ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲೂ ಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವ ಈ ಪದ್ಯವನ್ನು ಪ್ರತಿಯೊಬ್ಬರು ಕಲಿತಿದ್ದೇವೆ, ಆದರೆ ಅದರ ಮಹತ್ವವನ್ನು ಸರಿಯಾಗಿ ಅರಿಯಲಿಲ್ಲ ಎನ್ನಬಹುದು.
ಯಾಕೆಂದರೆ ಈವರೆಗೂ ಕೂಡ ಸಗಣಿ ಎಂದರೆ ಬಹಳ ನಿರ್ಲಕ್ಷ ಭಾವದಿಂದ ನೋಡಲಾಗುತ್ತಿತ್ತು ಆದರೆ ಅದು ಅಮೃತಕ್ಕೆ ಸಮಾನ ಎನ್ನುವುದು ಕೆಲವರಿಗಷ್ಟೇ ಮನವರಿಕೆಯಾಗಿದೆ.
ಸದ್ಯ ಈಗ ಟ್ರೆಂಡ್ ಬದಲಾಗಿದೆ ಸೆಗಣಿ ಬಗ್ಗೆ ಪುರಾಣಗಳಲ್ಲಿ ನೀಡಲಾಗಿರುವ ಪೂಜ್ಯನೀಯ ಸ್ಥಾನಮಾನಗಳು ಮಾತ್ರವಲ್ಲದೆ ಅದರ ಬಳಕೆಯಿಂದ ಸಿಗುವ ಲಾಭಗಳ ಕಾರಣದಿಂದ ಈಗ ಇದರ ಬೆಲೆ ಹೆಚ್ಚಾಗುತ್ತಿದೆ. ಸೆಗಣಿಯಿಂದ ಎಷ್ಟೆಲ್ಲಾ ಪ್ರಯೋಜನಗಳು ಇವೆ ಎನ್ನುವುದನ್ನು ಎಲ್ಲರೂ ತಿಳಿಯಲಿ ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಸೆಗಣಿ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಆಧಾರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಡೆಡ್ ಲೈನ್ ಜಾರಿ.!
* ಮುಖ್ಯವಾಗಿ ಸೆಗಣಿ ಪ್ರಾಮುಖ್ಯತೆಯನ್ನು ಕೃಷಿ ಕ್ಷೇತ್ರದಲ್ಲಿ ಹೇಳಲೇಬೇಕು. ಸಾವಯವ ಕೃಷಿ ಪದ್ಧತಿ ಅನುಸರಿಸುವವರು ಸೆಗಣಿಯನ್ನು ಜಮೀನಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ರಾಸಾಯನಿಕ ಗೊಬ್ಬರಗಳ ಬಳಕೆ ಗಿಂತ ಸೆಗಣಿಯಲ್ಲಿ ಅಂದರೆ ಕೊಟ್ಟಿಗೆ ಗೊಬ್ಬರದಲ್ಲಿ ನೈಟ್ರೋಜನ್ ಪಾಸ್ಪರಸ್ ಪೊಟ್ಯಾಶ್ ಪ್ರಮಾಣ ಹೇರಳವಾಗಿರುತ್ತದೆ. ಇದನ್ನು ಹಾಕಿದ ಬೆಳೆಗಳಲ್ಲಿ ಪೋಷಕಾಂಶಗಳು ಹಾಳಾಗುವುದಿಲ್ಲ ಹಾಗೆಯೇ ಇಳುವರಿಯು ಹೆಚ್ಚಾಗಿ ಬರುತ್ತದೆ.
* ಒಣಗಿಸಿದ ಸೆಗಣಿಯು ಅತ್ಯುತ್ತಮ ಇಂಧನವಾಗಿ ಬಳಕೆಯಾಗುತ್ತದೆ. ಈ ಒಣಗಿದ ಸಗಣಿಯನ್ನು ಅನೇಕ ಕಡೆಗಳಲ್ಲಿ ಅಡುಗೆ ಮಾಡಲು ಸೌದೆ ಬದಲಾಗಿ ಬಳಸುತ್ತಾರೆ. ಸೆಗಣಿ ಮತ್ತು ನೀರನ್ನು ಗೋಬರ್ ಗ್ಯಾಸ್ ಘಟಕದಲ್ಲಿ ಹಾಕಿ ಬಯೋಗ್ಯಾಸ್ ಉತ್ಪಾದನೆ ಮಾಡಿ ಅನೇಕ ಮನೆಗಳಲ್ಲಿ ಅಡುಗೆ ಅನಿಲವಾಗಿ ಬಳಸುತ್ತಿದ್ದಾರೆ. ಬಯೋ ಗ್ಯಾಸ್ ನ್ನು ವಿದ್ಯುತ್ ತಯಾರಿಕೆಗೆ ಮತ್ತು ವಾಹನಗಳಿಗೆ ಕೂಡ ಬಳಸುತ್ತಾರೆ.
* ಸೆಗಣಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ, ಇದನ್ನು ಪೇಪರ್ ತಯಾರಿಕೆಯಲ್ಲಿ ಬಳಸುತ್ತಾರೆ ಇದಕ್ಕೆ ಬಹಳ ಡಿಮಾಂಡ್ ಇದೆ
* ಒಣ ಸೆಗಣಿಯನ್ನು ಉರಿಸಿದಾಗ ಹೊಗೆ ಬರುತ್ತದೆ. ಈ ಹೊಗೆಯು ನ್ಯಾಚುರಲ್ ಮಸ್ಕಿಟೋ ಕಾಯಿಲ್ ರೀತಿ ಬಳಕೆ ಆಗುತ್ತದೆ. ಸೊಳ್ಳೆ, ನೊಣ ಬರುವುದಿಲ್ಲ ಇದನ್ನು ಕೊಟ್ಟಿಗೆಗಳಲ್ಲಿ ಜಮೀನುಗಳಲ್ಲಿ ಮತ್ತು ಮನೆಗಳಲ್ಲಿ ಕೂಡ ಬಳಸಬಹುದು
ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್.! ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ.!
* ಸೆಗಣಿಯನ್ನು ಕೂಡ ಕೀಟನಾಶಕ ಮತ್ತು ಕ್ರಿಮಿನಾಶಕವಾಗಿ ಬಳಸಬಹುದು ಎಂದು ಬಹಳ ಜನರಿಗೆ ಗೊತ್ತೇ ಇಲ್ಲ, ಇದು ಸಾವಯವ ಆಗಿರುವುದರಿಂದ ಇದನ್ನು ಸಿಂಪಡಿಸಿದ ತರಕಾರಿ ಸೊಪ್ಪಿಗೆ ಖಂಡಿತವಾಗಿ ಹೆಚ್ಚಿನ ರೇಟ್ ಇರುತ್ತದೆ.
* ಸೆಗಣಿಯಲ್ಲಿ ಔಷಧೀಯ ಗುಣಗಳು ಕೂಡ ಇವೆ. ಅನೇಕ ಚರ್ಮ ಸಮಸ್ಯೆಗಳಿಗೆ ಸಗಣಿ ಉತ್ತಮ ಔಷಧ. ಆಯುರ್ವೇದ ಪದ್ಧತಿಯಲ್ಲೂ ಕೂಡ ಸಗಣಿ ಬಳಕೆ ಇದೆ. ಜೀರ್ಣಾಂಗ ವ್ಯೂಹ ಹಾಗೂ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸೆಗಣಿಯಿಂದ ಚಿಕಿತ್ಸೆ ಮಾಡಲಾಗುತ್ತದೆ. ಹೀಗಾಗಿ ಔಷಧಿಯ ಕಂಪನಿಗಳು ಕೂಡ ಬಹಳ ಬೆಲೆ ಕೊಟ್ಟು ಈ ಸಗಣಿಯನ್ನು ಕೊಂಡುಕೊಳ್ಳುತ್ತವೆ. ಸೆಗಣಿಯಿಂದ ಸೋಪ್ ಕೂಡ ತಯಾರಿಸುತ್ತಾರೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.
ಈ ಸುದ್ದಿ ಓದಿ:- ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್’ಗಳಲ್ಲಿ ಸಿಗಲಿದೆ ಅತೀ ಕಡಿಮೆ ಬಡ್ಡಿಗೆ ಸಾಲ.!
* ಸೆಗಣಿಯಿಂದ ಮಾಡಿದ ಬೆರಣಿಗೆ ಎಷ್ಟು ಡಿಮ್ಯಾಂಡ್ ಇದೆ ಎಂದು ಒಂದು ಬಾರಿ ಆನ್ಲೈನ್ ನಲ್ಲಿ ಚೆಕ್ ಮಾಡಿದರೆ ನಮಗೆ ಬಹಳ ಆಶ್ಚರ್ಯ ಆಗುತ್ತದೆ. ಇದನ್ನು ಶವಗಳನ್ನು ಸುಡುವುದಕ್ಕೆ, ಬೆಂಕಿಯಾಗಿ ಉರಿಸುವುದಕ್ಕೆ, ಇಂಧನವಾಗಿ ಹೀಗೆ ಅನೇಕ ಕಾರಣಗಳಿಗಾಗಿ ಬಳಸುತ್ತಾರೆ. ಹಾಗಾಗಿ ಬೆರಣಿಯಾಗಿ ಕೂಡ ಮಾರಾಟ ಮಾಡಿದರೆ ಒಳ್ಳೆ ಬಿಸಿನೆಸ್ ಆಗುತ್ತದೆ.
ವಿಭೂತಿ ತಯಾರಿಕೆಯಲ್ಲಿ ಸೆಗಣಿ ಅತ್ಯಂತ ಅವಶ್ಯಕ ವಸ್ತು.
* ಮನೆಗಳಿಗೆ ವಾಟರ್ ಪ್ರೂಫ್ ಲೇಯರ್ ಆಗಿ ಸೆಗಣಿ ಬಳಸುತ್ತಾರೆ. ಸೆಗಣಿ ಹಾಗೂ ಮಣ್ಣನ್ನು ಮಿಕ್ಸ್ ಮಾಡಿ ಮನೆಗಳಿಗೆ ಪ್ಲಾಸ್ಟಿಂಗ್ ಮಾಡುತ್ತಾರೆ, ನೆಲ ಸಾರಿಸುವುದಕ್ಕೂ ಕೂಡ ಬಳಸುತ್ತಾರೆ. ಇದು ಕೆಟ್ಟ ಬ್ಯಾಕ್ಟೀರಿಯಗಳಿಂದ ಸುರಕ್ಷತೆ ಮತ್ತು ಮನೆಗೆ ತಂಪನ್ನು ನೀಡುತ್ತದೆ, ಈಗ ಇಟ್ಟಿಗೆ ತಯಾರಿಕೆಯಲ್ಲೂ ಕೂಡ ಸೆಗಣಿ ಬಳಸಲಾಗುತ್ತಿದೆ
* ಫರ್ನಿಚರ್ ಹಾಗೂ ನೆಲಕ್ಕೆ ಬಳಸುವ ಫೈಬರ್ ಬೋರ್ಡ್ ಗೂ ಕೂಡ ಮರದ ಚೂರಿನ ಬದಲು ಈಗ ಸೆಗಣಿಯನ್ನೇ ಬಳಸಲಾಗುತ್ತಿದೆ. ಹಾಗಾಗಿ ಇಂಟೀರಿಯರ್ ಕ್ಷೇತ್ರದಲ್ಲೂ ಕೂಡ ಬಹಳ ಬೇಡಿಕೆ ಇದೆ