ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಅಥವಾ ಮನೆಯಲ್ಲಿ ಇದ್ದುಕೊಂಡು ಉದ್ಯೋಗ ಮಾಡಬೇಕು ಎಂದುಕೊಳ್ಳುವವರಿಗೆ ಹೊರಗೆ ಹೋಗಿ ದುಡಿಯಲು ಅವಕಾಶ ಇರದಂತ ಹೆಣ್ಣು ಮಕ್ಕಳಿಗೆ ಟೈಲರಿಂಗ್ (tailering) ಒಂದು ಅತ್ಯುತ್ತಮ ಅಸ್ತ್ರ. ತಮ್ಮ ಬಿಡುವಿನ ಸಮಯದಲ್ಲಿ ಹವ್ಯಾಸವಾಗಿ ಅಥವಾ ಇದನ್ನೇ ವೃತ್ತಿಯಾಗಿ ತೆಗೆದುಕೊಡು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮನೆಯಿಂದಲೇ ಕೆಲಸ ಮಾಡಲು ಹೊಲಿಗೆ ಒಂದು ಉತ್ತಮ ಅವಕಾಶ.
ಈಗ ಹೊಲಿಗೆ ತರಬೇತಿ ಪಡೆದಿರುವ ಪ್ರಮಾಣ ಪತ್ರ ಇದ್ದರೆ ಸರ್ಕಾರಗಳೇ ಮಹಿಳೆಯರು (for womens) ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ ಎನ್ನುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರ (free Sewing Machine) ಮತ್ತು ಸ್ವ ಉದ್ಯೋಗ ಆರಂಭಿಸಲು ಸಬ್ಸಿಡಿ ರೂಪದ ಸಹಾಯಧನವನ್ನು (Subsidy loan) ಕೂಡ ನೀಡುತ್ತಿದೆ.
ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
ಇಷ್ಟೆಲ್ಲಾ ಅನುಕೂಲತೆಯನ್ನು ಉಪಯೋಗಿಸಿಕೊಳ್ಳಲು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಕೆನರಾ ಬ್ಯಾಂಕ್ ವತಿಯಿಂದ ಉಚಿತವಾಗಿ 30 ದಿನಗಳ ಟೈಲರಿಂಗ್ ತರಬೇತಿಯನ್ನು (free tailoring) ಕೂಡ ನೀಡಲಾಗುತ್ತಿದೆ. ಟೈಲರಿಂಗ್ ತರಬೇತಿ ಜೊತೆಗೆ ತರಬೇತಿ ಪಡೆದ ನಂತರ ಸ್ವಂತ ಉದ್ಯಮ ಮಾಡಲು ಸರ್ಕಾರದ ಯಾವೆಲ್ಲ ಯೋಜನೆಗಳಿಂದ ನೆರವು ಸಿಗುತ್ತದೆ ಎನ್ನುವ ಮಾರ್ಗದರ್ಶನ ಕೂಡ ನೀಡಲಾಗುತ್ತದೆ. ಎಲ್ಲಿ? ಹೇಗೆ? ಯಾರು ಅರ್ಜಿ ಸಲ್ಲಿಸಲು ಅರ್ಹರು? ಇತ್ಯಾದಿ ವಿವರ ಹೀಗಿದೆ ನೋಡಿ.
ಸಂಸ್ಥೆ:-
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮುಟಾ ವತಿಯಿಂದ ಹೆಣ್ಣು ಮಕ್ಕಳಿಗಾಗಿ ಒಂದು ತಿಂಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತರಬೇತಿ ಸಮಯ:-
18 ಮಾರ್ಚ್, 2024 ರಿಂದ 18 ಏಪ್ರಿಲ್, 2024ರ ವರೆಗೆ 30 ದಿನಗಳು.
ಈ ಸುದ್ದಿ ಓದಿ:-ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ, ಬಾಡಿಗೆ ಕೊಡೋಕೆ ಬೆಸ್ಟ್, ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಕಡಿಮೆ ಬಜೆಟ್ ಮನೆ…
ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:-
* 18 ರಿಂದ 45 ವರ್ಷ ವಯೋಮಾನದ ಒಳಗಿನ ಮಹಿಳೆಯರು ಈ ಉಚಿತ ತರಬೇತಿಯಲ್ಲಿ ಪಾಲ್ಗೊಳ್ಳಬಹುದು
* ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು, ಕನಿಷ್ಠ 7ನೇ ತರಗತಿ ವಿದ್ಯಾಭ್ಯಾಸ ಪಡೆದಿರಬೇಕು
* ಕರ್ನಾಟಕಕ್ಕೆ ಸೇರಿದ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಅದರಲ್ಲೂ ತರಬೇತಿ ನಡೆಯುತ್ತಿರುವ ಭಾಗದ ಮಹಿಳೆಯರಿಗೆ ಮೊದಲಿನ ಆದ್ಯತೆ.
* ತರಬೇತಿ ಜೊತೆಗೆ 30 ದಿನಗಳ ವಸತಿ ಮತ್ತು ಊಟದ ಸೌಲಭ್ಯವಿರುತ್ತದೆ, ಮಹಿಳೆಯರಿಗೆ ಸುರಕ್ಷತೆಯ ಬಗ್ಗೆ ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ.
* ಗ್ರಾಮೀಣ ಭಾಗದ ಮಹಿಳೆಯರಿಗೆ ಅದರಲ್ಲೂ BPL / AAY ರೇಷನ್ ಕಾರ್ಡ್ ಹೊಂದಿದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
* ತರಬೇತಿ ಪಡೆದುಕೊಂಡ ನಂತರ ಸ್ವಂತ ಉದ್ಯಮ ಪ್ರಾರಂಭಿಸಲು ಆಸಕ್ತಿ ಇರಬೇಕು.
ಈ ಸುದ್ದಿ ಓದಿ:-ಹೊಸ ಬೈಕ್ ಅಥವಾ ಕಾರು ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ವಾಹನಗಳ ಮೇಲೆ ತೆರಿಗೆ ಇನ್ನಷ್ಟು ಹೆಚ್ಚಳ.!
ಅರ್ಜಿ ಸಲ್ಲಿಸುವ ವಿಧಾನ:-
* ಈ ಕೆಳಗೆ ನೀಡುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಮೊಬೈಲ್ ಸಂಖ್ಯೆಗಳು:-
9449860007
9538281989
9916783825
8880444612
* ತರಬೇತಿ ಆರಂಭ ಆಗುವ ದಿನದಂದು ಕೆಲ ಅಗತ್ಯ ದಾಖಲೆಗಳ ಜೊತೆಗೆ ಬಂದು ದಾಖಲಾಗಬಹುದು.
ಸಲ್ಲಿಸಬೇಕಾದ ದಾಖಲೆಗಳು:-
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್ ಪ್ರತಿ
ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
ಮೊಬೈಲ್ ಸಂಖ್ಯೆ
ತರಬೇತಿ ನಡೆಯುವ ಸ್ಥಳ:-
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಇಂಡಸ್ಟ್ರಿಯಲ್ ಏರಿಯಾ,
ಹೆಗಡೆ ರಸ್ತೆ,
ಕುಮುಟಾ,
ಉತ್ತರ ಕನ್ನಡ ಜಿಲ್ಲೆ – 581343