ಕಳೆದ ಒಂದು ದಶಕದ ಹಿಂದೆ ಹೆಣ್ಣು ಮಕ್ಕಳ ಜನನದ ಬಗ್ಗೆ ಬಹಳ ನಿರ್ಲಕ್ಷ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣ ಹ’ತ್ಯೆ ನಿಷೇಧ ಕಾಯ್ದೆಯನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದು ಮತ್ತು ಹೆಣ್ಣು ಮಕ್ಕಳಿಗಾಗಿ ಸರ್ಕಾರದಿಂದ ಅನೇಕ ಯೋಜನೆಗಳನ್ನು ಒದಗಿಸಿ ಈ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.
ಹೆಣ್ಣು ಮಕ್ಕಳ ಪೋಷಣೆಗಾಗಿ ಅವರ ಭವಿಷ್ಯವನ್ನು ಉಜ್ವಲಿಸುವ ದೂರ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿವೆ. ಆ ನಿಟ್ಟಿನಲ್ಲಿ 2006ರಲ್ಲಿ ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (C M Yedyurappa) ಹೆಣ್ಣು ಮಕ್ಕಳಿಗಾಗಿ ಪರಿಚಯಿಸಿದ ಭಾಗ್ಯಲಕ್ಷ್ಮಿ ಬಾಂಡ್ (Bhagyalakshmi Bond) ಎನ್ನುವ ವಿಶೇಷ ಯೋಜನೆಯು ಬಹಳ ವಿಶೇಷ.
ಈ ಸುದ್ದಿ ಓದಿ:- BBMP ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 28,950.
ಆ ಸಮಯದಲ್ಲಿ ಇಂತಹ ಬಾಂಡ್ ಗಳನ್ನು ಪಡೆದಿದ್ದ ಹೆಣ್ಣು ಮಕ್ಕಳಿಗೆ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ ಅದರ ಕುರಿತು ಈ ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ.
ಯೋಜನೆಯ ಹೆಸರು:- ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ
ಯೋಜನೆ ಕುರಿತು ಕೆಲ ವಿಶೇಷ ಮಾಹಿತಿಗಳು:-
* ಈ ಯೋಜನೆಯನ್ನು ಬಡತನಕ್ಕೆ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಮೊದಲ ಎರಡು ಹೆಣ್ಣು ಮಕ್ಕಳು ಪಡೆಯಲು ಅರ್ಹರಾಗಿದ್ದಾರೆ.
* ಹೆಣ್ಣು ಮಕ್ಕಳ ಪೋಷಕರು ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಹೋಗಿ ಪೂರಕ ದಾಖಲೆಗಳನ್ನು ಒದಗಿಸಿ ಯೋಜನೆಗೆ ನೋಂದಾಯಿಸಿಕೊಂಡರೆ ಅವರು ಸರ್ಕಾರಕ್ಕೆ ಮಾಹಿತಿ ಸಲ್ಲಿಸುತ್ತಾರೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಯೋಜನೆಯಲ್ಲಿ ಕೇವಲ 500 ಹೂಡಿಕೆ ಮಾಡಿ ಸಾಕು ನಲ್ಲಿ 47 ಲಕ್ಷ ಸಿಗುತ್ತೆ.!
* ದಾಖಲೆಗಳ ಪರಿಶೀಲನೆ ನಡೆದು ಅನುಮೋದನೆಯಾದರೆ ಪ್ರತಿ ಫಲಾನುಭವಿಗೆ ರೂ.10,000 ಹಣವನ್ನು ಫಲಾನುಭವಿ ಹೆಸರಿನಲ್ಲಿ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗುತ್ತದೆ. ಫಲಾನುಭವಿ 18 ವರ್ಷ ಪೂರೈಸಿದ ಬಳಿಕ ಗರಿಷ್ಠ ಬಡ್ಡಿ ರೂಪದ ಲಾಭದೊಂದಿಗೆ ಪಾಲುದಾರ ಸಂಸ್ಥೆ ಆ ಹೆಣ್ಣು ಮಗುವಿಗೆ ಈ ಹೂಡಿಕೆ ಮೊತ್ತವನ್ನು ಹಿಂತಿರುಗಿಸುತ್ತದೆ.
ಸಿಗುವ ನೆರವು:-
* ಯೋಜನೆ ಆರಂಭವಾದ ಸಮಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ದಂಪತಿಯ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ರೂ.10,000 ಠೇವಣಿ ಇಡಲಾಗುತ್ತಿತ್ತು ಮೆಚುರಿಟಿ ಅವಧಿಯಲ್ಲಿ ರೂ.40,918 ಸಿಗುತ್ತಿತ್ತು.
* ನಂತರ ಇದನ್ನು ಬದಲಾಯಿಸಲಾಯಿತು. ಆ ಪ್ರಕಾರವಾಗಿ 2008 ರ ಆಗಸ್ಟ್ ನಂತರ ಜನಿಸಿದ ಮಗುವಿಗೆ ಠೇವಣಿ ಮೊತ್ತವನ್ನು ರೂ.19,300 ಕ್ಕೆ ಏರಿಸಲಾಗಿದೆ ಮತ್ತು ಎರಡನೇ ಮಗುವಿಗೆ ರೂ.18, 350 ಠೇವಣಿ ನಿಗದಿಪಡಿಸಲಾಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!
ಈ ಮೂಲಕ ಮೊದಲ ಹೆಣ್ಣು ಮಗುವಿಗೆ 1,00,052 ರೂ. ಎರಡನೇ ಮಗುವಿಗೆ ಒಟ್ಟು 1,00,097 ರೂಪಾಯಿ ಸಿಗಲಿದೆ.
* ಈಗ ವಿಚಾರ ಏನೆಂದರೆ 2006ರಲ್ಲಿ ಈ ಬಾಂಡ್ ಪಡೆದಿದ್ದ ಹೆಣ್ಣು ಮಕ್ಕಳಿಗೆ ಈಗ 18 ವರ್ಷ ಪೂರೈಸುತ್ತಿದ್ದು, ಇವರು ತಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆದು ಸ್ಕೀಮ್ ಅಮೌಂಟ್ ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.
* ಪ್ರಸ್ತುತವಾಗಿ ಈ ಯೋಜನೆಯನ್ನು ಸುಕನ್ಯ ಸಮೃದ್ಧಿ ಯೋಜನೆ (SSY) ಜೊತೆ ಮರ್ಜ್ ಮಾಡಲಾಗಿದೆ ಮತ್ತು ಕೆಲವು ನಿಯಮಗಳನ್ನು ಬದಲಾಯಿಸಲಾಗಿದೆ.
ಈ ಯೋಜನೆಗೆ ಕಂಡಿಷನ್ ಗಳು:-
* ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿರಬೇಕು.
* ಮಗುವಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿರೋಧಕ ಹಾಕಿಸಿರಬೇಕು.
ಅಂಗನವಾಡಿ ಕೇಂದ್ರಕ್ಕೆ ನೋಂದಣಿಯಾಗಿರಬೇಕು.
* ಶಿಕ್ಷಣ ಇಲಾಖೆಯ ನೋಂದಾಯಿತ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿಸಿರಬೇಕು.
* ಮಗು ಬಾಲಕಾರ್ಮಿಕರಾಗಿರಬಾರದು.
* 18 ವರ್ಷ ಪೂರ್ಣಗೊಳ್ಳುವ ಮುನ್ನ ವಿವಾಹವಾದವರಿಗೆ ಈ ಯೋಜನೆಯ ನೆರವು ಸಿಗುವುದಿಲ್ಲ.