ಈ ಯೋಜನೆ ಜಾರಿಗೆ ಘೋಷಣೆ ಆಗಿ ಬಹಳ ಸಮಯ ಕಳೆದರೂ ಕೂಡ ನಂತರದ ದಿನಗಳಲ್ಲಿ ಮಾಧ್ಯಮಗಳಲ್ಲಿ ಯಾವುದೇ ರೀತಿ ವರದಿ ಆಗಲಿಲ್ಲ. ಆದ್ದರಿಂದ ಹೆಚ್ಚಿನ ಜನ ಇದೊಂದು ಫೇಕ್ ಯೋಜನೆಯ ಎಂದು ಪರಿಗಣಿಸಿ ಮರೆತುಬಿಟ್ಟಿದ್ದರು. ಆದರೆ ಶೀಘ್ರದಲ್ಲಿ ಇದು ಜಾರಿಗೆ ಬರುತ್ತಿದೆ.
ರಾಜಸ್ಥಾನ ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ಯೋಜನೆ ಇದಾಗಿದ್ದು, ಉಚಿತ ಮೊಬೈಲ್ ಯೋಜನೆ 2024ರ ಮೂಲಕ ರಾಜಸ್ಥಾನದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಸ್ಮಾರ್ಟ್ ಫೋನ್ ಅನ್ನು ನೀಡಬೇಕು ಎನ್ನುವುದು ಅಲ್ಲಿನ ಸರ್ಕಾರದ ಆಶಯ ಆಗಿದೆ.
ಈ ಕಾಲದಲ್ಲಿ ಇಂಟರ್ನೆಟ್ ಬಳಕೆ ಹಾಗೂ ಮೊಬೈಲ್ ಸೌಲಭ್ಯ ಪ್ರತಿಯೊಬ್ಬರಿಗೂ ಬೇಕು. ಈಗ ಮನೆಯಲ್ಲಿರುವ ಗೃಹಿಣಿಯರಿಂದ ಹಿಡಿದು ಶಾಲಾ ಮಕ್ಕಳು ಉದ್ಯೋಗಕ್ಕೆ ಹೋಗುವವರು ಎಲ್ಲರಿಗೂ ಸಹ ಒಂದಲ್ಲ ಒಂದು ಕಾರಣಕ್ಕಾಗಿ ಇಂಟರ್ನೆಟ್ ಅವಶ್ಯಕತೆ ಇರುವುದರಿಂದ ಎಲ್ಲರಿಗೂ ಸ್ಮಾರ್ಟ್ ಫೋನ್ ಹಾಗೂ ಉಚಿತ ಇಂಟರ್ನೆಟ್ ಕನೆಕ್ಷನ್ ಮತ್ತು ಸಿಮ್ ಕಾರ್ಡ್ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ದೊಡ್ಡ ಮೊತ್ತದ ಬಜೆಟ್ ನಲ್ಲಿ ಯೋಜನೆಗೆ ಚಾಲನೆ ನೀಡಿದೆ.
ರಾಜಸ್ಥಾನ ರಾಜ್ಯ ಸರ್ಕಾರವು ನೀಡಿದ ಘೋಷಣೆ ಪ್ರಕಾರ ಈಗಾಗಲೇ ಈ ಯೋಜನೆ ಮೂಲಕ ಎಲ್ಲಾ ಮಹಿಳೆಯರಿಗೆ ಮೊಬೈಲ್ ಫೋನ್ ವಿತರಣೆ ಪ್ರಕ್ರಿಯ ಪೂರ್ತಿಗೊಳ್ಳ ಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅದಕ್ಕೆ ತಡೆ ಬಿದ್ದಿದ್ದು ಶೀಘ್ರದಲ್ಲೇ ಇದು ಆರಂಭಗೊಳ್ಳಲಿದೆ. ರಾಜಸ್ಥಾನ ರಾಜ್ಯದಲ್ಲಿ 1.35 ಕೋಟಿ ಮಹಿಳೆಯರಿದ್ದಾರೆ.
ಎಲ್ಲರಿಗೂ ಸಹ ಒಂದೇ ಬಾರಿಗೆ ವಿತರಣೆ ಮಾಡುವುದು ಕಷ್ಟವಾಗುವ ಕಾರಣ ಹಂತ ಹಂತವಾಗಿ ಪ್ರತಿಯೊಬ್ಬರಿಗೂ ತಲುಪಿಸುವ ನಿರ್ಧಾರಕ್ಕೆ ಬಂದಿದೆ. ಮೊದಲ ಹಂತದಲ್ಲಿ 40 ಲಕ್ಷ ರಾಜಸ್ಥಾನದ ಚಿರಂಜೀವಿ ಮಹಿಳೆಯರು ಈ ಸೌಲಭ್ಯದ ಪ್ರಯೋಜನ ಪಡೆಯಲಿದ್ದಾರೆ. ಸುಮಾರು 9-10ಸಾವಿರ ಬೆಳೆಬಾಳುವ ಈ ಮೊಬೈಲ್ ಅನ್ನು ಸರ್ಕಾರದ ವತಿಯಿಂದ ಉಚಿತವಾಗಿ ಪಡೆಯಲಿದ್ದಾರೆ.
ಇದಕ್ಕೆ ಸಿಮ್ ಕಾರ್ಡ್ ಕೂಡ ಸರ್ಕಾರವು ನೀಡಲಿದ್ದು ಉಚಿತವಾಗಿ ಮೂರು ವರ್ಷಗಳವರೆಗೆ ಅನಿಯಮಿತ ಕರೆ ಹಾಗೂ ಉಚಿತ ಡಾಟಾ ಸೌಲಭ್ಯವನ್ನು ನೀಡಲಿದೆ. ಗ್ರಾಮೀಣ ಭಾಗದ ಪಂಚಾಯಿತಿ ಮಟ್ಟದಲ್ಲಿ ಮತ್ತು ನಗರ ಸಭೆಗಳ ವಾರ್ಡ್ಗಳಲ್ಲಿ ಶಿಬಿರ ನಡೆಸಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲಾಗುವುದು ಎಂದು ಕೂಡ ರಾಜಸ್ಥಾನ ಸರ್ಕಾರ ತಿಳಿಸಿದೆ. ಉಚಿತ ಮೊಬೈಲ್ ವಿತರಣೆ ಕಾರ್ಯಕ್ರಮವನ್ನು ಆಗಸ್ಟ್ 30 2024 ರಂದು ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಪ್ರಾರಂಭ ಮಾಡಲಿದೆ.
ಆಧುನಿಕ ತಂತ್ರಜ್ಞಾನದ ಮಹಿಳೆಯರನ್ನು ಬೆಸೆಯುವುದು ಈ ಯೋಜನೆಯ ಮುಖ್ಯ ಆಶಯ ಆಗಿದೆ. ಈಗ 2024ನೇ ಇಸ್ವಿಯಲ್ಲಿ ಈ ಯೋಜನೆ ರಾಜಸ್ಥಾನ ರಾಜ್ಯದಲ್ಲಿ ಜಾರಿಗೆ ಬಂದಿತು ನಂತರ ದೇಶದಾದ್ಯಂತ ಇದನ್ನೇ ಮಾದರಿಯಾಗಿ ತೆಗೆದುಕೊಂಡು ಎಲ್ಲಾ ರಾಜ್ಯ ಸರ್ಕಾರಗಳು ಇದನ್ನು ಅನ್ವಯಿಸುವ ಸಾಧ್ಯತೆ ಇದೆ. ಆದ್ದರಿಂದ ಕರ್ನಾಟಕದ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಈ ವರ್ಷದಲ್ಲಿ ಸಿಗುವುದಿಲ್ಲ.
ರಾಜಸ್ಥಾನದ ರಾಜ್ಯದ ಮಹಿಳೆಯರು ಮಾತ್ರ ರಾಜಸ್ಥಾನ ಸರ್ಕಾರ ಸೂಚಿಸುತ್ತಿರುವ ನಿಯಮಗಳನ್ನು ಫಾಲೋ ಮಾಡಿ ಅದಕ್ಕೆ ಕೇಳಲಾದ ದಾಖಲೆಗಳನ್ನು ನೀಡುವ ಮೂಲಕ ಈ ಉಚಿತ ಮೊಬೈಲ್ ಫೋನ್ ವಿತರಣೆ ಯೋಜನೆಯ ಫಲಾನುಭವಿಗಳಾಗಬಹುದು. ಸರ್ಕಾರದ ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ರಾಜ್ಯದಲ್ಲಿ ಇದು ಜಾರಿಗೆ ಬರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.