ಕ್ಯಾನ್ಸರ್ ಎಂದರೆ ಹೊರಗಿನಿಂದ ದೇಹಕ್ಕೆ ಆಗುವ ಹಾನಿಯಲ್ಲ ದೇಹದ ಒಳಗಿನ ಒಂದು ಭಾಗ ಏನೋ ಸಮಸ್ಯೆಯಾಗಿ ಹಾಳಾಗಿರುವುದು ಎಂದರ್ಥ. ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯದಿಂದ ಇದು ಬರುವುದಿಲ್ಲ, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಇಲ್ಲ. ಇದು ಅದೇ ವ್ಯಕ್ತಿಯ ದೇಹಕ್ಕೆ ಸಂಬಂಧಪಟ್ಟ ಸಮಸ್ಯೆ ಆಗಿರುತ್ತದೆ ಕ್ಯಾನ್ಸರ್ ನಲ್ಲಿ ಹಲವಾರು ಹಂತಗಳು ಇರುತ್ತವೆ ಕ್ಯಾನ್ಸರ್ ಮೊದಲನೇ ಸ್ಟೇಜ್ ನಲ್ಲಿದೆ, ಕೊನೆ ಸ್ಟೇಜ್ ಹಾಗಾಗಿ ಬದುಕಲು ಸಾಧ್ಯತೆ ಕಡಿಮೆ ಈ ರೀತಿ ಮಾತನಾಡಿರುವುದನ್ನು ನಾವು ಕೇಳಿರುತ್ತೇವೆ.
ಹಾಗಾದರೆ ಈ ಸ್ಟೇಜ್ ಗಳು ಎಂದರೆ ಏನು ನಾವು ಯಾವ ಹಂತದಲ್ಲಿದ್ದಾಗ ಆಸ್ಪತ್ರೆಗೆ ಹೋಗಬೇಕು ಮತ್ತು ನಮಗೆ ಯಾವ ಲಕ್ಷಣಗಳಿಂದ ಕ್ಯಾನ್ಸರ್ ಆಗಿದೆ ಎನ್ನುವುದು ಗೊತ್ತಾಗುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ದೇಹದ ಒಳಗೆ ಬಾಯಿ ಅಥವಾ ಹೆಣ್ಣು ಮಕ್ಕಳಿಗೆ ಎದೆ ಭಾಗ ಅಥವಾ ಇನ್ಯಾವುದೋ ಕಡೆ ಒಂದಷ್ಟು ಜೀವಕೋಶಗಳು ಹಾನಿಗೆ ಒಳಪಟ್ಟಿರುತ್ತವೆ.
ಬಾಯಿಯಲ್ಲಿ ಆದರೆ ನಮಗೆ ಯಾವುದಾದರೂ ಶಾರ್ಪ್ ಟೀತ್ ಪದೇಪದೇ ತಾಕಿ, ಆ ಭಾಗ ಹಾನಿ ಆಗಿರಬಹುದು ಅಥವಾ ಅತಿಯಾದ ತಂಬಾಕು ಗುಟ್ಕ ಸೇವನೆಯಿಂದ ಬಾಯಿಯ ಭಾಗದಲ್ಲಿ ಗಂಟಾಗಿರಬಹುದು. ಈ ರೀತಿ ಗಂಟುಗಳು ಕಂಕುಳು ಎದೆ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಇದು ಆರಂಭಿಕ ಹಂತಗಳಲ್ಲಿ ಯಾವುದೇ ರೀತಿಯ ನೋವನ್ನು ತೋರಿಸಿಕೊಳ್ಳುವುದಿಲ್ಲ, ಕಡಲೆಕಾಳಿನ ಗಾತ್ರದಲ್ಲಿ ಗಂಟುಗಳು ಇರುತ್ತವೆ.
ನಮಗೆ ಈ ರೀತಿ ಗಂಟುಗಳ ಬಗ್ಗೆ ಅನುಮಾನ ಬಂದಾಗ ಹತ್ತಿರದಲ್ಲಿರುವ ವೈದ್ಯರನ್ನು ಸಂಪರ್ಕಿಸಿ ಅವರ ಸೂಚಿಸಿದ ಮೇಲೆ ಬಯೋಪ್ಸಿ (Biopsy) ಚಿಕಿತ್ಸೆಗೆ ಒಳಪಡಬೇಕು ಆಗ ಅದು ಕ್ಯಾನ್ಸರ್ ಸಂಬಂಧಿಸಿದಲ್ಲ ಎನ್ನುವುದನ್ನು ವೈದ್ಯರು ಗುರುತಿಸಿ ತಕ್ಷಣವೇ ತೆಗೆದು ಹಾಕುತ್ತಾರೆ ಇದು ಸ್ಟೇಜ್ 1.
ಇದಾದ ಮೇಲೆ ನೀವು ಅದನ್ನು ತಕ್ಷಣ ತೋರಿಸಿಕೊಳ್ಳದೆ ಒಂದು ತಿಂಗಳ ಕಾಲ ನಿಧಾನ ಮಾಡಿದ್ದೀರಾ ಎಂದರೆ ಆ ಜೀವಕೋಶಗಳು ಸುತ್ತಲೂ 1cm ಸ್ಪ್ರೆಡ್ ಆಗಿ ಗಂಟು ದೊಡ್ಡದಾಗುತ್ತದೆ ಮತ್ತು ಬೆಳೆಯುವುದಕ್ಕಾಗಿ ರಕ್ತನಾಳಗಳನ್ನು ಕೂಡ ಬಳಸಿಕೊಳ್ಳುತ್ತದೆ. ಈ ಹಂತದಲ್ಲಿ ಕಡಲೆಕಾಯಿ ಗಾತ್ರವಿದ್ದ ಬೆಟ್ಟದ ನೆಲ್ಲಿಕಾಯಿ ಗಾತ್ರಕ್ಕೆ ಗ ಬೆಳವಣಿಗೆ ಹೊಂದಿರುತ್ತದೆ. ಸ್ಟೇಜ್ 2 ಇದ್ದಾಗಲೂ ಸಹ ಕಿಮಿಯೋಥೆರಪಿ(chemotherapy) ಮತ್ತಿತರ ಚಿಕಿತ್ಸೆ ಕೊಟ್ಟು ಇದನ್ನು ಗುಣಪಡಿಸುತ್ತಾರೆ.
ನೀವು ಈ ಹಂತದಲ್ಲಿ ವೈದ್ಯರನ್ನು ಸಂಪರ್ಕಿಸಲು ನಿರ್ಲಕ್ಷ ಮಾಡಿದರೆ ಸ್ಟೇಜ್ 3ಕ್ಕೆ ಹೋಗಿ ಇನ್ನಷ್ಟು ಭಾಗಗಳಿಗೂ ಸ್ಪ್ರೆಡ್ ಆಗಿರುತ್ತದೆ. ಕೊನೆ ಹಂತ ಸ್ಟೇಜ್ 4 ಇದರಲ್ಲಿ ವ್ಯಕ್ತಿಯನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ ಆತನು ಜೀವಂತವಾಗಿ ಇರುವಂತೆ ಚಿಕಿತ್ಸೆಗಳಿಂದ ಮೆಡಿಸನ್ ಇಂದ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಅಷ್ಟೇ.
ಕೆಲವರು ನಾವು ಕ್ಯಾನ್ಸರ್ ಚಿಕಿತ್ಸೆಗೆ ಒಳಪಟ್ಟಿದ್ದೆವು, ಆದರೂ ಕೂಡ ಮತ್ತೆ ಬಂದಿದೆ ಎನ್ನುತ್ತಾರೆ ಅದಕ್ಕೆ ಇದೇ ಕಾರಣವನ್ನು ಸ್ಪಷ್ಟ ಉದಾಹರಣೆಯೊಂದಿಗೆ ಹೇಳಬೇಕು ಎಂದರೆ ನಿಮ್ಮ ಮನೆಯಲ್ಲಿ ಹೂವಿನ ತೋಟದಲ್ಲಿ ಒಂದು ಹೂವಿನ ಗಿಡ ಹಾಕಿರುತ್ತೀರಾ ಅದರ ಪಕ್ಕ ಕಳೆ ಗಿಡ ಬರುತ್ತದೆ ಅದು ಒಂದು ಎರಡು ದಿನದ ಗಿಡ ಆಗಿರುವಾಗಲೇ ತೆಗೆದು ಹಾಕಿದರೆ ಏನು ಸಮಸ್ಯೆ ಇಲ್ಲ ನೀವು ಒಂದು ವಾರ ನಿರ್ಲಕ್ಷ್ಯ ಮಾಡಿದರೆ ಅದು ಬೇರೂರುತ್ತದೆ.
ಮೂರೂ ತಿಂಗಳ ಕಾಲ ನಿರ್ಲಕ್ಷ ಮಾಡಿದರೆ ಅದು ಹೂವು ಬಿಟ್ಟು ಕಾಯಿ ಹಾಕಿ ಅದರ ಬೀಜಗಳು ಉದುರಿ ಮತ್ತೆ ಇನ್ನಷ್ಟು ದೂರ ಅದು ಹಬ್ಬಿರುತ್ತದೆ. ಒಂದು ವೇಳೆ ನೀವು ಗಮನಿಸಿಕೊಳ್ಳದೆ ವರ್ಷಾನುಗಟ್ಟಲೆ ಬಿಟ್ಟಾಗ ಅದು ಇಡೀ ಜಮೀನಿನ ಪೂರ್ತಿ ಹಬ್ಬಿರುತ್ತದೆ ಆಗ ಜಮೀನನ್ನು ಮೊದಲ ಹಂತಕ್ಕೆ ತರುವುದು ಎಷ್ಟು ಕಷ್ಟ. ಇದನ್ನೇ ಕ್ಯಾನ್ಸರ್ ಕೂಡ ಅನ್ವಯಿಸಬಹುದು ಆದ್ದರಿಂದ ಇಂತಹ ಯಾವುದೇ ಅನುಮಾನ ಬಂದಾಗಲೂ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.