ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿ (Guarantee Scheme) ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಆಗಸ್ಟ್ 30 ರಂದು ಲಾಂಚ್ ಆಗಿದೆ. ಜುಲೈ 2ನೇ ವಾರದಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು, ಆಗಸ್ಟ್ 30ರವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ 1.18 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎನ್ನುವ ಅಂಕಿ ಅಂಶವನ್ನು ಸರ್ಕಾರ ನೀಡಿದೆ.
ಆದರೆ ಕೆಲವು ಫಲಾನುಭವಿಗಳು ಮಾತ್ರ ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನವನ್ನು ಪಡೆದಿದ್ದಾರೆ. ಈ ಯೋಜನೆಗೆ ನೋಂದಾಯಿಸಿಕೊಂಡಿದ್ದವರಲ್ಲಿ 40% ಮಹಿಳೆಯರಿಗೆ ಇನ್ನೂ ಸಹ ಹಣ ತಲುಪಿಲ್ಲ ಎನ್ನುವ ದೂರು ಇದೆ. ಇದರ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ (Women and Child welfare department) ಈ ಬಗ್ಗೆ ಏನು ಉತ್ತರ ಸಿಕ್ಕಿದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ರೈತರಿಗೆ ಸಿಹಿಸುದ್ದಿ ಬೆಳೆಗೆ ಕೀಟನಾಶ ಸಿಂಪಡನೆ ಮಾಡಲು ಕೇವಲ 600 ರೂಪಾಯಿ ಡ್ರೋನ್ ಸಿಗಲಿದೆ.!
ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡು ಮಂಜೂರಾತಿ ಪತ್ರ ಪಡೆದಿದ್ದ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಹಣ ವರ್ಗಾವಣೆ ಆಗಲಿದೆ. ಈಗಾಗಲೇ ಸರ್ಕಾರದಿಂದ ಮೊದಲೇ ಕಂತಿನ ಹಣ ಕೂಡ ವರ್ಗಾವಣೆ ಆಗಿದೆ. ಆದರೆ ಲಕ್ಷಾಂತರ ಫಲಾನುಭವಿಗಳ ಖಾತೆಗೆ ಏಕಕಾಲಕ್ಕೆ ಹಣ ಹೋಗುತ್ತಿರುವುದರಿಂದ ತಾಂತ್ರಿಕ ಸಮಸ್ಯೆಗಳಾಗಿ (Technical issue) ಸರಿಯಾದ ಸಮಯಕ್ಕೆ ಎಲ್ಲರಿಗೂ ಹಣ ತಲುಪಿಲ್ಲ.
ಸುಮಾರು 7-8ಲಕ್ಷ ಮಹಿಳೆಯರ ಖಾತೆಗಳಿಗೆ ಅವರ ಖಾತೆಗಳು ಇನ್ ಆಕ್ಟಿವ್ (account in active) ಆಗಿರುವ ಕಾರಣ ಮತ್ತು ಅವರ ಖಾತೆಗಳಿಗೆ ಆಧಾರ್ ಕಾರ್ಡ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (Aadhar Seeding NPCI Mapping) ಆಗಿರದ ಕಾರಣ ಹಣ ತುಂಬಿಸಲು ಆಗುತ್ತಿಲ್ಲ ಆದರೆ ಖಾತೆ ಚಾಲ್ತಿಯಲ್ಲಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಪಡೆದಿರುವ ಎಲ್ಲಾ ಮಹಿಳೆಯರ ಖಾತೆಗೂ ಹಣ ಹೋಗಲಿದೆ.
ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿವರ್ಷ 20,000 ಸ್ಕಾಲರ್ಶಿಪ್ ಸಿಗಲಿದೆ ಆಸಕ್ತ ಪೋಷಕರು ಇಂದೇ ಅರ್ಜಿ ಸಲ್ಲಿಸಿ.!
ಪ್ರತಿ ದಿನವೂ ಕೂಡ ಹಣದ ವರ್ಗಾವಣೆಗೆ ಲಿಮಿಟ್ ಇರುವುದರಿಂದ ಮೊದಲನೇ ಕಂತಿನ ಹಣ ತಲುಪಿಸುವುದು ತಡವಾಗುತ್ತಿದೆ ಆದರೆ ಇನ್ನು ಮುಂದೆ ಪ್ರತಿ ತಿಂಗಳು 15 ನೇ ತಾರೀಕಿಗೆ ಗೃಹಲಕ್ಷ್ಮಿ ಹಣವನ್ನು ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ. ಅದರ ಪ್ರಕಾರ ಸೆಪ್ಟೆಂಬರ್ 15ರ ವೇಳೆಗೆ ಎರಡನೇ ಕಂತಿನ ಹಣ ಕೂಡ ವರ್ಗಾವಣೆ ಆಗಲಿದೆ, ಈಗಾಗಲೇ ಯಾರೆಲ್ಲಾ ಮೊದಲನೇ ಕಂತಿನ ಹಣವನ್ನು ಪಡೆದಿದ್ದಾರೆ ಅವರು ಈಗ 2ನೇ ಕಂತಿನ ಹಣವನ್ನು ಕೂಡ ಪಡೆಯಲಿದ್ದಾರೆ.
ಆದರೆ ಮೊದಲನೇ ಕಂತಿನ ಹಣವನ್ನೇ ಪಡೆಯಲಾಗದವರು ಇದರಿಂದ ಬೇಸರಗೊಂಡಿದ್ದಾರೆ. ತಮಗೆ ಮೊದಲ ಕಂತಿನ ಹಣವೇ ಬಂದಿಲ್ಲ, ಸೆಪ್ಟೆಂಬರ್ ತಿಂಗಳದ್ದು ಕೂಡ ಬರುತ್ತದೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ದಾರೆ. ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದ್ದು, ಬ್ಯಾಂಕ್ ಖಾತೆ ಸರಿ ಇದ್ದು ಅದು ಚಾಲ್ತಿಯಲ್ಲಿದ್ದರೆ ಖಂಡಿತವಾಗಿಯೂ ಅವರಿಗೆ ತಡವಾದರೂ ಸರಿ ಮೊದಲನೇ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣವು ಕೂಡ ಬರಲಿದೆ ಎನ್ನುವ ಮಾಹಿತಿಯನ್ನು ಇಲಾಖೆ ಮೂಲಗಳು ತಿಳಿಸಿವೆ.
ಈ ಮನೆ ಮದ್ದು ಮಾಡಿ ಸಾಕು.! ನರೋಲಿ ಒಂದೇ ದಿನದಲ್ಲಿ ಉದುರಿ ಹೋಗುತ್ತದೆ.! 100% ಫಲಿತಾಂಶ
ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳು ಕೂಡ ಗೃಹಲಕ್ಷ್ಮಿ ಹಣವನ್ನು ಪಡೆಲಿದ್ದಾರೆ ಎನ್ನುವ ಭರವಸೆಯನ್ನು ಕೂಡ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ನಂಬರ್ ಮಾತ್ರ ತೆಗೆದುಕೊಳ್ಳಲಾಗಿತ್ತು ಹಾಗಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಹೋಗಲಿದೆ ಅದರಿಂದ ಮಹಿಳೆಯರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅಥವಾ ಆಧಾರ್ ಲಿಂಕ್ ಆಗಿದ್ದರು ಆ ಖಾತೆ ಆಕ್ಟಿವ್ ಆಗಿಲ್ಲ ಎಂದರೆ ಇದನ್ನು ಸರಿಪಡಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ಮುಂದಿನ ತಿಂಗಳಿಂದ ಹಣ ತಲುಪಲಿದೆ ಎಂದು ಹೇಳಲಾಗುತ್ತಿದೆ.