ಜಗತ್ತು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಂತೆ, ಉದ್ಯೋಗಾವಕಾಶಗಳು ಹಾಗೂ ಆದಾಯದ ಮೂಲಗಳು ವಿವಿಧ ರೀತಿಯಲ್ಲಿ ತೆರೆದುಕೊಳ್ಳುತ್ತಿವೆ. ಇಂದು ಮಾನವ ಆಧುನಿಕ ಜಗತ್ತಿಗೆ ಬೇಕಾದ ಇಂಧನಗಳನ್ನು ತಯಾರಿಸಿಕೊಡುವ ಮೂಲಕ ಕೂಡ ಆದಾಯವನ್ನು ಗಳಿಸಬಹುದು. ಇವುಗಳಲ್ಲಿ ಒಂದು ಸೋಲಾರ್ ಪ್ಲಾಂಟ್ ನಿರ್ಮಿಸುವುದು. ಸೋಲಾರ್ ಪ್ಲಾಂಟ್ ನಿರ್ಮಿಸುವುದು ಸರ್ಕಾರದ ಸ್ಕೀಮ್, ಸೋಲಾರ್ ಪ್ಲಾಂಟ್ ನಿರ್ಮಿಸಿ ಆ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಬಳಸಿಕೊಂಡು ದೇಶಕ್ಕೆ ಬೇಕಾದ ವಿದ್ಯುತ್ ಶಕ್ತಿ ಪೂರೈಸುವ ಕೆಲಸದ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ.
ಆದರೆ ಮನೆ ಮೇಲೆ ಕೂಡ ನೀವು ಸೋಲಾರ್ ಪ್ರಾನೆಲ್ ಅನ್ನು ಹಾಕಿ ಆದಾಯ ಪಡೆಯಬಹುದು. ಒಂದಿಷ್ಟು ಮೊತ್ತದ ಆದಾಯ ಪ್ರತಿ ತಿಂಗಳು ಖಾತೆಗೆ ಸೇರುವ ರೀತಿ ಮಾಡಿಕೊಂಡು ನೆಮ್ಮದಿಯ ಜೀವನವನ್ನು ಕಳೆಯಬಹುದು. ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಮನೆಯ ಛಾವಣಿ ಮೇಲೆ ಸೋಲಾರ್ ಪ್ಯಾನಲ್ ನಿರ್ಮಿಸಿ ಆದಾಯ ಪಡೆಯುವ ಈ ಯೋಜನೆ ಕೇಂದ್ರ ಸರ್ಕಾರದ ಯೋಜನೆ ಆಗಿದೆ. ಸೋಲಾರ್ ರೂಫ್ ಟಾಪ್ ಎನ್ನುವ ಕೇಂದ್ರ ಸರ್ಕಾರದ ಈ ಸ್ಕೀಮ್ ದೇಶದಾದ್ಯಂತ ಎಲ್ಲರ ಗಮನ ಸೆಳೆದಿದೆ.
ನೀವು ಸಹ ಸೋಲಾರ್ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು ಅಥವಾ ಇದಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದರೆ ನ್ಯಾಷನಲ್ ಪೋರ್ಟಲ್ ಸೋಲಾರ್ ಎಂಬ ವೆಬ್ ಸೈಟ್ ಗೆ ಭೇಟಿ ಕೊಡಿ. ಈ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿಕೊಂಡು ಅದರಲ್ಲಿರುವ ವಿಧಾನಗಳನ್ನು ಅನುಸರಿಸಿ ತಿಂಗಳಿಗೆ ನಿಶ್ಚಿಂತೆಯಾಗಿ 50 ರಿಂದ 60,000 ಆದಾಯ ಪಡೆಯಬಹುದು. ನೀವು ಜೆಸ್ಕಾಂ, ಬೆಸ್ಕಾಂ, ಹೆಸ್ಕಾಂ ಈ ರೀತಿ ಯಾವುದೇ ವಿದ್ಯುತ್ ಸರಬರಾಜು ಕಂಪನಿಗಳ ಸಪ್ಲೈ ಬಂದಿದ್ದರೂ ಸಹ ಸೋಲಾರ್ ಪ್ಯಾನೆಲ್ ನಿರ್ಮಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ ನಂತರ ಇದರ ಪ್ರಕ್ರಿಯೆ ಹೇಗೆ ಜರುಗುತ್ತದೆ ಎಂದು ನೋಡುವುದಾದರೆ ಮೊದಲಿಗೆ ಮೇಲೆ ತಿಳಿಸಿದ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಬೇಕು, ನಂತರ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸುವ ಮೂಲಕ ಅಪ್ಲಿಕೇಶನ್ ಹಾಕಲು ರಿಜಿಸ್ಟರ್ ಮಾಡಿಕೊಳ್ಳಬೇಕು. ಮುಂದಿನ ಹಂತದಲ್ಲಿ ನಿಮ್ಮ ರಾಜ್ಯ, ನಿಮ್ಮ ವಿದ್ಯುತ್ ಸರಬರಾಜು ಕಂಪನಿ ಮತ್ತು ವಿದ್ಯುತ್ ವಿತರಣಾ ಕಂಪನಿ ಇತ್ಯಾದಿ ಮಾಹಿತಿಗಳನ್ನು ಸೆಲೆಕ್ಟ್ ಮಾಡಬೇಕು.
ನಿಮ್ಮ ಮನೆಯ ವಿದ್ಯುತ್ ಬಿಲ್ ಅಲ್ಲಿರುವ ವಿದ್ಯುತ್ ಗ್ರಾಹಕ ಸಂಖ್ಯೆಯನ್ನು ನಮೂದಿಸಿ ನಿಮ್ಮ ಇಮೇಲ್ ಅಡ್ರೆಸ್ ಅನ್ನು ಕೂಡ ನೀಡಬೇಕು. ನಂತರ ಮುಂದಿನ ಕ್ರಮಗಳನ್ನು ಪೂರೈಸಿದಾಗ ಸೋಲಾರ್ ರೂಫ್ ಟಾಪ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯ ಪೂರ್ತಿಗೊಳ್ಳುತ್ತದೆ. ಆದರೆ ಅದು ಅನುಮೋದನೆ ಆಗುವುದು ಆಯಾ ರಾಜ್ಯ ಸರ್ಕಾರದ ಕಡೆಯಿಂದ. ಉದಾಹರಣೆಗೆ ನೀವೇನಾದರೂ ಕರ್ನಾಟಕ ರಾಜ್ಯದವರಾಗಿದ್ದು ಸೋಲಾರ್ ರೂಫ್ ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿಯ ಅನುಮೋದನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಮಾಡಬೇಕು.
ಅನುಮೋದನೆ ಆದ ನಂತರ ಸೋಲಾರ್ ಪ್ಯಾನಲ್ ನಿರ್ಮಿಸಿ ಅದರ ಸುತ್ತಳತೆ ಕುರಿತಾದ ಸಂಪೂರ್ಣ ಮಾಹಿತಿಯ ಕಾಗದ ಪತ್ರಗಳನ್ನು ಸರ್ಕಾರಕ್ಕೆ ನೀವು ಕೊಡಬೇಕು. ಸರ್ಕಾರಿ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಕರ್ನಾಟಕ ಸರ್ಕಾರದ ವತಿಯಿಂದ ಕಮಿಷನ್ ಸರ್ಟಿಫಿಕೇಟ್ ನೀಡುತ್ತಾರೆ. ನಂತರ ನೀವು ನೀಡಲಾದ ಬ್ಯಾಂಕ್ ಖಾತೆ ಸಂಖ್ಯೆಗೆ ಪ್ರತಿ ತಿಂಗಳು ಇಂತಿಷ್ಟು ಹಣ ಎನ್ನುವುದು ನಿಮ್ಮ ಸೋಲಾರ್ ಪ್ಯಾನಲ್ ನ ಸಾಮರ್ಥ್ಯಕ್ಕೆ ಅನುಕೂಲವಾಗಿ ಬಂದು ಖಾತೆ ಸೇರುತ್ತದೆ.