ಕರ್ನಾಟಕ ಸರ್ಕಾರ ಈಗಾಗಲೇ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಚೇತನರಾಗಲು, ಸದೃಢರಾಗಲು ಸಬ್ಸಿಡಿ ರೂಪದಲ್ಲಿ ಅನೇಕ ಯೋಜನೆಗಳ ಮುಖಾಂತರ ಸಾಲ ನೀಡುತ್ತಿದೆ. ಹೊಸ ಉದ್ಯಮ ಆರಂಭಕ್ಕೆ, ಗೃಹ ಕೈಗಾರಿಕೆಗಳ ಮೂಲಕ ಮನೆಯಲ್ಲಿ ಇದ್ದುಕೊಂಡು ಮಹಿಳೆಯರ ಸ್ವಾಭಾಲಂಬಿಗಳಾಗಲಿ ಎನ್ನುವ ಕಾರಣಕ್ಕೆ ಅದಕ್ಕೂ ಸಹ ಯೋಜನೆ ರೂಪಿಸಿ ಸಹಾಯಧನ ನೀಡುತ್ತಿದೆ. ಪ್ರತಿ ಸಲ ವಾರ್ಷಿಕ ಬಜೆಟ್ ಮಂಡನೆ ಆದಾಗಲೂ ಕೂಡ ಮಹಿಳೆಯರು ಆಸೆ ಕಣ್ಣಿನಿಂದ ನಮಗೇನಾದರೂ ಸಹಾಯ ದೊರೆಯುತ್ತದೆಯಾ ಎಂದು ಕಾಯುತ್ತಲೇ ಇರುತ್ತಾರೆ.
ಈ ಬಾರಿ ದುಡಿಯುವ ಮಹಿಳೆಯರಿಗಾಗಿ ಅಂತಹ ಒಂದು ಯೋಚನೆ 2023-24ರ ಸಾಲಿನ ಬಜೆಟ್ ಅಲ್ಲಿ ಘೋಷಣೆ ಆಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರೇ ಈ ಬಾರಿಯ ಬಜೆಟ್ ಅಲ್ಲಿ ಇದನ್ನು ಘೋಷಣೆ ಮಾಡಿದ್ದಾರೆ. ಅದೇನೆಂದರೆ ದುಡಿಯುವ ಮಹಿಳೆಯರಿಗೆ ಸಾರಿಗೆ ವೆಚ್ಚಕ್ಕೆ ಅನುಕೂಲ ಆಗಲಿ ಅನ್ನುವ ಕಾರಣಕ್ಕಾಗಿ ಅವರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಮಾಡಿದೆ ಈ ಹಿಂದೆ ಕೂಡ ಇದೇ ರೀತಿಯ ಒಂದು ಯೋಜನೆ ರೂಪಿಸಲಾಗಿತ್ತು.
ಅದರಲ್ಲಿ ಗಾರ್ಮೆಂಟ್ಸ್ ಗಳಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗಿತ್ತು. ಇದು ಕೂಡ ಕರ್ನಾಟಕದ ಸಾಕಷ್ಟು ಹೆಣ್ಣುಮಕ್ಕಳ ಪಾಲಿಗೆ ವರದಾನವಾಗಿತ್ತು. ಆದರೆ ನಂತರ ಗೊಂದಲವಾಗಿ ಹೆಚ್ಚಿನ ಜನರಿಗೆ ಈ ಯೋಜನೆ ತಲುಪಲಿಲ್ಲ ಎನ್ನುವ ಗೊಂದಲ ಇತ್ತು. ಅದಕ್ಕಾಗಿ ಈ ಬಾರಿ ಎಲ್ಲಾ ಮಹಿಳೆಯರಿಗೂ ಅನ್ವಯವಾಗುವ ಯೋಜನೆ ರೂಪಿಸಲಾಗಿದೆ. ಎಲ್ಲಾ ಮಹಿಳೆಯರು ಕೂಡ ಈ ಯೋಜನೆ ಮುಖಾಂತರ ಅನುಕೂಲತೆ ಪಡೆಯಲಿದ್ದಾರೆ. ಇದುವರೆಗೆ ಅವರು ದುಡಿಯುತ್ತಿದ್ದ ಹಣದಲ್ಲಿಯೇ ಪ್ರತಿ ತಿಂಗಳ ಸಾರಿಗೆ ವೆಚ್ಚಕ್ಕೆ ಹಣ ಎತ್ತಿಡಬೇಕಿತ್ತು, ಈಗ ಆ ರೀತಿ ಖರ್ಚು ಮಾಡುತ್ತಿದ್ದ ಹಣದ ಉಳಿತಾಯ ಆಗಲಿದೆ.
ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿರುವವರು ಕೂಡ ಈತನಕ ಈ ಯೋಜನೆಯ ಉಪಯೋಗ ಪಡೆಯುತ್ತಿದ್ದರು. ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ಉಚಿತವಾದ ಬಸ್ ಪಾಸ್ ಹೊಂದಿ ಆ ಮೂಲಕ ಮೂರು ತಿಂಗಳವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಯಾವುದೇ ದರ ನೀಡದೆ ರಾಜ್ಯದಾದ್ಯಂತ ಸಂಚರಿಸಬಹುದಾಗಿತ್ತು, ಇದರ ಉಪಯೋಗವನ್ನು ಲಕ್ಷಾಂತರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಪಡೆದಿದ್ದರು.
ಈಗ ಇದೇ ರೀತಿ ಅನುಕೂಲ ರಾಜ್ಯದ ಎಲ್ಲಾ ದುಡಿಯುವ ಮಹಿಳೆಯರಿಗೂ ಸಿಗುತ್ತಿದ್ದೆ. ಇದರಿಂದ ಲಕ್ಷಾಂತರ ಕರ್ನಾಟಕದ ಮಹಿಳೆಯರು ನಿಟ್ಟುಸಿರು ಬಿಡಲಿದ್ದಾರೆ. ಇದು ದುಡಿಯುವ ಮಹಿಳೆಯರಿಗಾಗಿ ಇರುವ ಯೋಜನೆ ಆಗಿರುವುದರಿಂದ ಅರ್ಜಿ ಸಲ್ಲಿಸುವುದಕ್ಕೆ ನಿಯಮ ಏನಿರುತ್ತದೆ ಹಾಗೂ ದಾಖಲೆ ಏನು ಬೇಕಾಗುತ್ತೆ ಎನ್ನುವ ವಿಷಯದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರ ಬಂದು ಅರ್ಜಿ ಆಹ್ವಾನ ಆರಂಭವಾಗಲಿದೆ.
ಇವರಿಗೆ ಬೆಂಗಳೂರು ಒನ್ ಸಿಎಸ್‌ಸಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಇದರ ಅನುಕೂಲತೆ ಪಡೆದುಕೊಳ್ಳುತ್ತಿದ್ದರು. ಈಗ ಸರ್ಕಾರ ರೂಪಿಸಿರುವ ಹೊಸ ಯೋಜನೆಗೂ ಕೂಡ ಅದೇ ಇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸರ್ಕಾರವು ಈ ಬಾರಿ 350 ಕೋಟಿ ಮೊತ್ತದ ಹಣವನ್ನು ಈ ರೀತಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಿಸುವುದಕ್ಕಾಗಿಯೇ ಮೀಸಲಿಟ್ಟಿದೆ.