ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಜನತೆಗಾಗಿ 5 ವಿಶೇಷ ಗ್ಯಾರೆಂಟಿ ಯೋಜನೆಗಳನ್ನು (Gyarantee Schemes) ಜಾರಿಗೆ ತಂದಿದೆ. ಈ ಐದು ಯೋಜನೆಗಳಲ್ಲಿ ಮಹಿಳೆಯರಿಗೇ ಹೆಚ್ಚಿನ ಪಾಲಿದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕರ್ನಾಟಕ ರಾಜ್ಯಾದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ.
ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ಸದಸ್ಯನಿಗೆ 170 ರೂಪಾಯಿಯಂತೆ ಆ ಕುಟುಂಬದ ಮುಖ್ಯಸ್ಥ ಸ್ಥಾನದಲ್ಲಿರುವ ಮಹಿಳೆಯ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ, ಅದೇ ರೀತಿ ಗೃಹಲಕ್ಷ್ಮಿ ಯೋಜನೆ ಮೂಲಕ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥ ಸ್ಥಾನದಲ್ಲಿರುವ ಮಹಿಳೆಯರು ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ರೂ.2,000 ಸಹಾಯಧನವನ್ನು ಪಡೆಯುತ್ತಿದ್ದಾರೆ.
ಈ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ಗ್ಯಾರಂಟಿಯೇತರವಾಗಿ ಕೂಡ ಉದ್ಯೋಗಿನಿ, ಸ್ವಯಂ ಉದ್ಯೋಗ ಯೋಜನೆ ನೇರ ಸಾಲ ಯೋಜನೆ ಇಂತಹ ಯೋಜನೆಗಳಲ್ಲಿ ಕೂಡ ಮಹಿಳೆಯರಿಗೆ ಅವರ ಜೀವನ ಕಟ್ಟಿಕೊಳ್ಳಲು ಸರ್ಕಾರ ನೆರವಾಗುತ್ತಿದೆ.
ವಿವಿಧ ನಿಗಮಗಳ ಮೂಲಕ ಆ ವ್ಯಾಪ್ತಿಗೆ ಬರುವ ಮಹಿಳೆಯರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಮೂಲಕ ಮಹಿಳೆಯರು ವಾಣಿಜ್ಯ ಉದ್ದೇಶದಿಂದ ವಾಹನಗಳನ್ನು ಖರೀದಿಸಲು ಸಬ್ಸಿಡಿ ರೂಪದ ಸಾಲ ಮತ್ತು ಮಹಿಳೆಯರಿಗಾಗಿ ವಿಶೇಷವಾದ ಸ್ತ್ರೀ ಶಕ್ತಿ ಸಾಲ ಯೋಜನೆ ಮೂಲಕ ಸ್ವಂತ ಉದ್ಯಮ ಆರಂಭಿಸಲು ಇಚ್ಚಿಸುವ ಮಹಿಳೆಯರಿಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಅಬಲೆ ಮಹಿಳೆಯರಾದ ಅವಿವಾಹಿತರು, ವಿಚ್ಛೇದಿತರಿಗೆ ಹೆಚ್ಚಿನ ಆದ್ಯತೆ ಇದೆ. ಮುಂದುವರೆದು ಸರ್ಕಾರವು ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ (Udyogini Scheme) ಮೂಲಕ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಿಗೆ ಅವರ ಕೌಶಲ್ಯ ಅಭಿವೃದ್ಧಿಗೆ ವಿಶೇಷ ತರಗತಿಗಳು ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಸ್ವಂತ ಉದ್ಯೋಗ ಮಾಡಲು ಇಚ್ಛಿಸಿದರೆ ಸಾಲ ಸೌಲಭ್ಯದಲ್ಲಿ ನೆರವನ್ನು ಕೂಡ ನೀಡಲಾಗುತ್ತಿದೆ.
ಅದರ ಕುರಿತು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಉದ್ಯೋಗಿನಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಕುಶಲಕರ್ಮಿ ಹಾಗೂ ಗುಡಿ ಕೈಗಾರಿಕೆ ಮಾಡುವ ಕುಟುಂಬಗಳ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಕುಂಬಾರ, ಮರಕೆಲಸ, ಕ್ಷೌರಿಕ, ಕಸೂತಿ, ನೇಯ್ಗೆ ಮುಂತಾದವುಗಳನ್ನು ಅವಲಂಬಿಸಿರುವ ಕುಟುಂಬಗಳಿಗೆ ಉಚಿತವಾಗಿ ಟೂಲ್ ಕಿಟ್ ನೀಡುತ್ತಿದೆ.
ಅಂತೆಯೇ ಈಗ ಮುಂದುವರೆದು ಗ್ರಾಮೀಣ ಭಾಗದ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣಾ (Distribution of Electric Sewing Machines) ಯೋಜನೆಯನ್ನು ಸರ್ಕಾರ ಜಾರಿಗೆ 2023ರಲ್ಲಿ ಜಾರಿಗೆ ತಂದಿದೆ. ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸುವುದರ ಮುಖಾಂತರ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು
* 22 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿರಬೇಕು.
* ಟೈಲರಿಂಗ್ ತರಬೇತಿ ಪಡೆದಿರಬೇಕು
ಬೇಕಾಗುವ ದಾಖಲೆಗಳು:-
* ಜಾತಿ ಪ್ರಮಾಣ ಪತ್ರ
* ರೇಷನ್ ಕಾರ್ಡ್
* ಆಧಾರ್ ಕಾರ್ಡ್
* ಟೈಲರಿಂಗ್ ತರಬೇತಿ ಪಡೆದಿರುವ ದೃಢೀಕರಣ ಪತ್ರ
* ವಿಳಾಸದ ಪುರಾವೆ
ಅರ್ಜಿ ಸಲ್ಲಿಸುವ ವಿಧಾನ:-
* ಉಚಿತ ವಿದ್ಯುತ್ ಚಾಲತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಆಸಕ್ತ ಮಹಿಳೆಯರು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು.
* ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ, ಹಾಸನ ಜಿಲ್ಲೆ ಮತ್ತು ಕಲ್ಬುರ್ಗಿ ಜಿಲ್ಲೆಯವರು ಈಗ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 25 ಡಿಸೆಂಬರ್, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಕೈಗಾರಿಕಾ ವಿಸ್ತರಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರ ಕಚೇರಿ ಮತ್ತು ಗ್ರಾಮೀಣ ಕೈಗಾರಿಕೆಗಳ ಖಾದಿ ಮತ್ತು ಗ್ರಾಮೋದ್ಯೋಗ ಕಚೇರಿಯನ್ನು ಸಂಪರ್ಕಿಸಬಹುದು.
* ಕಲ್ಬುರ್ಗಿ ಜಿಲ್ಲೆಯ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ https://zpkalaburagi.karnataka.gov.in