ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress government) ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಸರ್ಕಾರದ ಅಂಕಿ ಅಂಶದ ಪ್ರಕಾರ 1.10 ಕೋಟಿ ಮಹಿಳೆಯರು ಅರ್ಹರಾಗಿದ್ದಾರೆ. ಈಗಾಗಲೇ ಮೊದಲನೇ ಕಂತಿನ ಹಣ ಕೂಡ ಆಗಸ್ಟ್ 30 ರಿಂದ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ.
ಆದರೆ ಲಕ್ಷಾಂತರ ಮಹಿಳೆಯರು ಮೊದಲನೇ ಕಂತಿನ ಹಣವನ್ನು (august month money) ಪಡೆಯಲಾಗದೆ ವಂಚಿತರಾಗಿದ್ದಾರೆ. ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರು ಎರಡನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಮೊದಲನೇ ಕಂತಿನ ಹಣವನ್ನು ಪಡೆಯಲಾಗದವರು ತಮಗೆ ಹಣ ಬರೆದಿದ್ದಕ್ಕೆ ಬೇಸರ ಪಟ್ಟುಕೊಂಡಿದ್ದು ಯಾವ ಕಾರಣದಿಂದ ಎಂದು ತಿಳಿಯಲಾಗದೆ ಗೊಂದಲಕ್ಕೊಳಗಾಗಿದ್ದಾರೆ.
ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ, ಹಾರ್ಟ್ ಅಟ್ಯಾಕ್ ಆಗುತ್ತೆ.!
ಅವರಿಗೆಲ್ಲ ಅತಿ ಮುಖ್ಯವಾದ ಮಾಹಿತಿ ಇದೆ ಅದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ 2,000 ಸಹಾಯಧನವನ್ನು ಪಡೆಯದೇ ಇರುವವರು ಶೀಘ್ರವಾಗಿ ತಮ್ಮ ಸಮಸ್ಯೆಗಳನ್ನು ತಿದ್ದುಪಡಿ (Corrections) ಮಾಡಿಸಿಕೊಂಡರೆ ಅವರಿಗೆ ಖಂಡಿತವಾಗಿಯೂ ಮೊದಲನೇ ಕಂತಿನ ಹಣ ಸಿಗಲಿದೆ.
ಸರ್ಕಾರ ಅದಕ್ಕಾಗಿ ಸಮಯಾವಕಾಶ ಮಾಡಿಕೊಟ್ಟಿದೆ. ಆದರೆ ಈ ಅವಧಿ ಒಳಗೆ ಅವರು ಇದನ್ನು ಸರಿಪಡಿಸಿಕೊಳ್ಳದೆ ಹೋದಲ್ಲಿ ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ ಆದ ಮೇಲೆ ಅವರು ಮೊದಲನೇ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಸಮಸ್ಯೆಗಳು ಸರಿ ಪಡಿಸಿಕೊಂಡರೂ ಕೇವಲ ಎರಡನೇ ಕಂತಿನ ಹಣವನ್ನು ಮಾತ್ರ ಪಡೆಯಲು ಅರ್ಹರಿರುತ್ತಾರೆ.
ಅಕ್ಟೋಬರ್ 15ನೇ ರಿಂದ ಎರಡನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ತಪ್ಪದೆ ಶೀಘ್ರವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲಾಗದವರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ.
ಗೃಹಲಕ್ಷ್ಮಿ ಯೋಜನೆ ಹಣ ಬರದಿರಲು ಈ ಸಮಸ್ಯೆಗಳು ಕಾರಣವಿರಬಹುದು:-
● ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿರುವ ಪ್ರಕಾರ 8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಅವರ ಬ್ಯಾಂಕ್ ಖಾತೆಗಳಿಗೆ ಹಣ ತುಂಬಿಸಲು ಸಾಧ್ಯವಾಗಿಲ್ಲವಂತೆ. ಹಾಗಾಗಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ಆಕ್ಟಿವ್ ಆಗೀ ಇಟ್ಟುಕೊಂಡರೆ ಹಣ ವರ್ಗಾವಣೆಯಾಗುತ್ತದೆ.
● ಬ್ಯಾಂಕ್ ಖಾತೆ ಆಕ್ಟಿವ್ ಆಗಿ ಇದ್ದರು DBT ಮೂಲಕ ಹಣ ವರ್ಗಾವಣೆಯಾಗಬೇಕು ಎಂದರೆ ಆ ಖಾತೆಗೆ ಆಧಾರ್ ಸೀಟಿಂಗ್ ಮತ್ತು NPCI ಮ್ಯಾಪಿಂಗ್ ಆಗಿರಬೇಕು. ಈ ಕೆಲಸ ಆಗಿಲ್ಲ ಎಂದರೆ ಕೂಡಲೇ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಅರ್ಜಿ ಕೊಟ್ಟು ಇದನ್ನು ಪೂರ್ತಿಗೊಳಿಸಿ.
● ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಈ ಮೂರರಲ್ಲೂ ಕೂಡ ಹೆಸರು ಒಂದೇ ರೀತಿ ಇರಬೇಕು. ಇದರಲ್ಲಿ ವ್ಯತ್ಯಾಸವಿದ್ದರೆ ಎಲ್ಲಾ ದಾಖಲೆಗಳನ್ನು ಒಂದೇ ಹೆಸರು ಬರುವಂತೆ ತಿದ್ದುಪಡಿ ಮಾಡಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿ.
● ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸುವುದು ಕಡ್ಡಾಯ, ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಿಸಿ. ಈ ಕಾರಣದಿಂದ ಕೂಡ ನೀವು ಹಣದಿಂದ ವಂಚಿತರಾಗಿರಬಹುದು.
● ಒಂದು ವೇಳೆ ನಿಮಗೆ ನಿಮ್ಮ ಸಮಸ್ಯೆ ಬಗ್ಗೆ ಮಾಹಿತಿ ಗೊತ್ತಾಗುತ್ತಿಲ್ಲ ಎಂದರೆ ನಿಮ್ಮ ತಾಲೂಕಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭೇಟಿ ಕೊಟ್ಟು CDPO ಅಧಿಕಾರಿಗಳ ಬಳಿ ಇರುವ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಸಿ ತಿಳಿದುಕೊಳ್ಳಿ, ಈ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮಂಜೂರಾತಿ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಹೋದಲ್ಲಿ ನಿಮ್ಮ ಯಾವ ಸಮಸ್ಯೆಯಿಂದ ಹಣ ಬಂದಿಲ್ಲ ಎನ್ನುವ ಮಾಹಿತಿಯನ್ನು ಸ್ಥಳದಲ್ಲಿಯೇ ತಿಳಿಸುತ್ತಾರೆ.