ಶಿಕ್ಷಣ ಇಲಾಖೆಯು ವರ್ಷದಿಂದ ವರ್ಷಕ್ಕೆ ಶಾಲೆಗೆ ಹೊಸದಾಗಿ ದಾಖಲಾಗುವ ಮಕ್ಕಳ ದಾಖಲಾತಿ ಬಗ್ಗೆ ಹೊಸ ಹೊಸ ಮಾರ್ಪಾಡುಗಳನ್ನು ಮಾಡುತ್ತಿರುತ್ತದೆ. ಈಗ ಶಾಲಾ ದಾಖಲಾತಿಗೆ ಸಂಬಂಧಪಟ್ಟ ಹೊಸ ನಿಯಮವನ್ನು 2023-24 ನೇ ಸಾಲಿನಲ್ಲಿ ಹೊಸದಾಗಿ ನೇಮಕ ಆಗುವಂತಹ ವಿದ್ಯಾರ್ಥಿಗಳಿಗೂ ಕೂಡ ಜಾರಿಗೆ ತರುತ್ತಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷವೂ ಮುಕ್ತಾಯವಾಗಿ ಎಲ್ಲಾ ಪರೀಕ್ಷೆಗಳ ಫಲಿತಾಂಶವೂ ಬಿಡುಗಡೆ ಆಗಿದೆ.
ಮೇ 29ರಿಂದ ಹೊಸ ಶೈಕ್ಷಣಿಕ ವರ್ಷಗಳ ಶಾಲೆ ತರಗತಿಗಳು ಶುರುವಾಗುತಿದೆ ಅದಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯು ನಡೆಯಲಿದೆ. ಈ ಸಮಯದಲ್ಲಿ ಸರ್ಕಾರ ಈ ಬಾರಿ ಹೊಸದಾಗಿ ಶಾಲೆಗೆ ಸೇರ್ಪಡೆ ಆಗುವ ವಿದ್ಯಾರ್ಥಿಗಳ ವಿಚಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ವರ್ಷ ಹೊಸದಾಗಿ ಶಾಲೆಗೆ ದಾಖಲೆ ಆಗುವ ಮಕ್ಕಳಿಗೆ ಆಧಾರ್ ಕಾರ್ಡ್ ನೋಂದಣಿ ಕೂಡ ಕಡ್ಡಾಯ ಎಂದು ತಿಳಿಸಿದೆ.
ಪ್ರತಿಯೊಬ್ಬ ನಾಗರಿಕರು ಕೂಡ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ನೀಡುವ ಈ 16 ಸಂಖ್ಯೆ ಡಿಜಿಟಲ್ ಸಂಖ್ಯೆಯನ್ನು ಸರ್ಕಾರ ಹಲವು ಯೋಜನೆಗಳಿಗೆ ದಾಖಲೆಯಾಗಿ ಬಳಸಲಾಗುತ್ತದೆ .ಇತ್ತೀಚಿನ ದಿನಗಳಂತೂ ಖಾಸಗಿ ಮತ್ತು ಸರ್ಕಾರಿ ವಲಯದ ಎಲ್ಲಾ ಕೆಲಸಗಳಿಗೂ ಇದು ಪ್ರಮುಖ ದಾಖಲೆಯಾಗಿ ಈ ಆಧಾರ್ ಕಾರ್ಡ್ ಬೇಕೇ ಬೇಕು.
ಶಿಕ್ಷಣ ಇಲಾಖೆ ವರೆಗೂ ವಿಸ್ತರಿಸಿ ಈ ವರ್ಷದಿಂದ ಹೊಸದಾಗಿ ತರಗತಿಗೆ ದಾಖಲಾಗುವ ಮಕ್ಕಳಿಗೂ ಕೂಡ ಆಧಾರ್ ಕಾರ್ಡ್ ನೋಂದಣಿ ಕಡ್ಡಾಯ ಎಂದು ಹೇಳಿದೆ. ಶಾಲೆಗೆ ದಾಖಲಾಗುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಹಲವು ಕಾರಣಕ್ಕಾಗಿ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದ್ದರಿಂದ ಸರ್ಕಾರ ಶಾಲೆಗೆ ದಾಖಲಾಗುವ ಸಮಯದಲ್ಲಿಯೇ ಇದನ್ನು ನೋಂದಣಿ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಇನ್ನೂ ಕೆಲವು ಕಾರಣಗಳು ಕೂಡ ಇವೆ.
ಶಾಲಾ ಮಕ್ಕಳಿಗೆ ಸರ್ಕಾರದ ಸಾಕಕ ಅನುದಾನಗಳು ಸಿಗುತ್ತವೆ. ಬಿಸಿ ಊ, ಕ್ಷೀರ ಯೋಜನೆ, ಸಮವಸ್ತ್ರ ಮತ್ತು ಪಠ್ಯಪುಸ್ತಕ ಗಳು ಸೇರಿದಂತೆ ವಿದ್ಯಾರ್ಥಿ ವೇತನವೂ ಕೂಡ ಸಿಗುತ್ತದೆ. ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾದರೆ ಇದರಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆ ಕಡಿಮೆ ಸರ್ಕಾರಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಬಗ್ಗೆ ಸರಿಯಾದ ಅಂಕಿ ಅಂಶಗಳು ಸಿಗಲಿದೆ ಎನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರ ಮಾಡಲಾಗಿದೆ.
ಆಧಾರ್ ಕಾರ್ಡ್ ನೋಂದಣಿ ಆಗಿದ್ದ ಪಕ್ಷದಲ್ಲಿ ಅಕ್ರಮಗಳು ತಕ್ಷಣವೇ ಬೆಳಕಿಗೆ ಬರಲಿದೆ. ಎನ್ನುವ ಉದ್ದೇಶದಿಂದ ಸರ್ಕಾರ 2023-24 ಸಾಲಿನಲ್ಲಿ ದಾಖಲೆ ಆಗುವ ವಿದ್ಯಾರ್ಥಿಗಳಿಗೆ ಈ ನಿಯಮ ಜಾರಿಗೆ ತಂದಿದೆ. ಈಗಾಗಲೇ 60%ರಷ್ಟು ವಿದ್ಯಾರ್ಥಿಗಳ ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ತಿ ಆಗಿದೆ. ಹೊಸದಾಗಿ ದಾಖಲೆ ಆಗುವ ಮಕ್ಕಳ ವಯಸ್ಸಿನ ಕುರಿತು ಕೂಡ ಕೆಲ ಮಾರ್ಪಾಡುಗಳಾಗಿದೆ. ಆಧಾರ್ ಕಾರ್ಡ್ ಒಂದು ಸರ್ಕಾರದ ಅಧಿಕೃತ ದಾಖಲಾಗಿರುವುದರಿಂದ ಮಗುವಿಗೆ ಸಂಬಂಧಪಟ್ಟ ಬಹುತೇಕ ಮಾಹಿತಿಗಳು ಆಧಾರ್ ಸಂಖ್ಯೆಯಲ್ಲಿ ಅಡಗಿರುತ್ತದೆ.
ಹಾಗಾಗಿ ಶಾಲೆಗಳ ದಾಖಲಾತಿಗೂ ಆಧಾರ್ ಕಾರ್ಡ್ ಒಂದು ಅಗತ್ಯ ದಾಖಲೆ ಆಗಲಿದೆ. 5ನೇ ವಯಸ್ಸಿನಲ್ಲಿ ಮತ್ತು 15ನೇ ವರ್ಷದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾದ ಅವಶ್ಯಕತೆ ಇರುವುದರಿಂದ ನೀವೇದಾದರೂ ಹೊಸದಾಗಿ ನಿಮ್ಮ ಮಕ್ಕಳನ್ನು ಈ ವರ್ಷ ಶಾಲೆಗೆ ದಾಖಲೆ ಮಾಡಬೇಕು ಎಂದಿದ್ದಾರೆ ಮೇ 29ರಂದು ಎಲ್ಲಾ ಶಾಲೆಗಳಲ್ಲಿ ದಾಖಲೆ ಪ್ರಕ್ರಿಯೆ ಆರಂಭಗೊಳ್ಳುವುದರಿಂದ ಅಷ್ಟರ ಒಳಗೆ ಈ ಕೂಡಲೇ ಅಪ್ಡೇಟ್ ಮಾಡಿಸಿ ದಾಖಲೆಗಳನ್ನು ಸರಿಪಡಿಸಿಕೊಳ್ಳಿ. ವಿಷಯವನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಕೂಡ ಈ ವಿಷಯವನ್ನು ಹಂಚಿಕೊಳ್ಳಿ.