Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಎಲ್ಲರಿಗೂ ತಿಳಿದಿರುವಂತೆ ಈ ವರ್ಷ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ (drought) ಎದುರಾಗಿದೆ. ಮೂರು ಹಂತಗಳಲ್ಲಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಬಲ ಪರಿಹಾರದ ಹಣಕ್ಕಾಗಿ ಎದುರು ನೋಡಲಾಗುತ್ತಿದೆ.
ಇದರ ಕುರಿತ ಬೆಳವಣಿಗೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಮಾಹಿತಿ ಹಂಚಿಕೊಂಡಿದ್ದಾರೆ, ತಮ್ಮ ಟ್ವಿಟ್ಟರ್ ಜಾಲತಾಣದ ಖಾತೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಬರ ಪರಿಹಾರದ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ರಾಜ್ಯದಿಂದ ಮೂವರು ಸಚಿವರು ಕೇಂದ್ರಕ್ಕೆ ಹೋದರು ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ.
ಕೇಂದ್ರ ಸರ್ಕಾರವು ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನು ಪ್ರಾಥಮಿಕ ಸಭೆಯನ್ನೇ ನಡೆಸದ ಕಾರಣ ರೈತರಿಗೆ ತೊಂದರೆ ಆಗಬಾರದು ಎಂದು ರಾಜ್ಯ ಸರ್ಕಾರದ ವತಿಯಿಂದ ತುರ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮೊದಲ ಕಂತಿನಲ್ಲಿ ಅರ್ಹ ರೈತರಗಳ ಖಾತೆಗೆ DBT ಮೂಲಕ ತಲಾ ರೂ.2,000 ದವರೆಗೆ ಬೆಳೆ ಪರಿಹಾರ ಹಣವನ್ನು (Crop loss Compensation ) ಬಿಡುಗಡೆ ಮಾಡುತಿದ್ದೇವೆ ಎಂದು ತಿಳಿಸಿ ಬರದ ಸಂಕಷ್ಟದಲ್ಲಿರುವ ನಾಡಿನ ಸಮಸ್ತ ರೈತರ ಜೊತೆಗೆ ನಾವಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಈ ಪ್ರಕಾರವಾಗಿ ಶೀಘ್ರದಲ್ಲೇ ರೈತರಿಗೆ ಮೊದಲನೇ ಕಂತಿನ ರೂಪದಲ್ಲಿ ರೂ.2000 ವರೆಗೂ ಕೂಡ ಬರ ಪರಿಹಾರದ ಹಣ ಕೊಡುವುದು ಖಾತ್ರಿಯಾಗಿದೆ. ಆದರೆ ಪರಿಹಾರದ ಹಣವನ್ನು ಪಡೆಯಲು ರೈತನಿಗೆ ಕೆಲ ದಾಖಲೆಗಳು ಕಡ್ಡಾಯವಾಗಿದೆ. ಅದರಲ್ಲಿ ಈ ವರ್ಷ ರೈತನ FID ಹೊಂದಿದ್ದರೆ ಮಾತ್ರ ಸಹಾಯಧನ, ಪರಿಹಾರದ ಹಣ, ಸಬ್ಸಿಡಿ ಮುಂತಾದ ಸರ್ಕಾರ ಅನುದಾನಗಳನ್ನು ಪಡೆಯಲು ಸಾಧ್ಯ ಎಂದು ಘೋಷಿಸಲಾಗಿದೆ.
ಬರ ಪರಿಹಾರದ ಹಣ DBT ಮೂಲಕ ರೈತರ ಖಾತೆಗೆ ವರ್ಗಾವಣೆಯಾಗಲು ರೈತನು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ (Fruits Website) ನೋಂದಾಯಿಸಿಕೊಂಡು ರೈತರು FID ಮಾಡಿಸಿರಬೇಕು. FID ಮಾಡಿಸುವಾಗ ರೈತರು ತಪ್ಪದೆ ತಮ್ಮ ಎಲ್ಲಾ ಜಮೀನುಗಳ ಸರ್ವೆ ನಂಬರ್ ನ್ನು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ನೀಡಿ ದಾಖಲಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಈ ರೀತಿ FID ಪಡೆದಿರುವ ರೈತರಿಗಷ್ಟೇ ಮುಖ್ಯಮಂತ್ರಿಗಳ ಮೊದಲ ಕಂತಿನ 2,000ರೂ ವರೆಗಿನ ಪರಿಹಾರದ ಹಣ ಮತ್ತು ನಂತರ ಸಿಗುವ ಅನುದಾನಗಳು ವರ್ಗಾವಣೆಯಾಗುವುದು.
ನೀವು ನಿಮ್ಮ ಮೊಬೈಲ್ ನಲ್ಲಿ ಇದನ್ನು ಚೆಕ್ ಮಾಡಿಕೊಳ್ಳಬಹುದು ಅದಕ್ಕಾಗಿ ಈ ಸರಳ ಹಂತಗಳನ್ನು ಪಾಲಿಸಿ:-
* ಮೊದಲಿಗೆ fruitspmk.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ.
* Farmers Registration and Unified beneficiary Information System PM-KISAN ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ.
* ರೈತನ ಆಧಾರ್ ನಂಬರ್ ಕೇಳಲಾಗಿರುತ್ತದೆ, ಅದನ್ನು ನಮೂದಿಸಿ Search ಬಟನ್ ಕ್ಲಿಕ್ ಮಾಡಿ.
* FruitsID 16 ಸಂಖ್ಯೆ ಮತ್ತು ನಿಮ್ಮ ಹೆಸರನ್ನು ತೋರಿಸಿದರೆ ನಿಮ್ಮ FID ಕ್ರಿಯೇಟ್ ಆಗಿದೆ ಎಂದು ಅರ್ಥ, ಅದನ್ನು ತಪ್ಪದೆ ನೋಟ್ ಮಾಡಿ ಇಟ್ಟುಕೊಳ್ಳಿ.
* ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಬಟನ್ ಕ್ಲಿಕ್ ಮಾಡಿದಾಗ Fruits ID ಹಾಗೂ ಹೆಸರು ತೋರಿಸದೆ object reference not set to an instance of an object ಅಥವಾ Aadhar number number is incorrect ಅಥವಾ no data found ಎಂದು ಇದ್ದರೆ ಇನ್ನು ಸಹ ಈ ರೈತನ ಹೆಸರಿನಲ್ಲಿ FID ಆಗಿಲ್ಲ ಎಂದರ್ಥ. ತಕ್ಷಣ ರೈತ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಕೃಷಿ ಇಲಾಖೆ ಕಚೇರಿಗಳಿಗೆ ಹೋಗಿ FID ಮಾಡಿಸಿಕೊಳ್ಳಬಹುದು.
* FRUITS ಫಲಿತಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆದುಕೊಳ್ಳಬಹುದು ಅಥವಾ ಯಾವುದೇ ಗ್ರಾಮ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಮಾಡಿಸಿಕೊಳ್ಳಬಹುದು.
* ಈಗಾಗಲೇ FID ಹೊಂದಿದ್ದರು ಹೊಸ ಸರ್ವೆ ನಂಬರ್ ಸೇವಿಸಬೇಕು ಎಂದಿದ್ದರೆ ತಪ್ಪದೆ ಅದನ್ನು ಕೂಡ ಮಾಡಿಸಿ.
FID ಮಾಡಿಸಲು ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಬ್ಯಾಂಕ್ ಅಕೌಂಟ್ ಮಾಹಿತಿ
* ತನ್ನ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ RTC ನಂಬರ್.