ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ಕೆಲವೊಂದು ವಿಚಾರಗಳನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಒಬ್ಬ ಮನುಷ್ಯನ ಮ.ರಣದ ನಂತರ ಆತನ ಆತ್ಮ ಏನಾಗುತ್ತದೆ ಎನ್ನುವುದನ್ನು ಯಾವ ಟೆಕ್ನಾಲಜಿ ಕೂಡ ಕಂಡು ಹಿಡಿಯಲಾರದು. ಆದರೆ ಒಂದು ಸಂಶೋಧನೆಯಲ್ಲಿ ಮನುಷ್ಯ ಮ.ರಣ ಹೊಂದುವ ಮುನ್ನ ಹಾಗೂ ಮ.ರಣ ಹೊಂದಿದ ತಕ್ಷಣ ದೇಹದ ತೂಕ 240 ಗ್ರಾಂ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ.
ಹಾಗಾದರೆ ಆ ಆತ್ಮದ ತೂಕ ಅಷ್ಟಿರಬಹುದಾ ಎಂದು ಕೆಲವರ ಅಂದಾಜು. ಆದರೆ ಇದಕ್ಕೆ ಯಾವುದೇ ಸ್ಪಷ್ಟ ನಿದರ್ಶನ ಇಲ್ಲ ಯಾಕೆಂದರೆ ಆತ್ಮ ಎನ್ನುವುದು ಕಣ್ಣಿಗೆ ಕಾಣದು ನಾವು ಸಿನಿಮಾಗಳಲ್ಲಿ ಮಾತ್ರ ಈ ರೀತಿಯ ಊಹೆಗಳನ್ನು ನೋಡಿದ್ದೇವೆ. ಆದರೆ ಬರಿಕಣ್ಣಿಗೆ ಮಾತ್ರವಲ್ಲದೆ ಯಾವುದೇ ಎಕ್ಯುಪ್ಮೆಂಟ್ ಕೂಡ ಆತ್ಮವನ್ನು ಹೀಗೆ ಇದೆ ಎಂದು ತೋರಿಸಲಾರದು.
ಪುರಾಣಗಳಲ್ಲಿ ಆತ್ಮದ ಬಗ್ಗೆ ಉಲ್ಲೇಖ ಇದೆ. ಅದರಲ್ಲೂ ಗರುಡ ಪುರಾಣದಲ್ಲಿ ಹುಟ್ಟು ಸಾವು, ಸಾವಿನ ನಂತರದ ಯಾನ ಹಾಗೂ ಆತ್ಮ ಇವುಗಳ ಕುರಿತ ಹೆಚ್ಚು ವಿಷಯ ಇರುವುದರಿಂದ ಗರುಡ ಪುರಾಣದಲ್ಲಿ ಆತ್ಮದ ಕುರಿತು ಇರುವ ಕೆಲ ಪ್ರಮುಖ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಉದಾಹರಣೆಯೊಂದಿಗೆ ಹೇಳುವುದಾದರೆ ನೀವು ಮಲಗಿ ಗಾಢವಾಗಿ ನಿದ್ರಿಸುತ್ತಿರುವಾಗ ನಿಮ್ಮ ಕಣ್ಣನ್ನು ಮುಚ್ಚಿದರು ನಿಮ್ಮ ದೇಹ ವಿಶ್ರಾಂತಿ ಸ್ಥಿತಿಯಲ್ಲಿ ಇದ್ದರೂ ಕೂಡ ನಿಮಗೆ ಕನಸು ಬೀಳುತ್ತಿರುತ್ತದೆ.
ಆ ಕನಸಿನಲ್ಲಿ ನೀವು ಯಾವುದೋ ಜಾಗಕ್ಕೆ ಹೋಗಿರುತ್ತೀರಿ ಅಲ್ಲಿ ನಡೆಯುತ್ತಿರುವುದೆಲ್ಲ ನಿಜವಾಗಿಯೇ ನಡೆಯುತ್ತಿದೆ ಎನ್ನುವ ರೀತಿ ನಿಮಗೆ ಅನಿಸುತ್ತಿರುತ್ತದೆ ಅಷ್ಟರಲ್ಲೇ ಸಡನ್ ಆಗಿ ಶಾ’ಕ್ ಆಗಿ ಎಚ್ಚರವಾಗುತ್ತಿದೆ ಒಂದೇ ಸೆಕೆಂಡಿಗೆ ಎಲ್ಲವೂ ಮಾಯವಾಗುತ್ತದೆ. ಹಾಗಾದರೆ ಈ ರೀತಿ ಯಾಕಾಯ್ತು ಎಂದು ಪುರಾಣದ ವಿವರಣೆ ನೋಡುವುದಾದರೆ ಇದು ನಿಮ್ಮ ಆತ್ಮದ ಸಂಚಾರವಾಗಿದೆ.
ನೀವು ಮಲಗಿದ್ದರೂ ನಿಮ್ಮ ಆತ್ಮ ಎಚ್ಚರದಿಂದ ಇರುತ್ತದೆ ಆಗ ನಿಮ್ಮ ಮೆದುಳು ಹಾಗೂ ಹೃದಯ ಸಹ ಕಾರ್ಯ ಪ್ರವೃತ್ತಿಯಲ್ಲಿರುತ್ತದೆ. ಆಗ ಆತ್ಮ ತನಗೆ ಇಷ್ಟ ಆದ ಆ ಸ್ಥಳಕ್ಕೆ ಹೋಗಿ ಸಂಚಾರ ಮಾಡಿ ಬರುತ್ತದೆ, ಹಾಗಾಗಿ ನಿಮ್ಮ ಕನಸಿನಲ್ಲಿ ಆ ಸ್ಥಳಗಳು ಬರುತ್ತಿವೆ. ಆದರೆ ಈಗ ಅದನ್ನು ಸಬ್ ಕಾನ್ಷಿಯಸ್ ಮೆಮೊರಿ ಪವರ್ ಎಂದೆಲ್ಲ ಸಬೂಬು ಕೊಟ್ಟು ವಾದಿಸುತ್ತಾನೆ ಅದೇನಿದ್ದರೂ ಪುರಾಣದಲ್ಲಿ ಈ ರೀತಿ ಅಂಶ ಇರುವುದಂತೂ ನಿಜ.
ಮತ್ತೊಂದು ವಿಚಾರವೇನೆಂದರೆ ನಾವು ಮಲಗಿದಾಗ ಆತ್ಮ ದೇಹದಿಂದ ಹೊರ ಹೋಗಿ ಸಂಚಾರ ಮಾಡಿಕೊಂಡು ಮತ್ತೆ ಬಂದು ನಮ್ಮ ದೇಹವನ್ನು ಸೇರುತ್ತದೆ. ಆದರೆ ಒಮ್ಮೆ ದೇಹವು ಜೀವ ಕಳೆದುಕೊಂಡ ಆತ್ಮ ದೇಹವನ್ನು ಬಿಟ್ಟು ಹೋದರೆ ಮತ್ತೆ ಆ ದೇಹವನ್ನು ಸೇರುವುದಿಲ್ಲ. ಯಾಕೆಂದರೆ ನಾವು ನಿದ್ರಿಸುವಾಗ ದೇಹಕ್ಕೆ ಶಕ್ತಿ ಇತ್ತು ಮೆದುಳು ಹೃದಯ ಎಲ್ಲವೂ ಕೆಲಸ ಮಾಡುತ್ತಿದ್ದ ಕಾರಣ ಆತ್ಮ ಮತ್ತೆ ದೇಹಕ್ಕೆ ಸೇರುವುದಕ್ಕೆ ದೇಹ ಜಾಗೃತವಾಗಿತ್ತು.
ಆದರೆ ಪ್ರಾಣ ಹೋದಾಗ ಇದೆಲ್ಲ ನಿಶ್ಚಲವಾಗುಬಿಡುವುದರಿಂದ ಆಗ ಹೋದ ಆತ್ಮ ಮತ್ತೆ ಬಂದು ಆ ದೇಹ ಸೇರಲು ಸಾಧ್ಯವಾಗುವುದಿಲ್ಲ. ಆನಂತರ ಅದು ಬೇರೆ ದೇಹವನ್ನು ಹುಡುಕಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಪಾಪ ಅಥವಾ ಪುಣ್ಯಗಳು ಹೆಚ್ಚಾಗಿದ್ದರೆ ಅದರ ಅನುಸಾರ ಸ್ವರ್ಗ ಅಥವಾ ನರಕ ಸೇರುತ್ತದೆ ಎಂದು ಸಹ ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!