ರಿಯಾಲಿಟಿ ಶೋಗಳಿಂದ ಪಡೆದ ಸಂಭಾವನೆಯಲ್ಲೆ ಭವ್ಯ ಬಂಗಾಲೆ ಕಟ್ಟಿಸಿದ ವಂಶಿಕಾ ಈ ವಿಡಿಯೋ ನೋಡಿ.

ಕರ್ನಾಟಕದಲ್ಲಿ ಬಾಲನಟನಾಗಿ ಗುರುತಿಸಿಕೊಂಡಂತಹ ಆನಂದ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ನಟನಾ ಲೋಕಕ್ಕೆ ಇಳಿದು ಅದ್ಭುತವಾದಂತಹ ನಟನೆಯನ್ನು ಮಾಡಿ ಮಾಸ್ಟರ್ ಆನಂದ್ ಎಂದೇ ಕರೆಸಿಕೊಂಡರು. ನಟನೆ ಅಷ್ಟೇ ಅಲ್ಲದೆ ನಿರೂಪಕನಾಗಿಯೂ ಸಹ ಮಾಸ್ಟರ್ ಆನಂದ್ ಅವರು ಜನರ ಮನಸ್ಸನ್ನು ತುಂಬಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಯಶಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇಬ್ಬರೂ ಮಕ್ಕಳಿದ್ದಾರೆ. ಆನಂದ್ ಅವರ ಕಿರಿಯ ಮಗಳು ವಂಶಿಕಾ ಒಂದು ವರ್ಷದಿಂದ ಎಲ್ಲರಿಗೂ ಚಿರಪರಿಚಿತ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಪರಿಚಯವಾದ ವಂಶಿಕ ಅವರು ಇದೀಗ ಕರ್ನಾಟಕದೆಲ್ಲೆಡೆ ಹೆಸರು ಮಾಡಿದ್ದಾರೆ. ವಂಶಿಕ ಅವರಿಗೆ ಈಗ ಐದು ವರ್ಷಗಳು ಆದರು ಸಹ ಇವರ ಮಾತಿನ ಶೈಲಿ, ನಟನೆ, ಡೈಲಾಗ್ ಡೆಲಿವರಿ ಹಾಗೆಯೇ ಅವರು ಮಾಡುವ ಡಾನ್ಸ್ ಇದೆಲ್ಲದರಿಂದ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎನ್ನುವಂತಹ ಕಾರ್ಯಕ್ರಮದಲ್ಲಿ ಮೊದಲ ದಿನವೇ ಎಲ್ಲರ ಗಮನವನ್ನು ಸೆಳೆದಂತಹ ವಂಶಿಕ ಅವರು ತಮ್ಮ ಮಾತಿನ ಫಸ್ಟ್ ಲುಕ್ ನಲ್ಲಿ ಎಲ್ಲರಿಗೂ ಇಷ್ಟ ಆದರು. ನಂತರದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಸಾಕಷ್ಟು ಟಾಸ್ಕ್ ಗಳು ಹಾಗೆ ಡೈಲಾಗ್ ಗಳು, ಡಾನ್ಸ್, ಅಭಿನಯದಿಂದ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯ ಕೇಂದ್ರ ಬಿಂದು ಎಂದೆನಿಸಿಕೊಂಡಿದ್ದರು. ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಮಾಸ್ಟರ್ ಆನಂದ್ ಮಗಳು ವಂಶೀಕ ಮತ್ತು ಅವರ ಪತ್ನಿಯ ಯಶಸ್ವಿನಿಯವರು ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ವಿಜೇತರಾಗಿ ಐದು ಲಕ್ಷ ರೂಪಾಯಿಯ ಬಹುಮಾನವನ್ನು ಪಡೆದುಕೊಂಡು ಹಾಗೆಯೇ ಟ್ರೋಪಿಯನ್ನು ಗೆದ್ದರು.

ಈ ಒಂದು ಶೋಗೆ ಬಂದ ನಂತರ ವಂಶಿಕ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡುಕೊಂಡರು ಈ ಶೋನಾ ನಂತರದಲ್ಲಿ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲೂ ಸಹ ಭಾಗವಹಿಸಿ ಹೆಸರನ್ನು ಮಾಡುತ್ತಿದ್ದಾರೆ. ಇದೀಗ ವಂಶಿಕ ಅವರು ಅದ್ಭುತವಾದಂತಹ ನಟಿಯಾಗಿ ಹೊರಹೊಮ್ಮಿದ್ದಾರೆ ಆದ್ದರಿಂದ ಇವರಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಒದಗಿ ಬರುತ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಅದ್ಭುತವಾದಂತಹ ಸಾಧನೆಯನ್ನು ಮಾಡಿಕೊಂಡು ಬರುತ್ತಿರುವಂತಹ ಮಾಸ್ಟರ್ ಆನಂದ ಮಗಳು ವಂಶಿಕ ಅವರು ಯಾರಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ತಮ್ಮ ನಟನೆಯನ್ನು ಮುಂದುವರಿಸುತ್ತಿದ್ದಾರೆ. ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರ ಹೊಟ್ಟೆಯಲ್ಲಿ ವಂಶಿಕ ಹುಟ್ಟಿರುವುದು ಅವರ ಭಾಗ್ಯ ಎಂದೇ ಅವರು ಹೇಳಿಕೊಳ್ಳುತ್ತಾರೆ.

ಕೇವಲ ಐದು ವರ್ಷ ವಯಸ್ಸಿನಲ್ಲಿಯೇ ಇಷ್ಟರ ಮಟ್ಟಿಗೆ ಸಾಧನೆಯನ್ನು ಮಾಡುತ್ತಿರುವಂತಹ ಈ ಹುಡುಗಿ ಮುಂದೆ ದೊಡ್ಡ ಹೆಸರನ್ನು ಮಾಡುವುದರಲ್ಲಿ ಆಶ್ಚರ್ಯ ಏನು ಇಲ್ಲ. ತಂದೆಯನ್ನು ಮೀರಿಸುವಂತಹ ಒಂದು ಅಭಿನಯ ಇವಳಲ್ಲಿ ತುಂಬಿಕೊಂಡಿದೆ. ಮಾಸ್ಟರ್ ಆನಂದ್ ಅವರ ಮನೆಯು ತುಂಬಾ ಅದ್ಭುತವಾಗಿದೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಸಹ ಕಳಿಸಿದ್ದಾರೆ. ಮಾಸ್ಟರ್ ಆನಂದ್ ಅವರು ತಮ್ಮ ಮನೆಯನ್ನು ಅವರಿಗೆ ಹೇಗೆ ಬೇಕೋ ಆ ರೀತಿಯಲ್ಲಿ ನಿರ್ಮಾಣ ಮಾಡಿಕೊಂಡಿದ್ದಾರೆ ವಂಶಿಕ ಅವರನ್ನು ತಮ್ಮ ಮನೆಯ ಮುದ್ದು ಲಕ್ಷ್ಮಿ ಎಂದು ಹೇಳಿಕೊಂಡಿದ್ದು, ವಂಶಿಕ ಅವರು ನಮ್ಮ ಮಗಳಾಗಿರುವುದು ನಮ್ಮ ಅದೃಷ್ಟ ಎಂದು ಸ್ವತಃ ಇವರೇ ಹೇಳಿಕೊಂಡಿದ್ದಾರೆ. ಈ ಹುಡುಗಿಯ ಸಾಧನೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ಮೂಲಕ ನಮಗೆ ತಿಳಿಸಿ.

Leave a Comment

%d bloggers like this: