ಬೋಂಡಾ, ಬಜ್ಜಿ, ಈ ರೀತಿಯ ಕರಿದ ತಿನಿಸುಗಳು ಯಾರಿಗೆ ಇಷ್ಟವಿಲ್ಲ ಹೇಳಿ ಸಣ್ಣ ಮಕ್ಕಳಿಂದ ಹಿಡಿದು, ಎಲ್ಲರಿಗೂ ಇಷ್ಟ ಅದರಲ್ಲಿಯೂ ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಸಂಜೆ ಸಮಯದಲ್ಲಿ ಬೋಂಡಾ ತಿನ್ನಬೇಕು ಎಂದು ಅನಿಸುವುದು ಸರ್ವೇ ಸಾಮಾನ್ಯ ನಾವು ತಿನ್ನುವಂತಹ ಈ ಎಣ್ಣೆಯಲ್ಲಿ ಕರಿದ ತಿನಿಸು ಆರೋಗ್ಯಕರವಾಗಿದ್ದರೆ ಇನ್ನೂ ಉತ್ತಮ. ನಾವಿಲ್ಲಿ ಉತ್ತಮವಾದ, ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯನ್ನು ಉಂಟುಮಾಡದ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಬೋಂಡಾ ಮಾಡುವ ವಿಧಾನವನ್ನು ತಿಳಿಸುತ್ತೇವೆ. ಈ ಒಂದು ಆರೋಗ್ಯಕರವಾದಂತಹ ಬೋಂಡ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಒಂದೂವರೆ ಲೋಟದಷ್ಟು ಉದ್ದಿನಬೇಳೆ ಹಾಗೆ ಅರ್ಧ ಲೋಟದಷ್ಟು ಇಡ್ಲಿ ಅಕ್ಕಿ, ಐದರಿಂದ ಆರು ಗುಂಟೂರು ಮೆಣಸಿನಕಾಯಿ ಈ ಎಲ್ಲ ಸಾಮಗ್ರಿಗಳನ್ನು ನೀವು ಮೂರು ಗಂಟೆಗಳ ಕಾಲ ನೆನೆಸಿಡಬೇಕು.
ಇಡ್ಲಿ ಅಕ್ಕಿ ಇಲ್ಲವಾದರೆ ನೀವು ನಿಮ್ಮ ಮನೆಯಲ್ಲಿ ಯಾವ ಅಕ್ಕಿ ಇದಿಯೋ ದೋಸೆ ಅಕ್ಕಿ ಅಥವಾ ಸೋನಾಮಸೂರಿ ಅಕ್ಕಿ ಇದ್ದರು ಸಹ ಅದನ್ನು ನೀವು ಬಳಸಿಕೊಳ್ಳಬಹುದು. ನಂತರ ಇದು ಚೆನ್ನಾಗಿ ನೆನೆದ ಮೇಲೆ ನೀವು ಇದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆ ಸೇರಿಸಿ ಗ್ರೈಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಬೇಕು, ಗ್ರೈಂಡರ್ ನಲ್ಲಿ ರುಬ್ಬಿಕೊಳ್ಳುವುದರಿಂದ ಹಿಟ್ಟು ಚೆನ್ನಾಗಿ ಹದದಲ್ಲಿ ಬರುತ್ತದೆ ಇದಕ್ಕೆ ನೀವು ಸೋಡಾ ಹಾಕುವಂತಹ ಅಗತ್ಯತೆ ಇರುವುದಿಲ್ಲ. ನೀವೇನಾದರೂ ಮಿಕ್ಸಿಯಲ್ಲಿ ಗ್ರೈಂಡ್ ಮಾಡುವುದಾದರೆ ಗ್ರೈಂಡ್ ಮಾಡಿದ ನಂತರ ಇದಕ್ಕೆ ನೀವು ಸ್ವಲ್ಪ ಸೋಡವನ್ನು ಸೇರಿಸಬೇಕಾಗುತ್ತದೆ. ಗ್ರೈಂಡ್ ಮಾಡಿಕೊಂಡ ನಂತರ ಒಂದು ಪಾತ್ರೆಗೆ ಹಿಟ್ಟನ್ನು ಹಾಕಿಕೊಂಡು ಇದಕ್ಕೆ ನೀವು ಒಂದು ಕಪ್ ನಷ್ಟು ಪಾಲಕ್ ಸೊಪ್ಪು ಹಾಗೆ ಸ್ವಲ್ಪ ಕೊತ್ತಂಬರಿ ಸೊಪ್ಪು,
ಒಂದು ಸಣ್ಣಗೆ ಹೆಚ್ಚಿಕೊಂಡಂತಹ ಈರುಳ್ಳಿ, ಹಸಿರು ಮೆಣಸಿನಕಾಯಿ, ಸಣ್ಣದಾಗಿ ಕಟ್ ಮಾಡಿಕೊಂಡಿರುವಂತಹ ಒಂದು ಇಂಚಿನಷ್ಟು ಶುಂಠಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಬೋಂಡ ಹಿಟ್ಟು ರೆಡಿಯಾದ ನಂತರ ನೀವು ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಟ್ಟು ಚನ್ನಾಗಿ ಕಾಯಿಸಿದ ನಂತರ ಬೋಂಡವನ್ನು ಹಾಕಬೇಕು ನೀವು ಯಾವ ಸೈಜ್ ನಲ್ಲಿ ಆದರೂ ಬೋಂಡಾ ಹಾಕಬಹುದು ಕೈಯನ್ನು ನೀರಿನಲ್ಲಿ ಅದ್ದಿ ನಂತರವನ್ನು ಬೋಂಡ ಹಿಟ್ಟನ್ನು ಎಣ್ಣೆಯಲ್ಲಿ ಬಿಡಬೇಕು. ಹೀಗೆ ನೀವು ಮೀಡಿಯಂ ಫ್ಲೇಮ್ ನಲ್ಲಿ ಬೋಂಡಾವನ್ನು ಬೇಯಿಸಿಕೊಳ್ಳಬೇಕು ಇಲ್ಲವಾದರೆ ಬೋಂಡಾ ಒಳಗೆ ಬೆಂದಿರುವುದಿಲ್ಲ. ಹಾಗಾಗಿ ನೀವು ಮೀಡಿಯಂ ಫ್ಲೇಮ್ ನಲ್ಲಿ ಬೋಂಡವನ್ನು ಬೇಯಿಸಿದರೆ ಹದವಾಗಿ ತುಂಬಾ ಕ್ರಿಸ್ಪಿಯಾಗಿ ಟೇಸ್ಟಿಯಾಗಿ ಬರುತ್ತದೆ.
ತುಂಬಾ ಜನರಿಗೆ ಈ ರೀತಿಯಾದಂತಹ ಬೋಂಡಾ ರೆಸಿಪಿ ತಿಳಿದಿರುವುದಿಲ್ಲ ಅಂತಹವರು ಈ ಒಂದು ರೆಸಿಪಿಯನ್ನು ಟ್ರೈ ಮಾಡಿದರೆ ಖಂಡಿತವಾಗಿಯೂ ನಿಮಗೆ ತುಂಬಾ ಇಷ್ಟವಾಗುತ್ತದೆ. ಅದರಲ್ಲಿಯೂ ಚಳಿಗಾಲ ಮತ್ತು ಮಳೆಗಾಲದಲ್ಲಿ ಯಾವುದಾದರೂ ಒಂದು ಸ್ನಾಕ್ಸ್ ತಿನ್ನಬೇಕು ಎಂದು ಎಲ್ಲರಿಗೂ ಅನಿಸುತ್ತದೆ ಅಂತಹ ಸಮಯದಲ್ಲಿ ನೀವು ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನು ಟ್ರೈ ಮಾಡಿ. ಹೊರಗಡೆ ಹೋಟೆಲ್ ಗಳಲ್ಲಿ ಮಾಡಿರುವಂತಹ ತಿಳಿಸುಗಳು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಮನೆಯಲ್ಲಿ ಆರೋಗ್ಯಕರವಾಗಿರುವಂತಹ ಹಾಗೆ ರುಚಿಕರವಾಗಿರುವಂತಹ ಇಂಥ ರೆಸಿಪಿಗಳನ್ನು ಮಾಡಿಕೊಂಡು ತಿಂದಿದ್ದೆ ಆದಲ್ಲಿ ನಿಮಗೆ ತುಂಬಾ ಇಷ್ಟವಾಗುತ್ತದೆ. ನೀವು ಸಹ ಈ ರೀತಿಯಾದಂತಹ ತಿನಿಸುಗಳನ್ನು ಇಷ್ಟಪಡುವುದಾದರೆ ತಪ್ಪದೇ ನಮಗೆ ಕಮೆಂಟ್ ಮಾಡಿ.