ನಾವೆಲ್ಲ ಬಸ್ಗಳಲ್ಲಿ ಪಯಣ ಮಾಡಿ ಇರುತ್ತೇವೆ. ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆ ಬಳಸುವಾಗ ಆ ಬಸ್ ಗಳಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಮಹಿಳೆಯರಿಗೆ ಎಂದೆಲ್ಲ ಬೋರ್ಡ್ ಹಾಕಿರುವುದನ್ನು ನಾವು ನೋಡಿದ್ದೇವೆ. ಈ ರೀತಿ ಸಾರಿಗೆ ವ್ಯವಸ್ಥೆಯು ಅವರು ಕುಳಿತು ಪ್ರಯಾಣ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ಹಿರಿಯ ನಾಗರಿಕರಿಗೆ ಬಸ್ ಟಿಕೆಟ್ ತರದಲ್ಲಿ ರಿಯಾಯಿತಿಯನ್ನು ಕೊಟ್ಟಿದೆ.
ಇದನ್ನು ಹೊರತುಪಡಿಸಿ ಬೇರೆ ಯಾವ ಸಾರಿಗೆ ವ್ಯವಸ್ಥೆ ಇಂತಹ ನೀತಿಯನ್ನು ಅನುಸರಿಸುತ್ತಿದೆ ಎಂದು ನೋಡುವುದಾದರೆ ರೈಲು ಸಾರಿಗೆ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಟ್ರೈನ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿ ಮಾಡಿಕೊಡುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ರೈಲಿನಲ್ಲಿ ಸಹ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟ್ರೈನ್ ಟಿಕೆಟ್ ನೀಡಲಾಗುತ್ತದೆ. ಅದರ ಜೊತೆ ಇನ್ನೂ ಅನೇಕ ಕಾರಣಗಳಿಗೆ ರಿಯಾಯಿತಿ ಸಿಗುತ್ತದೆ.ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.
ಬಡವರಾಗಲಿ ಸಾಮಾನ್ಯರೇ ಆಗಲಿ ಶ್ರೀಮಂತರೇ ಆಗಲಿ ರೈಲು ಪ್ರಯಾಣ ಮಾಡಿಯೇ ಇರುತ್ತಾರೆ ಪ್ರಯಾಣಿಸುವುದೇ ಒಂದು ಸುಖಕರ ಅನುಭವ ರೈಲು ಟಿಕೆಟ್ ತರ ಕಡಿಮೆ ಇದೆ ಮತ್ತು ವೇಗವಾಗಿ ನಮ್ಮ ಕೆಮ್ಮೆ ಸ್ಥಳ ತಲುಪಬಹುದು ಇನ್ನು ಮುಂತಾದ ಅನೇಕ ಕಾರಣಗಳಿಗಾಗಿ ಹೆಚ್ಚಿನ ಮಂದಿ ರೈಲು ಪ್ರಯಾಣವನ್ನು ಬಯಸುತ್ತಾರೆ. ಇದರೊಂದಿಗೆ ಹೆಚ್ಚಿನ ಜನರಿಗೆ ರೋಗಿಗಳಿಗೆ ಕೂಡ ರೈಲು ಪ್ರಯಾಣದಲ್ಲಿ ರಿಯಾಯಿತಿ ಸಿಗುತ್ತದೆ ಎನ್ನುವ ಮಾಹಿತಿ ಗೊತ್ತಿಲ್ಲ.
ಹೌದು ,ಈ ಮಾಹಿತಿ ಸತ್ಯ. ರೈಲಿನಲ್ಲಿ ಕೆಲ ಗಂಭೀರ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಮತ್ತು ಅವರ ಕೇರ್ ಟೇಕರ್ ಗಳಿಗೆ ಪ್ರಯಾಣಿಸುವ ಸಂದರ್ಭದಲ್ಲಿ ರಿಯಾಯಿತಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಯಾವ ಯಾವ ಕಾಯಿಲೆ ಹೊಂದಿರುವವರಿಗೆ ಈ ರೀತಿ ಟಿಕೆಟ್ ದರ ಕಡಿಮೆ ಇರುತ್ತದೆ ಎಂದು ನೋಡುವುದಾದರೆ ಮೊದಲಿಗೆ ಕ್ಯಾನ್ಸರ್ ಪೇಶೆಂಟ್ಗಳು ಮತ್ತು ಕ್ಯಾನ್ಸರ್ ಪೇಶಂಟ್ ಗಳ ಜೊತೆ ಹೋಗುವ ಅಟೆಂಡರ್ ಗಳು ಈ ಅನುಕೂಲ ಪಡೆಯುತ್ತಾರೆ.
ಚಿಕಿತ್ಸೆಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದರೆ ಆ ಸಮಯದಲ್ಲಿ ಅವರಿಗೆ AC ಕೋಚ್ ನಲ್ಲಿ ಪ್ರಯಾಣ ಮಾಡುವುದಾದರೆ 75% ರಿಯಾಯಿತಿ ಸಿಗುತ್ತದೆ. AC – 3 ಮತ್ತು ಸ್ಲಿಪರ್ ಕೋಚ್ ಅಲ್ಲಿ ಪ್ರಯಾಣ ಮಾಡುವುದಾದರೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಒಂದು ವೇಳೆ ಅವರು ಫಸ್ಟ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ AC ಕೋಚ್ಗಳಲ್ಲಿ ಪ್ರಯಾಣ ಮಾಡಲು ಬಯಸುವುದಾದರೆ ಅವರಿಗೆ 50% ಅಷ್ಟು ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತದೆ.
ಇದರಂತೆ ಹೃದ್ರೊಗಿಗಳು, ಕಿಡ್ನಿ ಸಮಸ್ಯೆ ಹೊಂದಿರುವವರು ಹೃದಯದ ಶಸ್ತ್ರ ಚಿಕಿತ್ಸೆಗೆ ಅಥವಾ ಡಯಾಲಿಸಿಸ್ ಮಾಡಿಸಿಕೊಳ್ಳುವುದಕ್ಕೆ, ಮೂತ್ರದ ಪಿಂಡದ ಕಸಿ ಮಾಡಿಸಿಕೊಳ್ಳುವುದಕ್ಕೆ ರೈಲಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ AC-3, ಎಸಿ ಚೇರ್ ಕಾರ್, ಸ್ಲೀಪರ್, ಸೆಕೆಂಡ್ ಕ್ಲಾಸ್ AC, ಫಸ್ಟ್ ಕ್ಲಾಸ್ AC ನಲ್ಲಿ ಪ್ರಯಾಣಿಸಲು 75% ರಿಯಾಯಿತಿ ಪಡೆಯಬಹದು. ಹೋಗಿ ಮಾತ್ರವಲ್ಲದೆ ರೋಗಿಯ ಜೊತೆ ಹೋಗುವ ಅವರ ಅಟೆಂಡರಿಗೂ ಕೂಡ ಇದೇ ರೀತಿ ರಿಯಾಯಿತಿ ಸಿಗುತ್ತದೆ. ಹಿಮೋಫೀಲಿಯ, TB ಕಾಯಿಲೆಯಿಂದ ಬಳಲುತ್ತಿರುವವರೆಗೂ 75% ರಿಯಾಯಿತಿ ಇರುತ್ತದೆ.
ಕುಷ್ಟರೋಗಿಗಳು ಸೆಕೆಂಡ್ ಕ್ಲಾಸ್ ಫಸ್ಟ್ ಕ್ಲಾಸ್ AC, ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸಿದರೆ 75% ರಿಯಾಯಿತಿ ಪಡೆಯುತ್ತಾರೆ. ಏಡ್ಸ್ ರೋಗಿಗಳಿಗೂ ಸೆಕೆಂಡ್ ಕ್ಲಾಸ್ ಪ್ರಯಾಣದಲ್ಲಿ ರಿಯಾಯಿತಿ ಸಿಗುತ್ತದೆ. ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿರುವುದು ಕೂಡ AC-3, ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಎಸಿ ಕೋಚ್ ನಲ್ಲಿ ಪ್ರಯಾಣ ಬೆಳೆಸಿದರೆ ಅವರ ಸಹ ಟಿಕೆಟ್ ತರದಲ್ಲಿ ರಿಯಾಯಿತಿ ಪಡೆದುಕೊಳ್ಳಬಹುದು.