ರೈತನಿಗೆ (farmer) ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ಕ’ಷ್ಟವಿದೆ. ಹಾಗಾಗಿ ಭಾರತದಲ್ಲಿ ಕೃಷಿಯನ್ನು (agriculture) ಮಳೆ ಜೊತೆ ಆಡುವ ಜೂಜಾಟ ಎನ್ನುತ್ತಾರೆ. ರೈತನು ಬೆವರು ಸುರಿಸಿ ಜಮೀನಿನಲ್ಲಿ ದುಡಿದರು ಆತನ ಶ್ರಮಕ್ಕೆ ಕೆಲವೊಮ್ಮೆ ತಕ್ಕ ಬೆಲೆ ಸಿಗುವುದಿಲ್ಲ. ಕೆಲವೊಮ್ಮೆ ಬೆಳೆ ಕೈಗೆ ಬಂದರು ಬೆಲೆ ಇರುವುದಿಲ್ಲ, ಅನೇಕ ಬಾರಿ ಬೆಳೆಯೇ ಬರುವುದಿಲ್ಲ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತ ಸಾಲದ ಶೂಲಕ್ಕೆ ಸಿಲುಕುತ್ತಾನೆ.
ಇದು ಕೃಷಿಗೆ ಸಂಬಂಧಿಸಿದ ಸಮಸ್ಯೆ ಆದರೆ ಇದನ್ನು ಹೊರತುಪಡಿಸಿ ರೈತನಿಗೆ ಕೌಟುಂಬಿಕವಾಗಿ ಕೂಡ ಜಮೀನಿಗೆ ಸಂಬಂಧಿಸಿದ ಹಾಗೆ ಸಾಕಷ್ಟು ಸಮಸ್ಯೆಗಳು ಇವೆ. ಅನೇಕರು ರೈತರು ಹತ್ತಾರು ವರ್ಷಗಳಿಂದ ಅದೇ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದರು ಇನ್ನೂ ಸಹ ದಾಖಲೆ ಅವರ ಹೆಸರಿಗೆ ಇರುವುದಿಲ್ಲ ಕುಟುಂಬದಲ್ಲಿ ತಾತನ ಅಥವಾ ಮುತ್ತಾತನ ಹೆಸರಿನಲ್ಲಿಯೇ ಜಮೀನು ಇದ್ದು ಇನ್ನೂ ತಮ್ಮ ಹೆಸರಿಗೆ ಮಾಡಿಕೊಳ್ಳಲಾಗಿದೆ ಪರದಾಡುತ್ತಿರುತ್ತಾರೆ.
ಇನ್ನು ಕೆಲವೊಮ್ಮೆ ತಮ್ಮ ನಡುವೆ ಆಸ್ತಿ ವಿಭಾಗಕ್ಕೆ ಸಂಬಂಧಪಟ್ಟ ಹಾಗೆ ವ್ಯಾಜ್ಯಗಳಗಾಗಿ ಕೋರ್ಟ್ ಕಚೇರಿ ಎಂದು ಕೃಷಿ ಕೆಲಸ ಬಿಟ್ಟು ಅಲೆದಾಡುವಂತಾಗಿದೆ. ಇದನ್ನು ಹೊರತುಪಡಿಸಿ ಮತ್ತೊಂದು ಸಮಸ್ಯೆ ಏನೆಂದರೆ ಅಕ್ಕಪಕ್ಕ ಜಮೀನಿನವರ ಜೊತೆಗೆ ಕಾಲುದಾರಿಗಾಗಿ ಬಂಡಿದಾರಿಗಾಗಿ ಅಥವಾ ಜಮೀನು ಒತ್ತುವರಿಯಾಗಿದೆ ಎಂದು ಜ’ಗ’ಳ ಆಗುತ್ತದೆ.
ಒಬ್ಬ ರೈತನಿಗೆ ತನ್ನ ಜಮೀನಲ್ಲಿ ಎಷ್ಟು ಮರಗಳಿದೆ ತನ್ನ ಜಮೀನಿನ ದಾರಿ ಯಾವುದು? ತನ್ನ ಜಮೀನಿನ ನಿಖರವಾದ ವಿಸ್ತೀರ್ಣ ಎಷ್ಟು? ಸರ್ವೆ ನಂಬರ್ ಯಾವುದು ಎನ್ನುವುದಿಲ್ಲ ಆತನ ಮೂಲ ದಾಖಲೆಯಲ್ಲಿ ಸ್ಪಷ್ಟವಾಗಿ ಇರುತ್ತದೆ ಮತ್ತು ಆಸ್ತಿ ವಿಷಯವಾಗಿ ವ್ಯಾಜ್ಯಗಳಾದಾಗ ಮುಖ್ಯವಾಗಿ ಆಸ್ತಿಯು ರೈತನಿಗೆ ಯಾವ ಮೂಲದಿಂದ ಬಂತು ಎನ್ನುವುದನ್ನು ಮೊದಲು ಕೇಳಲಾಗುತ್ತದೆ.
ಈ ವಿಚಾರವಾಗಿ ಅನೇಕರ ಬಳಿ ಮೂಲ ದಾಖಲೆಗಳು ಕಳೆದು ಹೋಗಿರುವುದರಿಂದ ಅಥವಾ ಇಲ್ಲದೇ ಇರುವುದರಿಂದ ಸರಿಯಾದ ವಿಚಾರ ತಿಳಿಯದೆ ಗೊಂದಲಗಳಾಗಿವೆ. ಇದನ್ನು ತಪ್ಪಿಸುವ ಸಲುವಾಗಿ ಕಂದಾಯ ಇಲಾಖೆ (Revenue department) ಒಂದು ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ ರಾಜ್ಯದಲ್ಲಿರುವ 1.02 ಕೋಟಿ ಸರ್ವೆ ನಂಬರ್ ಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ (Digitalization of Land records).
ಕಂಪ್ಯೂಟರ್ ಮೂಲಕ ಅಥವಾ ಮೊಬೈಲ್ ಮೂಲಕವೇ ರೈತರು ತಾವು ಕುಳಿತಿರುವ ಕಡೆಯಿಂದಲೇ ತಮ್ಮ ಜಮೀನಿನ ಎಲ್ಲಾ ಮಾಹಿತಿಯನ್ನು ಕೂಲಂಕುಶವಾಗಿ ತಿಳಿದುಕೊಳ್ಳುವಂತಾಗಬೇಕು ಇಷ್ಟು ಮಾತ್ರ ಅಲ್ಲದೆ ಜಮೀನಿಗೆ ಸಂಬಂಧಿಸಿದ ಯಾವುದೇ ಹಳೆಯ ದಾಖಲೆ ಇದ್ದರೂ ಅಥವಾ ಜಮೀನು ಯಾರಿಂದ ಯಾರಿಗೆ ಯಾವ ರೂಪದಲ್ಲಿ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಕೂಡ ಅನುಕೂಲ ಆಗಬೇಕು ಎನ್ನುವ ಕಾರಣಕ್ಕಾಗಿ ಕಂದಾಯ ಇಲಾಖೆಯಲ್ಲಿ ಎಲ್ಲಾ ದಾಖಲೆಗಳನ್ನು ಡಿಜಿಟಲಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಸ್ವತಃ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ (Revenue Minister Krisha Bairegowda) ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಕಂದಾಯ ಇಲಾಖೆಯಲ್ಲಿ ಈಗ ಸಾಕಷ್ಟು ಬದಲಾವಣೆಗಳನ್ನು ಮಾಡಿ ಪಾರದರ್ಶಕತೆ ಆಡಳಿತ ನೀಡಲು ಸರ್ಕಾರ ಮುಂದಾಗಿದೆ.
ಹಾಗಾಗಿ ಆರಂಭಿಕ ಹಂತದಲ್ಲಿ ಕೆಲವು ತಾಲೂಕುಗಳಲ್ಲಿ ಇದನ್ನು ಪ್ರಯತ್ನ ಮಾಡಿ ನೋಡಿ ಯಶಸ್ವಿ ಆದ ಬಳಿಕ ಶೀಘ್ರವಾಗಿ ರಾಜ್ಯದ ಎಲ್ಲಾ ಭಾಗದಲ್ಲೂ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಂಡು ಜಮೀನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಕಂದಾಯ ಇಲಾಖೆಯ ವೆಬ್ಸೈಟ್ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮತ್ತು ಡಿಸೆಂಬರ್ 2024 ರ ಒಳಗೆ ಇದನ್ನು ತಲುಪಲು ಗುರಿ ಹೊಂದಿದ್ದೇವೆ ಎನ್ನುವುದನ್ನು ಸಹ ಹೇಳಿದ್ದಾರೆ. ಇದರಿಂದ ಎಲ್ಲಾ ರೈತರಿಗೂ ಕೂಡ ತಮ್ಮ ಜಮೀನಿಗೆ ಸಂಬಂಧಿಸಿದ ನಿಖರವಾದ ಮಾಹಿತಿ ತಿಳಿದುಕೊಳ್ಳಲು ಬಹಳ ಅನುಕೂಲವಾಗುತ್ತದೆ ಈ ಮಾಹಿತಿಯು ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎನ್ನುವ ಸಮಾಧಾನ ಕೂಡ ಇರುತ್ತದೆ.