ಒಂದು ಬ್ರಾಂಚ್ ನಿಂದ ಮತ್ತೊಂದು ಬೇರೊಂದು ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ಫರ್ ಮಾಡುವ ಸುಲಭ ವಿಧಾನ.!

 

WhatsApp Group Join Now
Telegram Group Join Now

ನಮ್ಮ ಹಣಕಾಸಿನ ವಹಿವಾಟಿಕ್ಕಾಗಿ ನಾವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುತ್ತವೆ. ಕಾರಣಾಂತರಗಳಿಂದ ನಾವು ಬ್ಯಾಂಕ್ ಶಾಖೆ ಹೊಂದಿರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಈ ರೀತಿ ಶಾಶ್ವತವಾಗಿ ನಾವು ಮತ್ತೊಂದು ಕಡೆಗೆ ಹೋದಾಗ ಅಲ್ಲಿನ ವಿಳಾಸ ಧೃಡೀಕರಣ ಪಡಿಸಿ ಮತ್ತೊಂದು ಬ್ಯಾಂಕ್ ಖಾತೆ ತೆರೆದು ಮಾಡುವಷ್ಟರಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತದೆ.

ಅದರ ಬದಲು ನೀವು ಈ ಹಿಂದೆ ಬ್ಯಾಂಕ್ ಖಾತೆ ಹೊಂದಿದ್ದರಿಂದ ಅದೇ ಖಾತೆಯನ್ನು ನೀವು ಈಗ ಬದಲಾಯಿಸಿರುವ ವಿಳಾಸಕ್ಕೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು. ಹಳೆ ಖಾತೆಯನ್ನು ರ’ದ್ದುಪಡಿಸುವ ಸಮಸ್ಯೆ ತಪ್ಪುತ್ತದೆ ಮತ್ತು ಆ ಖಾತೆಗೆ ಸಂಬಂಧಿಸಿದಂತೆ ಪೂರ್ತಿ ವಹಿವಾಟು ವರ್ಗಾವಣೆ ಆಗಿರುತ್ತದೆ, ಬಹಳ ಬೇಗ ಈ ಪ್ರಕ್ರಿಯೆಯೂ ಮುಗಿಯುತ್ತದೆ ಮತ್ತು ನಿಮಗೂ ತೊಂದರೆಗಳು ಕಡಿಮೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಈ ಪ್ರಕ್ರಿಯೆ ನಡೆಯುತ್ತದೆ ಎನ್ನುವುದರ ಕುರಿತು ಕೆಲ ಪ್ರಮುಖ ಮಾಹಿತಿ.

ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ.!

* ನೀವು ಮೊದಲಿಗೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಬ್ರಾಂಚ್ ಮ್ಯಾನೇಜರ್ ಗೆ ಒಂದು ಅರ್ಜಿ ಸಲ್ಲಿಸಬೇಕು.
* ಬಿಳಿ ಹಾಳೆ ಮೇಲೆ ಗೆ, ವಿಭಾಗದಲ್ಲಿ ಬ್ರಾಂಚ್ ಮ್ಯಾನೇಜರ್ ಎಂದು ಬರೆದು ನಿಮ್ಮ ಬ್ಯಾಂಕ್ ವಿಳಾಸ ಬರೆಯಿರಿ.
* ವಿಷಯ ವಿಭಾಗದಲ್ಲಿ ನನ್ನ ಖಾತೆಯನ್ನು ಬೇರೊಂದು ಬ್ರಾಂಚ್ ಗೆ ವರ್ಗಾವಣೆ ಮಾಡುವುದರ ಕುರಿತು ಎಂದು ಬರೆಯಿರಿ

ನಂತರದ ಲೈನ್ ನಲ್ಲಿ ಮಾನ್ಯರೇ ಎಂದು ಬರೆದು ಆನ್ಲೈನ್ ಬಿಟ್ಟು ಮುಂದಿನ ಲೈನ್ ನಿಂದ ವಿಷಯದ ವಿವರಣೆ ಶುರುಮಾಡಿ. ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದು ಏನೆಂದರೆ ಎಂದು ಪ್ರಾರಂಭಿಸಿ ಮೊದಲಿಗೆ ನಿಮ್ಮ ಹೆಸರು ಹಾಗೂ ನಿಮ್ಮ ಖಾತೆ ಸಂಖ್ಯೆ ಹೇಳಿಕೊಂಡು ಉದಾಹರಣೆಗೆ ಆಕಾಶ್ ಆದ ನಾನು ನಿಮ್ಮ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದೇನೆ, ಖಾತೆ ಸಂಖ್ಯೆ XYZ ಆಗಿದೆ.

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

ನಾನು ಬೇರೆ ಊರಿಗೆ ಕುಟುಂಬ ಸಮೇತ ವಾಸಿಸಲು ಹೋಗುತ್ತಿರುವುದರಿಂದ ಅಥವಾ ಕೆಲಸದ ನಿಮಿತ್ತ ನಾನು ಈ ಊರಿನಲ್ಲಿ ಇದ್ದೆ ಈಗ ನನಗೆ ಬೇರೆ ಊರಿಗೆ ಟ್ರಾನ್ಸ್ಫರ್ ಆಗಿರುವುದರಿಂದ ಈ ರೀತಿ ನಿಮ್ಮ ಕಾರಣ ಏನಿದೆ ಅದನ್ನು ತಿಳಿಸಿ ಇನ್ನು ಮುಂದೆ ನಾನು ಇಲ್ಲಿ ಇರದ ಕಾರಣ ಈ ಶಾಖೆಯಲ್ಲಿ ಹಣಕಾಸು ವಹಿವಾಟು ಮಾಡಲು ಆಗುವುದಿಲ್ಲ.

ದಯವಿಟ್ಟು ನನ್ನ ಖಾತೆಯನ್ನು ನಾನು ತಿಳಿದಿರುವ ಬ್ರಾಂಚ್ ಗೆ ವರ್ಗಾವಣೆ ಮಾಡಿಕೊಡಿ ಎಂದು ಬರೆಯಿರಿ. ನೀವು ಯಾವ ಊರಿಗೆ ವಾಸಿಸಲು ಹೋಗುತ್ತಿದ್ದೀರಾ ಆ ಊರಿನ ಹೆಸರನ್ನು ಮತ್ತು ಆ ಊರಿನ ಸರಿಯಾದ ಪಿನ್ ಕೋಡ್ ಸಂಖ್ಯೆ ಸಮೇತ ವಿಳಾಸವನ್ನು ಸರಿಯಾಗಿ ಬರೆಯಿರಿ.

ಗೃಹಲಕ್ಷ್ಮಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.! ಇದೊಂದು ನಂಬರ್ ಹಾಕಿ ಸಾಕು.!

* ಕೊನೆಯಲ್ಲಿ ಧನ್ಯವಾದಗಳೊಂದಿಗೆ ಎಂದು ಬರೆಯುವುದನ್ನು ಮರೆಯಬೇಡಿ. ಬಲ ಭಾಗದ ಕೊನೆಯಲ್ಲಿ ಇಂತಿ ನಿಮ್ಮ ವಿಶ್ವಾಸಿ ಎಂದು ಬರೆದು ನಿಮ್ಮ ಹೆಸರು ಬರೆಯಿರಿ ಅದರ ಮೇಲೆ ಸಹಿ ಮಾಡಿರಿ ಹಾಗೆ ಬಲಭಾಗದ ಮೇಲ್ಭಾಗದಲ್ಲಿ ಪುಟದ ಕೊನೆಯಲ್ಲಿ ದಿನಾಂಕ ಬರೆಯಲು ಮರೆಯಬೇಡಿ.

* ನೀವು ಅರ್ಜಿ ಸಲ್ಲಿಸುವ ಮುನ್ನ ಮತ್ತೊಮ್ಮೆ ನಿಮ್ಮ ಹೆಸರು ಸರಿಯಾಗಿ ಬರೆದಿದ್ದೀರಾ? ನಿಮ್ಮ ಖಾತೆ ಸಂಖ್ಯೆ ಸರಿಯಾಗಿ ಬರೆದಿದ್ದೀರಾ? ಮತ್ತು ನೀವೇ ಯಾವ ಬ್ರಾಂಚ್ ಗೆ ಟ್ರಾನ್ಸ್ಫರ್ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದ್ದೀರಿ ಆ ವಿಳಾಸ ಸರಿಯಾಗಿ ಬರೆದಿದ್ದೀರ ಎಂದು ಮರು ಪರಿಶೀಲಿಸಿಕೊಳ್ಳಿ.
* ನಿಮ್ಮ ಅರ್ಜಿ ಜೊತೆ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಕೂಡ ಲಗತ್ತಿಸಬೇಕು.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ…

* ಅರ್ಜಿ ಸ್ವೀಕರಿಸದ ಎರಡು ಮೂರು ದಿನಗಳೊಳಗೆ ಅವರು ನೀವು ಕೇಳಿದ ಬ್ಯಾಂಕಿಗೆ ಖಾತೆ ವರ್ಗಾವಣೆ ಮಾಡಿರುತ್ತಾರೆ ಮತ್ತು ನಿಮಗೆ ಒಂದು ಅರ್ಜಿ ಸ್ವೀಕೃತಿ ಪ್ರತಿ ಕೊಡುತ್ತಾರೆ ಆ ಪ್ರತಿಯನ್ನು ನೀವು ಯಾವ ಬ್ರಾಂಚ್‌ ಗೆ ವರ್ಗಾವಣೆ ಕೇಳಿದ್ದೀಯ ಅಲ್ಲಿಗೆ ನೀಡಬೇಕು. ವರದಿ ಸ್ವೀಕರಿಸಿದ ಅವರು ನಿಮಗೆ ಈ ಬ್ರಾಂಚ್ ನ ಹೊಸ ಖಾತೆ ಮತ್ತು ಅದಕ್ಕೆ ಸಂಬಂಧಿಸಿದ ಪಾಸ್ ಬುಕ್ ಪ್ರಿಂಟ್ ಎಲ್ಲವನ್ನು ಕೂಡ ನೀಡುತ್ತಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now