ಈಗ ಕೃಷಿ ಕ್ಷೇತ್ರ (agriculture) ಕೂಡ ಆಧುನಿಕರಣಗೊಂಡಿದೆ, ಎಲ್ಲಾ ಕ್ಷೇತ್ರದಲ್ಲೂ ತಂತ್ರಜ್ಞಾನ (technology) ಬಳಕೆಯಾಗುತ್ತರುವಂತೆ ಕೃಷಿ ಕ್ಷೇತ್ರದಲ್ಲಿ ಕೂಡ ಸಹಾಯವಾಗುತ್ತಿದ್ದು ಯಂತ್ರೋಪಕರಣಗಳ ಬಳಕೆ ಜೊತೆಗೆ ತಂತ್ರಜ್ಞಾನದ ಅಳವಡಿಕೆಯು ಕೃಷಿ ಚಟುವಟಿಕೆಯಲ್ವಿ ವೆಚ್ಚ ಕಡಿಮೆ ಮಾಡಿ, ಕೃಷಿ ಚಟುವಟಿಕೆಗೆ ಬೇಕಾದ ಮಾನವ ಶಕ್ತಿಯ ಕೊರತೆ ಮತ್ತು ವ್ಯರ್ಥವಾಗುತ್ತಿದ್ದ ಸಂಪನ್ಮೂಲಗಳ ಉಳಿಕೆ ಕೂಡ ಮಾಡುತ್ತಿದೆ.
ಈ ನಿಟ್ಟಿನಲ್ಲಿ ಡ್ರೋನ್ (Drone) ಬಳಕೆಯನ್ನು ಅತ್ಯುತ್ತಮ ಉದಾಹರಣೆಯಾಗಿ ನೀಡಬಹುದು ಕೀಟನಾಶಕ ಹಾಗೂ ಕ್ರಿಮಿನಾಶಕಗಳನ್ನು (Pest management) ಬೆಳೆಗಳಿಗೆ ಸಿಂಪಡಿಸಲು ರೈತರು ಈ ಹಿಂದೆ ಬಹಳ ಕಷ್ಟ ಪಡುತ್ತಿದ್ದರು, ದಿನಪೂರ್ತಿ ಭಾರವಾದ ಕ್ಯಾನ್ ಗಳನ್ನು ಹೊರಬೇಕಿತ್ತು ಜೊತೆಗೆ ಕೆಲ ವಿಷಕಾರಿ ಅಂಶಗಳು ರೈತನ ದೇಹ ಸೇರಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟು ಮಾಡುತ್ತಿತ್ತು ಮತ್ತು ಔಷಧಿ ಸಿಂಪಡಿಸುವುದಕ್ಕೆ ಮಾತ್ರವಲ್ಲದೆ.
ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿವರ್ಷ 20,000 ಸ್ಕಾಲರ್ಶಿಪ್ ಸಿಗಲಿದೆ ಆಸಕ್ತ ಪೋಷಕರು ಇಂದೇ ಅರ್ಜಿ ಸಲ್ಲಿಸಿ.!
ಇದಾದ ಬಳಿಕ ರೈತನು ತನ್ನನ್ನು ಸ್ವಚ್ಛ ಮಾಡಿಕೊಳ್ಳುವುದಕ್ಕೆ ಅಪಾರ ಪ್ರಮಾಣದ ನೀರನ್ನು ವ್ಯಯಿಸಬೇಕಿತ್ತು, ಈ ಎಲ್ಲಾ ಸಮಸ್ಯೆಗಳನ್ನು ಡ್ರೋನ್ ಬಳಕೆ ಪರಿಹಾರ ಮಾಡುತ್ತಿದೆ. ಹೀಗಾಗಿ ಡ್ರೋನ್ ಬಳಕೆ ಹಾಗೂ ಅವಶ್ಯಕತೆಯನ್ನು ಅರಿತಿರುವ ರೈತರು ಖರೀದಿಸಲು ಇಚ್ಛೆ ಪಟ್ಟಲ್ಲಿ ಬೆಂಗಳೂರು ಮೂಲದ ಎಂ ಡ್ರೋನ್ (M Drone) ಎನ್ನುವ ಸಂಸ್ಥೆಯ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
ಖರೀದಿ ಮಾಡಲು ಸಾಧ್ಯವಾಗದ ರೈತರಿಗೆ ಅವಶ್ಯಕತೆ ಇರುವ ಸಮಯದಲ್ಲಿ ಬಾಡಿಗೆಗೆ ಕೂಡ ನೀಡುತ್ತಿದೆ. ಇದರ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿ ತಿಳಿದಿಲ್ಲ ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತು ಕೆಲವು ಉಪಯುಕ್ತ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಈ ಮನೆ ಮದ್ದು ಮಾಡಿ ಸಾಕು.! ನರೋಲಿ ಒಂದೇ ದಿನದಲ್ಲಿ ಉದುರಿ ಹೋಗುತ್ತದೆ.! 100% ಫಲಿತಾಂಶ
● ಎಂ ಡ್ರೋನ್ ಸಂಸ್ಥೆಯು ರೈತರಿಗೆ ಕಡಿಮೆ ವೆಚ್ಚದಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಸೇವೆ ಒದಗಿಸುತ್ತಿದೆ.
● ಈ ಡ್ರೋನ್ ನ್ನು ಸಂಸ್ಥೆ ಮಾರಾಟ ಕೂಡ ಮಾಡುತ್ತಿದ್ದು ಒಂದು ಟ್ರೋನ್ 7 ಲಕ್ಷ ಬೆಲೆಬಾಳುತ್ತದೆ. ಖರೀದಿಸಲು ಸಾಧ್ಯವಾಗದೇ ಇದ್ದವರು ಎಕರೆಗೆ 600 ಕೊಟ್ಟು ಬಾಡಿಗೆಗೆ ಪಡೆಯಬಹುದು. ಒಂದು ಪ್ರದೇಶದಲ್ಲಿ 10 ಎಕರೆಗಿಂತ ಹೆಚ್ಚಿನ ಭೂಮಿಗೆ ಬಾಡಿಗೆಗೆ ಬುಕಿಂಗ್ ಮಾಡಿದರೆ ರಾಜ್ಯದ ಯಾವುದೇ ಭಾಗಕ್ಕಾದರೂ ಬಾಡಿಗೆಗೆ ನೀಡುತ್ತಾರೆ.
● ಒಂದು ಎಕರೆಗೆ 7-8 ನಿಮಿಷಗಳಲ್ಲಿ ಔಷಧಿ ಸಿಂಪಡಣೆ ಮಾಡಲಿದೆ. ಒಂದು ಎಕರೆಗೆ ಬೇಕಾದಷ್ಟು ಕ್ರಿಮಿನಾಶಕದ 70% ಒಂದೇ ಬಾರಿಗೆ ಕೊಂಡೊಯ್ಯಲಿದೆ.
● ಅರ್ಧ ಗಂಟೆ ಇದನ್ನು ಚಾರ್ಜ್ ಮಾಡಿದರೆ ದಿನವೊಂದಕ್ಕೆ 30 ರಿಂದ 40 ಎಕರೆಗಳಿಗೆ ಸಿಂಪಡಣೆ ಮಾಡಬಹುದು,
ಟ್ಯಾಂಕ್ ಸಾಮರ್ಥ್ಯ 10 ಲೀಟರ್ ಇದ್ದು, ರಿಮೋಟ್ ಕಂಟ್ರೋಲ್ ಮೂಲಕ ಒಂದೇ ಬಾರಿಗೆ 15 ಕಿ.ಲೋ ವರೆಗೆ ಹಾರಿಸಬಹುದು.
SBI ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್.! ಈ ಯೋಜನೆಯಲ್ಲಿ 5,000 ಹೂಡಿಕೆ ಮಾಡಿ ಸಾಕು 49 ಲಕ್ಷ ಸಿಗುತ್ತೆ.!
● ಸುಮಾರು 5km ದೂರ ಹಾಗೂ 100 ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯವನ್ನು ಈ ಡ್ರೋನ್ ಗಳು ಹೊಂದಿರುತ್ತವೆ.
● ಈ ಡ್ರೋನ್ ಗಳನ್ನು ಬಳಸುವುದರಿಂದ ಉಳಿದ ಸಾಂಪ್ರದಾಯಿಕ ವ್ಯವಸ್ಥೆಗೆ ಹೋಲಿಸಿದರೆ ಕೃಷಿ ಪರಿಕರ 30% , 90% ನೀರು, 40% ಔಷಧ ಪ್ರಮಾಣವನ್ನು ಉಳಿತಾಯ ಮಾಡಬಹುದು ಎಂದು ಅಂದಾಜಿಸಲಾಗಿದೆ.
● ಗೋವಿನ ಜೋಳ, ಭತ್ತಾ, ಗೋಧಿ, ಹೆಸರು ಕಾಳು, ಹತ್ತಿ ದ್ರಾಕ್ಷಿ ಬೆಳಗಳಿಗೆ ಮಾತ್ರವಲ್ಲದೇ ಎತ್ತರವಾದ ಬೆಲೆಗಳಾದ ತೆಂಗು ಅಡಿಕೆಗಳಿಗೂ ಕೂಡ ಈ ಔಷಧಿ ಸಿಂಪಡಿಸಬಹುದು.
● ಡ್ರೋನ್ ಖರೀದಿಸುವ ರೈತರಿಗೆ ಒಂದು ವಾರಗಳ ಉಚಿತ ತರಬೇತಿ ನೀಡಿ ಲೈಸೆನ್ಸ್ ಕೂಡ ನೀಡಲಾಗುತ್ತದೆ.
● ರೈತರಿಗೆ 40%, B.Sc ಅಗ್ರಿಕಲ್ಚರ್ ವಿದ್ಯಾರ್ಥಿಗಳಿಗೆ 50%, ಕೃಷಿ ವಿಜ್ಞಾನ ಕೇಂದ್ರಕ್ಕೆ 90% ಸಬ್ಸಿಡಿ ಕೂಡ ಲಭ್ಯವಿದ್ದು ಬ್ಯಾಂಕ್ ಲೋನ್ ಹಾಗೂ ಇನ್ಸೂರೆನ್ಸ್ ಸೌಲಭ್ಯ ಕೂಡ ಇದೆ.