ಕರ್ನಾಟಕ ವಿಧಾನಸಭಾ ಚುನಾವಣೆಯೂ ಈ ಬಾರಿ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಪ್ರಬಲ ಬಹುಮತದ ಬೆಂಬಲವೋ ಅಥವಾ ಸಮ್ಮಿಶ್ರ ಸರ್ಕಾರ ಎನ್ನುವುದು ಬಹಳ ದಿನಗಳಳವರೆಗೆ ಚರ್ಚೆಯ ವಿಷಯವಾಗಿತ್ತು. ಅಂತಿಮವಾಗಿ ಮೇ 13ನೇ ತಾರೀಕಿನಂದು ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿ ಐದು ವರ್ಷಗಳ ಕಾಲ ಕರ್ನಾಟಕವನ್ನಾಳುವ ಅಧಿಕಾರ ಗಿಟ್ಟಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷವು ಗೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಘೋಷಣೆ ಬಗ್ಗೆ ಹಾಗೂ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷವು ನೀಡಿದ ಐದು ಗ್ಯಾರಂಟಿ ಕಾರ್ಡ್ಗಳ ಬಗ್ಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಆಗಿದೆ. ಈ 5 ಗ್ಯಾರಂಟಿ ಕಾರ್ಡುಗಳೇ ಈ ಬಾರಿ ಕಾಂಗ್ರೆಸ್ ಪಕ್ಷವು ಗೆಲ್ಲುವುದಕ್ಕೆ ಟ್ರಂಪ್ ಕಾರ್ಡ್ ಆಯಿತು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು.
ಪ್ರತಿ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ, ಗೃಹ ಲಕ್ಷ್ಮಿ ಯೋಜನೆ ಅಡಿ ಮನೆಯಲ್ಲಿರುವ ಗೃಹಿಣಿಯರಿಗೆ ಪ್ರತಿ ತಿಂಗಳು 2000 ಸಹಾಯಧನ, ಪ್ರತಿ ಬಿಪಿಎಲ್ ಕುಟುಂಬಕ್ಕೂ ಉಚಿತ 10 ಕೆಜಿ ಅಕ್ಕಿ, ಪದವೀಧರ ನಿರುದ್ಯೋಗಿಗಳಿಗೆ ಮಾಸಿಕವಾಗಿ 3000 ನಿರುದ್ಯೋಗ ಭತ್ಯೆ ಮತ್ತು ಡಿಪ್ಲೋಮಾ ಪದವೀಧರರಿಗೆ 1500 ಸ್ಟೈ ಫಂಡ್ ಮತ್ತು ಮಹಿಳೆಯರಿಗೆ ಕರ್ನಾಟಕದಾದ್ಯಂತ ಉಚಿತ ಬಸ್ ಪ್ರಯಾಣ 5 ಗ್ಯಾರಂಟಿ ಕಾರ್ಡ್ಗಳನ್ನು ಕಾಂಗ್ರೆಸ್ ಪಕ್ಷವು ತನ್ನ ಪ್ರಚಾರದ ಸಮಯದಲ್ಲಿ ನಾಡಿನಾದ್ಯಂತ ಘೋಷಣೆ ಮಾಡಿ ಜನ ಮತ ಸೆಳೆದಿತ್ತು.
ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ ಆದರೆ ಗೆದ್ದ ಮೇಲೆ ಪಕ್ಷದ ವಲಸೆಯ ಬದಲಾಗುತ್ತದೆ. ಮೊದಲಿಗೆ ಈ 5 ಗ್ಯಾರಂಟಿ ಯೋಜನೆಗಳು ಕರ್ನಾಟಕದಾದ್ಯಂತ ಎಲ್ಲರಿಗೂ ಉಚಿತ ಎಂದು ಹೇಳಲಾಗಿತ್ತು. ಆದರೆ ಈಗ ದಿನಕೊಂದು ಕಂಡಿಶನ್ ಗಳನ್ನು ಇದರ ಮೇಲೆ ಅಪ್ಲೈ ಮಾಡಲಾಗುತ್ತಿದೆ. ವಿದ್ಯುತ್ ಉಚಿತ ಎನ್ನುವುದರ ಮೇಲೆ ಇನ್ಕಮ್ ಟ್ಯಾಕ್ಸ್ ಕಟ್ಟುವವರಿಗೆ ಇಲ್ಲ ಎನ್ನುವ ನೀತಿ ಹೇರಿದೆ ಮತ್ತು 200 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಮಾತ್ರ ಉಚಿತ ಎನ್ನುವ ಮಾತು ಕೂಡ ಕೇಳಿ ಬಂದಿದೆ.
ಇದೊಂದೇ ಅಲ್ಲದೆ ಎಲ್ಲ ಯೋಜನೆಗಳಿಗೂ ಕೂಡ ಇದೇ ರೀತಿಯ ಕಂಡಿಷನ್ಗಳು ಒಂದೇ ಒಂದರ ಹಿಂದೆ ಅಪ್ಲೈ ಆಗುತ್ತಿವೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರಾದ ಜಿ. ಪರಮೇಶ್ವರ್ ಅವರು ಇದರ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪಕ್ಷವು ಘೋಷಣೆ ಮಾಡಿದ್ದ ಗ್ಯಾರಂಟಿ ಕಾರ್ಡ್ಗಳನ್ನು ಸರ್ಕಾರ ರಚಿಸಿದ ಮೊದಲ ಕ್ಯಾಬಿನೆಟ್ ಅಲ್ಲಿಯೇ ಜಾರಿಗೆ ತರುತ್ತೇವೆ ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ ಆದರೆ ಎಲ್ಲರಿಗೂ ಉಚಿತ ಎಂದರೆ ಉಳ್ಳವರು ಕೂಡ ಇದರ ಉಪಯೋಗ ಪಡೆದುಕೊಳ್ಳಬಹುದು ಅದಕ್ಕಾಗಿ ಕೆಲ ಅರ್ಹತಾ ಮನದಂಡಗಳನ್ನು ವಿಧಿಸಲಾಗುತ್ತದೆ. ಜನ ಇದರ ಬಗ್ಗೆ ಹೋರಾಟ ಮಾಡುವಷ್ಟು ಮಟ್ಟಕ್ಕೆ ಕೊಂಡೊಯುವುದಿಲ್ಲ.
ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟನೆ ಕೊಟ್ಟು ಗ್ಯಾರಂಟಿ ಕಾರ್ಡ್ ಗಳು ಜಾರಿಗೆ ಬರುವುದು ಸ್ಪಷ್ಟ ಆದರೆ ಕಂಡಿಷನ್ಸ್ ಅಪ್ಲೈ ಎನ್ನುವುದನ್ನು ಇನ್-ಡೈರೆಕ್ಟ್ ಆಗಿ ಹೇಳಿದ್ದಾರೆ. ಇನ್ನೂ ಸರ್ಕಾರ ರಚನೆ ಬಗ್ಗೆ ಸಾಕಷ್ಟು ಹಗ್ಗ ಜಗ್ಗಾಟ ನಡೆಯುತ್ತಿದ್ದು, ಮುಖ್ಯಮಂತ್ರಿ ಗದ್ದುಗೆಗಾಗಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಜಟಾಪಟಿ ಶುರುವಾಗಿದೆ. ಇದೆಲ್ಲ ಇತ್ಯರ್ಥವಾದ ಮೇಲೆ ಶೀಘ್ರವೇ ಸರ್ಕಾರ ರಚನೆ ಆದಲ್ಲಿ ಕರ್ನಾಟಕದ ಜನತೆಗೆ ಗ್ಯಾರೆಂಟಿ ಕಾರ್ಡ್ಗಳ ಭಾಗ್ಯ ದೊರೆಯಲಿದೆ.