ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡದಲ್ಲಿ ಅತ್ಯದ್ಭುತವಾದಂತಹ ಸಿನಿಮಾಗಳನ್ನು ನೀಡುವ ಮೂಲಕ ತಮ್ಮದೇ ಆದ ಅಭಿಮಾನ ಬಳಗವನ್ನು ಹುಟ್ಟು ಹಾಕಿದ್ದಾರೆ. ಧ್ರುವ ಸರ್ಜಾ ಅವರು ಪ್ರೇರಣಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಇಬ್ಬರು ಈಗ ಪುಟ್ಟ ಕಂದನ ಆಗಮನದ ನಿರೀಕ್ಷೆಯಲ್ಲಿ ಈ ದಂಪತಿಗಳು ಇದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣ ಅವರು ಈಗ ತುಂಬ ಗರ್ಭಿಣಿಯಾಗಿದ್ದು ಇದೀಗ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ ಈ ಒಂದು ಸೀಮಂತ ಕಾರ್ಯಕ್ರಮವು ತುಂಬಾ ಅದ್ಭುತವಾಗಿ ಬೆಂಗಳೂರಿನ ಆರಾಧ್ಯ ಮಂಟಪದಲ್ಲಿ ನೆರವೇರಿದೆ. ಸೀಮಂತ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಆಪ್ತರು ಹಾಗೂ ತಮ್ಮ ಕುಟುಂಬಸ್ಥರು ಭಾಗವಹಿಸಿ ಸೀಮಂತ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ನೆರವೇರಿಸಿದ್ದಾರೆ.
ಸೀಮಂತ ಕಾರ್ಯಕ್ರಮಕ್ಕೂ ಮೊದಲೇ ನಟ ದ್ರುವ ಸರ್ಜಾ ಅವರು ಬೇಬಿ ಬಂಪ್ ಫೋಟೋ ಶೂಟ್ ಗಳನ್ನು ಮಾಡಿಸಿದ್ದಾರೆ ಆ ಫೋಟೋಗಳೆಲ್ಲವೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಜೋಡಿಗೆ ಎಲ್ಲರೂ ಶುಭಾಶಯಗಳು ತಿಳಿಸುತ್ತಾ ಇದ್ದಾರೆ. ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಅವರು ಸ’ತ್ತ ನಂತರ ಅವರ ಕುಟುಂಬದಲ್ಲಿ ನೋವು ಮನೆ ಮಾಡಿತ್ತು ನಂತರದಲ್ಲಿ ಮೇಘನಾ ರಾಜ್ ಮತ್ತು ಧ್ರುವ ಸರ್ಜಾ ಅವರ ಪುತ್ರ ರಾಯನ್ ರಾಜ್ ಬಂದ ಮೇಲೆ ಕುಟುಂಬದಲ್ಲಿ ಸ್ವಲ್ಪ ಖುಷಿಯ ವಾತಾವರಣ ಮೂಡಿತು. ಧ್ರುವ ಸರ್ಜಾ ಅವರು ರಾಯನ್ ನಲ್ಲಿ ತಮ್ಮ ಅಣ್ಣನನ್ನು ಕಾಣುತ್ತಿದ್ದಾರೆ.
ಇದೀಗ ಈ ಕುಟುಂಬದಲ್ಲಿ ಮತ್ತೊಂದು ಪುಟ್ಟ ಕಂದನ ಆಗಮನದ ನಿರೀಕ್ಷೆ ಇದೆ. ಸೀಮಂತ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಮಾವ ಅರ್ಜುನ್ ಸರ್ಜಾ ಅವರು ಸಹ ಭಾಗವಹಿಸಿದ್ದರು ಅರ್ಜುನ್ ಸರ್ಜಾ ಅವರು ತುಂಬಾ ಲವಲವಿಕೆಯಿಂದ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನೆರವೇರುವಂತೆ ನೋಡಿಕೊಂಡರು. ಅಷ್ಟೇ ಅಲ್ಲದೆ ದ್ರುವ ಸರ್ಜಾ ಅವರ ಮಗುವಿಗಾಗಿ ಒಂದು ಚಿನ್ನದ ಸರವನ್ನು ಸಹ ನೀಡಿದ್ದಾರೆ ಈ ಚಿನ್ನದ ಸರವನ್ನು ಮಗು ಹುಟ್ಟಿದ ನಂತರ ನನ್ನ ಕಡೆಯಿಂದ ನೀಡಲಾಗುವಂತಹ ಗಿಫ್ಟ್ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಧ್ರುವ ಸರ್ಜಾ ಅವರ ಅತ್ತಿಗೆ ಮೇಘನಾ ರಾಜ್ ಅವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೆಯೇ ಜೂನಿಯರ್ ಚಿರು ಸಹ ಈ ಒಂದು ಸೀಮಂತ ಕಾರ್ಯಕ್ರಮದಲ್ಲಿ ಬಂದು ಅರ್ಜುನ್ ಸರ್ಜಾ ಅವರ ಜೊತೆ ತುಂಬಾ ಚೆನ್ನಾಗಿ ಆಟ ಆಡುತ್ತಿದ್ದನು.
ಈ ಒಂದು ವಿಡಿಯೋ ಸಹ ಎಲ್ಲೆಡೆ ವೈರಲ್ ಆಗಿದೆ. ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಸೀಮಂತ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಸಹ ಆಗಮಿಸಿ ಇವರಿಗೆ ಶುಭಾಶಯಗಳು ತಿಳಿಸಿದ್ದಾರೆ ಇವರಿಗೆ ಯಾವ ಮಗು ಆಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ತುಂಬಾ ಅದ್ದೂರಿಯಾಗಿ ನಡೆದಂತಹ ಸೀಮಂತ ಕಾರ್ಯಕ್ರಮದಲ್ಲಿ ಪ್ರೇರಣಾ ಅವರು ಹಸಿರು ಸೀರೆಯನ್ನು ಉಟ್ಟು ದೇವತೆಯಂತೆ ಕಂಗೊಳಿಸುತ್ತಾ ಇದ್ದರು. ನೀವು ಸಹ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರಿಗೆ ಶುಭಾಶಯಗಳು ತಿಳಿಸಬೇಕು ಹಾಗೆಯೇ ಯಾವ ಮಗು ಜನಿಸಬಹುದು ಎಂದು ನಮಗೆ ಕಾಮೆಂಟ್ಸ್ ಮೂಲಕ ಹೇಳಿ.