ವಾಸ್ತು ಎನ್ನುವುದನ್ನು ತೀರಾ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ, ಹಾಗಾದರೆ ಆಗಿನ ಕಾಲದಲ್ಲಿ ಇರಲಿಲ್ಲವಾ ಎಂದರೆ ಖಂಡಿತವಾಗಿಯೂ ಇತ್ತು. ಯಾಕೆಂದರೆ ಮಾನವನ ದೇಹವೂ ಕೂಡ ಪಂಚಭೂತಗಳಿಂದ ಕೂಡಿದೆ, ಹಾಗಾಗಿ ಪಂಚಭೂತಗಳನ್ನು ಆಧರಿಸಿ ವಾಸ್ತು ಇರುವುದರಿಂದ ಆಗಿನ ಕಾಲದಲ್ಲೂ ಕಟ್ಟು ನಿಟ್ಟಾಗಿ ಇದನ್ನು ಪಾಲಿಸುತ್ತಿದ್ದರು, ಆದರೆ ಅದು ವಿಶೇಷವಾಗಿ ಏನು ಇರಲಿಲ್ಲ ಅವರ ಬದುಕಿನೊಂದಿಗೆ ಹೊಂದಿಕೊಂಡಿತ್ತು.
ಯಾವುದು ಎಲ್ಲಿದ್ದರೆ ಚೆನ್ನಾಗಿರುತ್ತೆ ಎನ್ನುವುದನ್ನು ಅವರು ತಾಳೆ ಹಾಕಿ ಆ ರೀತಿ ಮಾಡುತ್ತಿದ್ದರು. ನಾವು ನಮ್ಮ ಅಡುಗೆಮನೆ ಹಾಗೂ ದೇವರ ಕೋಣೆಗೆ ಎಲ್ಲರನ್ನೂ ಕೂಡ ಬಿಟ್ಟುಕೊಳ್ಳುವುದಿಲ್ಲ ಹಾಗಾಗಿ ನಾವು ಮನೆ ಎಂಟ್ರನ್ಸ್ ನಲ್ಲಿ ಲಿವಿಂಗ್ ರೂಮ್ ಮಾಡಿಸುತ್ತೇವೆ ಹೊರತು ಓಪನ್ ಕಿಚನ್ ಮತ್ತು ದೇವರ ಮನೆ ಮಾಡಿಸುವುದಿಲ್ಲ ಇದೇ ಸಿಂಪಲ್ ವಾಸ್ತು.
ಇದನ್ನೇ ಮುಂದುವರಿಸಿ ಹೇಳುವುದಾದರೆ ನಮ್ಮ ದೇಶದಲ್ಲಿ ಮಾತ್ರ ವಾಸ್ತು ಶಾಸ್ತ್ರವನ್ನು ನಂಬುತ್ತೇವೆ ಆಚರಿಸುತ್ತೇವೆ.
ಆದರೆ ವಿದೇಶದಲ್ಲಿ ಇದೊಂದು ಆರ್ಕಿಟೆಕ್ಟ್ ಅಷ್ಟೇ. ಇಂದಿನ ದಿನಮಾನಗಳಿಗೆ ಹೋಲಿಸಿ ಹೇಳುವುದಾದರೆ ಮಾಸ್ಟರ್ ಬೆಡ್ರೂಮ್ ಕಾನ್ಸೆಪ್ಟ್ ಇದೆ, ಅಟ್ಯಾಚ್ ಬಾತ್ರೂ ಕೂಡ ಇರುತ್ತದೆ.
ಸ್ನಾನ, ಶೌಚ ಎಲ್ಲವೂ ರೂಮಿನ ಒಳಗಡೆ ಮುಗಿಯುತ್ತದೆ ಜೊತೆಗೆ ರೂಮಿನಲ್ಲಿಯೇ ಬೆಡ್ ಮೇಲೆ ತಿನ್ನುವ ಅಭ್ಯಾಸ, ಅಲ್ಲೇ ಕುಳಿತು ವರ್ಕ್ ಫ್ರಂ ಹೋಂ ಇರುವುದರಿಂದ ಕೆಲಸ ಮಾಡುವ ಅಭ್ಯಾಸ ಇದು, ಆರೋಗ್ಯಕ್ಕೆ ಎಷ್ಟು ಸರಿ ಬಹುಶಃ ಹೀಗಾಗಬಾರದು ಎಂದೇ ಆಗಿನ ಕಾಲದಲ್ಲಿ ಒಂದೊಂದು ಕೆಲಸಗಳಿಗೆ ಒಂದೊಂದು ಜಾಗ ಮೀಸಲಿಟ್ಟು ಮನೆ ತುಂಬಾ ಓಡಾಡಲಿ ಆ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಲಿ ಎಂದು ಹಿರಿಯರು ಯೋಚಿಸಬಹುದು ಎಂದು ಕೂಡ ನಾವು ಥಿಂಕ್ ಮಾಡಬಹುದು ಅಲ್ಲವೇ.?
ಅಂತಹ ಮನೆಗಳಲ್ಲೂ ಇದ್ದು ನೋಡಿ ಮನಸ್ಸು ಎಷ್ಟು ಫ್ರೆಶ್ ಆಗಿರುತ್ತದೆ, ದಿನಪೂರ್ತಿ ರೂಮ್ ನ ಒಳಗಡೆ ಇದ್ದು ನೋಡಿ ಮನಸ್ಸು ಎಷ್ಟು ಹಾಳಾಗುತ್ತದೆ. ನಾವು ಎಷ್ಟರಮಟ್ಟಿಗೆ ಸಿಂಪಲ್ಲಾಗಿ ವಾಸ್ತು ನಂಬಬಹುದು ಎಂದರೆ ಅಟ್ಯಾಕ್ ಬಾತ್ರೂಮ್ ಕಾನ್ಸೆಪ್ಟನ್ನು ಮೊದಲು ಬಿಡಬೇಕು, ಆಗ ಆರೋಗ್ಯ ಮನಸ್ಸು ಹಾಳಾಗುವುದು ತಪ್ಪುತ್ತದೆ.
ಹೆಚ್ಚಿನ ಮನೆಗಳಲ್ಲಿ ಪೂರ್ವ ದಿಕ್ಕಿಗೆ ಮನೆಯ ಮುಖ್ಯದ್ವಾರ ಇರುತ್ತದೆ ಯಾಕೆಂದರೆ ಬಿಸಿಲು ಮನೆಯ ಮೇಲೆ ಬೀಳಲಿ ಎಂದು ಪೂರ್ವ ದಿಕ್ಕಿನ ಎಡಕ್ಕೆ-ಬಲಕ್ಕೆ ಈಶಾನ್ಯ ಹಾಗೂ ಆಗ್ನೇಯ ದಿಕ್ಕು ಬರುವುದರಿಂದ ಆಗ್ನೇಯದಲ್ಲಿ ಅಡುಗೆ ಮನೆ ಈಶಾನ್ಯದಲ್ಲಿ ದೇವರ ಕೋಣೆ ಮಾಡಿಸುತ್ತಿದ್ದರು.
ಯಾಕೆಂದರೆ, ಬೆಳಗ್ಗೆ ಎದ್ದ ಕೂಡಲೇ ನಾವು ಆ ಸ್ಥಳಗಳಿಗೆ ಮೊದಲು ಹೋಗುವುದು. ಇನ್ನು ಕೆಲವು ಮನೆಗಳಲ್ಲಿ ಮನೆಗೆ ಎರಡು ದ್ವಾರಗಳು ಇದ್ದರೆ ಒಳ್ಳೆಯದು ಎಂದು ಪೂರ್ವ ಹಾಗೂ ಪಶ್ಚಿಮ ದಿಕ್ಕು ಎರಡಕ್ಕೂ ಬಾಗಿಲು ಬಿಡಿಸಿರುತ್ತದೆ, ಸೂರ್ಯ ಮುಳುಗುವಗಳು ಕೂಡ ಬಿಸಿಲು ಹಾಗೂ ಬೆಳಕು ಬರಲಿ ಎನ್ನುವ ಉದ್ದೇಶ ಇರುತ್ತದೆ.
ಲೀಸ್ (ಬೋಗ್ಯಕ್ಕೆ) ತೆಗೆದುಕೊಂಡಿರುವ ಮನೆ ಅಂಗಡಿ ಅಥಾವ ಜಮೀನಿನ ಮೇಲೆ ಲೋನ್ ( ಸಾಲ ) ಪಡೆಯಬಹುದಾ.? ಹೊಸ ರೂಲ್ಸ್.!
ಉತ್ತರ ಹಾಗೂ ದಕ್ಷಿಣಕ್ಕೆ ಬಾಗಿಲಿಡಿಸುವುದು ಕಡಿಮೆ, ಯಾಕೆಂದರೆ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎನ್ನುತ್ತಾರೆ, ಉತ್ತರ ದಿಕ್ಕು ಕುಬೇರ ದಿಕ್ಕು ಆಗಿರುವುದರಿಂದ ಇದನ್ನು ಓಪನ್ ಇಡಲು ಇಷ್ಟಪಡುವುದಿಲ್ಲ. ಆದರೆ ಇದರ ಹಿಂದಿನ ಕಾರಣ ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ಅಯಸ್ಕಾಂತಿಯ ಶಕ್ತಿ ಇರುವುದರಿಂದ ಇದು ಎಫೆಕ್ಟ್ ಮಾಡಬಹುದು ಎಂದೇ ಇರಬಹುದು.
ಉತ್ತರ ದಿಕ್ಕಿನಲ್ಲಿ ಲಿವಿಂಗ್ ರೂಮ್ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅದು ಅನುಕೂಲ ಎನ್ನಲಾಗುತ್ತದೆ ಹಾಕಿದ್ದಾಗ ಹೆಚ್ಚು ಅವಕಾಶಗಳು ಸಿಗುತ್ತದೆ ಎಂದು ಸಹ ಹೇಳುತ್ತಾರೆ. ಈ ವಾಸ್ತು ವಿಚಾರದಲ್ಲಿ ಸರಿಯಾಗಿ ತೀರ್ಮಾನಕ್ಕೆ ಬರುವುದೇ ಅಸಾಧ್ಯ. ಯಾಕೆಂದರೆ ಕೆಲವು ಕಟ್ಟಡಗಳಲ್ಲಿ ವಾಸ್ತು ಬದಲಾಯಿಸಿದ ಮೇಲೆ ಬಿಸಿನೆಸ್ ಚೆನ್ನಾಗಿ ಆದ ಉದಾಹರಣೆಗಳು ಇವೆ.
ಕೆಲವು ಮನೆಗಳಲ್ಲಿ ವಾಸ್ತು ಸರಿಪಡಿಸಿಕೊಟ್ಟ ಮೇಲೆ ಸಮಸ್ಯೆಗಳು ಪರಿಹಾರ ಆದ ಉದಾಹರಣೆಗಳು ಇದೆ ಮತ್ತು ಇದನ್ನು ನಂಬದವರು ಕೂಡ ಚೆನ್ನಾಗಿ ಇದ್ದಾರೆ ಹಾಗಾಗಿ ಕಷ್ಟಪಟ್ಟು ದುಡಿವ ವ್ಯಕ್ತಿ ಆರೋಗ್ಯದ ಕಡೆ ಕಾಳಜಿ ಮಾಡುವವರು ಮತ್ತು ಮನಸ್ಸನ್ನು ಸದಾ ಸಕರಾತ್ಮಕ ಚಿಂತನೆಗಳಲ್ಲಿ ರೂಢಿಸಿಕೊಂಡಿರುವವರು ಹೇಗಿದ್ದರೂ ಚೆನ್ನಾಗಿರುತ್ತಾರೆ ಎಂದೇ ಹೇಳಬಹುದು.