ಮನೆ ಎನ್ನುವುದು ಪ್ರತಿಯೊಬ್ಬರ ಕನಸು. ಜೊತೆಗೆ ಇದೊಂದು ಮೂಲಭೂತ ಅವಶ್ಯಕತೆ ಕೂಡ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಪ್ರತಿಷ್ಠೆಯೂ ಆಗಿದೆ. ಎಲ್ಲರಿಗೂ ಸಹ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಇಚ್ಛೆಯೇನೋ ಇರುತ್ತದೆ. ಆದರೆ ತಮಗಿರುವ ಬಜೆಟ್ ನಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಆ ಮನೆ ಪೂರ್ತಿ ಮಾಡಬೇಕು ಎನ್ನುವುದೇ ನಿರೀಕ್ಷೆ ಸಹ ಇರುತ್ತದೆ.
ಹೀಗೆ ಅನೇಕ ವರ್ಷಗಳಿಂದ ಮನೆ ಬಗ್ಗೆ ಕನಸು ಕಟ್ಟಿಕೊಂಡು ಕಾಯುತ್ತಿರುವವರು ಅಂತಹ ಒಂದು ಒಳ್ಳೆಯ ಕಂಪನಿಯನ್ನು ನೋಡಿ ಆ ಕಾಂಟಾಕ್ಟ್ ವಹಿಸಿದಾಗ ಮಾತ್ರ ಅವರ ನಿರೀಕ್ಷೆಗೆ ತಕ್ಕ ಫಲಿತಾಂಶ ಸಿಗುತ್ತದೆ. ಇಲ್ಲವಾದಲ್ಲಿ ಜೀವನಪೂರ್ತಿ ಬೇಸರದಿಂದ ಮನೆ ಕಟ್ಟಿದವರಿಗೆ ಶಪಿಸುತ್ತಾ ಬದುಕಬೇಕಾಗುತ್ತದೆ. ಕಡಿಮೆ ಬಜೆಟ್ ಅಲ್ಲಿ ಒಂದು ಒಳ್ಳೆ ಮನೆ ಕಟ್ಟಿಕೊಳ್ಳಬೇಕು ಅಂದರೆ ಅಂತವರಿಗೆ ಕೆಲ ಟಿಪ್ಸ್ ಗಳು ಇಲ್ಲಿದೆ ನೋಡಿ.
ಮನೆ ಎಂದ ಮಾತ್ರಕ್ಕೆ ಅದು ಬರೀ ಕನ್ಸ್ಟ್ರಕ್ಷನ್ ಮಾತ್ರವಲ್ಲ, ಇದರ ಜೊತೆಗೆ ಮನೆಗೆ ಇಂಟೀರಿಯರ್ ಡಿಸೈನಿಂಗ್, ವಾಟರ್ ಕನೆಕ್ಷನ್, ವಿದ್ಯುತ್ ಕನೆಕ್ಷನ್, ಮನೆಯ ಫ್ಯಾನ್, ಗೀಸರ್ ಮುಂತಾದ ಫಿಟ್ಟಿಂಗ್ ಗಳು ಮತ್ತು ಮನೆಗೆ ಅಲಂಕಾರಕ್ಕೆ ಬೇಕಾದ ವಸ್ತುಗಳು ಫರ್ನಿಚರ್ ಗಳು ಇವೆಲ್ಲವೂ ಕೂಡ ಸೇರುತ್ತದೆ. ಎಲ್ಲವು ಸರಿ ಇದ್ದಾಗ ಮನೆಗೆ ಭೂಮಿ ಪೂಜೆ ಮಾಡಿದಾಗಲಿಂದ ಗೃಹ ಪ್ರವೇಶ ಆಗುವವರಿಗೂ ಆಗುವ ಖರ್ಚನ್ನು ಮೊದಲೇ ಪ್ಲಾನ್ ಮಾಡಿ ಇಟ್ಟುಕೊಳ್ಳಬೇಕು.
ಇಲ್ಲವಾದಲ್ಲಿ ನೀವು ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ನೀವೇನಾದರೂ ಮನೆ ಕಟ್ಟುವ ಪ್ಲಾನ್ ಇಟ್ಕೊಂಡು ನಿಮಗಿರುವ ಸೈಟಿನ ವಿಸ್ತೀರ್ಣ ಹೇಳಿ ಮನೆ ಕಟ್ಟುವವರ ಬಳಿ ಎಸ್ಟಿಮೇಟ್ ಕೇಳಿದಾಗ ಅದನ್ನು ವಹಿಸಿಕೊಳ್ಳುವವರು ಕೇವಲ ಮನೆ ಕಟ್ಟುವ ಕೆಲಸಕ್ಕೆ ಆಗುವ ಲೆಕ್ಕಾಚಾರ ಬಗ್ಗೆ ಮಾತ್ರ ಹೇಳುತ್ತಾರೆ. ಈ ಮೇಲೆ ತಿಳಿಸಿದ ಹೆಚ್ಚುವರಿ ಖರ್ಚಿನ ಬಗ್ಗೆ ಅವರು ತಿಳಿಸುವುದಿಲ್ಲ. ಹಾಗಾಗಿ ಆ ಪ್ಲಾನ್ ಅಂತೆಯೇ ಎಂದಿಗೂ ಮುಂದುವರಿಯಬೇಡಿ.
ಒಂದು ವೇಳೆ ಮುಂದುವರಿಯುವುದಾದರೆ ಉದಾಹರಣೆಗೆ ಅವರು 30 ಲಕ್ಷ ತಿಳಿಸಿದ್ದರೆ ನೀವು ಹೆಚ್ಚುವರಿಯಾಗಿ 10 ಲಕ್ಷವಾದರೂ ಇಟ್ಟುಕೊಂಡಿರಬೇಕಾಗುತ್ತದೆ. ಅಲ್ಲದೆ ಮನೆ ಎನ್ನುವುದು ಒಂದು ಸುದೀರ್ಘವಾದ ಕೆಲಸ. ಆತುರದಿಂದ ಮನೆ ಪೂರ್ತಿಗೊಳಿಸಬೇಡಿ. ಇಲ್ಲವಾದಲ್ಲಿ ಮುಂದೆ ಒಂದು ದಿನ ಆ ರೀತಿ ಮಾಡಬೇಕಿತ್ತು, ಈ ರೀತಿ ಮಾಡಬೇಕಿತ್ತು ಎಂದು ಪಶ್ಚಾತ್ತಾಪ ಪಡಬೇಕಾಗುತ್ತದೆ.
ಅಲ್ಲದೆ ಪದೇ ಪದೇ ಮನೆ ವಿನ್ಯಾಸ ಬದಲಾಯಿಸುವ ಅಥವಾ ಮನೆಯನ್ನು ಮತ್ತೆ ಮತ್ತೆ ಕಟ್ಟುವ ಅವಕಾಶಗಳು ಈಗಿನ ಕಾಲದ ಖರ್ಚಿನಲ್ಲಿ ಅಸಾಧ್ಯದ ಮಾತು. ಇತ್ತಿಚೆಗೆ ಎಲ್ಲೆಡೆ ಜಾಹೀರಾತುಗಳ ಹಾವಳಿಯು ತುಂಬಿದೆ. ಆಕರ್ಷಕ ರೀತಿಯಲ್ಲಿ ಜಾಹಿರಾತು ನೀಡಿ 1400 sq/ft ಗೆ ಮನೆ ಕಟ್ಟುಕೊಡುತ್ತೇವೆ ಎಂದು ಗಾಳ ಹಾಕುವ ಮಂದಿಗೆ ಕಡಿಮೆ ಇಲ್ಲ. ಆದರೆ ಎಂದಿಗೂ ಈ ರೀತಿಯ ಮೋಸಗಳಿಗೆ ಒಳಗಾಗಬೇಡಿ.
ಖರ್ಚು ಕಡಿಮೆ ಮಾಡುವ ಕಾರಣಕ್ಕಾಗಿ ಮನೆಗೆ ಕಟ್ಟಲು ಬಳಸುವ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೆಸ್ ಆಗಬೇಡಿ. ಅತೀ ಕಡಿಮೆ ಬೆಲೆಗೆ ನಿಮಗೆ ಉತ್ತಮ ಗುಣಮಟ್ಟದ ಮನೆ ಕೂಡ ಕಟ್ಟಿಕೊಡುವ ಹೆಸರಾಂತ ಸಂಸ್ಥೆಗಳು ಕೂಡ ಇವೆ. ಇವುಗಳ ಬಗ್ಗೆ ತೀರಾ ಹತ್ತಿರದವರು ಅಥವಾ ನಂಬಿಕಸ್ತರು ಮಾಹಿತಿ ನೀಡಿದಲ್ಲಿ ಅವುಗಳನ್ನು ಸಂಪರ್ಕಿಸಿ ಮುಂದುವರೆಯಿರಿ. ಮನೆ ಕಟ್ಟುವ ವಿಚಾರದಲ್ಲಿ ಹಣ ಉಳಿತಾಯ ಮಾಡುವುದರ ಜೊತೆಗೆ ಎಲ್ಲರೂ ಮೆಚ್ಚುವಂತಹ ಮನೆ ಕಟ್ಟಬೇಕು ಎನ್ನುವುದಾದರೆ, ಅದಕ್ಕೆ ಇನ್ನು ಹೆಚ್ಚಿನ ವಿವರ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.