ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಮದುವೆ ಹಾಗೂ ನಿಶ್ಚಿತಾರ್ಥದ ಸಂಭ್ರಮಗಳು ಹೆಚ್ಚಾಗಿ ನಡೆಯುತ್ತಿದೆ ಕಿರುತೆರೆಯ ಸಾಕಷ್ಟು ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿರುವ ಸ್ವಾತಿ ಹೆಚ್ ವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಮೈಸೂರಿನಲ್ಲಿ ನಾಗಾರ್ಜುನ ರವಿ ಜೊತೆ ನಟಿ ಹಸೆಮಣೆ ಏರಿದ್ದಾರೆ. ಶುಭವಿವಾಹ, ಪುಟ್ಟಗೌರಿ ಮದುವೆ, ಗಂಗಾ, ರಂಗನಾಯಕಿ, ಕನ್ಯಾಕುಮಾರಿ ಸೀರಿಯಲ್ಗಳ ಮೂಲಕ ಮೋಡಿ ಮಾಡಿರುವ ನಟಿ ಸ್ವಾತಿ ದಾಂಪತ್ಯ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸ್ವಾತಿ ಮತ್ತು ನಾಗಾರ್ಜುನ ರವಿ ಮದುವೆ ನಡೆದಿದೆ. ಈ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ, ನಂದಿನಿ, ಅನಿಕಾ ಸಿಂಧ್ಯ, ಅಭಿಷೇಕ್ ದಾಸ್ ಹೀಗೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ.
ಬಾಲಯ್ಯ ಅಭಿನಯದ ವೀರ ಸಿಂಹ ರೆಡ್ಡಿ ಚಿತ್ರದ ಮೊದಲ ಸಾಂಗ್ ರಿಲೀಸ್ಡಿಪ್ಲೋಮಾ ಇನ್ ಜ್ಯುವೆಲ್ಲರಿ ಡಿಸೈನ್ ಮಾಡುತ್ತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟಿ ಅನಿರೀಕ್ಷಿತವಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದಂಡುಪಾಳ್ಯ, ಬಿಡಲಾರೆ ನಿನ್ನ, ವಾರಸ್ಧಾರ, ಉಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಸ್ವಾತಿ ಅವರು ಮದುವೆಯಾಗಿದ್ದಾರೆ ಎಲ್ಲರಿಗೂ ಗೊತ್ತಿರುವ ಹಾಗೆ ಸ್ವಾತಿ ಅವರು ಗಟ್ಟಿಮೇಳ ಸೀರಿಯಲ್ ನಲ್ಲಿ ವೇದಾಂತ ವಶಿಷ್ಠ ಅವರ ಚಿಕ್ಕಮ್ಮನ ಪಾತ್ರವಾಗಿ ಸಾಕಷ್ಟು ಫೇಮಸ್ ಆಗಿದ್ದರು. ಜೊತೆಗೆ ಕನ್ಯಾಕುಮಾರಿ ಧಾರವಾಹಿಯಲ್ಲಿ ಕೂಡ ಇವರು ತಾಯಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರು ಇದೀಗ ವಿವಾಹವಾಗಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರು ವಿವಾಹವಾಗಿರುವ ಸುದ್ದಿ ಎಲ್ಲಾ ಕಡೆ ವೈರಲ್ ಆಗುತ್ತದೆ ಗಟ್ಟಿಮೇಳ ಧಾರವಾಹಿಯಲ್ಲಿ ಸುಹಾಸಿನಿ ಪಾತ್ರದಲ್ಲಿ ನಟಿಸಿದಂತಹ ನಟಿ ಎಂದರೆ ಸ್ವಾತಿ ಅವರು ಹೌದು ಅದಾದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕನ್ಯಾಕುಮಾರಿ ಧಾರವಾಹಿಯಲ್ಲಿ ಹೀರೋಯಿನ್ ತಾಯಿ ಪಾತ್ರದಲ್ಲಿ ಕೂಡ ಬಹಳ ಅಚ್ಚುಕಟ್ಟಾಗಿ ಯಂಗ್ ಅಂಡ್ ಎನರ್ಜಿಟಿಕ್ ರಾಯಲ್ ಲೈಫ್ ಲೀಡ್ ಮಾಡುವ ಪಾತ್ರಧಾರಿ ಆಗಿ ನಟಿಸಿದ್ದರು. ಇನ್ನು ಇದೀಗ ಇವರ ಮದುವೆಯ ಸುಂದರ ಕ್ಷಣಗಳನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು ಸ್ವಾತಿ ಅವರು ನಾಗಾರ್ಜುನ್ ರವಿ ಅವರನ್ನು ಅರೇಂಜ್ ಮ್ಯಾರೇಜ್ ಆಗಿದ್ದಾರೆ ಇದು ಪಕ್ಕ ಅರೇಂಜ್ ಮ್ಯಾರೇಜ್ ಆಗಿದ್ದು ಇವರ ಮದುವೆ ನೆನ್ನೆ ಅಷ್ಟೇ ನೆರವೇರಿದ್ದಿದ್ದು ಇನ್ನೂ ನಾಗಾರ್ಜುನ್ ರವಿ ಅವರು ಸಿನಿಮಾ ಸ್ಕ್ರೀನ್ ಪ್ಲೇ ರೈಟರ್ ಆಗಿ ಕೆಲಸಮಾಡುತ್ತಿದ್ದಾರೆ ಸಿನಿಮಾ ಕ್ಷೇತ್ರದಲ್ಲಿ ನಂಟನ್ನು ಇಕೊಂಡಿದ್ದಾರೆ.
ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಇಬ್ಬರು ಈಗ ಸತಿಪತಿಗಳಾಗಿದ್ದಾರೆ. ಇಬ್ಬರಿಗೂ ಕೂಡ ಸಿನಿಮಾ ಮತ್ತು ಕಿರುತೆರೆಯ ನಂಟು ಇರುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಎಂದು ನಿರ್ಧರಿಸಿ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಸ್ತ್ರವಾಗಿ ಇವರ ವಿವಾಹವು ನೆರವೇರಿದ್ದು ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಇನ್ನು ಸ್ವಾತಿ ಹಾಗೂ ನಾಗಾರ್ಜುನ್ ಅವರ ವಿವಾಹಕ್ಕೆ ಸಾಕಷ್ಟು ಜನ ಕಲಾವಿದರು ಭಾಗಿಯಾಗಿ ವಿವಾಹದ ಸುಂದರ ಕ್ಷಣಗಳನ್ನು ಮೆರವುಗೊಳಿಸಿದ್ದಾರೆ. ನವ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಸಾಕಷ್ಟು ಜನರು ಶುಭಾಶಯಗಳು ತಿಳಿಸಿ ಹಾರೈಸುತ್ತಿದ್ದಾರೆ. ನೀವು ಸಹ ಈ ಜೋಡಿಗೆ ಶುಭ ಹಾರೈಕೆಗಳನ್ನು ತಿಳಿಸುವುದಾದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.