ಹಣ ಎನ್ನುವುದು ಪ್ರತಿಯೊಬ್ಬರ ಜೀವನದ ಮೂಲಭೂತ ಅವಶ್ಯಕತೆಯಾಗಿದೆ. ಯಾಕೆಂದರೆ ಹಣ ಇಲ್ಲದೆ ಇದ್ದರೆ ಯಾವ ಕೆಲಸ ಕಾರ್ಯಗಳು ಕೂಡ ಮುಂದಕ್ಕೆ ಹೋಗುವುದಿಲ್ಲ. ನಾವು ಬೆಳಗ್ಗೆ ಏಳುತ್ತಿದ್ದಂತೆ ಓದುವ ಪೇಪರ್ ಕೊಂಡುಕೊಳ್ಳುವುದರಿಂದ ಹಿಡಿದು ನಮ್ಮ ದೊಡ್ಡ ದೊಡ್ಡ ಕನಸುಗಳಿಗೆ ಈಗಿನಿಂದಲೇ ಹಣ ಉಳಿಸಬೇಕಿದೆ.
ಪ್ರತಿಯೊಬ್ಬ ಮನುಷ್ಯನಿಗೂ ಹಣದ ಮೇಲೆ ಆಸೆ ಇದ್ದೇ ಇದೆ ಎಲ್ಲರ ಬದುಕಿನ ಊಟದ ಗುರಿ ಹಣ ಆಗಿದೆ ಎಂದರು ಆ ಮಾತು ತಪ್ಪಾಗಲಾರದು. ಹಣವನ್ನು ಮಹಾಲಕ್ಷ್ಮಿ ಎಂದು ಕೂಡ ಗೌರವಿಸುತ್ತಾರೆ, ಪೂಜಿಯಸುತ್ತಾರೆ ಹಾಗೆ ಕೆಲವರು ನಮಗೆ ಲಕ್ಷ್ಮಿ ಒಲಿಯುತ್ತಿಲ್ಲ ಎಂದು ಹೇಳುವುದನ್ನು ಕೇಳಿರಬಹುದು.
ಕೆಲವರು ನಾವು ಎಷ್ಟೇ ಕಷ್ಟಪಟ್ಟು ದುಡಿದರು ಹಣ ಸಿಗುತ್ತಿಲ್ಲ ಹಣ ಉಳಿಯುತ್ತಿಲ್ಲ ಎನ್ನುತ್ತಾರೆ ಆದರೆ ಆ ರೀತಿ ಹೇಳುವ ಮುನ್ನ ಎರಡು ವಿಷಯವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಮೊದಲನೆಯದಾಗಿ ನೀವು ನಿಮ್ಮ ಆಸಕ್ತಿಯ ಹಾಗೂ ಪರಿಣಿತ ಕ್ಷೇತ್ರವನ್ನು ದುಡಿಯಲು ಆರಿಸಿಕೊಂಡಿದ್ದೀರ ಎಂದು.
ಯಾಕೆಂದರೆ ನಿಮ್ಮ ಟ್ಯಾಲೆಂಟ್ ಬೇರೆ ಇದ್ದು ನೀವು ಇನ್ಯಾವುದೋ ಕಡೆ ಸಿಕ್ಕಿಹಾಕಿಕೊಂಡು ಹಣ ಮಾಡುತ್ತೇವೆ ಎಂದು ಒದ್ದಾಡುತ್ತಿದ್ದಾರೆ ಅದು ಸಾಧ್ಯವಿಲ್ಲ. ಮತ್ತೊಂದು ವಿಚಾರವೇನೆಂದರೆ ಕೆಲವರು ಚೀಟಿ, ಇನ್ಸೂರೆನ್ಸ್, EMI, Loan, ಮ್ಯೂಚುವಲ್ ಫಂಡ್ ಗಳು ಎಂದು ಹಣ ಹೂಡಿಕೆ ಮಾಡುತ್ತಾರೆ, ಹಾಗಾಗಿ ಹಣ ಕೈಯಲ್ಲಿ ಉಳಿಯುವುದಿಲ್ಲ ಆದರೂ ಭವಿಷ್ಯದಲ್ಲಿ ದೊಡ್ಡ ಮೊತ್ತದಲ್ಲಿ ಹಣ ಸಿಗುತ್ತದೆ.
ಹಾಗಾಗಿ ಹಣ ಇಲ್ಲ ಎಂದುಕೊಳ್ಳುವುದು ಕೂಡ ತಪ್ಪು, ಮೊದಲನೆಯದಾಗಿ ನಾವು ಯಾವತ್ತೂ ಕೂಡ ನಮ್ಮ ಬಳಿ ಹಣ ಇಲ್ಲ, ನಮಗೆ ತುಂಬಾ ಕಷ್ಟ ಸಮಸ್ಯೆಯಲ್ಲಿ ಇದ್ದೇವೆ ಎಂದು ಮಾತನಾಡುತ್ತಲೇ ಇರಬಾರದು. ಇದು ಹಣ ಬರಲು ಇರುವ ಅವಕಾಶವನ್ನು ಕೂಡ ಬ್ಲಾಕ್ ಮಾಡುತ್ತದೆ, ಯಾವಾಗಲೂ ಪಾಸಿಟಿವ್ ಆಗಿಯೇ ಮಾತನಾಡಬೇಕು.
ನೀವು ಮಾಡುವ ಕೆಲಸವನ್ನು ಶ್ರದ್ಧಾ ಭಕ್ತಿ ಆಸಕ್ತಿಯಿಂದ ಮಾಡಿ ನಿಮಗೆ ಭಗವಂತನ ಆಶೀರ್ವಾದದಿಂದ ಹಣ ಖಂಡಿತ ಸಿಗುತ್ತದೆ. ಹಣ ತಾಯಿ ಮಹಾಲಕ್ಷ್ಮಿ ಅನುಗ್ರಹದಿಂದ ಸಿಕ್ಕಿದರೂ ಅದಕ್ಕೆ ತಾಯಿ ಸರಸ್ವತಿಯ ಕೃಪಾಕಟಾಕ್ಷ ಹಾಗೂ ತಾಯಿ ಶಕ್ತಿ ದೇವತೆ ಪಾರ್ವತಿಯ ಆಶೀರ್ವಾದ ಕೂಡ ಬೇಕೇ ಬೇಕು ಹೀಗೆ ಎಲ್ಲಾ ದೇವರುಗಳ ಆಶೀರ್ವಾದ ದೊರೆತಾಗ ನಮ್ಮ ಹಾದಿ ಸರಾಗವಾಗುತ್ತದೆ ನಾವು ಅಂದುಕೊಂಡಿದ್ದನ್ನು ಸಾಧಿಸುತ್ತೇವೆ.
ಒಂದು ವೇಳೆ ನೀವು ನಿಜವಾಗಿಯೂ ಹಣಕಾಸಿನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದೀರಿ ಎಂದರೆ ಈಗ ನಾವು ಹೇಳುವ ಈ ಸುಲಭವಾದ ಒಂದು ಆಚರಣೆ ಮಾಡಿ ಇದನ್ನು ತೋರಿಕೆಗಾಗಿ ಅಥವಾ ಬಲವಂತಕ್ಕಾಗಿ ಅಥವಾ ಪರೀಕ್ಷೆ ಮಾಡುವುದಕ್ಕಾಗಿ ಮಾಡಬಾರದು. ಮನಸಾರೆ ಭಕ್ತಿಯಿಂದ ಇರುವ ಕ’ಷ್ಟದಿಂದ ಹೊರಬರಲು ಮಾಡಿದಾಗ ಖಂಡಿತವಾಗಿಯೂ ಇದು ಫಲ ಕೊಡುತ್ತದೆ.
ಒಂದು ರೂಪಾಯಿ ಕೂಡ ಖರ್ಚು ಇಲ್ಲದೆ ಸಂಪತ್ತಿನ ಒಡೆಯ ಕುಬೇರ ಹಾಗೂ ಹಣದ ಒಡತಿ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯುವಂತಹ ವಿಧಾನ ಇದಾಗಿದೆ. ಇಷ್ಟೇ ದಿನಗಳು ಮಾಡಬೇಕು ಎನ್ನುವ ನಿಯಮ ಇಲ್ಲ ನಿಮ್ಮ ಕೈಯಲ್ಲಿ ಎಷ್ಟು ದಿನ ಸಾಧ್ಯ ಅಥವಾ ನಿಮಗೆ ಎಷ್ಟು ದಿನಗಳವರೆಗೆ ದೇವರ ಆಶೀರ್ವಾದ ಬೇಕು ಎನಿಸುತ್ತದೆ ಅಲ್ಲಿಯವರೆಗೂ ಕೂಡ ಮಾಡಬಹುದು.
ಪ್ರತಿದಿನ ಸ್ನಾನ ಮಾಡಿದ ಬಳಿಕವೇ ಇದನ್ನು ಮಾಡಬೇಕು ಸ್ನಾನ ಮಾಡಿ ಮಾಡಿ ಮನೆಯಲ್ಲಿ ಕುಲ ದೇವರ ಹಾಗೂ ಇಷ್ಟದೇವರ ಪೂಜೆ ಮಾಡಿ ಒಂದು ಕುಬೇರ ಲಕ್ಷ್ಮಿ ವಿಗ್ರಹ ಅಥವಾ ಫೋಟೋ ಇಟ್ಟುಕೊಳ್ಳಿ. ಕೆಂಪು ವಸ್ತ್ರವನ್ನು ಹಾಕಿ ಅದರ ಮೇಲೆ ಫೋಟೋ ಅಥವಾ ವಿಗ್ರಹ ಇಟ್ಟು ಕೆಂಪು ಹೂಗಳಿಂದ ಅಥವಾ ಕುಂಕುಮದಿಂದ ಅಥವಾ ಕಮಲದ ದಳದಿಂದ 108 ಬಾರಿ ಈಗ ನಾವು ಹೇಳುವ ಈ ಕುಬೇರ ಲಕ್ಷ್ಮಿ ಮಂತ್ರವನ್ನು ಹೇಳುತ್ತಾ ಕುಬೇರ ಲಕ್ಷ್ಮಿ ಕುಂಕುಮ ಅರ್ಚನೆ ಮಾಡಿ ಕೊನೆಯಲ್ಲಿ ಹಾಲಿನಿಂದ ಅಥವಾ ಹಾಲಿನ ಪಾಯಸದಿಂದ ನೈವೇದ್ಯ ಮಾಡಿ.
ನೀವು ನಿರೀಕ್ಷೆಯೂ ಮಾಡಿರದ ಫಲಗಳನ್ನು ಕಾಣುತ್ತೀರಿ ಆದರೆ ನಿಮಗೆ ಕೆಲಸ ಯಶಸ್ವಿಯಾಗುವವರೆಗೂ ಯಾರ ಜೊತೆಗೂ ಈ ರಹಸ್ಯವನ್ನು ಹೇಳಿಕೊಳ್ಳಬೇಡಿ. ಯಾವುದಾದರೂ ಒಂದು ಕಡೆಯಿಂದ ನಿಮಗೆ ಹಣದ ಅನುಕೂಲತೆ ಆಗುತ್ತದೆ, ಸಮಸ್ಯೆ ಪರಿಹಾರವಾಗುತ್ತದೆ.
ಮಂತ್ರ: ಓಂ ಹ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟಲಕ್ಷ್ಮಿ ಮಮಂ ಗೃಹೆ ಧನಂ ಪೂರಾಯ ಪೂರಾಯ ನಮಃ