ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ ಈ ಸಂಸ್ಥೆಯಿಂದ ಸಿಗಲಿದೆ ಬರೊಬ್ಬರಿ 24,000 ಸ್ಕಾಲರ್ಶಿಪ್ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ. ಪ್ರಸ್ತುತ ಜಗತ್ತಿನಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯ ಎನ್ನುವುದನ್ನು ಅರಿತಿರುವುದರಿಂದ ಸರ್ಕಾರಗಳು ಕೂಡ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತಿದೆ. ಕಡ್ಡಾಯ ಶಿಕ್ಷಣ ನೀತಿ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ಇವುಗಳ ಜೊತೆ ವಿದ್ಯಾರ್ಥಿ ವೇತನ ಆಗ ಪ್ರೋತ್ಸಾಹ ಧನವನ್ನು ಕೂಡ ನೀಡುತ್ತಿವೆ.

ಸರ್ಕಾರ ಮಾತ್ರವಲ್ಲದೆ ಕೆಲ ಖಾಸಗಿ ಸಂಸ್ಥೆಗಳು ಕೂಡ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈಗ ಅದೇ ರೀತಿಯಾಗಿ ಪ್ರತಿಷ್ಠಿತ ಬ್ರಾಂಡ್ ಸಂತೂರ್, ವಿಪ್ರೋ ಕಂಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆ ಸಹಯೋಗದೊಂದಿಗೆ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್‌ ಶಿಪ್ ನೀಡಲು ಮುಂದಾಗಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಅವರ ಭವಿಷ್ಯವನ್ನು ಭದ್ರಗೊಳಿಸುವ ಮತ್ತು ಆಕೆಯನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಸಂಸ್ಥೆ ಕಳೆದ 7 ವರ್ಷಗಳಿಂದ ಈ ರೀತಿಯಾಗಿ ಹೆಣ್ಣು ಮಕ್ಕಳಿಗೆ ಸ್ಕಾಲರ್ಶಿಪ್ ವಿತರಿಸಿಕೊಂಡು ಬಂದಿದೆ. ಪ್ರತಿ ವರ್ಷ ಅರ್ಹ 1000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಂತೋಷ್ ಸ್ಕಾಲರ್ಶಿಪ್ ಪಡೆಯುತ್ತಾರೆ.

ಅಂತೆಯೇ ಈ ಶೈಕ್ಷಣಿಕ ವರ್ಷದಲ್ಲೂ ವಿದ್ಯಾರ್ಥಿ ವೇತನಕ್ಕಾಗಿ ಆರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಮಾನದಂಡಗಳನ್ನು ಪೂರೈಸುವ ಹೆಣ್ಣು ಮಕ್ಕಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಂತೂರ್ ಸ್ಕಾಲರ್ಶಿಪ್ ಪಡೆಯಲು ನೋಂದಾಯಿಸಿಕೊಳ್ಳಬಹುದು. ಈ ಅಂಕಣದಲ್ಲಿ ಅರ್ಜಿ ಸಲ್ಲಿಸುವುದರ ಕುರಿತಾದ ಕೆಲ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.

ಹೆಸರು:- ಸಂತೂರ್ ಸ್ಕಾಲರ್ ಶಿಪ್ 2023-24.
ವಿದ್ಯಾರ್ಥಿ ವೇತನದ ಮೊತ್ತ:- ವಾರ್ಷಿಕವಾಗಿ 24,000

ಷರತ್ತುಗಳು:-
● ವಿದ್ಯಾರ್ಥಿನಿಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ,
● ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಮತ್ತು ಛತ್ತೀಸ್ ಗಡ ರಾಜ್ಯದ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದು.
● ದ್ವಿತೀಯ PUC ಪರೀಕ್ಷೆಯನ್ನು ಉತ್ತೀರ್ಣವಾಗಿ ವಿದ್ಯಾರ್ಥಿನಿಯು ಪೂರ್ಣ ಪ್ರಮಾಣದ ಪದವಿ ಶಿಕ್ಷಣ ಪಡೆಯಲು ದಾಖಲಾಗಿರಬೇಕು.
● ಕಡ್ಡಾಯವಾಗಿ ವಿದ್ಯಾರ್ಥಿನಿಯ ಹತ್ತನೇ ತರಗತಿ ಹಾಗೂ ದ್ವಿತೀಯ PUC ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.

ಬೇಕಾಗುವ ದಾಖಲೆಗಳು:-
● ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
● ಅರ್ಜಿದಾರರ ಪಾಸ್‌ಬುಕ್‌ನ ಪ್ರತಿ
● ಆಧಾರ್ ಕಾರ್ಡ್ ಪ್ರತಿ
● 10ನೇ ತರಗತಿಯ ಪ್ರಮಾಣಪತ್ರದ ನಕಲು ಪ್ರತಿ
● 12ನೇ ತರಗತಿಯ ಪ್ರಮಾಣಪತ್ರದ ನಕಲು ಪ್ರತಿ
● ಆದಾಯ ಪ್ರಮಾಣ ಪತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ

ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಮೊದಲು ನಿಮ್ಮ ಇಮೇಲ್/ಮೊಬೈಲ್ ಸಂಖ್ಯೆ/Gmail ಖಾತೆಯಿಂದ Buddy4Study ನಲ್ಲಿ ನೋಂದಾಯಿಸಿ ID ಪಡೆಯಿರಿ.
● ನಿಮ್ಮ ನೋಂದಾಯಿತ ID ಯೊಂದಿಗೆ Buddy4Study ಗೆ ಲಾಗಿನ್ ಮಾಡಿ, ಅರ್ಜಿ ಲಿಂಕ್ ಕ್ಲಿಕ್ ಮಾಡಿ, ಸಂತೂರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2023-24 ಪೇಜ್ ಓಪನ್ ಆಗುತ್ತದೆ.
● ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
● ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಬ್ಮಿಟ್ ಕೊಡಿ ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪತ್ರ ಪಡೆದುಕೊಳ್ಳಿ ಅಥವಾ ರೆಫರೆನ್ಸ್ ನಂಬರ್ ಬರೆದುಕೊಳ್ಳಿ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಅಕ್ಟೋಬರ್ 2023

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now