ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತಾನು ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಮಾತಿನಂತೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಹಂತ ಹಂತವಾಗಿ ಶ್ರಮಿಸುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಬಿಡುಗಡೆ ಆಗಿದ್ದು ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಆಗುತ್ತಿದೆ. ಅನ್ನ ಭಾಗ್ಯ ಯೋಜನೆ ಕೂಡ ಜುಲೈ ತಿಂಗಳಲ್ಲಿಯೇ ಅಕ್ಕಿ ಬದಲು ನೀಡುವುದಾಗಿ ನಿರ್ಧಾರ ಆಗಿದ್ದು, ಗೃಹಲಕ್ಷ್ಮಿ ಯೋಜನೆಗೂ ಸಿದ್ಧತೆ ನಡೆಯುತ್ತಿದೆ.
ಗೃಹಜ್ಯೋತಿ ಯೋಜನೆಗೆ ಸರ್ವರ್ ಸಮಸ್ಯೆ ಆದ ಕಾರಣ, ತಡವಾದರೂ ಗೃಹಲಕ್ಷ್ಮಿ ಯೋಜನೆಗೆ ಆ ಸಮಸ್ಯೆ ಆಗದಿರಲೆಂದು ಸರ್ಕಾರ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದಿಂದ ಆಪ್ ಬಿಡುಗಡೆ ಆಗಲಿದ್ದು ಮಹಿಳೆಯರು ಸ್ವತಃ ಅವರೇ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ಕೂಡ ಸಿಕ್ಕಿದೆ. ಆದರೆ ಈ ವಿಷಯವು ತಿಳಿಯುತ್ತಿದ್ದಂತೆ ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ನಕಲಿ ವೆಬ್ಸೈಟ್ ಮತ್ತು ಲಿಂಕನ್ನು ಸಿದ್ಧಪಡಿಸಿ ವಂಚಿಸುತ್ತಿದ್ದಾರೆ.
ಗ್ರಾಹಕರು ಒಂದು ವೇಳೆ ಈ ವೆಬ್ಸೈಟ್ ಲಿಂಕ್ ಗಳನ್ನು ಕ್ಲಿಕ್ ಮಾಡಿ ಅಥವಾ ಆಪ್ ಗಳನ್ನು ಬಳಸಿ ಅರ್ಜಿ ಸಲ್ಲಿಸಲು ತಮ್ಮ ವೈಯಕ್ತಿಕ ವಿವರಗಳನ್ನು ಅಪ್ಲೋಡ್ ಮಾಡಿದರೆ ಅವರ ಖಾತೆಯಲ್ಲಿರುವ ಹಣಕ್ಕೆ ಕ’ನ್ನ ಬೀಳಲಿದೆ ಅಥವಾ ಅವರ ವೈಯಕ್ತಿಕ ಮಾಹಿತಿಯು ಸೋರಿಕೆ ಆಗಲಿದೆ. ಗೃಹಜ್ಯೋತಿ ಯೋಜನೆಗೆ ಆಧಾರ್ ಕಾರ್ಡ್, ಮನೆಯ ವಿದ್ಯುತ್ ಬಿಲ್ ಅಪ್ಲೋಡ್ ಮಾಡಬೇಕು ಹಾಗೆ ಗೃಹಲಕ್ಷ್ಮಿ ಯೋಜನೆಗೆ ಅವರ ಬ್ಯಾಂಕ್ ಖಾತೆ ಡೀಟೇಲ್ಸ್ ಕೂಡ ಕೊಡಬೇಕು ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ರೀತಿ ಹುನ್ನಾರ ನಡೆಸಿದ್ದಾರೆ.
ಇದರ ಬಗ್ಗೆ ಜಾಗೃತೆಯಿಂದ ಇರಿ ಎಂದು ಜಂಟಿ ಪೊಲೀಸ್ ಆಯುಕ್ತರು ಮಾಧ್ಯಮ ಹೇಳಿಕೆ ಕೊಟ್ಟು ಎಚ್ಚರಿಕೆಯಿಂದ ಇರುವಂತೆ ಕೋರಿಕೊಂಡಿದ್ದಾರೆ. ಅನಾಮಧೇಯ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಜಾಲತಾಣದಲ್ಲಿ ನಕಲಿ ವೆಬ್ಸೈಟ್ಗಳು ಹಾಗೂ ನಕಲಿ ಲಿಂಕ್ ಗಳು ಹರಿದಾಡುತ್ತಿರುತ್ತವೆ ಹಾಗಾಗಿ ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿರಿ.
ಸರ್ಕಾರದ ಅಧಿಕೃತ ವೆಬ್ಸೈಟ್ ಗಳನ್ನು ಮಾತ್ರ ಬಳಸಿ ನಕಲಿ ಆಪ್ ಮತ್ತು ನಕಲಿ ಲಿಂಕ್ ಅಥವಾ ವೆಬ್ಸೈಟ್ ನಿಂದ ವಂಚನೆಗೆ ಒಳಗಾದರೆ ಕೂಡಲೇ 1930 ಗೆ ಕರೆ ಮಾಡಿ ದೂರು ದಾಖಲಿಸಿ ಎಂದು CID ಸೈಬರ್ ವಿಭಾಗದ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಪ್ಲೇ ಸ್ಟೋರ್ ಗಳಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಹೆಸರಿನಲ್ಲಿ ಆಪ್ ಗಳು ಇವೆ ಗೃಹಲಕ್ಷ್ಮೀ ಯೋಜನೆ ಸಂಬಂಧವಾಗಿ ಸರ್ಕಾರ ಇನ್ನು ಯಾವುದೇ ಆಪ್ಗಳನ್ನು ಬಿಡುಗಡೆ ಮಾಡಿಲ್ಲ.
ಹಾಗಾಗಿ ಇವುಗಳನ್ನು ಡೌನ್ಲೋಡ್ ಮಾಡಿಕೊಂಡು ಈಗಲೇ ವೈಯಕ್ತಿಕ ಮಾಹಿತಿ ಅಪ್ಲೋಡ್ ಮಾಡಿ ತೊಂದರೆಗೆ ಒಳಗಾಗಬೇಡಿ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಮಾತನಾಡಿ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ಮತ್ತು ಸರ್ಕಾರದಿಂದಲೇ ಆಪ್ ಬಗ್ಗೆ ಅನೌನ್ಸ್ ಆಗುವವರೆಗೂ ಕಾಯಿರಿ. ಜುಲೈ 3 ಅಥವಾ ತಾರೀಕಿನಂದು ಈ ಬಗ್ಗೆ ತಿಳಿಸಲಿದ್ದೇವೆ.
ಜುಲೈ 14 ರಿಂದ ಅಪ್ಲಿಕೇಶನ್ ಸ್ವೀಕೃತಿ ಆರಂಭವಾಗಬಹುದು. ಆಗಸ್ಟ್ ಗಳಿಂದ ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿ ಖಾತೆಗೆ 2000 ಸಹಾಯಧನವನ್ನು ಹಾಕುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇಂತಹ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ಮಾಹಿತಿ ತಲುಪುವಂತೆ ಮಾಡಿ.