IAS, IPS ಈ ಹೆಸರು ಕೇಳಿದ ತಕ್ಷಣ ಮನ ರೋಮಾಂಚನವಾಗುತ್ತದೆ. ದೇಶದ ಅತ್ಯುನ್ನತ ನಾಗರಿಕ ಹುದ್ದೆಯಾದ ಈ ಗೆಜೆಟೆಡ್ ಶ್ರೇಣಿಯ ಹುದ್ದೆ ಪಡೆಯಲು ಆಕಾಂಕ್ಷಿಗಳು ತಪಸ್ಸನ್ನೇ ಮಾಡುತ್ತಿರುತ್ತಾರೆ. ಒಂದು ಎರಡು ವರ್ಷಗಳು ಮಾತ್ರವಲ್ಲದೆ ಪೂರ್ತಿಯಾಗಿ ಅವರ ಅಟೆಂಪ್ಟ್ ಮುಗಿಯೋವರೆಗೂ ಛಲಬಿಡದೆ ಪ್ರಯತ್ನಿಸಿ ಕೊನೆಯ ಬಾರಿ ಗೆದ್ದವರಿದ್ದಾರೆ.
10ನೇ ತರಗತಿಗೆ ಬರುತ್ತಿದ್ದಂತೆ ತಾನು ಜಿಲ್ಲಾಧಿಕಾರಿಯಾಗಲೇಬೇಕೆಂದು ಹಠ ತೊಟ್ಟು ಪದವಿ ಮುಗಿಯುವುದರ ಒಳಗೆ ತಯಾರಾಗಿ ಮೊದಲ ಅಟ್ಟೆಂಪ್ಟ್ ನಲ್ಲಿಯೇ ಪಾಸಾಗೆ ಹುದ್ದೆ ಅಲಂಕರಿಸಿದ ಉದಾಹರಣೆಗಳು ಇವೆ. ಯಾವುದೋ ಒಂದು ಕುಟುಂಬದ ಅಭ್ಯರ್ಥಿ UPSC ಪರೀಕ್ಷೆ ಬರೆದು ಆಯ್ಕೆಯಾಗಿ ಬಿಟ್ಟರೆ ಆತನ ಕುಟುಂಬ, ಸ್ನೇಹಿತರು ಮಾತ್ರವಲ್ಲದೆ ಇಡೀ ಗ್ರಾಮ, ತಾಲ್ಲೂಕು, ಜಿಲ್ಲೆಯೇ ಕೊಂಡಾಡುತ್ತದೆ. ಆದರೆ ಇದನ್ನು ಅತ್ಯಂತ ಕಠಿಣ ಪರೀಕ್ಷೆ ಎಂದು ಬಿಂಬಿಸಲಾಗಿದೆ. ಶ್ರದ್ಧೆ, ಏಕಾಗ್ರತೆ, ಕಠಿಣ ಪರಿಶ್ರಮ, ಸ್ಪಷ್ಟ ಗುರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು.
● 10ನೇ ತರಗತಿ, PUC, ಡಿಗ್ರಿಯಲ್ಲಿ ಮೂರು ಮೂರು ಬಾರಿ ಫೇಲ್ ಆದವರು ಈಗ IAS,IPS,IRS ಅಧಿಕಾರಿಗಳಾಗಿದ್ದಾರೆ. ಅಷ್ಟಕ್ಕೂ ಇದರಲ್ಲಿ ವಿಶೇಷವಾದದ್ದು ಏನನ್ನು ಕೇಳುವುದಿಲ್ಲ. ಪದವಿವರೆಗೂ ವಿದ್ಯಾಭ್ಯಾಸ ಮಾಡಿದ್ದ ವಿಷಯಗಳಷ್ಟೇ ಇರುತ್ತವೆ, ಆದರೆ ಅವುಗಳ ಬಗ್ಗೆ ಆಳವಾದ ಜ್ಞಾನ ನಿಮಗಿರಬೇಕಾಗುತ್ತದೆ. ನಿಮ್ಮ ನಾಲೆಡ್ಜ್ ನಷ್ಟೇ ನಿಮ್ಮ ಆಟಿಟ್ಯೂಡ್ ಈ ಪರೀಕ್ಷೆಗೆ ಮುಖ್ಯವಾಗುತ್ತದೆ.
● ವರ್ಷಕ್ಕೆ ಒಮ್ಮೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಂದು ಹಂತದಿಂದ ಮತ್ತೊಂದು ಹಂತದ ಪರೀಕ್ಷೆಗೆ ಕೆಲವು ತಿಂಗಳುಗಳು ತಯಾರಾಗಲು ಸಮಯವಕಾಶ ಕೂಡ ಇರುತ್ತದೆ, ಈ ಪರೀಕ್ಷೆಯ ಒಟ್ಟು ಅಂಕಗಳಿಗೆ ಅರ್ಧ ಅಂಕಗಳನ್ನು ಗಳಿಸಿದರೆ ಸಾಕು ನಿಮ್ಮ ಹೆಸರು ಮೆರಿಟ್ ಲಿಸ್ಟ್ ನಲ್ಲಿ ಇರುವ ಸಾಧ್ಯತೆ ಇದೆ.
● 1000 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಗಳನ್ನು ಎದುರಿಸುತ್ತಾರೆ. ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಫಿಲ್ಟರ್ ಆಗಿ ಕೊನೆ ತಲುಪಿದವರಿಗೆ ವಿಜಯಮಾಲೆ.
● ಕನ್ನಡದಲ್ಲೂ ಪರೀಕ್ಷೆ ಪಡೆಯಲು ಅವಕಾಶವಿದೆ, ಆದರೆ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಇರುತ್ತದೆ.
● ಪದವಿ ಪಡೆದ ಪ್ರತಿಯೊಬ್ಬರಿಗೂ ಕೂಡ ಈ ಪರೀಕ್ಷೆಗಳನ್ನು ಒಮ್ಮೆಯಾದರೂ ಬರೆಯಲೇಬೇಕು, ಇದರ ತಯಾರಿ ಶಿಸ್ತು ಬದ್ಧ ಜೀವನ ರೂಢಿಸುತ್ತದೆ.
ಈಗಂತೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡುವುದೇ ಒಂದು ದಂದೆ ಎನಿಸಿಬಿಟ್ಟಿದೆ. ಮಹಾನಗರಗಳಲ್ಲಿನ ಗಲ್ಲಿಗಳಲ್ಲೂ ಕೋಚಿಂಗ್ ಸೆಂಟರ್ ಗಳು ತಲೆ ಎತ್ತಿದೆ. ಆದರೆ ಶಾಲಾ ದಿನಗಳಲ್ಲಿ ಈ ಬಗ್ಗೆ ಸರಿಯಾದ ಗೈಡೆನ್ಸ್ ಇಲ್ಲದೆ ಇರುವುದು ಮತ್ತು ಪೋಷಕರಿಗೂ ಕೂಡ ಈ ಹುದ್ದೆಗಳ ಬಗ್ಗೆ ಮತ್ತು ಇವುಗಳ ನೇಮಕಾತಿ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದು ಟ್ಯಾಲೆಂಟ್ ಇದ್ದರೂ ಅನೇಕರು ಈ ಪರೀಕ್ಷೆಗಳಿಂದ ದೂರ ಉಳಿಯುವುದಕ್ಕೆ ಕಾರಣವಾಗಿದೆ.
ಮುಂದೊಂದು ದಿನ ಅವರು ಇಚ್ಛೆ ಪಟ್ಟರೂ ವಯೋಮಿತಿ ಮೀರಿ ಹೋದರೆ ಜೀವನಪೂರ್ತಿ ಪಶ್ಚಾತಾಪದಲ್ಲಿ ದುಃಖಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬ ಪೋಷಕರು ಹಾಗೂ ಶಿಕ್ಷಕರು ಈ ಹುದ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಈ ಮಾಹಿತಿ ತಿಳಿಸಿರಬೇಕು, ಸರಿಯಾದ ವಯಸಿನಲ್ಲಿ ಈ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಬೇಕು.
ಅಸಲಿಗೆ IAS, IPS ಪರೀಕ್ಷೆ ಎನ್ನುವುದು ಇರುವುದೇ ಇಲ್ಲ ಇವುಗಳನ್ನು ಒಟ್ಟಾರೆಯಾಗಿ ಸಿವಿಲ್ ಸರ್ವಿಸ್ ಎಕ್ಸಾಮ್ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಅಭ್ಯರ್ಥಿಗಳು ಪಡೆಯುವ ಅಂಕಗಳ ಆಧಾರದ ಮೇಲೆ ಅವರ ಪೋಸ್ಟ್ ನಿರ್ಧಾರವಾಗುತ್ತದೆ. ಈ ಪರೀಕ್ಷೆಗಳ ಕುರಿತ ಕೆಲ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ…
ಪರೀಕ್ಷೆ ನಡೆಸುವ ಸಂಸ್ಥೆ:- ಕೇಂದ್ರ ಲೋಕಸಭಾ ಆಯೋಗ (UPSC)
ಪರೀಕ್ಷೆಯ ಹಂತಗಳು:-
ಮೂರು ಹಂತಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ.
1. ಪ್ರಿಲಿಮ್ಸ್ ಪರೀಕ್ಷೆ
● ಅರ್ಜಿ ಸಲ್ಲಿಸುವ ಎಲ್ಲರಿಗೂ ಕೂಡ ಪ್ರಿಲಿಮ್ಸ್ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. 2 ಪೇಪರ್ ಇರುತ್ತದೆ ಒಂದೇ ದಿನದಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆ ನಡೆಯುತ್ತದೆ.
● ಮೊದಲ ಪೇಪರ್ ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು 200 ಅಂಕಗಳಿಗೆ ಬಹುನಿಷ್ಠ ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತದೆ.
● ಎರಡನೇ ಪೇಪರ್ ನಿಮ್ಮ ಇಂಗ್ಲಿಷ್ ಭಾಷಾಜ್ಞಾನ, ಅನಾಟಿಕಲ್ ಅಬಿಲಿಟಿ, ಡಿಸಿಷನ್ ಮೇಕಿಂಗ್, ಬೇಸಿನ್ ಮ್ಯಾಥ್ಸ್ ಸಂಬಂಧಿಸಿದ 80 ಪ್ರಶ್ನೆಗಳನ್ನು ಹೊಂದಿರುತ್ತದೆ.
● ತಪ್ಪಾದ ಉತ್ತರಗಳಿಗೆ 1/3 ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
ಈ ಅಂಕಗಳು ಮೆರಿಟ್ ನಿರ್ಧರಿಸುವುದಿಲ್ಲ, ಪಾಸ್ ಮಾರ್ಕ್ ಪಡೆದವರೆಲ್ಲ ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.
2.ಮುಖ್ಯ ಪರೀಕ್ಷೆ
● ಒಟ್ಟು 9 ಪೇಪರ್ ಗಳು.
● ನಿರಂತರವಾಗಿ 5 ದಿನಗಳ ಕಾಲ ಬೆಳಿಗ್ಗೆ, ಮಧ್ಯಾಹ್ನ ಈ ಪರೀಕ್ಷೆಗಳನ್ನು ಬರೆಯಬೇಕು
● ಇಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಅವುಗಳಿಗೆ ನಿರ್ಧರಿಸುವ ಅಂಕಗಳ ಆಧಾರದ ಮೇಲೆ ಉತ್ತರಗಳನ್ನು ಬರೆಯಬೇಕು.
● ಮೊದಲ ಎರಡು ಪೇಪರ್ ಕ್ವಾಲಿಫೈ ಪೇಪರ್ ಆಗಿರುತ್ತದೆ, ಇದು ಸಹ ಮೆರಿಟ್ ಗೆ ನಿರ್ಧಾರ ಆಗುವುದಿಲ್ಲ. ಆದರೂ ಕೂಡ ಕನಿಷ್ಠ ಅಂಕ ಗಳಿಸಿದರೆ ಮಾತ್ರ ಮುಂದಿನ ಪೇಪರ್ ಗಳು ಮೌಲ್ಯಮಾಪನಕ್ಕೆ ಅರ್ಹವಾಗುತ್ತವೆ.
1. ನಿಮ್ಮ ಭಾಷೆ 2.ಇಂಗ್ಲಿಷ್ ಪ್ರತಿ ಪೇಪರ್ ಗೆ 300 ಅಂಕಗಳು
3 ಮತ್ತು 4 ಪ್ರಬಂಧ ಬರೆಯುವ ಪೇಪರ್ ಗಳು ಆಗಿರುತ್ತದೆ. ಪ್ರತಿ ಪೇಪರ್ ಗೆ 250 ಅಂಕಗಳು.
ಜನರ ಸ್ಟಡೀಸ್ ಒಟ್ಟು 4 ಪೇಪರ್ ಇರುತ್ತದೆ ಪ್ರತಿ ಪೇಪರ್ ಗೆ 250 ಅಂಕಗಳು.
1 ಪೇಪರ್ ನಲ್ಲಿ ಕಲೆ, ಸಂಸ್ಕೃತಿ, ಇತಿಹಾಸ, ಭೌಗೋಳಿಕ ಹಾಗೂ ಸಾಮಾಜಿಕ ಸಂಬಂಧಿಸಿದ ಪ್ರಶ್ನೆಗಳು.
2 ಪೇಪರ್ ನಲ್ಲಿ ಆಡಳಿತ, ರಾಜಕೀಯ, ಸಾಮಾಜಿಕ ನ್ಯಾಯ, ಅಂತರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ.
3 ಪೇಪರ್ ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಪರಿಸರ ವಿಪತ್ತು ನಿರ್ವಹಣೆಗೆ ಸಂಬಂಧಪಟ್ಟದ್ದು ಇರುತ್ತದೆ.
4 ಪೇಪರ್ ನೈತಿಕತೆ, ಸಮಗ್ರತೆ ಕುರಿತ ಜನರ ಪ್ರಶ್ನೆಗಳನ್ನು ಹೊಂದಿರುತ್ತದೆ ಇದಕ್ಕೆ ನೀವು ಜನರಲ್ ಆಗಿಯೇ ಪ್ರಾಮಾಣಿಕವಾಗಿ ಉತ್ತರ ಬರೆದರೆ ಸಾಕು.
● ಆಪ್ಷನಲ್ ಪರೀಕ್ಷೆ ಎರಡು ಪೇಪರ್ ಹೊಂದಿರುತ್ತದೆ. ಎರಡಕ್ಕೂ 250 ಅಂಕಗಳು. ಇದರಲ್ಲಿ ನಿಮ್ಮ ಇಚ್ಛೆಯ ಸಬ್ಜೆಕ್ಟ್ ನ್ನು ನೀವು ಸೆಲೆಕ್ಟ್ ಮಾಡಬಹುದು. ನಿಮಗೆ ಹಿಡಿತವಿರುವ ವಿಷಯ ಆರಿಸಿಕೊಂಡರೆ ಸ್ಕೋರ್ ಮಾಡಲು ಅನುಕೂಲ.
● ಮುಖ್ಯ ಪರೀಕ್ಷೆ ಆದ ನಂತರ ಮೆರಿಟ್ ಲಿಸ್ಟ್ ಬಿಡುಗಡೆ ಆಗುತ್ತದೆ.
3. ಪರ್ಸನಾಲಿಟಿ ಟೆಸ್ಟ್
● 30 ನಿಮಿಷಗಳ ಸಾಮಾನ್ಯ ಸಂದರ್ಶನವಾಗಿರುತ್ತದೆ. ಇದರಲ್ಲಿ ನಿಮ್ಮ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ತೀರ ಕಡಿಮೆ. ನಿಮ್ಮ ಹಾವಭಾವ, ನೀವು ಉತ್ತರಿಸುವ ರೀತಿ, ನಿಮ್ಮ ಕಾನ್ಫಿಡೆನ್ಸ್ ಇತ್ಯಾದಿಗಳನ್ನು ಗಮನಿಸಲಾಗುತ್ತದೆ.
● ಇದು 275 ಅಂಕಗಳಿಗೆ ಇರುತ್ತದೆ.
ವಿದ್ಯಾರ್ಹತೆ ಮತ್ತು ವಯೋಮಿತಿ:-
● ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಈ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.
● ಇಂಜಿನಿಯರಿಂಗ್ ಮೆಡಿಕಲ್ ಪದವಿ ಪಡೆದವರು ಅರ್ಹರು.
1. ಸಾಮಾನ್ಯ ವರ್ಗಕ್ಕೆ ಸೇರಿದವರು 32ನೇ ವಯಸ್ಸಿನವರೆಗೆ 6 ಬಾರಿ ಮಾತ್ರ ಈ ಪರೀಕ್ಷೆ ಬರೆಯಬಹುದು.
2. OBC ವರ್ಗ ಮತ್ತು ಅಂಗವಿಕಲರು 35ನೇ ವಯಸ್ಸಿನವರೆಗೆ 9 ಬಾರಿ ಈ ಪರೀಕ್ಷೆ ಬರೆಯಬಹುದು.
3. SC/ST ವರ್ಗದವರು 40ನೇ ವರ್ಷದವರೆಗೆ ಎಷ್ಟು ಬಾರಿಯಾದರೂ ಪರೀಕ್ಷೆ ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!