಈಗ ಒಂದು ಸಿಹಿ ಸುದ್ದಿ. ಅದೇನೆಂದರೆ ಕೇವಲ 33 ದಿನಗಳಲ್ಲಿ ನಿಮ್ಮ ಗಂಡ ಅಥವಾ ಮಗ ಅಥವಾ ಸ್ನೇಹಿತ ಯಾರೇ ಈ ರೀತಿ ಕುಡಿತದ ಅಡಿಕ್ಷನ್ಗೆ ಒಳಗಾಗಿದ್ದರು. ಅವರನ್ನು ಅದರಿಂದ ಸಂಪೂರ್ಣವಾಗಿ ಹೊರ ತರಬಹುದು ಅದಕ್ಕಾಗಿ ನೀವು ತಪ್ಪದೆ ಈ ತಂತ್ರವನ್ನು 33 ದಿನಗಳ ಕಾಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಷ್ಟೇ ಇದು ಔಷಧಿ ಅಲ್ಲ ಬದಲಾಗಿ ಇದೊಂದು ತಂತ್ರ.
ಈ ತಂತ್ರವನ್ನು ನಂಬಿಕೆ ಇಟ್ಟು ನಿಷ್ಠೆಯಿಂದ ಮಾಡಿದರೆ ಖಂಡಿತ ಇದು ಫಲ ಕೊಡುತ್ತದೆ, ಬೇಕಾದರೆ ಇದನ್ನು ನೀವು ಪರೀಕ್ಷಿಸಿ ನೋಡಿ. ಅದೇನೆಂದರೆ ಪ್ರತಿ ರಾತ್ರಿ ನೀವು ಮಲಗುವ ಮುನ್ನ ಶುದ್ಧವಾದ ನೀರನ್ನು ಒಂದು ಗಾಜಿನ ಲೋಟದಲ್ಲಿ ತೆಗೆದುಕೊಂಡು ಅದನ್ನು ಯಾರು ಕುಡಿತದ ಚಟಕ್ಕೆ ದಾಸರಾಗಿದ್ದಾರೋ ಅವರ ಮುಂದೆ ಅವರು ನಿಮ್ಮ ಗಂಡನಾಗಿದ್ದರೆ ನನ್ನ ಗಂಡ ಕುಡಿತದ ಚಟವನ್ನು ಬಿಡುತ್ತಾನೆ, ಇದರಿಂದ ನಾನು ಸಂತೋಷವಾಗಿ ಇರುತ್ತೇನೆ ಎಂದು 33 ಬಾರಿ ಹೇಳಬೇಕು. ಈ ರೀತಿ ಪ್ರತಿದಿನವೂ ಆ ನೀರನ್ನು ಬದಲಾಯಿಸುತ್ತಾ ಪ್ರತಿರಾತ್ರಿ 33 ಬಾರಿ 33 ದಿನಗಳವರೆಗೆ ಮಾಡಿದರೆ ಖಂಡಿತ ಒಳ್ಳೆಯ ಫಲಿತಾಂಶ ಕಾಣುತ್ತೀರಿ.