ಈ-ಖಾತಾ ಎನ್ನುವುದು ಸೈಟ್ ಹಾಗೂ ಮನೆಗೆ ಸಂಬಂಧಿಸಿದಂತೆ ಒಂದು ಅಗತ್ಯ ದಾಖಲೆ ಆಗಿದೆ. ಯಾಕೆಂದರೆ ಯಾವುದೇ ಮನೆ ಕೊಳ್ಳಬೇಕು ಅಥವಾ ಮಾರಬೇಕು ಎಂದರೆ ಅದು ಈ-ಖಾತಾ ಆಗಿರಬೇಕು. ಹಾಗಾಗಿ ಹೆಚ್ಚಿನ ಜನರಿಗೆ ಈ ಪದದ ಪರಿಚಯ ಇದ್ದರೂ ಹಲವರಿಗೆ ಇದರ ಬಗ್ಗೆ ಮಾಹಿತಿ ಹಾಗೂ ಇದರ ಉಪಯೋಗದ ಬಗ್ಗೆ ಸರಿಯಾದ ಸ್ಪಷ್ಟತೆ ಸಿಕ್ಕಿರುವುದಿಲ್ಲ. ಈ-ಖಾತಾ ಎಂದರೆ ಒಂದು ಆಸ್ತಿ ಬಗ್ಗೆ ಇರುವ ಸಂಪೂರ್ಣ ಮಾಹಿತಿ ಎಂದು ಹೇಳಬಹುದು. ಯಾಕೆಂದರೆ ಆಸ್ತಿಯ ಗಾತ್ರ, ಆಸ್ತಿಯ ಮಾಲೀಕ, ಆಸ್ತಿ ವಿವರ, ತೆರಿಗೆ ಒಳಗೊಂಡಂತೆ ಎಲ್ಲಾ ವಿವರಗಳನ್ನು ಹೊಂದಿರುವ ದಾಖಲೆ ಈ-ಖಾತಪತ್ರ.
ಇದನ್ನು ಮಾಲೀಕರು ತಮ್ಮ ಮನೆ ಅಥವಾ ಸೈಟಿಗೆ ಸಂಬಂಧಿಸಿದಂತೆ ಮಾಡಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅವರ ಆಸ್ತಿಗಳಿಗೆ ಈ-ಸ್ವತ್ತು ಎಂದು ಮಾಡಲಾಗುತ್ತದೆ ಹಾಗಾಗಿ ಅಲ್ಲಿ ಈ-ಖಾತ ಅವಶ್ಯಕತೆ ಇರುವುದಿಲ್ಲ. ಆದರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ಗಳಿಗೆ ಈ-ಖಾತಾ ದಾಖಲೆ ಮಾಡಿಸಬೇಕಾಗುತ್ತದೆ. ಇದನ್ನು ಮಹಾನಗರ ಪಾಲಿಕೆಯೇ ಮಾಡಿಕೊಡುತ್ತದೆ. ಸದ್ಯಕ್ಕೆ ಈಗ ಎಲ್ಲಾ ಕಡೆಯೂ ಡಾಟಾ ಓಡಾಡುತ್ತಿರುವುದರಿಂದ ಆಸ್ತಿ ವಿವರಗಳನ್ನು ಕೂಡ ಕಂಪ್ಯೂಟರ್ ಅಲ್ಲಿ ಡಾಟಾ ಮಾಡಿ ಇಡಬೇಕಾದ ಅವಶ್ಯಕತೆ ಇದೆ. ಅದು ಈ-ಖಾತಾಗೆ ಸಂಬಂಧಿಸಿದ ವಿಷಯ ಆಗಿದೆ.
ಈ ಖಾತ ಮಾಡಿಸುವಾಗ ನಿಮ್ಮ ಆಸ್ತಿ ವಿವರಗಳನ್ನೆಲ್ಲ ಒಂದು ಡಾಟ ಆಗಿ ಮಾಡಿ ಅದಕ್ಕೆ ಒಂದು ಪ್ರಾಪರ್ಟಿ ಐಡೆಂಟಿಫಿಕೇಶನ್ ನಂಬರ್ ಕೂಡ ಕೊಡುತ್ತಾರೆ. ಸದ್ಯಕ್ಕೆ ಇದನ್ನು ಈಗ ಬೆಂಗಳೂರಿನಲ್ಲಿ ಕಾಣಬಹುದಾಗಿದೆ. ಒಂದು ಮನೆ ಅಥವಾ ಸೈಟ್ ಎಲ್ಲಾ ತೆರಿಗೆ ನಿಯಮಗಳು ಹಾಗೂ ಕಟ್ಟಡದ ಉಪ ಕಾನೂನುಗಳನ್ನು ಪೂರೈಸಿದರೆ ಮಾತ್ರ ಅದಕ್ಕೆ ಈ-ಖಾತಾಪತ್ರ ನೀಡಲಾಗುತ್ತದೆ. ತೆರಿಗೆ ಸಲ್ಲಿಸುವಾಗ ಈ-ಖಾತ ಪ್ರಮಾಣ ಪತ್ರ ಬಹಳ ಮುಖ್ಯ. ಜೊತೆಗೆ ಆಸ್ತಿ ಮಾರುವಾಗ ಮತ್ತೆ ಖರೀದಿಸುವಾಗ ಕೂಡ ಈ-ಖಾತಾ ಪತ್ರ ಇದ್ದರೆ ಮೋಸ ಹೋಗುವ ಸಾಧ್ಯತೆಗಳು ಕಡಿಮೆ.
ಈ-ಖಾತಾ ಪತ್ರವನ್ನು ಪಡೆಯಲು ಹಲವು ಮಾರ್ಗಗಳಿವೆ. ನೀವು ನಿಮ್ಮ ಹತ್ತಿರದಲ್ಲಿರುವ ಬೆಂಗಳೂರು ಕೇಂದ್ರವನ್ನು ಭೇಟಿಯಾಗಿ ಈ-ಖಾತಾಪತ್ರ ಪಡೆಯಲು ಅಗತ್ಯ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು. ಅಥವಾ ಕೆಲವು ಸರ್ಕಾರದ ಅಧಿಕೃತ ವೆಬ್ಸೈಟ್ಗಳು ಕೂಡ ಇದೆ ಅದಕ್ಕೆ ಲಾಗಿನ್ ಆಗುವ ಮೂಲಕ ಆನ್ಲೈನ್ ಮುಖಾಂತರವೂ ಅರ್ಜಿ ಸಲ್ಲಿಸಬಹುದು. ಒಮ್ಮೆ ಈ-ಖಾತ ಪ್ರಕ್ರಿಯೆ ಪೂರ್ಣಗೊಂಡು ಡಾಟ ಉಳಿದರೆ ನೀವು ಯಾವಾಗ ಬೇಕಾದರೂ ಅದನ್ನು ಡೌನ್ಲೋಡ್ ಮಾಡಿಕೊಂಡು ಹಲವು ಉದ್ದೇಶಗಳಿಗಾಗಿ ಬಳಸಬಹುದು.
ಇದಕ್ಕೆ ಈಗ ಸರ್ಕಾರದ ವೆಬ್ ಸೈಟ್ಗಳ ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ ಸಕಾಲ ಡಾಟ್ ಇನ್ ಅಥವಾ ಕೆ ಎ ಆರ್ ಡಾಟ್ ಎನ್ ಐ ಸಿ ಡಾಟ್ ಇನ್ ಅಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಈ-ಖಾತಾ ಪತ್ರದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಎಂ ಆರ್ ಸಿ ಡಾಟ್ ಜಿ ಓ ವಿ ಡಾಟ್ ಇನ್ ಈ ವೆಬ್ಸೈಟ್ ಅಲ್ಲಿ ಈ-ಖಾತ ಪ್ರಮಾಣ ಪತ್ರವನ್ನು ನೋಡಬಹುದು. ಇದಕ್ಕೆ ಲಾಗಿನ್ ಆಗಿ ಆಸ್ತಿಯ ನಕಲು ಈ ಖಾತಪತ್ರಕ್ಕಾಗಿ ಕೂಡ ಅರ್ಜಿ ಸಲ್ಲಿಸಬಹುದು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಕ್ಕದಲ್ಲಿರುವ ಪುರಸಭೆ ನಗರಸಭೆ ಅಥವಾ ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿ.