ಹೃದಯಘಾತ (Heart attack ) ಮತ್ತು ಕಾರ್ಡಿಯಾಕ್ ಅರೆಸ್ಟ್ (Cardiac arrest) ಎನ್ನುವುದನ್ನು ಇತ್ತೀಚಿಗೆ ಹೆಚ್ಚು ಕೇಳುತ್ತಿದ್ದೇವೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದಿರುವುದೇ ಇಲ್ಲ ಕಾರಣ ಕೇಳಿದರೆ ಕಾರ್ಡಿಯಾಕ್ ಆರೆಸ್ಟ್. ಮತ್ತು ಹೃದಯಾಘಾತದಿಂದ ಆಸ್ಪತ್ರೆ ಸೇರಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ.
ಈ ಎರಡು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾದರೂ ಹೃದಯಾಘಾ.ತವಾದಾಗ ವ್ಯಕ್ತಿ ಚೇತರಿಸಿ ಕೊಳ್ಳುವುದಕ್ಕೆ ಅವಕಾಶವಿರುತ್ತದೆ, ಆದರೆ ಕಾರ್ಡಿಯಾಕ್ ಅರೆಸ್ಟ್ ನಲ್ಲಿ ಒಂದೇ ಬಾರಿಗೆ ಹೃದಯ ಸ್ತಂಭನವಾಗಿ ಪ್ರಾಣ ಹೋಗಿ ಬಿಡುತ್ತದೆ. ಇವೆರಡರ ನಡುವಿನ ಸಣ್ಣ ವ್ಯತ್ಯಾಸವೇನು ಮತ್ತು ಕಾರಣಗಳು ಏನು? ಇದು ಉಂಟಾಗುವ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳು ಏನು? ಆ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇಬೇಕು.
ಹೃದಯಘಾತ ಅಥವಾ ಕಾರ್ಡಿಯಾಕ್ ಆರೆಸ್ಟ್ ಗೆ ಕಾರಣಗಳನ್ನು ನೋಡುವುದಾದರೆ ಜನೆಟಿಕ್ ರೀಸನ್ ಇಂದ ಕೂಡ ಈ ಸಮಸ್ಯೆಗಳು ಬರುತ್ತವೆ. ಕುಟುಂಬದಲ್ಲಿ ಯಾರಿಗಾದರೂ ಈ ರೀತಿ ಆಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು ಮತ್ತು ತಪ್ಪಾದ ಆಹಾರ ಪದ್ಧತಿಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಅತಿಯಾದ ಒತ್ತಡ, ಧೂಮಪಾನ ಮಧ್ಯಪಾನದ ದುರಭ್ಯಾಸ ಇವು ಕೂಡ ಹೃದಯದ ಸಮಸ್ಯೆಗೆ ಕಾರಣವಾಗುತ್ತವೆ.
ದೇಹದ ಎಲ್ಲಾ ಭಾಗಗಳಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ರೆಸ್ಟ್ ಇರುತ್ತದೆ ನಾವು ಮಲಗಿರುವಾಗ ಎಲ್ಲಾ ಆರ್ಗನ್ಗಳು ರೆಸ್ಟ್ ಪಡೆದುಕೊಂಡರು ಹೃದಯ ಕೆಲಸ ನಿಲ್ಲಿಸುವುದಿಲ್ಲ. ಒಬ್ಬ ವ್ಯಕ್ತಿ ಹುಟ್ಟಿದಾಗಿನಿಂದ ಆತನ ಉಸಿರು ನಿಲ್ಲುವವರೆಗೂ ಕೂಡ ನಿರಂತರವಾಗಿ ಆತನ ಹೃದಯ ಕೆಲಸ ಮಾಡುತ್ತಿರುತ್ತದೆ. ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತ ಸಂಚಾರ ಮಾಡುವುದರ ಜೊತೆ ಆಕ್ಸಿಜನ್ ಕೂಡ ಒದಗಿಸುವುದು ಹೃದಯವೇ.
ಈ ರಕ್ತ ಪರಿಚಲನೆಗೆ ಅಡ್ಡಿಯಾಗಿ ರಕ್ತನಾಳಗಳಲ್ಲಿ ಬ್ಲಾಕೇಜ್ (blood vessels blockage) ಉಂಟಾದಾಗ ಹಾರ್ಟ್ ಅಟ್ಯಾಕ್ ಆಗುತ್ತದೆ. ಬ್ಲಾಕೇಜ್ ಆಗಲು ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದು ಮತ್ತು ಈ ಮೇಲೆ ತಿಳಿಸಿದ ಕಾರಣಗಳು ಕಾರಣವಾಗಿರುತ್ತವೆ ಹೃದಯಘಾತದ ಮುನ್ನ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ. ನಾವು ಬ್ಲಡ್ ಟೆಸ್ಟ್ ಮಾಡಿಸಿದಾಗ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ ತಪ್ಪದೇ ಹೃದಯದ ಸಮಸ್ಯೆ ಬರುತ್ತದೆ ಎಂದು ಅರ್ಥ.
BP ಹೆಚ್ಚಾಗುವುದು, ಕುತ್ತಿಗೆಯಿಂದ ಹಿಡಿದು ನಾಭಿವರೆಗೆ ಎಡಭಾಗದಲ್ಲಿ ನೋವು ಬರುತ್ತಿರುವುದು, ನಿದ್ರೆ ಮಾಡುವಾಗ ಕೂಡ ಪದೇ ಪದೇ ಎಚ್ಚರಿಕೆ ಆಗುತ್ತಿದ್ದರೆ, ವಿಪರೀತವಾಗಿ ಯಾವಾಗಲೂ ಬೆವರುತ್ತಿದ್ದರೆ, ಮೆಟ್ಟಿಲು ಏರುವುದು ಕಷ್ಟ, ಉಸಿರಾಡುವುದು ಕಷ್ಟ ಈ ರೀತಿಯ ಫೀಲ್ ಬರುತ್ತಿದ್ದರೆ ಅದು ಹೃದಯಘಾ.ತ ಉಂಟಾಗುವ ಲಕ್ಷಣ.
ಕಾರ್ಡಿಯಕ್ ಅರೆಸ್ಟ್ ಆಗುವ ಮುನ್ನ ಈ ರೀತಿ ಯಾವುದೇ ಲಕ್ಷಣಗಳು ಗೊತ್ತಾಗುವುದಿಲ್ಲ ಒಂದೇ ಬಾರಿಗೆ ಹೃದಯವು ತನ್ನ ಕೆಲಸವನ್ನು ನಿಲ್ಲಿಸಿರುವುದರಿಂದ ಇಡೀ ದೇಹವೇ ಸ್ತಬ್ಧವಾಗಿ ಬಿಡುತ್ತದೆ ಮತ್ತೆ ಅದು ಕೋ ಆರ್ಡಿನೇಷನ್ ಆಗುವುದು ಕಷ್ಟ, ಒಂದು ವೇಳೆ ಆದರೆ ಅದು ಪುಣ್ಯ ಆದರೆ ಬಹುತೇಕ ಕೇಸ್ ಗಳಲ್ಲಿ ಈ ರೀತಿ ಸ್ತಬ್ಧವಾದ ಕಾರ್ಯ ಮತ್ತು ಚಾಲ್ತಿಯಾಗುವುದೇ ಇಲ್ಲ ಆಗ ವ್ಯಕ್ತಿ ಸಾ.ವನ್ನಪ್ಪುತ್ತಾನೆ.
ಆದ್ದರಿಂದ ನಿಯಮಿತವಾಗಿ ಪರೀಕ್ಷೆಗೆ ಒಳಪಟ್ಟು ಹೃದಯದ ಆರೋಗ್ಯ ಪರೀಕ್ಷಿಸಿಕೊಳ್ಳಿ, ಉತ್ತಮವಾದ ಆಹಾರ ಪದ್ಧತಿ ರೂಡಿಸಿಕೊಳ್ಳಿ, ದೇಹಕ್ಕೆ ವ್ಯಾಯಾಮ ಸಾಧ್ಯವಾಗದಿದ್ದರೆ ವಾಕ್ ಮಾಡಿ ಮತ್ತು ಒತ್ತಡ ರಹಿತ ಜೀವನವನ್ನು ಸಂತೋಷದಿಂದ ಕಳೆಯಿರಿ. ಹೃದಯಘಾ.ತ ಸಂಭವಿಸಿದಾಗ ಕೆಲವರು ತಕ್ಷಣ ನೀರು ಕುಡಿಸುತ್ತಾರೆ ಆದರೆ ಇದರ ಅಗತ್ಯ ಇರುವುದಿಲ್ಲ ಆದಷ್ಟು ಬೇಗ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ.