Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ನಾಗರಿಕತೆ ಬೆಳೆಯುತ್ತಾ ಹೋದಂತೆಲ್ಲಾ ಮನುಷ್ಯ ಹಣ, ಆಸ್ತಿ ಮಾಡುವುದರ ಹಿಂದೆ ಬಿದ್ದಿದ್ದಾನೆ. ಈ ಸಮಾಜದಲ್ಲಿ ಆಸ್ತಿ ವಿಚಾರದಲ್ಲಿ ಮಾತ್ರ ಸಮಾನವಾದ ಹಂಚಿಕೆಯಾಗಿಲ್ಲ. ಕೆಲವರಲ್ಲಿ ಕಣ್ಣು ಹಾಸಿದಷ್ಟು ದೂರ ಅವರದ್ದೇ ಆಸ್ತಿ ಇದ್ದರೆ, ಕೆಲವರಿಗೆ ಇರಲು ಸಣ್ಣ ಸೂರು ಕೂಡ ಇಲ್ಲ ಆದರೆ ಬದುಕಲು ಪ್ರತಿಯೊಬ್ಬರಿಗೂ ಕೂಡ ಮನೆ ಅವಶ್ಯಕತೆ ಇರುತ್ತದೆ.
ಇನ್ನು ಹಳ್ಳಿ ಕಡೆಯಲ್ಲಿ ಬದುಕುವರಿಗಂತೂ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿರುವುದರಿಂದ ಸ್ವಲ್ಪ ಮಟ್ಟಗಾದರು ಕೃಷಿ ಜಮೀನು ಬೇಕೇ ಬೇಕು. ಇಂತಹ ಸಮಯದಲ್ಲಿ ತಮ್ಮ ಅವಶ್ಯಕತೆಗಾಗಿ ಜನರು ಸರ್ಕಾರದ ಜಮೀನನ್ನೇ ಬಳಸಬೇಕಾಗುತ್ತದೆ. ಹೀಗೆ ಹಳ್ಳಿಗಳು ಮಾತ್ರವಲ್ಲದೇ ನಗರ ಪ್ರದೇಶದಲ್ಲೂ ಕೂಡ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಮಾಡಿಕೊಂಡಿರುವವರು ಜಮೀನು ಮಾಡಿಕೊಂಡಿರುವವರು ಕಾಣಸಿಗುತ್ತಾರೆ.
ಇದುವರೆಗೆ ಯಾರಿಗೆಲ್ಲಾ ಗೃಹಲಕ್ಷ್ಮೀ ಹಣ ಬಂದಿಲ್ಲ ಈ ದಿನಾಂಕದಂದು ಒಂದೇ ಬಾರಿಗೆ 4,000 ರೂಪಾಯಿ ಜಮೆ ಆಗುತ್ತೆ.!
ಇವರಲ್ಲಿ ಬಡವರು, ನಿರಾಶ್ರಿತರು, ಆರ್ಥಿಕವಾಗಿ ಹಿಂದುಳಿದವರು ಇವರೇ ಹೆಚ್ಚಾಗಿರುವ ಕಾರಣ ಸರ್ಕಾರವೂ ಕೂಡ ಒಮ್ಮೊಮ್ಮೆ ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದ ಘೋಷಣೆ ಮಾಡುತ್ತದೆ. ನೀವು ಕೂಡ ಈ ರೀತಿ ನಿಮ್ಮ ಮೂಲಭೂತ ಅವಶ್ಯಕತೆ ಗಾಗಿ ಈ ರೀತಿ ಸರ್ಕಾರದ ಜಮೀನನ್ನು ಬಳಸುತ್ತಿದ್ದರೆ ಅಥವಾ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ನಿಮ್ಮ ಪರಿಸ್ಥಿತಿಯನ್ನು ಸರ್ಕಾರಕ್ಕೆ ವಿವರಿಸಿ ಸಕ್ರಮ ಮಾಡಿಕೊಳ್ಳಬಹುದು.
ಸರ್ಕಾರ ಇದಕ್ಕೆ ಕೆಲ ಕಂಡೀಶನ್ ಗಳನ್ನು ಕೂಡ ಹಾಕಿದೆ. ಇವುಗಳನ್ನು ಪೂರೈಸುವವರು ಸೂಕ್ತ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು. ಅದು ಹೇಗೆ ಮತ್ತು ಏನೆಲ್ಲ ದಾಖಲೆಗಳು ಬೇಕು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ರೈತರಿಗೆ ಸಿಹಿಸುದ್ದಿ ಬೆಳೆಗೆ ಕೀಟನಾಶ ಸಿಂಪಡನೆ ಮಾಡಲು ಕೇವಲ 600 ರೂಪಾಯಿ ಡ್ರೋನ್ ಸಿಗಲಿದೆ.!
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಮನೆ ನಕ್ಷೆ ಬೇಕಾಗುತ್ತದೆ. ಹಳೆ ಮನೆ ಆಗಿದ್ದರು ಅಥವಾ ಕಚ್ಚಾ ಮನೆ ಆಗಿದ್ದರೂ ಅಥವಾ ಮನೆ ಯಾವ ಹಂತದಲ್ಲಿ ಇದ್ದರೂ ಕೂಡ ಅದರ ಫೋಟೋವನ್ನು ಸಲ್ಲಿಸಬೇಕು
● ಗ್ರಾಮ ಸಭೆ ಅಥವಾ ನಗರ ಸಭೆಗಳಲ್ಲಿ ಮನೆ ಕಂದಾಯ ಕಟ್ಟಿದರೆ ಅದರ ರಶೀದಿ
● ಅಪರಿಚಿತರಿಂದ ಮಾಡಿದ ಪಂಚನಾಮೆ ಸಹಿಗಳು.
ವಿಧಾನ:-
● ನೀವು ನಿಮ್ಮ ವ್ಯಾಪ್ತಿಗೆ ಬರುವ ನೆಮ್ಮದಿ ಕೇಂದ್ರಕ್ಕೆ ಹೋಗಿ ಈ ರೀತಿ ಅಕ್ರಮ ಸಕ್ರಮ ಮಾಡಿಕೊಳ್ಳಲು ಬೇಕಿರುವ ಅರ್ಜಿ ಫಾರಂ ಪಡೆದು ವಿವರಗಳನ್ನು ಭರ್ತಿ ಮಾಡಬೇಕು.
● ಇದರ ಜೊತೆಗೆ ಕೇಳಲಾಗುವ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು.
● ಅರ್ಜಿ ಸ್ವೀಕರಿಸಿದ ಮೇಲೆ ಅವರು ನಿಮಗೆ ಅರ್ಜಿ ಸ್ವೀಕೃತಿ ಪತ್ರ ಕೊಡುತ್ತಾರೆ. ಮುಂದೆ ನಿಮ್ಮ ಅರ್ಜಿ ಸ್ಥಿತಿ ತಿಳಿದುಕೊಳ್ಳಲು ಇದು ಅನುಕೂಲಕ್ಕೆ ಬರುತ್ತದೆ.
● ನಂತರ ನಿಮ್ಮ ಅರ್ಜಿಯನ್ನು ವಿಲೇಜ್ ಅಕೌಂಟೆಂಟ್ ಹತ್ತಿರ ಪರಿಶೀಲನೆಗಾಗಿ ಕಳುಹಿಸುತ್ತಾರೆ.
ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿವರ್ಷ 20,000 ಸ್ಕಾಲರ್ಶಿಪ್ ಸಿಗಲಿದೆ ಆಸಕ್ತ ಪೋಷಕರು ಇಂದೇ ಅರ್ಜಿ ಸಲ್ಲಿಸಿ.!
● ಕಂದಾಯ ಅಧಿಕಾರಿ ಮತ್ತು ಶಾನುಭೋಗರು ಬಂದು ಸ್ಥಳವನ್ನು ವೀಕ್ಷಣೆ ಮಾಡುತ್ತಾರೆ. ಅರ್ಜಿಯನ್ನು ಸಲ್ಲಿಸಿದ ವ್ಯಕ್ತಿಯ ಮುಂದೆ ಮತ್ತು ಪಂಚನಾಮೆ ಸಹಿ ಹಾಕಿದವರ ಸಮ್ಮುಖದಲ್ಲಿ ಮನೆಯ ನಕ್ಷೆಯನ್ನು ಸಿದ್ದ ಪಡಿಸುತ್ತಾರೆ. ಈ ಎಲ್ಲ ಕೆಲಸಗಳು ಸರಿಯಾಗಿ ಕ್ರಮಬದ್ಧವಾಗಿ ನಡೆದರೆ ಅಕ್ರಮ ಜಮೀನನ್ನು ಸಕ್ರಮವಾಗಿ ಘೋಷಣೆಯಾಗುತ್ತದೆ.
ಅಕ್ರಮವನ್ನು ಸಕ್ರಮ ನಾಗಿಸಲು ಸರ್ಕಾರದ ಕಂಡೀಶನ್:-
● ಸಕ್ರಮ ಎಂದು ಘೋಷಣೆಯಾದ ಬಳಿಕ ವ್ಯಕ್ತಿ ಇದನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಮಾರುವಂತಿಲ್ಲ.
● ಜೊತೆಗೆ ಇದನ್ನು ವಾಣಿಜ್ಯ ಚಟುವಟಿಕೆಗಳ ಕಾರಣಕ್ಕಾಗಿ ಬಳಸಿಕೊಳ್ಳುವಂತಿಲ್ಲ.
● ಅಕ್ರಮ ಜಮೀನು ಸಕ್ರಮ ಜಮೀನು ಮಾಡದಂತೆ ಯಾರಿಗಾದರೂ ತಕರಾರಿದ್ದರೆ ನೀವು ಸಮಿತಿಯ ಶಾಸಕರಿಗೆ ಮತ್ತು ತಷಿಲ್ದಾರ್ ರಿಗೆ ಹದಿನೈದು ದಿನಗಳೊಳಗೆ ಅರ್ಜಿಯನ್ನು ಸಲ್ಲಿಸಬಹುದು.