ನೀವು ತೆಂಗಿನ ಕಾಯಿಗಳನ್ನು ತೆಗೆದುಕೊಳ್ಳುವಾಗ ಅಥವಾ ನೀವು ಮನೆಯಲ್ಲಿಯೇ ಬೆಳೆದರೆ ನೀವು ತೆಂಗಿನಕಾಯಿಯ ಸಿಪ್ಪೆಯನ್ನು ಸುಲಿದು ಇಡಬೇಡಿ ಬದಲಿಗೆ ತೆಂಗಿನಕಾಯಿ ಸಿಪ್ಪೆಯೊಂದಿಗೆ ಇಟ್ಟರೆ ತೆಂಗಿನಕಾಯಿ ತುಂಬಾ ದಿನಗಳವರೆಗೆ ಚೆನ್ನಾಗಿರುತ್ತದೆ ಅಂದರೆ ಬೇಗ ಹಾಳಾಗುವುದಿಲ್ಲ. ಒಂದು ವೇಳೆ ನೀವು ಸಿಪ್ಪೆ ತೆಗೆದರೂ ಕೂಡ ನಾರನ್ನು ನೀವು ತೆಗೆಯಬೇಡಿ ಆಗ ಬಿಸಿಲಿಗೆ ಹೊಡೆಯುವುದಿಲ್ಲ ಹಾಗೆಯೇ ತೆಂಗಿನಕಾಯಿಯ ಒಳಗೆ ಇರುವಂತಹ ನೀರನ್ನು ಅದು ಹಿಡಿದಿಟ್ಟುಕೊಳ್ಳುತ್ತದೆ. ನೀವು ಯಾವಾಗಲೂ ಕಾಯಿಯನ್ನು ಆರಿಸಿಕೊಳ್ಳುವಾಗ ಆದಷ್ಟು ಬಲಿತಿರುವಂತಹ ಕಾಯಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ರೌಂಡ್ ಇರುವಂತಹ ಕಾಯಿಯನ್ನು ಸೆಲೆಕ್ಟ್ ಮಾಡಬೇಡಿ ಯಾಕೆಂದರೆ ಅದರ ಒಳಗಿರುವಂತಹ ತಾಯಿಯು ತೆಳುವಾಗಿರುತ್ತದೆ ಹೊರ ಗಡೆಯಿಂದ ನಿಮಗೆ ದಪ್ಪದಾಗಿ ಕಾಣಿಸಿದರು ಸಹ ಒಳಗಡೆ ಕಾಯಿ ತೆಳುವಾಗಿರುತ್ತದೆ.
ಹಾಗಾಗಿ ನೀವು ಆದಷ್ಟು ರೌಂಡ್ ಇರುವಂತಹ ಕಾಯಿಯ ಬದಲಾಗಿ ಸ್ವಲ್ಪ ಉದ್ದದ ಕಾಯಿಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ, ಇದರಲ್ಲಿ ಕಾಯಿ ಸ್ವಲ್ಪ ದಪ್ಪ ಇರುತ್ತದೆ. ನೀವು ಯಾವಾಗಲೂ ತೆಂಗಿನಕಾಯಿಗಳನ್ನು ಹೊಡೆಯುವಾಗ ಕರೆಕ್ಟಾಗಿ ಒಡೆಯಬೇಕು ಅಂದರೆ ಏರುಪೇರು ಆಗಬಾರದು ಕರೆಕ್ಟಾಗಿ ಇದ್ದರೆ ನಿಮಗೆ ಕಾಯಿಯನ್ನು ತುರಿದುಕೊಳ್ಳಲು ತುಂಬಾ ಈಸಿ ಆಗುತ್ತದೆ. ನೀವು ಕಾಯಿಯನ್ನು ಸರಿಯಾಗಿ ಒಡೆಯಬೇಕು ಎಂದರೆ ತೆಂಗಿನಕಾಯಿ ಒಡೆಯುವ ಮೊದಲು ಕಾಯಿಯನ್ನು ಎರಡು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ ನಂತರ ಅದನ್ನು ನೀವು ಒಡೆದರೆ ಕಾಯಿ ಸಮಭಾಗವಾಗಿ ಒಡೆಯುತ್ತದೆ.
ಸಾಮಾನ್ಯವಾಗಿ ಹಳ್ಳಿಗಳ ಕಡೆಯಲ್ಲಿ ದೇವಸ್ಥಾನಗಳಿಗೆ ಹೋದರೆ ಎರಡು ಮೂರು ಕಾಯಿಗಳನ್ನು ಒಡೆದಿರುತ್ತಾರೆ. ಅದನ್ನು ಮನೆಗೆ ತಂದು ಇಟ್ಟರೆ ಅದು ಹಾಗೆ ಹಾಳಾಗಿ ಹೋಗುತ್ತದೆ ಆದ್ದರಿಂದ ಒಡೆದಿರುವಂತಹ ಕಾಯಿಯನ್ನು ಹಾಳಾಗಬಾರದು ಎಂದರೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಆ ಪಾತ್ರೆಯಲ್ಲಿ ಕಾಯಿಯನ್ನು ಮುಳುಗಿಸಿ ಇಡಬೇಕು ಹೀಗೆ ಮಾಡುವುದರಿಂದ ಕಾಯಿಯು ಹಾಳಾಗುವುದಿಲ್ಲ, ಆದರೆ ನೀವು ದಿನಕೊಮ್ಮೆ ನೀರನ್ನು ಬದಲಾಯಿಸಬೇಕು ಹೀಗೆ ಮಾಡಿದರೆ ಒಡೆದಿರುವಂತಹ ತೆಂಗಿನ ಕಾಯಿಯನ್ನು ಫ್ರೆಶ್ ಆಗಿ ಇರುತ್ತದೆ ನೋಡಿಕೊಳ್ಳಬಹುದು ಬೇಗ ಕೆಡುವುದಿಲ್ಲ. ಹೀಗೆ ಮಾಡಿದರೆ ನೀವು ಫ್ರಿಡ್ಜ್ ನಲ್ಲಿ ಇಡುವಂತಹ ಅವಶ್ಯಕತೆ ಇಲ್ಲ ಕೂಡ ಇರುವುದಿಲ್ಲ. ಇನ್ನೊಂದು ವಿಧಾನ ನೋಡುವುದಾದರೆ ಒಂದು ಕಂಟೇನರ್ ಅನ್ನು ತೆಗೆದುಕೊಂಡು ಅಂದರೆ ಕ್ಲೋಸ್ ಮಾಡುವಂತಹ ಕಂಟೇನರ್,
ಒಳಗೆ ಗಾಳಿ ಹೋಗದೆ ಇರುವಂತಹ ಕಂಟೇನರ್ ತೆಗೆದುಕೊಂಡು ಅದರ ಒಳಗೆ ಒಡೆದಿರುವ ತೆಂಗಿನ ಕಾಯಿಯನ್ನು ಅದರ ಒಳಗೆ ಹಾಕಿ ನೀವು ಫ್ರಿಡ್ಜ್ ನಲ್ಲಿ ಇಟ್ಟರೆ ಆಗಲು ಸಹ ನೀವು ಒಡೆದಿರುವಂತಹ ಕಾಯಿಯನ್ನು ಹಾಳಾಗದಂತೆ ನೋಡಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ತುರಿದರು ವಂತಹ ತೆಂಗಿನಕಾಯಿ ತುರಿ ಇದ್ದರೆ ಅದನ್ನು ನೀವು ಕೆಡದೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದರೆ ಆ ಕಾಯಿ ತುರಿಯನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದಕ್ಕೆ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಿ ಕಟ್ಟಿ ಅದನ್ನು ಡೀಪ್ ಫ್ರೀಜರ್ ನಲ್ಲಿ ಇಡಬೇಕು ಹೀಗೆ ಇಡುವುದರಿಂದ ನೀವು ತುರಿದಂತಹ ಕಾಯಿ ಬೇಗ ಹಾಳಾಗುವುದಿಲ್ಲ. ನೀವು ಉಪಯೋಗಿಸುವ ಮೊದಲು ಇದನ್ನು ಸ್ವಲ್ಪ ಆಚೆ ತೆಗೆದು ಇಟ್ಟು ನಂತರದಲ್ಲಿ ನೀವು ಉಪಯೋಗ ಮಾಡಿಕೊಳ್ಳಬಹುದು. ಈ ರೀತಿಯಾಗಿ ನಾವು ತೆಂಗಿನ ಕಾಯಿಯನ್ನು ಹಾಳಾಗದೆ ಇರುವ ಹಾಗೆ ನೋಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದಗಳು ಸ್ನೇಹಿತರೆ.