ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋದಲ್ಲಿ ಅಡಗಿರುವ ವ್ಯಕ್ತಿಯ ಹೆಸರೇನು ಗೊತ್ತಾ.? ಕ್ಲಿಕ್ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತೆ.

ಮನೋರಂಜನೆಗಾಗಿ ನಮ್ಮಲ್ಲಿ ನೂರಾರು ಆಟಗಳಿವೆ ಕೆಲವೊಂದು ದೈಹಿಕ ಶ್ರಮ ನೀಡುವುದರ ಜೊತೆಗೆ ಆರೋಗ್ಯವನ್ನು ಕೊಟ್ಟು ಮನಸ್ಸಿಗೆ ಆನಂದವನ್ನು ತರುತ್ತವೆ. ಇಂಥವುಗಳನ್ನು ಔಟ್ ಡೋರ್ ಗೇಮ್ಸ್ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇಂತಹ ಆಟಗಳನ್ನು 90ರ ದಶಕದ ಹಿಂದಿನ ಮಕ್ಕಳುಗಳಷ್ಟೇ ಹಾಡಿರುತ್ತಾರೆ ಎನ್ನಬಹುದು. ಯಾಕೆಂದರೆ ಆ ದಿನಗಳಲ್ಲಿ ಮನೋರಂಜನೆಗಾಗಿ ಇದ್ದಿದ್ದು ಇಂತಹ ಆಟಗಳು ಮಾತ್ರ ಕೇರಿಯ ಹುಡುಗರು ಅಥವಾ ಶಾಲಾ ಗೆಳೆಯರೆಲ್ಲ ಒಟ್ಟಿಗೆ ಸೇರಿ ಕುಂಟೆ ಬಿಲ್ಲೆ, ಹಳಗುಳಿ ಮನೆ ಆಟ, ಎಲೆ ಬಿಡಿಸುವ ಆಟ, ಐಸ್ ಪ್ರೈಸ್, ಡಬ್ಬ ಬಡೆಯುವ ಆಟ, ಕಣ್ಣ ಮುಚ್ಚಾಲೆ, ಚೌಕಾಬಾರ, ಕಬ್ಬಡಿ, ವಾಲಿಬಾಲ್, ತ್ರೋಬಾಲ್, ಕ್ರಿಕೆಟ್ ಇಂಥವುಗಳನ್ನು ಒಟ್ಟಾಗಿ ಹಾಡಿ ಅಥವಾ ತಂಡಗಳಾಗಿ ಆಡಿ ಸಂತೋಷ ಪಡುತ್ತಿದ್ದರು. ಇಂಥವುಗಳನ್ನು ನೋಡುವವರಿಗು ಕೂಡ ಮನರಂಜನೆ ಸಿಗುತ್ತಿತ್ತು ಆಡುವವರು ಕೂಡ ಖುಷಿ ಪಡುತ್ತಿದ್ದರು.

WhatsApp Group Join Now
Telegram Group Join Now

ಆದರೆ ಆನಂತರ ಯಾವಾಗ ಟಿವಿ ಎನ್ನುವುದು ಬಂದಿತು ಆಗ ಮಕ್ಕಳು ಈ ರೀತಿ ಹೊರಗಡೆ ಹೋಗಿ ಆಟ ಆಡುವುದನ್ನು ಕಡಿಮೆ ಮಾಡಿದ್ದರು. ಎಲ್ಲರೂ ಕೂಡ ಟಿವಿ ಮುಂದೆ ಕುಳಿತು ಕಾರ್ಟೂನ್ಗಳನ್ನು ನೋಡುವುದು ಸಿನಿಮಾಗಳನ್ನು ನೋಡುವುದು ಧಾರವಾಹಿಗಳನ್ನು ನೋಡುವುದು ಹಾಡುಗಳನ್ನು ನೋಡುವುದು ಈ ರೀತಿ ಇವುಗಳಲ್ಲೇ ಕಾಲ ಕಳೆಯಲು ಶುರು ಮಾಡಿದರು. ಜನರಲ್ಲಿ ಹೊಸದೊಂದು ರೆವೆಲ್ಯೂಷನ್ ಹುಟ್ಟು ಹಾಕಿತ್ತು ಟಿವಿ. ಹೀಗಾಗಿ ಮಕ್ಕಳು, ಗೃಹಿಣಿಯರು ಸೇರಿದಂತೆ ವೃದ್ದರೂ ಕೂಡ ಇದಕ್ಕೆ ಆಕರ್ಷಿತರಾಗಿದ್ದರು. ಅದರಲ್ಲೂ ಮಕ್ಕಳ ಪಾಲಿಗಂತು ಇದು ಹೊಸ ಪ್ರಪಂಚದ ರೀತಿ ಇತ್ತು. ಹಾಗಾಗಿ ಇವರು ಹೆಚ್ಚಾಗಿ ಟಿವಿ ಮುಂದೆ ಕುಳಿತುಕೊಂಡು ಸಮಯ ಕಳೆಯಲು ಶುರು ಮಾಡಿದರು. ಆದರೆ ಆಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಟಿವಿ ಇರದಿದ್ದ ಕಾರಣ ಎಲ್ಲಾ ಮಕ್ಕಳು ಒಟ್ಟಿಗೆ ಸೇರಿ ಒಂದೇ ಕಡೆ ಟಿವಿ ನೋಡಿ ಖುಷಿಪಡುತ್ತಿದ್ದರು.

ಟಿವಿಯಲ್ಲೂ ಕೂಡ ಮಕ್ಕಳಿಗೆ ಮನರಂಜನೆ ನೀಡುವ ಹಲವಾರು ಗೇಮ್ಗಳು ರಸಪ್ರಶ್ನೆ ಕಾರ್ಯಕ್ರಮಗಳು ಹಾಗೂ ಕೆಲವೊಂದು ವಿಶೇಷ ರೀತಿಯ ಕಾರ್ಯಕ್ರಮಗಳು ಮಕ್ಕಳಿಗೆ ಮನರಂಜನೆ ಜೊತೆ ಆಟವನ್ನು ಆಡುವ ಉತ್ಸಾಹವನ್ನು ಹೆಚ್ಚು ಮಾಡುತ್ತಿದ್ದವು. ಮಕ್ಕಳು ಟಿವಿ ನೋಡುತ್ತಲೇ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸುವುದು, ಕೆಲವೊಂದು ಒಗಟುಗಳನ್ನು ಬಿಡಿಸುವುದು ಕೆಲವೊಂದು ಗುರುತಿಸಿಕೊಳ್ಳುವುದು ಈ ರೀತಿ ಮಾಡಿ ಮನರಂಜನೆ ಜೊತೆ ಪಾಠವನ್ನು ಕೂಡ ಕಲಿಯುತ್ತಿದ್ದರು. ಆ ನಿಟ್ಟಿನಲ್ಲಿ ಇಂದಿಗೂ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಥಟ್ ಅಂತ ಹೇಳಿ ಕಾರ್ಯಕ್ರಮವು ಜನಪ್ರಿಯ ಕಾರ್ಯಕ್ರಮವಾಗಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಈ ರೀತಿ ಟಿವಿ ನೋಡುವವರು ಕೂಡ ತಮ್ಮ ಮೆದುಳಿಗೆ ಮೇವು ಕೊಟ್ಟು ಬುದ್ಧಿವಂತಿಕೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದರು. ಆದರೆ ತೀರ ಇತ್ತೀಚೆಗೆ ಅಂದರೆ 21ನೇ ಶತಮಾನದ ಆಚೆಗೆ ಎಲ್ಲರ ಬದುಕು ಕೂಡ ಬೇರೊಂದು ರೀತಿ ಬದಲಾಗಿ ಹೋಗಿದೆ ಎಂದರೆ ತಪ್ಪಾಗಲಾರದು.

ಕಾರಣ ಇಷ್ಟೇ ಈಗ ಎಲ್ಲರ ಕೈಲೂ ಕೂಡ ಮೊಬೈಲ್ ಅದರಲ್ಲೂ ಯುವಕರಂತೂ ಇದಕ್ಕೆ ದಾಸರಾಗಿ ಬಿಟ್ಟಿದ್ದಾರೆ ಎನ್ನಬಹುದು ದಿನದ 24 ಗಂಟೆಗಳು ಕೂಡ ಆನ್ಲೈನ್ ನಲ್ಲಿ ಇರುವವರನ್ನು ನೀವು ನೋಡಬಹುದು. ಅದರಲ್ಲಿ ಅಷ್ಟು ಇನ್ವಾಲ್ವ್ ಆಗಿ ಏನು ನೋಡುತ್ತಾರೆ ಏನು ತಿಳಿದುಕೊಳ್ಳುತ್ತಾರೆ ಎಂದು ಮಾತ್ರ ಗೊತ್ತಿಲ್ಲ ಆದರೆ ಮೊಬೈಲ್ ಸ್ಕ್ರೀನ್ ಮಾತ್ರ ಯಾವಾಗಲೂ ಸ್ಕ್ರೋಲ್ ಮಾಡುತ್ತಾರೆ. ಇದರಿಂದ ಪೋಷಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ ಅದರಲ್ಲೂ ಕೊರೋನ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಕ್ಲಾಸ್ ಎನ್ನುವುದು ಬಂದ ಮೇಲೆ ತೀರ ಶಾಲಾ ಮಕ್ಕಳಿಗೂ ಕೂಡ ಮೊಬೈಲ್ ಕೊಡಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈಗ ಮಕ್ಕಳಿಗೆ ಪಾಠದ ಜೊತೆ ಮನರಂಜನೆಗೂ ಕೂಡ ಮೊಬೈಲ್ ಅನ್ನೇ ಅವಲಂಬಿಸುವ ಪರಿಸ್ಥಿತಿ ಇದೆ. ಯಾಕೆಂದರೆ ಮಕ್ಕಳು ಈಗ ಹೊರಗಡೆ ಹೋಗಿ ಆಟ ಆಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟಿದ್ದಾರೆ.

ಯಾವಾಗಲೂ ಫೋನ್ನಲ್ಲಿ ವಿಡಿಯೋಗಳನ್ನು ನೋಡುವುದರಿಂದ ಹೆಚ್ಚಿಗೆ ಮಕ್ಕಳಿಗೆ ಜ್ಞಾನ ಬರುವುದಿಲ್ಲ ಹಾಗಾಗಿ ಅಲ್ಲೂ ಕೂಡ ಕೆಲವೊಂದು ಗೇಮ್ಗಳು ಇರುತ್ತವೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ನಲ್ಲಿ ಅವುಗಳು ಇರುತ್ತವೆ. ಅವುಗಳನ್ನು ಕೂಡ ನೀವು ಗಮನಿಸಿರುತ್ತೀರಾ ಯಾವುದಾದರು ಎರಡು ಫೋಟೋಗಳನ್ನು ಹಾಕಿ ಅವುಗಳಲ್ಲಿರುವ ಹಲವಾರು ವ್ಯತ್ಯಾಸಗಳನ್ನು ಗುರುತಿಸಲು ಹೇಳುವುದು ಅಥವಾ ದೊಡ್ಡ ಚಿತ್ರಪಟ ಒಂದನ್ನು ಹಾಕಿ ಅದರೊಳಗೆ ಕಣ್ಣಿಗೆ ಚಾಲೆಂಜ್ ನೀಡುವಂತ ಪ್ರಾಣಿಗಳ ಚಿತ್ರ ಇರುತ್ತವೆ ಅವುಗಳನ್ನು ಗುರುತಿಸಲು ಹೇಳುವುದು ಅಥವಾ ಅಕ್ಷರಗಳನ್ನು ಗುರುತಿಸಿ ಹೇಳುವುದು ಇನ್ನೂ ಮುಂತಾದ ಅನೇಕ ಅನೇಕ ರೀತಿಯ ಪ್ರಯೋಗಗಳು ಕೂಡ ಮಕ್ಕಳಿಗೆ ಮನರಂಜನೆ ಜೊತೆ ಆಟ ಆಡಿಸಲು ಹಾಗೂ ಬುದ್ಧಿವಂತಿಗೆ ಹೆಚ್ಚಿಗೆ ಮಾಡಲು ಇದ್ದೇ ಇರುತ್ತವೆ. ಈಗ ಅಂತಹದೇ ಒಂದು ಹೊಸ ಟ್ರೆಂಡ್ ಶುರುವಾಗಿದೆ ಅದನ್ನು ಆರ್ಟಿಕಲ್ ಇಲ್ಯೂಷನ್ ಎನ್ನುತ್ತಾರೆ.

ಇವುಗಳಲ್ಲಿ ಮೊದಲ ಬಾರಿಗೆ ಅವುಗಳನ್ನು ನೋಡಿದಾಗ ಇದು ಯಾವುದೋ ಚಿತ್ರದಂತೆ ಕಾಣುತ್ತದೆ ಆದರೆ ತೀಕ್ಷ್ಣ ದೃಷ್ಟಿಯಿಂದ ಅಥವಾ ಗಮನವಿಟ್ಟು ಇದನ್ನು ಏಕಾಗ್ರತೆಯಿಂದ ನೋಡಿದಾಗ ಮಾತ್ರ ಅದರೊಳಗಿರುವ ಪದವಾಗಲಿ ಅಕ್ಷರವಾಗಲಿ ಹೆಸರಾಗಲಿ ನಮಗೆ ಕಾಣಿಸುತ್ತದೆ ಇಂತಹ ಹತ್ತು ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ ಹಾಗೂ ಬಿಡಿಸಿದ್ದೇವೆ. ಅಂತಹ ಇನ್ನೊಂದು ಚಾಲೆಂಜ್ ಈಗ ನಿಮಗಾಗಿ ನೀಡಲಾಗಿದೆ. ಈ ಚಿತ್ರಪಟದಲ್ಲಿ ಕಪ್ಪು ಬಿಳಿ ಬಣ್ಣದ ಲೈನ್ಗಳು ಇರುವುದನ್ನು ಸಾಮಾನ್ಯವಾಗಿ ಮೊದಲು ನೋಟದಲ್ಲಿ ನಾವೆಲ್ಲರೂ ಗಮನಿಸುತ್ತೇವೆ ಹಾಗೂ ಅದರ ನಡುವೆ ಕಪ್ಪು ಚುಕ್ಕಿಗಳು ಕೂಡ ಹಲವಾರು ಇವೆ ಅವುಗಳ ನಡುವೆ ಕನ್ನಡದ ಹೆಸರಾಂತ ನಟನೊಬ್ಬನ ಹೆಸರು ಕೂಡ ಇದೆ. ಅದು ಎಲ್ಲರಿಗೂ ಪ್ರಿಯವಾಗಿರುವ ಹೆಸರು ಅಭಿಮಾನಿಗಳ ಮನದಲ್ಲಿ ಎಂದು ಶಾಶ್ವತವಾಗಿರುವ ಹೆಸರು ಜೀವ ಜೊತೆಗಿರದ್ದರೂ ನೆನಪು ಅಮರವಾಗಿರುವ ಹೆಸರು ಕರ್ನಾಟಕದ ಅಭಿಮಾನಿಗಳ ಪಾಲಿನ ದೇವರ ಹೆಸರು ಅದರಲ್ಲಿ ಅಡಗಿದೆ ಅದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ತುಂಬಾ ಗಮನವಿಟ್ಟು ಅದನ್ನೇ ನೋಡಬೇಕು ಅಥವಾ ಜೂಮ್ ಮಾಡಿ ಕೂಡ ನೋಡಿ ತಿಳಿದುಕೊಳ್ಳಬಹುದು. ಇಷ್ಟಕ್ಕೂ ಅದರಲ್ಲಿ ಅಡಗಿರುವ ಹೆಸರು ನಮ್ಮ ಪುನೀತ್ ರಾಜಕುಮಾರ್ ಅವರದ್ದು ನಿಮ್ಮ ನೆಚ್ಚಿನ ಹೀರೋ ಯಾರು ಎಂಬುದನ್ನು ತಪ್ಪದೆ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now