ಮೂಲ ಚಾಲನ ಪರವಾನಗಿ DL ಅಂದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನಗಳನ್ನು ಓಡಿಸುವುದು ಅಪರಾಧ, ಈ ರೀತಿ ಮಾಡುವುದು ಸಂಚಾರಿ ನಿಯಮದ ಉಲ್ಲಂಘನೆ ಆಗುವ ಕಾರಣ ಇದಕ್ಕೆ ಸರ್ಕಾರ ದಂಡ ಕೂಡ ವಸೂಲು ಮಾಡುತ್ತದೆ. ಒಂದು ವೇಳೆ ನಿಮ್ಮ ಬಳಿ DL ಇದ್ದರೂ ಕೂಡ ಅದನ್ನು ಟ್ರಾಫಿಕ್ ಪೊಲೀಸ್ ಕೇಳಿದಾಗ ಪ್ರದರ್ಶಿಸದೆ ಹೋದರೆ ಆ ಸಮಯದಲ್ಲೂ ಕೂಡ ದಂಡ ಬೀಳುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ವಾಹನ ತೆಗೆದುಕೊಂಡು ರಸ್ತೆಗಿಳಿಯುವಾಗ ಮೊದಲು ಅದಕ್ಕೆ ಸಂಬಂಧಪಟ್ಟ ಎಲ್ಲ ಡಾಕ್ಯುಮೆಂಟ್ಗಳು ಇದೆಯಾ ಎಂದು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ನೀವು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದು ಅದು ಕಳೆದು ಹೋಗಿದ್ದರೆ ಮತ್ತೆ ಡ್ರೈವಿಂಗ್ ಲೈಸೆನ್ಸ್ ಪ್ರತಿ ಪಡೆದ ಬಳಿಕವೇ ನೀವು ರಸ್ತೆಯಲ್ಲಿ ವಾಹನ ಓಡಿಸಬೇಕು.
ಮೊದಲೆಲ್ಲಾ ಈ ರೀತಿ ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆಯಲು RTO ಕಛೇರಿಗಳಿಗೆ ಅಲೆಯಬೇಕಾಗಿತ್ತು. ಮೊದಲ ಬಾರಿಗೆ ಈ ಚಾಲನ ಪರವಾನಗಿ ಪಡೆದುಕೊಳ್ಳಲು ಪರೀಕ್ಷೆಗಳನ್ನೂ ಎದುರಿಸಬೇಕು. ಆದರೆ DL ಮತ್ತು DL ಸಂಖ್ಯೆ ಪಡೆದುಕೊಂಡರೆ ಅದು ಕಳೆದು ಹೋದ ನಂತರ ನಿಮ್ಮ ಮೂಲ ಡ್ರೈವಿಂಗ್ ಲೈಸನ್ಸ್ ಪಡೆದುಕೊಳ್ಳುವುದು ಬಹಳ ಸುಲಭ. ಅದಕ್ಕಾಗಿ ಪದೇ ಪದೇ RTO ಕಛೇರಿಗೆ ಹೋಗುವ ಅವಶ್ಯಕತೆಯೂ ಇಲ್ಲ.
ಆನ್ಲೈನ್ ಪೋರ್ಟಲ್ ಮೂಲಕ ಅಪ್ಲೈ ಮಾಡಿ ನೀವು ನಿಮ್ಮ ಡಿಎಲ್ ಅನ್ನು ಪಡೆದುಕೊಳ್ಳಬಹುದು. ಈಗ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ ಹೆಚ್ಚಾಗಿ ನಡೆಯುತ್ತಿರುವುದರಿಂದ ಭಾರತದ ಸಾರಿಗೆ ಇಲಾಖೆ ಕೂಡ ಇಂತಹದೊಂದು ವ್ಯವಸ್ಥೆಯನ್ನು ದೇಶದ ಎಲ್ಲಾ ವಾಹನ ಚಾಲಕರಿಗಾಗಿ ಮಾಡಿಕೊಟ್ಟಿದೆ. ಯಾವ ರೀತಿ ಆನ್ಲೈನ್ ಅಲ್ಲಿ ಅಪ್ಲೈ ಮಾಡಿ ಇದನ್ನು ಪಡೆದುಕೊಳ್ಳುವುದು ಎನ್ನುವುದಕ್ಕೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ನಿಮ್ಮ ಮೂಲ ವಾಹನ ಪರವಾನಗಿ ಕಳೆದು ಹೋಗಿದ್ದರು. ನಿಮ್ಮ DL ಸಂಖ್ಯೆ ಮರೆತು ಹೋಗಿದ್ದರೂ ಕೂಡ ಹೊಸ DL ಅಥವಾ ಹಳೆ DL ಅನ್ನು ಮರಳಿ ಪಡೆದುಕೊಳ್ಳಬಹುದು. ಇದನ್ನು ಮಾಡುವ ಮೊದಲು ನಿಮ್ಮ ಮೊಬೈಲ್ ಫೋನ್ನಲ್ಲಿ ಗೂಗಲ್ ಗೆ ಹೋಗಿ ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ ಪೋರ್ಟಲ್ ಗೆ ಭೇಟಿ ಕೊಡಿ. ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆನ್ಲೈನ್ ಪೋರ್ಟಲ್ ಆದ ಸಾರಥಿ ಟ್ರಾನ್ಸ್ಪೋರ್ಟ್ ಆನ್ಲೈನ್ ಪೋರ್ಟಲ್ ನಿಮ್ಮ ಮೊಬೈಲ್ ಫೋನ್ ಮೇಲೆ ತೆರೆದುಕೊಳ್ಳುತ್ತದೆ.
ಅಲ್ಲಿ ಚಾಲನ ಪರವಾನಿಗೆ ಸಂಬಂಧಪಟ್ಟ ಹಾಗೆ ಅನೇಕ ಆಪ್ಷನ್ ಗಳು ಇರುತ್ತವೆ. ಅದರಲ್ಲಿ ನಿಮ್ಮ ಮೂಲ DL ಕಳೆದು ಹೋಗಿದ್ದರೆ ನಕಲಿ DL ಗಾಗಿ ಅರ್ಜಿ ಸಲ್ಲಿಸಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ. ಈಗ ಅದರಲ್ಲಿ ನಿಮ್ಮ ಹುಟ್ಟಿದ ದಿನಾಂಕ, ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ, ಇನ್ನೂ ಮುಂತಾದ ವಿವರಗಳನ್ನು ಭರ್ತಿ ಮಾಡಿ. ನಿಮ್ಮ RTO ಕಛೇರಿಯನ್ನು ಕೂಡ ಆರಿಸಿ ಸಬ್ಮಿಟ್ ಮಾಡಿ.
ಈ ರೀತಿ ಎಲ್ಲ ವಿವರಗಳನ್ನು ಸಲ್ಲಿಸಿದಾಗ ನಿಮ್ಮ ಹಳೆಯ ವಾಹನ ಪರವಾನಗಿ ಇದ್ದರೆ ಅದರ ವಿಳಾಸವು ನಿಮ್ಮ ತೆರೆ ಮೇಲೆ ಕಾಣಿಸುತ್ತದೆ. ಅದನ್ನೇ ಉಳಿಸಿಕೊಳ್ಳಲು ಇಚ್ಛೆ ಪಟ್ಟರೆ ಮುಂದುವರಿಯಿರಿ, ಇಲ್ಲ ಅದನ್ನು ಬದಲಾಯಿಸ ಬೇಕಿದ್ದರೆ ವಿವರಗಳನ್ನು ತುಂಬಿ ಬದಲಾಯಿಸಿ. ಈ ಪ್ರಕ್ರಿಯೆಯ ಮುಗಿದ ಮೇಲೆ ಅಂಚೆ ಮೂಲಕ ನಿಮ್ಮ ಹೊಸ ಡಿಎಲ್ ನಿಮ್ಮ ಕೈ ಸೇರುತ್ತದೆ. ಒಂದು ವೇಳೆ ಹಳೇ ಡಿಎಲ್‌ಗೆ ಸಂಬಂಧ ಪಟ್ಟ ಹಾಗೆ ಯಾವುದೇ ಮಾಹಿತಿ ಇದ್ದರೂ ಕೂಡ ಅದನ್ನು ತುಂಬಿಸುವ ಮೂಲಕ ಅದರ ನಕಲಿ ಕಾರ್ಡ್ ಪಡೆದುಕೊಳ್ಳಬಹುದು.