ಸಾಲಬಾದೆ, ಹಣಕಾಸಿನ ಕೊರತೆ ಇದ್ದರೆ ತಾಮ್ರದ ಚೊಂಬಿನಲ್ಲಿ ಈ ಉಪಾಯ ಮಾಡಿ ಸಾಕು.! ಸಂಕಷ್ಟಗಳೆಲ್ಲಾ ದೂರಾಗಿ ಧನಲಾಭವಾಗುತ್ತೆ.!

 

WhatsApp Group Join Now
Telegram Group Join Now

ಪ್ರಸ್ತುತ ಕಾಲದಲ್ಲಿ ಹಣಕಾಸಿನ ಮೇಲೆ ಎಲ್ಲವೂ ನಡೆಯುತ್ತಿರುವುದು. ಪ್ರತಿನಿತ್ಯದ ಖರ್ಚಿನಿಂದ ಹಿಡಿದು ನಮ್ಮ ದೊಡ್ಡ ದೊಡ್ಡ ಕನಸುಗಳವರೆಗೂ ಕೂಡ ಪ್ರಿಯೊಂಕ್ಕೂ ಹಣದ ಅವಶ್ಯಕತೆ ಇದ್ದೇ ಇದೆ. ಹಣ ಪಡೆಯಲು ಇರುವ ಒಂದೇ ಮಾರ್ಗ ಎಂದರೆ ಕಷ್ಟ ಪಟ್ಟು ದುಡಿಯುವುದು.

ಆದರೆ ಕೆಲವೊಮ್ಮೆ ಹಣೆಬರಹ ಎಷ್ಟು ಕೆಟ್ಟಿರುತ್ತದೆ ಎಂದರೆ ನಾವು ಎಷ್ಟೇ ಕಷ್ಟ ಪಟ್ಟು ದುಡಿಯುತ್ತಿದ್ದರೂ ಕೂಡ ನಮ್ಮ ಮನೆಗಳಲ್ಲಿ ಹಣ ಉಳಿಯುವುದಿಲ್ಲ. ಒಂದಲ್ಲ ಒಂದು ಅನಿರೀಕ್ಷಿತ ಖರ್ಚುಗಳು ಎದುರಾಗಿ ಹಣಕಾಸಿನ ನ’ಷ್ಟ ಆಗುತ್ತದೆ. ಜೊತೆಗೆ ನಾವು ನಮಗೆ ಕಷ್ಟ ಇರುವಾಗ ಯಾರಿಂದಲಾದರೂ ಸಾಲ ಪಡೆದಿದ್ದರೆ ಆ ಋಣ ತೀರಿಸಲಾಗುವುದಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿಕೊಂಡು ನರಳುತ್ತೇವೆ.

ಈ ರೀತಿಯ ಸಮಸ್ಯೆಗಳನ್ನು ತಿಳಿಸುತ್ತಿದ್ದರೆ ಇವುಗಳ ಪರಿಹಾರಕ್ಕಾಗಿ ಈಗ ನಾವು ಹೇಳುವ ಈ ಉಪಾಯದ ಮೂಲಕ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸಿ. ಯಾವುದೇ ಒಂದು ಕಾರ್ಯ ಮಾಡಬೇಕಾದರೂ ಮನಸ್ಸಿನಲ್ಲಿ ಅಚಲವಾದ ನಂಬಿಕೆ ಹಾಗೂ ಶುದ್ಧವಾದ ಮನಸ್ಸು ಇರುವುದು ಮುಖ್ಯ.

ಹಾಗಾಗಿ ಯಾವುದೇ ಅನುಮಾನವಿಲ್ಲದೆ ಸಂಪೂರ್ಣವಾಗಿ ದೇವರ ಮೇಲೆ ಭಾರ ಹಾಕಿ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಈ ಆಚರಣೆ ಮಾಡಿ. ಯಾವುದೇ ಅಡ್ಡ ಪರಿಣಾಮಗಳು ಇಲ್ಲದೇ ಮನೆಗೆ ಹಾಗೂ ಮನಸ್ಥಿತಿ ಸಕಾತ್ಮಕವಾದ ಭಾವನೆ ತರುವ ನಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹಾರ ಮಾಡುವ ಶಕ್ತಿಯು ಈ ಉಪಾಯಕ್ಕೆ ಇದೆ.

ಇದನ್ನು ಮಾಡಲು ಒಂದು ತಾಮ್ರದ ಚೊಂಬು ಇರಬೇಕು, ಆ ಚೊಂಬನ್ನು ಚೆನ್ನಾಗಿ ಶುದ್ಧಿಗೊಳಿಸಿ ಇಟ್ಟುಕೊಳ್ಳಬೇಕು. ಪ್ರತಿ ಶುಕ್ರವಾರ ಹಾಗೂ ಮಂಗಳವಾರದಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಈ ಉಪಾಯವನ್ನು ಮಾಡಬೇಕು ನಿಮ್ಮ ಮನೆ ದೇವರ ಹಾಗೂ ಇಷ್ಟದೇವರ ಪ್ರಾರ್ಥನೆ ಮಾಡಿ ಮನೆಯಲ್ಲಿ ಪೂಜೆ ಮಾಡಿ ನಂತರ ಮನೆಯ ಈಶಾನ್ಯ ಮೂಲೆಯಲ್ಲಿ ಅಷ್ಟ ಪದ್ಮಗಳ ರಂಗೋಲಿಯನ್ನು ಹಾಕಬೇಕು.

ಆ ರಂಗೋಲಿಯ ಮೇಲೆ ಈ ತಾಮ್ರದ ಚೊಂಬನ್ನು ಇಡಬೇಕು. ಇಡುವುದಕ್ಕೂ ಮುನ್ನ ಪೂರ್ತಿ ಶುದ್ಧವಾದ ನೀರನ್ನು ತುಂಬಿಸಿ ಅದಕ್ಕೆ ಪಚ್ಚಕರ್ಪೂರ ಪುಡಿ ಮಾಡಿ ಅರಿಶಿನ ಕುಂಕುಮ ಅಕ್ಷತೆ ಹಾಗೂ ಒಂದು ನಾಣ್ಯವನ್ನು ಹಾಕಿ ಒಂದು ಹೂವು ಇಡಿ ಮತ್ತು ಆ ಚೊಂಬಿಗೆ ಶ್ರೀಗಂಧದಿಂದ ಸ್ವಸ್ತಿಕ್ ಚಿಹ್ನೆ ಬರೆಯಿರಿ ಮತ್ತು ಅದಕ್ಕೂ ಅರಿಶಿನ ಹಾಗೂ ಕುಂಕುಮ ಹಚ್ಚಿ.

ಈಗ ಅದನ್ನು ರಂಗೋಲಿ ಮಧ್ಯದಲ್ಲಿ ಇಟ್ಟು ಮಹಾಲಕ್ಷ್ಮಿಯನ್ನು ನಿಮ್ಮ ಸಮಸ್ಯೆ ಪರಿಹಾರ ಮಾಡುವೆ ಎಂದು ಪ್ರಾರ್ಥಿಸಿಕೊಳ್ಳಿ. ಮತ್ತು 27 ಬಾರಿ ಓಂ ಐಂ ಹ್ರೀಂ ಶ್ರೀಂ ಲಲಿತಾ ದೇವಿಯ ನಮಃ ಎಂದು ಹೇಳುತ್ತ ಮನದಲ್ಲಿ ಧ್ಯಾನ ಮಾಡಬೇಕು. ನೀವು ಇದನ್ನು ಶುಕ್ರವಾರ ಮುಂಜಾನೆ ಮಾಡಿದರೆ ಭಾನುವಾರ ಸಂಜೆವರೆಗೂ ಇದು ಹೀಗೆ ಇರಲಿ.

ಸೋಮವಾರ ಸಂಜೆ 5ರ ಸಮಯದಲ್ಲಿ ಇದನ್ನು ತೆಗೆದುಕೊಂಡು ಮನೆ ಪೂರ್ತಿ ಪ್ರೋಕ್ಷಣೆ ಮಾಡಿ ಉಳಿದ ನೀರನ್ನು ತುಳಸಿ, ಗಿಡಕ್ಕೆ ಹಾಕಿ. ಮತ್ತೆ ತೊಳೆದು ಇಟ್ಟುಕೊಂಡು ಮಂಗಳವಾರ ಬೆಳಿಗ್ಗೆ ಮತ್ತೆ ಇದನ್ನು ಮಾಡಬೇಕು ಮತ್ತು ಗುರುವಾರ ಸಂಜೆ ತೆಗೆದು ಶುಕ್ರವಾರ ಬೆಳಗ್ಗೆ ಇದನ್ನು ಪುನಃ ಮಾಡಬೇಕು. ಈ ರೀತಿ ಆಚರಣೆಯನ್ನು ಮಾಡುತ್ತಾ ಬನ್ನಿ ಮಹಾಲಕ್ಷ್ಮಿ, ಮಹಾಸರಸ್ವತಿ ಹಾಗೂ ಮಹಾದೇವಿಯ ಕೃಪಾಕಟಾಕ್ಷದಿಂದ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now