ವಿವಾಹ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ, ನಂತರ ಭೂಮಿಯ ಮೇಲೆ ಜರುಗುತ್ತದೆ ಎಂದು ನಂಬಿರುವಂತಹ ಸಂಸ್ಕೃತಿ ಭಾರತೀಯರದ್ದು. ನಮ್ಮ ದೇಶದಲ್ಲಿ ವಿವಾಹಗಳಿಗೆ ಬಹಳ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಆ ಮದುವೆಗೆ ಬದ್ಧರಾಗಿ ಪ್ರಾಮಾಣಿಕರಾಗಿ ಬದುಕಬೇಕು ಎನ್ನುವ ಕಟ್ಟುಪಾಡು ಹಾಗೂ ವ್ಯವಸ್ಥಿತವಾದ ಪದ್ಧತಿ ನಮ್ಮದು.
ಆದರೆ ಇತ್ತೀಚೆಗೆ ಭಾರತದಂತಹ ಸಾಂಪ್ರದಾಯ ಬದ್ಧ ದೇಶದಲ್ಲೂ ವಿವಾಹ ವಿ’ಚ್ಛೇ’ದ’ನ ಕೇಸ್ ಗಳು ಹೆಚ್ಚಾಗುತ್ತಿವೆ ಎನ್ನುವುದೇ ದು’ರಂ’ತ. ಪ್ರತಿನಿತ್ಯ ಕೋರ್ಟು ಮೆಟ್ಟಿಲು ಹತ್ತುವವರಲ್ಲಿ ವಿ’ಚ್ಛೇ’ಧ’ನ’ಕ್ಕಾಗಿಯೇ ಕೋಟಿ ಕಚೇರಿ ಅಲೆಯುವವರ ಸಂಖ್ಯೆ ಬಹಳಷ್ಟು ಇದೆ. ಭಾರತ ದೇಶದಲ್ಲೂ ಕೂಡ ಈ ರೀತಿ ಪಾಶ್ಚಾತ್ಯ ಶೈಲಿಯ ಜೀವನ ಶೈಲಿಯ ಅಳವಡಿಕೆಯಾಗಿ ಈ ಮೂಲಕ ಹೊಂದಾಣಿಕೆ ಇಲ್ಲದಂತಾಗಿದೆ ಎನ್ನಬಹುದು.
ವಿಷಯಗಳು ಬಹಳ ವಿಷಕಾರಿಯಾಗಿದ್ದು ಅಂತಹ ವಿಷಯ ಸಂಬಂಧಗಳನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಕ್ಷುಲಕ ಕಾರಣಗಳಿಗೆ ವಿ’ಚ್ಛೇ’ಧ’ನವನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿರುವವರ ಜೀವನಾಂಶದ ಹೆಸರು ಹೇಳಿಕೊಂಡು ಬೆದರಿಕೆ ಹಾಕುತ್ತಿರುವವರ ಸಂಖ್ಯೆ ಬಹಳಷ್ಟು ಇದೆ.
ಇದರಲ್ಲಿ ಕೆಲವೊಮ್ಮೆ ಪುರುಷ ಹಾಗೂ ಆತನ ಸಂಬಂಧಿಕರ ಕೈವಾಡವಿದ್ದರೆ ಅನೇಕ ಬಾರಿ ಹೆಣ್ಣು ಮಕ್ಕಳು ಹಾಗೂ ಹೆಣ್ಣು ಮಕ್ಕಳ ಕಡೆಯುವುದು ಕೂಡ ಡಿ’ವೋ’ರ್ಸ್ ಕೊಟ್ಟರೆ ನಿನ್ನ ಅರ್ಧ ಆಸ್ತಿ ಬರುತ್ತದೆ ಎಂದು ಹೇಳಿ ಎದುರಿಸುತ್ತಿರುವ ಉದಾಹರಣೆಗಳು ಇವೆ. ಆದರೆ ನಿಜವಾಗಿಯೂ ಈ ರೀತಿ ನಡೆಯುತ್ತದೆಯಾ? ವಿವಾಹ ಮುರಿದು ಬಿದ್ದರೆ ಜೀವನಾಂಶವನ್ನು ಕೊಡಲೇಬೇಕಾ?.
ನಮ್ಮ ಅರ್ಧ ಆಸ್ತಿಯನ್ನು ನೀಡಬೇಕಾಗುತ್ತದೆಯಾ ಎಂದರೆ ಆ ರೀತಿಯ ನಿಯಮ ಇಲ್ಲ ಕೂಲಂಕುಶವಾಗಿ ಸೂಕ್ತ ಕಾನೂನು ತಜ್ಞರ ಜೊತೆ ಈ ಬಗ್ಗೆ ವಿಚಾರಿಸಿದಾಗ ಪ್ರಕರಣಕ್ಕನುಗುಣವಾಗಿ ಸರಿಯಾದ ಮಾಹಿತಿ ಸಿಗುತ್ತದೆ. ಆಕೆಗೆ ಜೀವನಾಂಶವನ್ನು ಸೆಟಲ್ಮೆಂಟ್ ಅಥವಾ ಅವರ ಲೈಫ್ ಸ್ಟೈಲ್ ಗೆ ಅನುಗುಣವಾಗಿ ಮತ್ತು ಪತಿ ಆದಾಯಕ್ಕೆ ಅನುಗುಣವಾಗಿ ನೀಡಬೇಕಾಗಬಹುದು ಹೊರತು ಅವರು ಬಯಸಿದ್ದಷ್ಟೇ ಅಥವಾ ಇವರು ಸಂಪಾದಿಸಿದರಲ್ಲಿ ಅರ್ಧ ನೀಡಬೇಕು ಎನ್ನುವ ನಿಯಮ ಇಲ್ಲ.
ಮತ್ತು ತೀರ ಇತ್ತೀಚೆಗೆ ಈ ಪ್ರಕರಣವೊಂದರಲ್ಲಿ ಕೋರ್ಟ್ ಮಹಿಳೆಯರು ಕೆಲವು ಪ್ರಕರಣಗಳಲ್ಲಿ ಜೀವನಾಂಶವನ್ನು ಪಡೆಯಲು ಅರ್ಹರಲ್ಲ ಎನ್ನುವುದು ತಿಳಿದು ಬಂದಿದೆ. ಈ ಪ್ರಕಾರ ಯಾವ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರಾಗಿರುವುದಿಲ್ಲ ಎಂದರೆ ಪತಿ ಬೇಡ ಎಂದು ಪತಿಯನ್ನು ತೊರೆದು ಹೋದ ಮೇಲೆ ಪರಪುರುಷನೊಂದಿಗೆ ಜೀವನ ನಡೆಸುತ್ತಿರುವಂತಹ ಪತ್ನಿಯರು ಮೊದಲ ಪತಿಯಿಂದ ಜೀವನಾಂಶ ಪಡೆಯಲು ಅರ್ಹರಿರುವುದಿಲ್ಲ.
ಇದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳ ಜೊತೆ ಕೋರ್ಟಿಗೆ ಪತಿ ಆಕ್ಷೇಪಣೆ ಸಲ್ಲಿಸಿದಾಗ ಅಂತಹ ಪತ್ನಿಗೆ ಜೀವನಾಂಶ ಕೊಡಬೇಕಾಗಿ ಇರುವುದಿಲ್ಲ. ಹಾಗೆ ಒಂದು ವೇಳೆ ಪತಿಗಿಂತಲೂ ಪತ್ನಿಯು ಉನ್ನತ ಸ್ಥಾನದಲ್ಲಿ ಇದ್ದಾಗ ಪತಿಗಿಂತ ಉತ್ತಮ ಹುದ್ದೆ ಅಥವಾ ಹೆಚ್ಚಿನ ಹಣ ಸಂಪಾದನೆ ಮಾಡುತ್ತಾ ಒಳ್ಳೆಯ ಜೀವನ ಮಟ್ಟವನ್ನು ಅನುಸರಿಸಿ ಬದುಕುತ್ತಿರುವಂತಹ ಮಹಿಳೆಯರು ಕೂಡ ಪತಿಯಿಂದ ಮತ್ತೆ ಜೀವನಾಂಶ ಬೇಕು ಎಂದು ಕೋರಿಕೊಂಡರೆ.
ಆಗಲೂ ಕೂಡ ಜೀವನಾಂಶ ಸಿಗುವುದಿಲ್ಲ ಎನ್ನುವುದು ಇತ್ತೀಚೆಗೆ ನಡೆದ ಎರಡು ಇದೇ ರೀತಿಯ ವಿಭಿನ್ನವಾದ ಕೇಸ್ ಗಳಲ್ಲಿ ನ್ಯಾಯಾಲಯವು ಈ ರೀತಿಯ ತೀರ್ಪಾಗಿದೆ. ಅದೇನಿದ್ದರೂ ಜೀವನಾಂಶಕ್ಕಾಗಿ ಅಥವಾ ಪತಿಗೆ ಬುದ್ಧಿ ಕಲಿಸುತ್ತೇನೆ ಪತ್ನಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಂಡು ವಿ’ಚ್ಛೇ’ಧ’ನ’ದ ತನಕ ಹೋಗಿ ಸಂಬಂಧವನ್ನೇ ಮುರಿದು ಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಅದು ನಮ್ಮ ಸಂಸ್ಕೃತಿಯೂ ಅಲ್ಲ ಎನ್ನುವುದು ಈ ಅಂಕಣದ ಆಶಯ.