ಶಿಕ್ಷಣ ಎನ್ನುವುದು ಜೀವಮಾನದಲ್ಲಿ ದೊರೆಯುವ ಅತ್ಯಂತ ಉತ್ತಮವಾದ ವರದಾನ ಎಂದೇ ಹೇಳಬಹುದು. ಆದರೆ ಇನ್ನೂ ಸಹ ನಮ್ಮ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣಕಾಸಿನ ಅನಾನುಕೂಲತೆಯಿಂದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಂಡು ಕಳೆದು ಹೋಗುತ್ತಿದ್ದಾರೆ.
ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಅನೇಕ ಯೋಜನೆಗಳ ಕ್ರಮ ಕೈಗೊಂಡಿದೆ. ಸರ್ಕಾರ ಮಾತ್ರವಲ್ಲದೆ ಕೆಲವು NGO ಗಳು ಮತ್ತು ಪ್ರತಿಷ್ಠಿತ ಕಂಪನಿಗಳು ಕೂಡ ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ನೆರವು ನೀಡುವ ಮೂಲಕ ಅವರ ಶಿಕ್ಷಣದ ಖರ್ಚು ವೆಚ್ಚಗಳಿಗೆ ಹೆಗಲಾಗಿವೆ. ಈ ಹಾದಿಯಲ್ಲಿ ZS ಅಸೋಸಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೂಡ ಮುಂದುವರೆದಿದೆ.
ZScholars ನಿರ್ಧರಿಸಿರುವ ಈ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮಕ್ಕೆ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಎರಡು ವಿಭಾಗದಲ್ಲಿ ಅರ್ಜಿ ಆಹ್ವಾನಿಸಿ ಅವರ ಕೋರ್ಸ್ ಗಳಿಗೆ ಅನುಕೂಲವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿಧಿಸಿರುವ ಮಾನದಂಡಗಳು ಏನು?, ಹೇಗೆ ಅರ್ಜಿ ಸಲ್ಲಿಸಬೇಕು? ಸಿಗುವ ಅನುದಾನವೆಷ್ಟು? ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
1. ಜನರ ಸಬ್ಜೆಕ್ಟ್ ಗಳನ್ನು ಅಭ್ಯಾಸ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ:-
* ಬೆಂಗಳೂರು, ಚೆನ್ನೈ, ದೆಹಲಿ, ಪುಣೆ ಪ್ರದೇಶದ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲ ವರ್ಷದ BA, B.Com, B.Sc ಪದವಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು, ಈ ಕೋರ್ಸ್ ಅನ್ನು ಯಾವುದೇ ವಿಷಯಗಳಲ್ಲಿ ಅಭ್ಯಾಸ ಮಾಡುತ್ತಿದ್ದರು ಅರ್ಜಿ ಸಲ್ಲಿಸಬಹುದು, ವಾರ್ಷಿಕವಾಗಿ ರೂ.20,000 ವಿದ್ಯಾರ್ಥಿ ವೇತನ ಸಿಗುತ್ತದೆ.
* ವಿದ್ಯಾರ್ಥಿಗಳು PUC ಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದು ಪಾಸಾಗಿರಬೇಕು.
* ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಎಲ್ಲ ಮೂಲಗಳಿಂದಲೂ ರೂ.8 ಲಕ್ಷ ಮೀರಿರಬಾರದು.
2. ಪ್ರೊಫೆಷನಲ್ ಕೋರ್ಸ್ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ:-
* ಬೆಂಗಳೂರು, ಚೆನ್ನೈ, ದೆಹಲಿ, ಪುಣೆ ಪ್ರದೇಶದ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮೊದಲ ವರ್ಷದ
B.E, B.Tec, LLB, B.Arch, MBBS ಮತ್ತು ಇತರೆ ಪ್ರೊಫೇಶನಲ್ ಕೋರ್ಸ್‌ಗಳನ್ನು ಓದುತ್ತಿರಬೇಕು.
* ದ್ವಿತೀಯ PUC ನ್ನು 60% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
* ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.8 ಲಕ್ಷ ಮೀರಿರಬಾರದು.
* ಈ ವಿದ್ಯಾರ್ಥಿಗಳು ವಾರ್ಷಿಕವಾಗಿ ರೂ.50,000 ದವರೆಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ದ್ವಿತೀಯ PUC ಅಂಕಪಟ್ಟಿ
* ಪ್ರಸ್ತುತ ಮೊದಲ ವರ್ಷದ ಪದವಿ ವ್ಯಾಸಂಗಕ್ಕಾಗಿ ಪ್ರವೇಶ ಪಡೆದ ದಾಖಲೆ.
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
ಅರ್ಜಿ ಸಲ್ಲಿಸುವ ವಿಧಾನ:-
* ZScholars ವೆಬ್‌ಪೇಜ್‌ನಲ್ಲಿ ಆನ್ಲೈನ್ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು.
* General Undergraduate / Progessional Undergraduate ವಿಭಾಗದಲ್ಲಿ ತಮಗೆ ಸಂಬಂಧಿಸಿದ ವಿಭಾಗ ಆಯ್ಕೆ ಮಾಡಿ Apply Online ಎನ್ನುವ ಲಿಂಕ್ ಕ್ಲಿಕ್ ಮಾಡಿ.
* ಅರ್ಜಿ ಸಲ್ಲಿಸುವ ಮೊದಲು ರಿಜಿಸ್ಟರ್ ಆಗಬೇಕು
* ಇ-ಮೇಲ್, ಜಿ-ಮೇಲ್, ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಷನ್ ಪಡೆದು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 15 ಡಿಸೆಂಬರ್, 2023.