ಕೊರೋನಾ ಎನ್ನುವ ಮಹಾಮಾರಿಯಿಂದ ನಲಗಿದ ಜನ ಈಗೀಗ ಚೇತರಿಸಿಕೊಳ್ಳುತ್ತಿದ್ದಾರೆ. ಬಡವರು, ಸಾಮಾನ್ಯರು, ಉದ್ಯಮಿಗಳು, ವ್ಯವಹಾರಸ್ಥರು ಹೀಗೆ ಎಲ್ಲರ ಬದುಕನ್ನು ಅಯೋಮಯಗೊಳಿಸಿದ 2 ಲಾಕ್ಡೌನ್ ಗಳಿಂದ ಜನ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಜನತೆ ಮಾತ್ರವಲ್ಲದೆ ದೇಶದ ಆರ್ಥಿಕತೆ ಮೇಲು ಕೂಡ ಇದು ಗಂಭೀರವಾಗಿ ಹೊಡೆತ ಕೊಟ್ಟಿದೆ ಅದರ ಪರಿಣಾಮವನ್ನು ಇನ್ನಷ್ಟು ವರ್ಷ ಅನುಭವಿಸುವ ರೀತಿ ಮಾಡಿದೆ
ಲಾಕ್ಡೌನ್ ಕಳೆದು ನಿಧಾನವಾಗಿ ಜನಜೀವನ ಸಾಮಾನ್ಯ ಪರಿಸ್ಥಿತಿಗೆ ಬರುತ್ತಿದ್ದಂತೆ ಜನ ಬೆಲೆ ಏರಿಕೆಯ ಬಿಸಿಗೆ ತತ್ತರಿಸಿ ಹೋಗಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ವಿಪರೀತವಾಗಿ ಏರುತ್ತಿರುವ ದಿನನಿತ್ಯದ ಬಳಕೆಯ ಸಾಮಾಗ್ರಿಗಳ ಬೆಲೆ ಬಡವರ ಬದುಕನ್ನು ಹೈರಾಣಾಗಿಸಿದೆ. ಬಡವರು ಮತ್ತು ಸಾಮಾನ್ಯ ವರ್ಗದವರಿಗೆ ಈಗ ಬದುಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಬಂದಿದೆ.
ಪ್ರತಿದಿನ ಕೂಡ ಡೀಸಲ್, ಪೆಟ್ರೋಲ್ ಬೆಲೆ ಏರಿಕೆ ಆಗುತ್ತಲೇ ಇದೆ. ಅಡುಗೆ ಎಣ್ಣೆ ದರ, ದಿನಸಿ ಸಾಮಾನುಗಳ ರೇಟ್ ಅದು ಯಾವಾಗಲೂ ಗಗನ ಮುಟ್ಟಿದ್ದು ಆಯ್ತು, ಹೂವು ಹಣ್ಣು ತರಕಾರಿ ಮುಂತಾದವುಗಳು ಕೂಡ ಕೈಗೆಟಕುತ್ತಿಲ್ಲ, ಅಡಿಗೆ ಮಾಡಲು ಮುಖ್ಯವಾಗಿ ಬೇಕಾದ ಗ್ಯಾಸ್ ಸಿಲಿಂಡರ್ ಬೆಲೆ ಕೇಳಿ ಜನ ಕಣ್ಣೀರುಡುವಂತಾಗಿದೆ. ಒಂದು ದಶಕದಿಂದಲೇ ನೋಡುವುದಾದರೆ ಈ ರೀತಿ ಅಡುಗೆ ಅನಿಲದ ದರ ದುಪ್ಪಟ್ಟಿಗಿಂತ ಹೆಚ್ಚಾಗಿದೆ ಎಂದು ಹೇಳಬಹುದು.
ಈ ಒಂದು ದಶಕದಲ್ಲಿ ಅದರಲ್ಲೂ ಪ್ರಧಾನಮಂತ್ರಿ ಅವರ ಉಜ್ವಲ ಯೋಜನೆ ಬಂದಮೇಲೆ ಹಳ್ಳಿಗಾಡಿನಲ್ಲೂ ಕೂಡ ಸೌದೆ ಒಲೆ ಸಿಗುವುದು ಸಾಧ್ಯವಿಲ್ಲ. ಎಲ್ಲರೂ ಈಗ ಮನೆಗಳಲ್ಲಿ ದಿನನಿತ್ಯದ ಅಡುಗೆಗಾಗಿ LPG ಅನಿಲವನ್ನೇ ಅವಲಂಬಿಸಿದ್ದಾರೆ. ಇಂತಹ ಸಮಯದಲ್ಲಿ ಇದರ ಬೆಲೆ ಏರಿಕೆ ಆಗಿರುವುದು ಗೃಹಿಣಿಯರು ಪ್ರತಿದಿನ ಅಡುಗೆ ಮನೆಯಲ್ಲಿ ಚಿಂತಿಸುತ್ತಾ ಅಡುಗೆ ಮಾಡುವಂತೆ ಮಾಡಿದೆ.
ಇದರೊಂದಿಗೆ ಕಮರ್ಷಿಯಲ್ ಎಲ್‌ಪಿಜಿ ದರವೂ ಕೂಡ ವಿಪರೀತ ಏರಿದೆ. ಕಮರ್ಷಿಯಲ್ ಕಾರಣಕ್ಕಾಗಿ LPG ಬಳಸುತ್ತಿದ್ದವರು ಕೂಡ ಈಗ ಖರೀದಿಸಲು ಹಿಂದೆ ಮುಂದೆ ನೋಡುವಂತೆ ಮಾಡಿದೆ. ಕಮರ್ಷಿಯಲ್ LPGಯಲ್ಲಿ ಆಗಿರುವ ಬದಲಾವಣೆಯನ್ನು ನೋಡುವುದಾದರೆ 2012 ರಿಂದ 2018ರ ರಲ್ಲಿ ಕೇವಲ 500 ರೂಪಾಯಿಗೆ LPG ಸಿಲಿಂಡರ್ ಸಿಗುತ್ತಿತ್ತು. ಆದರೆ ಈಗ ರಾಜ್ಯವಾರು ನೋಡುವುದಾದರೆ ಅವುಗಳ ಬೆಲೆ ಈ ರೀತಿ ಇದೆ.
ಹರಿಯಾಣದಲ್ಲಿ LPG ಅನಿಲದರ 1855 ಇದೆ, ದೆಹಲಿಯಲ್ಲಿ 1723, ಕೊಲ್ಕತ್ತಾದಲ್ಲಿ 1543, ಹೈದರಾಬಾದ್ ನಲ್ಲಿ 1456, ಚೆನ್ನೈಯಲ್ಲಿ 1356 ಮತ್ತು ಬೆಂಗಳೂರಿನಲ್ಲಿ 2000 ಇದೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗೆ ಸಂಬಂಧಪಟ್ಟ ಹಾಗೆ ಸ್ವಲ್ಪ ಸಮಾಧಾನದ ಸುದ್ದಿಯೊಂದು ಬಂದಿದೆ. ಅದೇನೆಂದರೆ ಕಮರ್ಷಿಯಲ್ LPG ದರ ಇಳಿಕೆ ಮಾಡಲಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಕನಿಷ್ಠ 500 ರೂಪಾಯಿಗೆ ಬರುವುದು ಎನ್ನುವ ಊಹ ಪೋಹ ಇದ್ದು, ಸಾಧ್ಯವಾಗದಿದ್ದರೆ 500 ರೂಪಾಯಿ ಆದರೂ ಕಡಿಮೆ ಆಗಲಿದೆ ಎನ್ನುವ ಮಾತುಗಳು ಬಲವಾಗಿದೆ.
ಕರ್ನಾಟಕದಲ್ಲಿ ಈಗ ವಿಧಾನಸಭಾ ಚುನಾವಣೆ ಇರುವುದರಿಂದ ಎಲ್ಲಾ ಪಕ್ಷಗಳು ಜನಸಾಮಾನ್ಯರ ವೋಟುಗಳನ್ನು ಸೆಳೆಯಲು ಪ್ರಣಾಳಿಕೆಯ ಬಾಣಗಳನ್ನು ಬಿಡುತ್ತಿವೆ. ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ಆಗಲು ವಿಪರೀತವಾಗಿರುವ ಎಲ್ಲಾ ಬೆಲೆ ಏರಿಕೆಯನ್ನು ಕಡಿಮೆ ಮಾಡಲಿ ಎಂದು ಕೇಳುತ್ತಿದ್ದಾರೆ. ನಿಮ್ಮ ಪ್ರಕಾರ LPG ಅಡುಗೆ ಅನಿಲ ಎಷ್ಟು ರೇಟಿಗೆ ಸಿಕ್ಕರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎನ್ನುವುದು ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.