ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಶ್ರೇಯೋಭಿವೃದ್ಧಿಗಾಗಿ ಈ ರೀತಿ ಯೋಜನೆಗಳನ್ನು ಪರಿಚಯಿಸಿರುವ ಇವರು ಮಹಿಳೆಯರ ಆರ್ಥಿಕ ಸ್ವಾಸ್ಥ ಜೊತೆ ಆರೋಗ್ಯ ಸ್ವಾಸ್ಥತೆ ಕಾಯ್ದುಕೊಳ್ಳುವಂತಹ ಯೋಜನೆಗಳನ್ನು ಕೂಡ ಪರಿಚಯಿಸಿರುವುದು ವಿಶೇಷತೆಗಳಲ್ಲಿ ವಿಶೇಷತೆ.
ಪ್ರತಿಯೊಂದು ಕುಟುಂಬವು ಕೂಡ LPG ಸಂಪರ್ಕ ಹೊಂದಿ ಹೊಗೆ ಮುಕ್ತ ಆರೋಗ್ಯಕರ ವಾತಾವರದಲ್ಲಿ ಅಡಿಕೆ ಮಾಡುವಂತಹ ಅನುಕೂಲತೆ ಕಲ್ಪಿಸಿ ಕೊಡುವ ಸಲುವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwal Yojane) ಎಂಬ ಹೆಸರಿನ ಯೋಜನೆಯನ್ನು ಕೂಡ ಪರಿಚಯಿಸಿದ್ದಾರೆ.
ಈ ಸುದ್ದಿ ಓದಿ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬೃಹತ್ ಉದ್ಯೋಗವಕಾಶ, 2,500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ವೇತನ 25,300/-
ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಉಚಿತವಾಗಿ ಮನೆಗೆ ಗ್ಯಾಸ್ ಸಂಪರ್ಕ (free Gas Connection) ಪಡೆಯಬಹುದು. ಇದರೊಂದಿಗೆ ಒಂದು ಗ್ಯಾಸ್ ಸ್ಟವ್, ಒಂದು ಸಿಲಿಂಡರ್, ಒಂದು ರೆಗ್ಯುಲೇಟರ್ ಹಾಗೂ ಒಂದು ಲೈಟರ್ ಅನ್ನು ಕೂಡ ಉಚಿತವಾಗಿ ಪಡೆಯುವುದರೊಂದಿಗೆ ಪ್ರಸ್ತುತವಾಗಿ ಪ್ರತಿ ಸಿಲಿಂಡರ್ ಬುಕ್ಕಿಂಗ್ ಮೇಲೆ ರೂ.300 ಗಳ ಸಬ್ಸಿಡಿ ಕೂಡ ಪಡೆಯಬಹುದು. ಈಗಾಗಲೇ ದೇಶದ ಕೋಟ್ಯಾಂತರ ಕುಟುಂಬದ ಮಹಿಳೆಯರು ಈ ಯೋಜನೆ ಫಲಾನುಭವಿಗಳಾಗಿದ್ದಾರೆ.
ಇದರೊಂದಿಗೆ ಈಗ ಮತ್ತೊಮ್ಮೆ ಸರ್ಕಾರದಿಂದ ಘೋಷಣೆಯಾಗಿರುವ ಹೊಸ ಯೋಜನೆ ಮೂಲಕವೂ ಉಚಿತವಾಗಿ ಸ್ಟವ್ ಪಡೆಯಬಹುದು. ಕೇಂದ್ರ ಸರ್ಕಾರವು ಸೋಲಾರ್ ಚುಲ್ಹಾ ಎನ್ನುವ ಹೆಸರಿನಲ್ಲಿ ಉಚಿತವಾಗಿ ಸೋಲಾರ್ ಸ್ಟವ್ ವಿತರಣೆ (free Solar Stove) ಮಾಡುತ್ತಿದೆ.
ಈ ಸುದ್ದಿ ಓದಿ:-SBI ಬ್ಯಾಂಕ್ ನಲ್ಲಿ ನೇರ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ ಆಸಕ್ತರು ಅರ್ಜಿ ಸಲ್ಲಿಸಿ.!
ರಿಚಾರ್ಜ್ ಮಾಡಬಹುದಾದ ಸೌರ ಒಲೆಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ವಿತರಣೆ ಮಾಡಲಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation) ಈ ಸ್ಟವ್ ಗಳನ್ನು ತಯಾರಿಸುತ್ತದೆ. ನಿಮಗೂ ಆಸಕ್ತಿ ಇದ್ದರೆ ಈ ಹಂತಗಳನ್ನು ಪೂರೈಸುವ ಮೂಲಕ ಅರ್ಜಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವ ವಿಧಾನ:-
* ಇಂಡಿಯನ್ ಆಯಿಲ್ ಕಾರ್ಪೋರೇಷನ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ
* ಮುಖಪುಟದಲ್ಲಿ ನಿಮಗಾಗಿ ಇಂಡಿಯನ್ ಆಯಿಲ್ ಎನ್ನುವ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು
* ಆರಿಸಿದ ನಂತರ, ವ್ಯವಹಾರಕ್ಕಾಗಿ ಇಂಡಿಯನ್ ಆಯಿಲ್ ಆಯ್ಕೆ ಎಂಬ ಮತ್ತೊಂದು ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಬೇಕು
* ಅವುಗಳಲ್ಲಿ ಭಾರತೀಯ ಸೌರ ಅಡುಗೆ ವ್ಯವಸ್ಥೆ ಎನ್ನುವ ಆಪ್ಷನ್ ಸಿಗುತ್ತದೆ ಆಗ ಅದರ ಮೇಲೆ ಕ್ಲಿಕ್ ಮಾಡಿ , ಭಾರತೀಯ ಸೌರ ಅಡುಗೆ ವ್ಯವಸ್ಥೆಗೆ ಹೋದ ನಂತರ, ಅರ್ಜಿ ಸಲ್ಲಿಸಿರುವುದಕ್ಕಾಗಿ ಸಿದ್ಧಪಡಿಸಿರುವ ಅರ್ಜಿ ನಮೂನೆಯನ್ನು ಪೇಜ್ ಸ್ಕ್ರೀನ್ ಮೇಲೆ ಓಪನ್ ಆಗುತ್ತದೆ
* ಫಾರ್ಮ್ ನಲ್ಲಿ ನಿಮ್ಮ ಹೆಸರು ವಿಳಾಸಕ್ಕೆ ಸಂಬಂಧಪಟ್ಟ ಹಾಗೆ ವಿವರಗಳನ್ನು ಕೇಳಲಾಗಿರುತ್ತದೆ ಅದರಲ್ಲಿ ಸೂಚಿಸಿರುವ ಪ್ರಕಾರವಾಗಿ ಎಲ್ಲಾ ಮಾಹಿತಿಯನ್ನು ಸರಿಯಾಗಿ ಮತ್ತು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.
* ಪುರಾವೆ ಯಾಗಿ ಕೆಲ ದಾಖಲೆಗಳನ್ನು ಕೂಡ ಸಲ್ಲಿಸಬೇಕಾಗಿರುತ್ತದೆ ಹಾಗಾಗಿ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅವುಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬೇಕು.
ಈ ಸುದ್ದಿ ಓದಿ:-RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!
* ಕೊನೆಯಲ್ಲಿ ಸಬ್ಮಿಟ್ ಮಾಡಿ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು. ಅದರಲ್ಲಿ ರೆಫರೆನ್ಸ್ ನಂಬರ್ ಇರುತ್ತದೆ ನಂತರ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಎನ್ನುವುದನ್ನು ಈ ರೆಫರೆನ್ಸ್ ನಂಬರ್ ಸಹಾಯದಿಂದ ತಿಳಿದುಕೊಳ್ಳಬಹುದು ಮತ್ತು ನೀವು ಸರಿಯಾದ ಮೊಬೈಲ್ ಸಂಖ್ಯೆ ನೀಡಿದ್ದರೆ ಇದಕ್ಕೆ ಸಂಬಂಧಿಸಿದ ಎಲ್ಲಾ ಅಪ್ಡೇಟ್ ಗಳನ್ನು ಹಂತ ಹಂತವಾಗಿ ನಿಮ್ಮ ಮೊಬೈಲ್ ಫೋನ್ ನಲ್ಲಿ ಸಂದೇಶಗಳಲ್ಲಿ ಪಡೆಯಬಹುದು.