ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಹೊರಗಡೆ ಹೋಗಿ ದುಡಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಯಾಕೆಂದರೆ ಎಲ್ಲರೂ ಈ ರೀತಿ ಕಚೇರಿಗಳಿಗೆ ಹೋಗಿ ಕೆಲಸ ಮಾಡುವ ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಇರಬಹುದು ಅಥವಾ ವಿದ್ಯೆ ಇದ್ದರೂ ಸಮಯದ ಅಭಾವ ಅಥವಾ ಕುಟುಂಬದ ಸಹಕಾರ ಇಲ್ಲದೆ ಇರಬಹುದು.
ಹೀಗಾಗಿ ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡು ಎನ್ನುವ ಸಲಹೆ ಎಲ್ಲಾ ಕಡೆಯಿಂದ ಬಂದಿರುತ್ತದೆ. ಮನೆಯಲ್ಲಿ ಕುಳಿತು ಏನು ಕೆಲಸ ಮಾಡುವುದು ಎಂದು ಬೇಸರ ಆಗುವುದು ಬೇಡ. ಯಾಕೆಂದರೆ ಈಗ ಪ್ರಪಂಚ ಬಹಳಷ್ಟು ಬದಲಾಗುತ್ತಿದೆ ಬೇರೆ ಕಡೆ ಹೋಗಿ ಕೆಲಸ ಮಾಡುವುದಕ್ಕಿಂತ ಸ್ವಂತ ದುಡಿಮೆ ಮಾಡಲು ಎಲ್ಲರೂ ಇಷ್ಟಪಡುತ್ತಿದ್ದಾರೆ.
ನೀವು ನಿಮ್ಮ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಉಪಯೋಗಿಸಿ ಏನು ಬೇಕಾದರೂ ಸಾಧಿಸಬಹುದು ಪ್ರತಿಯೊಬ್ಬರ ಬಳಿಯೂ ಒಂದೊಂದು ಟ್ಯಾಲೆಂಟ್ ಇರುತ್ತದೆ, ಗುರುತಿಸಿ ಪ್ರೋತ್ಸಾಹಿಸಬೇಕು ಅಷ್ಟೇ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಇರುವ ಈ ಮಾರ್ಚ್ ತಿಂಗಳಲ್ಲಿ ನಾವು ಇಂತಹದೇ ಒಬ್ಬ ವಿಶೇಷ ಸಾಧಕಿಯ ಬಗ್ಗೆ ನಿಮಗೆ ತಿಳಿಸಿ ಸ್ಪೂರ್ತಿಗೊಳಿಸಲು ಇಚ್ಛಿಸುತ್ತಿದ್ದೇನೆ.
ಈ ಸುದ್ದಿ ಓದಿ:- ಹಸುವಿಗಿಂತ ಹಸು ಸಗಣಿಯಿಂದಲೇ ಡಬಲ್ ಲಾಭ.! ಪಶುಸಂಗೋಪನೆ ಮಾಡುತ್ತಿರುವವರು ನೋಡಿ.! ಸಗಣಿಯಿಂದ ಎಷ್ಟೆಲ್ಲಾ ಲಾಭ ಇದೆ ಅಂತ.!
ವಸುಧ ಎನ್ನುವ ಹೆಣ್ಣು ಮಗಳು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕದೊಂದು ಹಳ್ಳಿಯವರು. ಹಳ್ಳಿಯಲ್ಲಿ ಶಾಲಾ ಶಿಕ್ಷಣ ಮತ್ತು ಶಿಕಾರಿಪುರದಲ್ಲಿ ಪದವಿ ಮತ್ತು ಶಿವಮೊಗ್ಗದಲ್ಲಿ ಬಿಎಡ್ ಮಾಡಿದ ಇವರು ಬಿಎಡ್ ಮುಗಿಯುತ್ತಿದ್ದಂತೆ ಮದುವೆ ಆಗಿ ಬಿಡುತ್ತಾರೆ.
ಮದುವೆ ಆದ ಮೇಲೆ ಒಂದೆರಡು ವರ್ಷ ಮನೆಯಲ್ಲಿಯೇ ಇರುತ್ತಾರೆ ಕೆಲಸ ಮಾಡಬೇಕು ಎನ್ನುವ ಇಚ್ಛೆ ಇರುತ್ತದೆ ಆದರೆ ಯಾರೊಂದಿಗೆ ಹೇಗೆ ವ್ಯವಹರಿಸಬೇಕು ಧೈರ್ಯವಾಗಿ ಹೇಗೆ ಎಲ್ಲವನ್ನು ನಿಭಾಯಿಸಬೇಕು ಎನ್ನುವುದನ್ನು ಕಲಿಯುವ ಕೊರತೆ ಇರುತ್ತದೆ ಇವರ ಒಳಗಿದ್ದ ಆಸಕ್ತಿ ಮತ್ತು ಅಭಿಲಾಷೆಗೆ ಅನುಸಾರವಾಗಿ ಪತಿ ಆಕೆಗೆ ಬೇಕಾದ ಸಹಕಾರ ತೋರಿ ತರಬೇತಿ ನೀಡಿ ಕನಸುಗಳಿಗೆ ಜೊತೆಯಾಗುತ್ತಾರೆ.
ಬಹಳಷ್ಟು ಪ್ರಯತ್ನ ಮಾಡಿದ ಇವರಿಗೆ ಕೊನೆಯಲ್ಲಿ ಕಾರ್ಪೊರೇಟ್ ಗಿಫ್ಟ್ ಎನ್ನುವ ಉದ್ಯಮ ಕೈ ಹಿಡಿಯುತ್ತದೆ. ಪತಿಯ ಪ್ರಿಂಟಿಂಗ್ ಪ್ರೆಸ್ ನೋಡಿಕೊಳ್ಳುತ್ತಿರುತ್ತಾರೆ ಪತಿಗೆ ಸಹಾಯ ಮಾಡಲು ಪ್ರಿಂಟಿಂಗ್ ಪ್ರೆಸ್ ಗೆ ಬರುತ್ತಿದ್ದ ಇವರಿಗೆ ಇದನ್ನೇ ಸ್ವಲ್ಪ ಕಮರ್ಷಿಯಲ್ ಆಗಿ ಮಾಡಿ ಕಾರ್ಪೊರೇಟ್ ಲೆವೆಲ್ ಗೆ ತರಬೇಕು ಎನ್ನುವ ಆಲೋಚನೆ ಬರುತ್ತದೆ.
ಈ ಸುದ್ದಿ ಓದಿ:-ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ.! ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಕಂದಾಯ ಸಚಿವರು.!
ಯಾವ ರೀತಿ ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡಿ ಒಂದು ಐಡಿಯಾ ಮಾಡಿಕೊಳ್ಳುತ್ತಾರೆ ಮತ್ತು ಚಿಕ್ಕದಾಗಿ ಕಂಪನಿ ಕೂಡ ಶುರು ಮಾಡುತ್ತಾರೆ. ಆದರೆ ಇವರು ಕಂಪನಿ ತೆರದ ಮೂರು ತಿಂಗಳಲ್ಲಿ ಕೋವಿಡ್ ಬಂದು ಎರಡು ವರ್ಷ ಲಾಕ್ಡೌನ್ ಆಗಿ ಬಿಡುತ್ತದೆ ಆದರೆ ಛಲ ಬಿಡದ ಇವರು ಇದು ಕೈ ಹಿಡಿಯುತ್ತದೆ. ಇದೇ ನನ್ನ ಕ್ಷೇತ್ರ ಎನ್ನುವ ಬಲವಾದ ನಂಬಿಕೆ ಇಟ್ಟು ಕಂಪನಿ ಮುನ್ನಡೆಸುತ್ತಾರೆ. ರೂ.20,000 ಬಂಡವಾಳದೊಂದಿಗೆ ಶುರು ಮಾಡಿದ ಇವರು ಇಂದು 1.5 ಕೋಟಿ ಗಳಿಸಿದ್ದಾರೆ.
ಇವರು ಮಾಡುತ್ತಿರುವ ಬಿಸಿನೆಸ್ ಏನು ಎಂದರೆ ಕಾರ್ಪೊರೇಟ್ ಗಿಫ್ಟ್. ಸಾಮಾನ್ಯವಾಗಿ ಹೊಸ ವರ್ಷಗಳಂದು ಅಥವಾ ಕಂಪನಿಯ ವಿಶೇಷ ದಿನಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಪ್ರತಿ ಕಂಪನಿ ತನ್ನ ಉದ್ಯೋಗಿಗಳಿಗೆ ಉಡುಗೊರೆ ಕೊಡುತ್ತದೆ ಅಥವಾ ಯಾವುದಾದರೂ ವಿಶೇಷತೆ ಇದ್ದಾಗ ಒಂದೇ ರೀತಿಯ ಡ್ರೆಸ್ ಕೋಡ್ ಮಾಡುತ್ತದೆ.
ಈ ಸುದ್ದಿ ಓದಿ:-ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್.! ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ.!
ಇದನ್ನೇ ಐಡಿಯಾ ಮಾಡಿಕೊಂಡ ಇವರು ಕಂಪನಿಗಳನ್ನು ಈ ಬಗ್ಗೆ ಅಪ್ರೋಚ್ ಮಾಡುತ್ತಾರೆ. ಹೊಸ ವರ್ಷಕ್ಕೆ ಡೈರಿಗಳು, ಕಂಪನಿಯ ಲೋಗೋ ಇರುವ ಪೆನ್ನುಗಳು, ಕಂಪನಿಯ ಹೆಸರಿರುವ ಟಿ-ಶರ್ಟ್ ಮಗ್, ಕಂಪನಿ ವಾಟರ್ ಬಾಟಲ್ ಗಳು ಈ ರೀತಿ ಸಾವಿರಾರು ಬಗೆಯ ಐಡಿಯಾ ಇಟ್ಟುಕೊಂಡು ಈ ರೀತಿಯಾಗಿ ಮಾಡಿಕೊಡುವುದಾಗಿ ಪ್ರಸೆಂಟ್ ಮಾಡುತ್ತಾರೆ.
ಮೊದಲ ಬಾರಿಗೆ ಕಂಪನಿಯೊಂದರಿಂದ ಒಂದು ಲಕ್ಷ ಪೆನ್ ಆರ್ಡರ್ ಬರುತ್ತದೆ ಆದರೆ ಬಂಡವಾಳ ಇರುವುದಿಲ್ಲ. ತಮ್ಮದು ಸ್ಟಾರ್ಟ್ 50% ಅಡ್ವಾನ್ಸ್ ಮಾಡುವಂತೆ ಮನವರಿಕೆ ಮಾಡಿಕೊಂಡಾಗ ಕಂಪನಿ ಸಹಕರಿಸುತ್ತದೆ. ಆಗ ಇವರು ಬರಿ 20,000 ದಿಂದ ಆರಂಭಿಸಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ ಈಗ ಯಶಸ್ವಿಯಾಗಿ 1.5 ಕೋಟಿ ಬಿಸಿನೆಸ್ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ:-ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್’ಗಳಲ್ಲಿ ಸಿಗಲಿದೆ ಅತೀ ಕಡಿಮೆ ಬಡ್ಡಿಗೆ ಸಾಲ.!
ನಂತರದ ದಿನಗಳಲ್ಲಿ ಇದನ್ನು ಇನ್ನಷ್ಟು ಬೆಳೆಸುವ ಗುರಿ ಹೊಂದಿದ್ದಾರೆ. ಈಗ ಆನ್ಲೈನ್ ನಲ್ಲಿ ಕೂಡ ಇವರ ಕಂಪನಿಯ ಗಿಫ್ಟ್ ಗಳು ಸಿಗುತ್ತವೆ. ಇಕೋ ಫ್ರೆಂಡ್ಲಿ ಹೆಚ್ಚು ಆರ್ಡರ್ ಬರುತ್ತದೆ. ನಾವು ನಿಗದಿಪಡಿಸುವ ಬೆಲೆ, ಗುಣಮಟ್ಟ ಮತ್ತು ಸರ್ವಿಸ್ ನಮಗೆ ರೆಫರೆನ್ಸ್ ಹೆಚ್ಚಾಗುವಂತೆ ಮಾಡಿದೆ ನಾನೇ ಅಂದುಕೊಳ್ಳದ ಮಟ್ಟಕ್ಕೆ ಬೆಳೆದಿದ್ದೇನೆ.
ಮನೆಯಲ್ಲಿ ಇದ್ದು ಕೆಲಸ ಮಾಡುವ ಆಸಕ್ತಿ ಇರುವ ಹೆಣ್ಣು ಮಕ್ಕಳು ಇದನ್ನು ಶುರು ಮಾಡಬಹುದು ಎನ್ನುವ ಸಲಹೆ ನೀಡುತ್ತಾರೆ ಇವರು. ವಸುಧಾರವರ ಯಶೋಗಾಥೆಯನ್ನು ಇವರ ಮಾತಿನಲ್ಲಿ ಕೇಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ ಮತ್ತು ಹೆಣ್ಣೊಂದು ಮನಸ್ಸು ಮಾಡಿದ್ದರೆ ಏನು ಬೇಕಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಸಾಕ್ಷಿ ಇವರೇ ಇದ್ದಾರೆ ನೋಡಿ.