ಜನಸಾಮಾನ್ಯರು ಈಗ ಮನೆ ಖರೀದಿ, ವಾಹನ ಖರೀದಿ ಮುಂತಾದ ಅವಶ್ಯಕತೆಗಳಿಗೆಲ್ಲಾ ಬ್ಯಾಂಕ್ ಲೋನ್ ಗಳ ಮೊರೆ ಹೋಗುತ್ತಿದ್ದಾರೆ. EMIಗಳ ಸಹಾಯದಿಂದ ತಾವೊಂದುಕೊಂಡ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಾಗೆಯೇ ಪ್ರತಿ ತಿಂಗಳು ಕಟ್ಟಬೇಕಾದ EMI ಕಂತು ಕಟ್ಟುವುದು ತಡವಾದರೆ ಸಾಲ ನೀಡಿದ್ದ ಬ್ಯಾಂಕುಗಳು ಅಥವಾ ಸಂಸ್ಥೆಗಳು ಸಾಲಗರನಿಗೆ ದಂಡ ಹಾಕುತ್ತವೆ.ಒಂದು ಎರಡು ದಿನ ತಡವಾದರೂ ಕೂಡ ಹಣಕಾಸು ಸಂಸ್ಥೆಗಳು ಹಾಕುವ ದಂಡ ಮತ್ತು ವಿಳಂಬ ಶುಲ್ಕದ ಹೊಡೆತವನ್ನು ಸಾಲಗಾರ ತಿನ್ನಲೇಬೇಕಾಗುತ್ತದೆ.
ಇದರಿಂದ ರೋಸಿ ಹೋಗಿದ್ದ ಜನರಿಗೆ ಇದೀಗ ಸಂತಸದ ಸುದ್ದಿ ಸಿಕ್ಕಿದೆ. ಅದೇನೆಂದರೆ RBI ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ದಂಡದ ಬಡ್ಡಿ ಶುಲ್ಕಗಳ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ, ಅದರಂತೆ ನಡೆದುಕೊಳ್ಳಬೇಕು ಎಂದು ಹಣಕಾಸು ಸಂಸ್ಥೆಗಳಿಗೆ ಆದೇಶವನ್ನು ನೀಡಿದೆ. ಕೆಲವು ಹಣಕಾಸು ಬ್ಯಾಂಕುಗಳು ಮತ್ತು NBFCಗಳು ಒಂದು ನ್ಯಾಯ ಬದ್ಧವಾದ ದಂಡದ ಶುಲ್ಕಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸುತ್ತವೆ.
ವಿಳಂಬ ಶುಲ್ಕ, ದಂಡ, ದಂಡ ಶುಲ್ಕದ ಮೇಲಿನ ಬಡ್ಡಿ ಇವುಗಳಿಗೆ ಒಳಗೊಂಡಂತೆ ಒಂದೇ ರೀತಿಯ ನಿಯಮ ಇರಬೇಕು ಎನ್ನುವ ಕಾರಣಕ್ಕಾಗಿ ಹೊಸ ನಿಯಮಾವಳಿಗಳ ಕರಡು ಪತ್ರವನ್ನು RBI ಬಿಡುಗಡೆ ಮಾಡಿದೆ. ಹಾಗೂ ಬ್ಯಾಂಕುಗಳು, NBFC, HSC ಗಳು ಈ ಹೊಸ RBI ನ ಕರಡು ಪತ್ರಕ್ಕೆ ಸಂಬಂಧಿಸಿದಂತೆ ಏನೇ ಆಕ್ಷೇಪಣೆಗಳಿದ್ದರೂ ಕೂಡ ಮೇ 15ರ ಒಳಗೆ ಸಲ್ಲಿಸಬೇಕು ಎಂದು ಸೂಚಿಸಿದೆ. RBI ದಂಡ ಶುಲ್ಕದ ಮೇಲೆ ವಿಧಿಸುವ ಬಡ್ಡಿಯನ್ನು ವಿರೋಧಿಸಿದೆ.
EMI ವಿಳಂಬವಾದಾಗ ಅವುಗಳ ಮೊತ್ತದ ಮೇಲೆ ಹಾಕುವ ಬಡ್ಡಿ ನಿಯಮ ಸರಿ ಇಲ್ಲ ಎನ್ನುವುದು RBI ನ ವಾದ. ಒಂದು ತಿಂಗಳು ಸಾಲ ಮರುಪಾವತಿ ಮಾಡುವುದು ವಿಳಂಬವಾದರೆ ಅಸಲು ಬಡ್ಡಿ ದಂಡ ಎಲ್ಲವೂ ಅದರಲ್ಲಿ ಒಳಗೊಂಡಿರುತ್ತದೆ. ಮತ್ತೆ ಎರಡನೇ ತಿಂಗಳು ಕೂಡ ವಿಳಂಬವಾದರೆ ಅದರಲ್ಲೂ ಸಹ ಇದೆಲ್ಲವೂ ಸೇರಿರುತ್ತದೆ, ಅದರ ಮೇಲೆ ಕೂಡ ಬಡ್ಡಿ ಬೀಳುತ್ತದೆ ಇದು ಸರಿಯಿಲ್ಲ. ಇದೆಲ್ಲದರಿಂದ ಸಾಲ ತೆಗೆದುಕೊಂಡವರು ಇನ್ನೂ ಹೆಚ್ಚು ತೊಂದರೆ ಅನುಭವಿಸುತ್ತಾರೆ ಎನ್ನುವುದು ಡಿಜಿಟಲ್ ಸಾಲ ಸಲಹೆಗಾರರ ನಿಲುವು.
ಆದರೆ ಸಾಲ ನೀಡುವ ಹಣಕಾಸು ಸಂಸ್ಥೆಗಳು ಮಾತ್ರ ಸಾಲ ತೆಗೆದುಕೊಂಡವರು ಸಾಲ ಮರುಪಾವತಿ ಮಾಡುವುದು ವಿಳಂಬ ಆಗದಂತೆ ಶಿಸ್ತುನಿಂದ ಪ್ರತಿ ತಿಂಗಳು ಕೂಡ ಸಾಲ ಕಟ್ಟಲು ಈ ದಂಡದ ನಿಯಮ ಅನುಕೂಲ ಮಾಡುತ್ತದೆ ಎನ್ನುವ ಸಮಜಾಯಿಸಿಯನ್ನು ನೀಡುತ್ತಿದೆ. ಆದರೆ ಈಗೀಗ ಅದನ್ನು ತಮ್ಮ ಹಣಕಾಸು ಸಂಸ್ಥೆಯ ಆದಾಯ ಹೆಚ್ಚು ಮಾಡಿಕೊಳ್ಳುವ ಒಂದು ಮೂಲವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೆಲ್ಲ ಗಮನಿಸಿರುವ RBI ಸಾಲಗಾರರನ್ನು ಇಂತಹ ಸಂಕಷ್ಟಗಳಿಂದ ತಪ್ಪಿಸಲು ಸಲುವಾಗಿ ಈ ಹೊಸ ಕರಡು ಸೂಚಿಯನ್ನು ಜಾರಿಗೆ ತಂದಿದೆ. RBI ಹೊಸ ಕರಡು ಸೂಚಿ ಪ್ರಕಾರ ಹಣಕಾಸು ಸಂಸ್ಥೆಗಳು ಯಾವ ರೀತಿಯಲ್ಲಿ ದಂಡವನ್ನು ಲೆಕ್ಕ ಹಾಕುತ್ತವೆ ಎನ್ನುವುದನ್ನು ತಿಳಿಸಬೇಕು. ಚಿಲ್ಲರೆ ವ್ಯವಹಾರದ ಸಾಲಗಳು, ವ್ಯಾಪಾರ ಸಾಲಗಳು ಮತ್ತು MSME ನಂತಹ ಸಾಲಗಳ ಶುಲ್ಕಕ್ಕಿಂತ ಇದು ಹೆಚ್ಚಿರಬಾರದು ಎಂಬುದು RBIನ ಅಭಿಪ್ರಾಯ.
RBI ನ ಡ್ರಾಫ್ಟ್ ನಲ್ಲಿ ಒಂದೇ ಬಗೆಯ ಉತ್ಪನ್ನಗಳು ಹಾಗೂ ಒಂದೇ ಬಗೆಯ ಸಾಲಗಳ ಮೇಲೆ ವಿಧಿಸುವ ಬಡ್ಡಿಗಳು ಹಾಗೂ ದಂಡ ಶುಲ್ಕಗಳು ಒಂದೇ ರೀತಿ ಇರಬೇಕು ಎಂದು ಹೇಳಿದೆ. ಮತ್ತು ಇನ್ನು ಮುಂದೆ ಸಾಲ ನೀಡುವ ಹಣಕಾಸು ಸಂಸ್ಥೆಗಳಾಗಲಿ, ಬ್ಯಾಂಕುಗಳಾಗಲಿ EMI ರಿಮೈಂಡರ್ ಗಳನ್ನು ಸಾಲಗಾರರಿಗೆ ಕಳುಹಿಸಿ ಒಂದು ವೇಳೆ ತಪ್ಪಿದಲ್ಲಿ ವಿಧಿಸುವ ದಂಡದ ಮೊತ್ತವನ್ನು ತಿಳಿಸಿ ಎಚ್ಚರಿಸಬೇಕು. ಮನಸೋ ಇಚ್ಛೆ ದಂಡವನ್ನು ವಿಧಿಸುವಂತಿಲ್ಲ ಎಂದು ಹೇಳಿದೆ.