ಕನ್ನಡಕ್ಕೆ AK 47, ಹುಚ್ಚ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ, ನಟ ಮತ್ತು ಸಿನಿಮಾ ವಿಮರ್ಶಕ, ಚಿಂತನಶೀಲ ವ್ಯಕ್ತಿ ಓಂ ಪ್ರಕಾಶ್ ರಾವ್ (Director Om Prakash Rao) ಅವರು ಕನ್ನಡಿಗರಿಗೆ ಮನೋರಂಜಿಸಲು ಫೀನಿಕ್ಸ್ (phoeix) ಎನ್ನುವ ಮತ್ತೊಂದು ಕ್ರೈಂ ಕಥೆ ಜೊತೆ ಬರುತ್ತಿದ್ದಾರೆ.
ಈಗಷ್ಟೇ ಸಿನಿಮಾ ತನ್ನ ಟೈಟಲ್ ರಿಜಿಸ್ಟರ್ ಮಾಡಿಕೊಂಡಿದ್ದು ಪೋಸ್ಟರ್ ಗಳು ಕೂಡ ಸಕ್ಕತ್ ಕ್ಯೂರಿಯಾಸಿಟಿ ಉಂಟು ಮಾಡುತ್ತಿವೆ. ಇದರ ನಡುವೆ ಖಾಸಗಿ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನಕ್ಕೆ ಕುಳಿತ ಓಂ ಪ್ರಕಾಶ್ ರವರು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮತ್ತು ಕನ್ನಡದ ಸಿನಿಮಾಗಳಿಗೆ ಕರ್ನಾಟಕದಲ್ಲಿ ಸ್ಕ್ರೀನ್ ಗಳು ಸಿಗದಿರುವ ಬಗ್ಗೆ ಹಾಗೂ ಪ್ಲಾನ್ ಇಂಡಿಯಾ ಸ್ಟಾರ್ ಎಂದು ಹೇಳಿಕೊಂಡು ದೊಡ್ಡ ದೊಡ್ಡ ಸ್ಟಾರ್ ಹೀರೋಗಳು ತಮ್ಮನ್ನು ಸ್ಟಾರ್ ಆಗಿ ಮೆರೆಸಿದವರಿಗೆ ರಂಜಿಸಲು ಸಿನಿಮಾ ಮಾಡದೆ ದೂರ ಉಳಿದಿರುವುದರ ಬಗ್ಗೆ ತಾಳ್ಮೆ ಕಳೆದುಕೊಂಡು ಮಾತನಾಡಿದ್ದಾರೆ.
ಇಂಡಸ್ಟ್ರಿ ಕಟ್ಟಲು ಬಹಳ ಕ’ಷ್ಟ ಇತ್ತು. ನಮ್ಮಲ್ಲಿ ಸ್ಟುಡಿಯೋ ಕೂಡ ಇರಲಿಲ್ಲ ಆಗಿನ ಕಾಲದ ಕಲಾವಿದರು ತಂತ್ರಜ್ಞರು ಶೂಟಿಂಗ್ ಮಾಡಲು ಚೆನ್ನೈಗೆ ಹೋಗುತ್ತಿದ್ದರು. ಆಗ ಅವರು ಕೊಟ್ಟ ಸಮಯದಲ್ಲಿ ಸಿನಿಮಾ ಮಾಡಬೇಕಿತ್ತು, ರಾತ್ರೋರಾತ್ರಿ ಸಿನಿಮಾ ಮಾಡಿದ್ದಾರೆ, ದಿನದಲ್ಲಿ ಎರಡು ಗಂಟೆ ಅವಕಾಶಕ್ಕಾಗಿ ಕಾದಿದ್ದಾರೆ, ಆಗಿನ ಜನರು ಮುಂದಿನ ಪೀಳಿಗೆ ಸಮಸ್ಯೆ ಆಗುವುದು ಬೇಡ ಎಂದು ಇಷ್ಟು ಅನುಕೂಲತೆ ಮಾಡಿ ಬಿಟ್ಟು ಕೊಟ್ಟು ಹೋಗಿದ್ದಾರೆ.
ಅವರಾರು ಅದನ್ನು ಅನುಭವಿಸಲಿಲ್ಲ ಅವರು ಕೊಟ್ಟಿದ್ದು ಇಂಡಸ್ಟ್ರಿಕ್ ಗೆ ನೆಕ್ಸ್ಟ್ ಜನರೇಶನ್ ಗಾಗಿ, ಅವರು ಲಕ್ಷವನ್ನು ನೋಡದೆ ಸಾಧನೆ ಮಾಡಿ ಬದುಕು ಮುಗಿಸಿದರು. ಅದರಲ್ಲಿ ಡಾಕ್ಟರ್ ರಾಜಕುಮಾರ್ (Dr. Rajkumar) ಅವರು ಕೂಡ ಅತಿ ದೊಡ್ಡ ಹೆಸರು. ಅವರು ಅಭಿಮಾನಿಗಳನ್ನೇ ದೇವರು ಎಂದು ಕರೆದು ಅವರಿಗೆ ಮನರಂಜನೆ ನೀಡುವುದನ್ನಷ್ಟೇ ಕಾಯಕ ಎಂದುಕೊಂಡಿದ್ದರು. ಆದರೆ ಈಗ ಬೇರೆ ಭಾಷೆಗಳ ಸಿನಿಮಾಗಳಿಗೆ ಸ್ಕ್ರೀನ್ ಕೊಟ್ಟು ಕನ್ನಡ ಸಿನಿಮಾಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಂತ ಸಿನಿಮಾಗಳಾದರು ಕೂಡ 300 ಸ್ಕ್ರೀನ್ ಗಳಲ್ಲಿ ತೋರಿಸಿದರೆ ಹೆಚ್ಚು, ಹೀಗಾಗಲು ಕಾರಣ ನಮ್ಮವರು ಸಿನಿಮಾ ಮಾಡುತ್ತಿಲ್ಲ. ಹೇಳಿಕೊಳ್ಳುವಂತಹ ಸಿನಿಮಾಗಳು ಬರುತ್ತಿಲ್ಲ ಯಾರ ಮೇಲೆ ನಿರೀಕ್ಷೆ ಇದೆ ಅವ್ರು ಸಿನಿಮಾದಿಂದ ದೂರ ಉಳಿಯುತ್ತಿದ್ದಾರೆ. ಸಿನಿಮಾವನ್ನು ಕಟ್ಟಬೇಕಾದವರು ಬೆಳಸಬೇಕಾದವರು ಉಳಿಸಬೇಕಾದವರು ಮನಸ್ಸು ಮಾಡುತ್ತಿಲ್ಲ.
ಸಿನಿಮಾಗೆ ಬರುವಾಗ ಅವಕಾಶಗಳು ಸಿಕ್ಕರೆ ಸಾಕು ಕಾಣಿಸಿಕೊಂಡರೆ ಸಾಕು ಒಂದು ಸೀನ್ ಇದ್ರೆ ಸಾಕು ಎಂದುಕೊಂಡೆ ಎಲ್ಲರೂ ಬರುವುದು ಅವರನ್ನು ಕಾಲಕ್ರಮಣ ಗುರುತಿಸಿ ಸ್ಟಾರ್ ಎನ್ನುವ ಪಟ್ಟ ಕೊಟ್ಟವರು ಅಭಿಮಾನಿಗಳು. ಆದರೆ ಇಂತಹ ಅಭಿಮಾನಿಗಳಿಗೆ ಮರಳಿ ಅವರೇನು ಕೊಡುತ್ತಿದ್ದಾರೆ.
ಅದೆನೋ ಪ್ಯಾನ್ ಇಂಡಿಯ ಮೂವಿ (Pan India Movie) ಅಂತೆ ಯಾವ ಕಿತ್ತೋದ್ ನನ್ ಮಗ ಈ ಹೆಸರು ಇಟ್ಟಿದ್ದು. ಆಗಿನ ಕಾಲದಲ್ಲಿ ಬಬ್ರುವಾಹನ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು, ಶಂಕರ್ ಗುರು ಸಿನಿಮಾ ಆಂಧ್ರಪ್ರದೇಶದಲ್ಲಿ 100 ದಿನ ಓಡಿತ್ತು. ವಿಷ್ಣುವರ್ಧನ್ ಸಿನಿಮಾ ವರ್ಷಕ್ಕೆ 5 ಗ್ಯಾರಂಟಿ ಬರುತ್ತಿತ್ತು. ದೇವರಾಜ್ ಅಂಬರೀಶ್ ಸಿನಿಮಾಗಳು ಏಳೆಂಟು ಬರುತ್ತಿದ್ದವು, ಅವರು ನನ್ನ ಸಿನಿಮಾ ಹಿಟ್ ಆಗುತ್ತದೆ ಎಂದು ಕನಸು ಕಂಡು ಸಿನಿಮಾ ಮಾಡುತ್ತಿರಲಿಲ್ಲ.
ಜನ ನಿರ್ಧರಿಸುತ್ತಾರೆ ಸಿನಿಮಾ ಮಾಡುವುದು ನನ್ನ ಕೆಲಸ ಎಂದುಕೊಂಡು ಮಾಡುತ್ತಿದ್ದರು ಆ ರೀತಿ ಸಿನಿಮಾ ಮಾಡುವುದರಿಂದ ಎಷ್ಟೋ ಜನರ ಹೊಟ್ಟೆ ತುಂಬತ್ತದೆ. ನಿರ್ಮಾಪಕರಿಂದ ಹಿಡಿದು ಬ್ಲಾಕ್ ಟಿಕೆಟ್ ಮಾರುವವರೆಗೂ ಕೂಡ ಅವನ ಪಾಲಿನ ಊಟ ಸಿಗುತ್ತದೆ. ಆದರೆ ಇಂದು ಪ್ಯಾನ್ ಇಂಡಿಯಾ ಹೆಸರು ಹೇಳಿಕೊಂಡು ಮೂರು ವರ್ಷಕ್ಕೆ ನಾಲ್ಕು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಅವರು ಕಲಾ ಸರಸ್ವತಿಗೆ ಅ’ನ್ಯಾ’ಯ ಮಾಡಿದಂತೆ.
ಅವರ ಅಭಿಮಾನಿಗಳ ನಿರೀಕ್ಷೆ ಮೇಲೆ ಹಾಗೆ ಕಾಯುತ್ತಾರೆ ನಿಜ ಆದರೆ ಅವರನ್ನು ಹೊರತು ಪಡಿಸಿ ಕನ್ನಡ ಸಿನಿಮಾ ರಸಿಕರು ಇದ್ದಾರೆ ಅವರಿಗಾಗಿಯೂ ಸಿನಿಮಾ ಮಾಡಿ. ಕನ್ನಡದ KGF ಸಿನಿಮಾ ವಿಶ್ವದ ತಿರುಗಿ ನೋಡುವಂತೆ ಮಾಡಿತು. ನಮ್ಮವರೇ ಇದನ್ನು ಕೆಳಗೆ ತಳ್ಳಲು ಪ್ರಯತ್ನಿಸಿದ್ದು ಇದೆ. ಯಾಕೆ ಕನ್ನಡದ ಸಿನಿಮಾ ಗೆದ್ದರೆ ಇಡೀ ಇಂಡಸ್ಟ್ರಿ ಗೆದ್ದಂತೆ ಅಲ್ಲವಾ? ಪ್ರಶಾಂತ್ ನೀಲ್ ಪಾಕಿಸ್ತಾನದವನ? ಯಶ್ ಬಿನ್ ಲಾಡೆನ್ ಮಗನ?.
ನಮ್ಮವರೇ ತಾನೆ ಆದ್ರೆ ಇದ್ರಲ್ಲಿ ತಪ್ಪೇನಿದೆ ಎಂದರೆ ಜನರು ಸಿನಿಮಾವನ್ನು ಮೆರೆಸಿ ಗೆಲ್ಲಿಸಿದರು ಈಗ ಆ ಹೀರೋ ಹಾಗೂ ನಿರ್ದೇಶಕ ಏನು ಮಾಡುತ್ತಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಅವನು ಮೂರ್ನಾಲ್ಕು ವರ್ಷಗಳಿಗೆ ಒಂದು ಸಿನಿಮಾ ಕೊಡುತ್ತಾರೆ ಗೊತ್ತಿಲ್ಲ. ಇವರಿಗೆ ಬೇಕಾದಾಗ ಸಿನಿಮಾ ಮಾಡಿದರೆ ಆಗ ಜನರು ಥಿಯೇಟರ್ ಗೆ ಬರುತ್ತಾರಾ? ಇದನ್ನು ಪ್ರಶ್ನಿಸುವವರೇ ಇಲ್ಲ ನಿರ್ಮಾಪಕರಿಂದ ಹಿಡಿದು ಅಭಿಮಾನಿಗಳವರಿಗೆ ಇದೇ ಪ್ರಶ್ನೆ. ಯಶ್ ಪ್ರಶಾಂತ್ ನೀಲ್ ಗೆ ಮಾತ್ರವಲ್ಲ ಎಲ್ಲಾ ಸ್ಟಾರ್ ಹೀರೋಗಳಿಗೂ ಈ ಮಾತು ಅನ್ವಯಿಸುತ್ತದೆ.
ನಾವು ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಮಾಡಿ ಕನ್ನಡಿಗರನ್ನು ಮನಪೂರ್ತಿಯಾಗಿ ರಂಜಿಸಿದರೆ ಸಾಕು, ,18 ಭಾಷೆಗಳಿಗೂ ಅರ್ಥ ಮಾಡಿಸುತ್ತೇನೆ ಎಂದರೆ ಹೋಗುತ್ತಾರೆ. ಹೋಗಲಿ ಆದರೆ ಸಿನಿಮಾದಿಂದ ದೂರ ಹೋಗುವುದು ಬೇಡ ಜನ ಹೀರೋಗಳಿಗೆ ಆಗಲಿ ಡೈರೆಕ್ಟಾಗಿ ಆಗಲಿ ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ ಮರಳಿ ಅವರಿಂದ ಕೊಡಲು ಸಾಧ್ಯವಾಗುವುದು ಸಿನಿಮಾ ಅಷ್ಟೇ. ಆದರೆ ಅದನ್ನೇ ಮರೆತು ಹೋಗುತ್ತಿದ್ದಾರೆ ಎನ್ನುವುದೇ ಬೇಸರ ಎಂದು ಇಂದಿನ ದಿನಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.