ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿ, ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಎಲ್ಲಾ ಬ್ಯಾಂಕ್ ಗಳು ಕೂಡ ತಮ್ಮ ಬ್ಯಾಂಕ್ ಗಳಲ್ಲಿನ ವಿವಿಧ ಯೋಜನೆಗಳು ಹಾಗೂ ಸಾಲ ಯೋಜನೆಗಳ ಮೇಲಿರುವ ಬಡ್ಡಿದರದ ಪರಿಷ್ಕರಣೆ ಮಾಡುತ್ತವೆ.
ಈ ಸಂಬಂಧ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಈಗಿರುವ ಗ್ರಾಹಕರ ಆಸಕ್ತಿ ಉಳಿಸಿಕೊಳ್ಳಲು ಠೇವಣಿ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಿಸುವುದು ಮತ್ತು ಸಾಲ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವುದು ಮಾಮೂಲು. ಇದೇ ರೀತಿಯಾಗಿ ಇತ್ತೀಚೆಗೆ ದೇಶದ ಪ್ರಮುಖ ಬ್ಯಾಂಕ್ HDFC ಕೂಡ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಅವುಗಳ ವಿವರ ಇಂತಿದೆ ನೋಡಿ.
ಈ ಸುದ್ದಿ ಓದಿ:- ಇಂದು ಮತ್ತು ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!
* HDFC ಬ್ಯಾಂಕ್ ಗೆ 7-29 ದಿನಗಳ ಸ್ಥಿರ ಠೇವಣಿಗೆ ಸಾಮಾನ್ಯ ಜನರಿಗೆ 4.75% ಮತ್ತು ಹಿರಿಯ ನಾಗರಿಕರಿಗೆ 5.25% ಬಡ್ಡಿ ಸಿಗುತ್ತಿದೆ.
* 30 – 45 ದಿನಗಳ ಸ್ಥಿರ ಠೇವಣಿಗೆ ಈ ಬ್ಯಾಂಕ್ ನಲ್ಲಿ ಸಾಮಾನ್ಯ ಜನರಿಗೆ 5.50% ಮತ್ತು ಹಿರಿಯ ನಾಗರಿಕರಿಗೆ 6% ಬಡ್ಡಿದರ ಸಿಗುತ್ತಿದೆ.
* 46 – 60 ದಿನಗಳ FD ಗೆ ಸಾಮಾನ್ಯ ಜನರಿಗೆ 5.75% ಮತ್ತು ಹಿರಿಯ ನಾಗರಿಕರಿಗೆ 6.25% ಸಿಗಲಿದೆ.
* 61 – 89 ದಿನಗಳ FD ಗೆ ಸಾಮಾನ್ಯ ಜನರಿಗೆ 6% ಮತ್ತು ಹಿರಿಯ ನಾಗರಿಕರಿಗೆ 6.50% ಬಡ್ಡಿದರವು ಇನ್ನು ಮುಂದೆ ಅನ್ವಯಿಸುತ್ತದೆ.
* 90 – 6 ತಿಂಗಳ FD ಗೆ ಸಾಮಾನ್ಯ ಜನರಿಗೆ 6.50% ಮತ್ತು ಹಿರಿಯ ನಾಗರಿಕರಿಗೆ 7% ಸಿಗಲಿದೆ
* 6 – 9 ತಿಂಗಳ ಸ್ಥಿರ ಠೇವಣಿಗೆ ಸಾಮಾನ್ಯ ಜನರಿಗೆ 6.65% ಹಿರಿಯ ನಾಗರಿಕರಿಗೆ 7.15% ಸಿಗುತ್ತಿದೆ.
ಈ ಸುದ್ದಿ ಓದಿ:-ನಿಮ್ಮ ಯಾವುದೇ ಆಸ್ತಿಯ ಐಡಿ, ಆಸ್ತಿಯ ನಂಬರ್ ಹಾಗೂ ವಿವರಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ವಿಧಾನ.!
* 9 – 12 ವರ್ಷದವರೆಗಿನ ಸಾಮಾನ್ಯ ಜನರಿಗೆ 6.75% ಮತ್ತು ಹಿರಿಯ ನಾಗರಿಕರಿಗೆ 7.15% ಸಿಗಲಿದೆ
* 12 – 15 ತಿಂಗಳವರೆಗೆ ಪಕ್ವವಾಗುವ FD ಗಳ ಮೇಲಿನ ಬಡ್ಡಿದರಗಳು ಕೂಡ ಹೆಚ್ಚಿಗೆಯಾಗಿದೆ. ಆ ಪ್ರಕಾರವಾಗಿ ಪ್ರಸ್ತುತವಾಗಿ ಅವಧಿಯ ಠೇವಣಿಗಳ ಮೇಲೆ 7.40% ಬಡ್ಡಿದರವನ್ನು ನೀಡಲಾಗುತ್ತಿದೆ. ಮತ್ತು ಎಂದಿನಂತೆ ಹಿರಿಯ ನಾಗರಿಕರಿಗೆ 0.5%ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ.
* 15 – 18 ತಿಂಗಳವರೆಗಿನ ಅವಧಿಯ FDಯಲ್ಲಿ ಸಾಮಾನ್ಯ ಜನರಿಗೆ 7.05% & ಹಿರಿಯ ನಾಗರಿಕರಿಗೆ 7.55% ಬಡ್ಡಿದರವು ಸಿಗಲಿದೆ
* 18 – 21 ತಿಂಗಳ ಅವಧಿಯ FD ಗೆ ಸಾಮಾನ್ಯ ನಾಗರಿಕರಿಗೆ 7.05% ಮತ್ತು ಹಿರಿಯ ನಾಗರಿಕರಿಗೆ 7.55% ಬಡ್ಡಿಯನ್ನು ಪಡೆಯಬಹುದು
* 21 – 2 ವರ್ಷಗಳ FD ಯಲ್ಲಿ ಸಾಮಾನ್ಯ ಜನರಿಗೆ 7.05% ಮತ್ತು ಹಿರಿಯ ನಾಗರಿಕರಿಗೆ 7.55% ಪ್ರತಿಶತ ಸಿಗಲಿದೆ.
ಈ ಸುದ್ದಿ ಓದಿ:-ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಅರ್ಜಿ ಆಹ್ವಾನ. ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಏನೆಲ್ಲಾ ದಾಖಲೆಗಳು ಬೇಕು.? ಎಲ್ಲಿ ಅರ್ಜಿ ಹಾಕಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* 2 – 3 ವರ್ಷಗಳ FD ಮೇಲಿನ ಬಡ್ಡಿ ದರಗಳು ಸಾಮಾನ್ಯ ಜನರಿಗೆ 7% ಮತ್ತು ಹಿರಿಯ ನಾಗರಿಕರಿಗೆ 7.50% ಅನ್ವಯವಾಗಲಿದೆ.
* HDFC ಬ್ಯಾಂಕ್ ನಲ್ಲಿ ರೂ. 2 ಕೋಟಿಯಿಂದ ರೂ. 5 ಕೋಟಿವರೆಗಿನ ಬೃಹತ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಣೆಯಾಗಿದೆ.
ಈ ಹೊಸ ದರಗಳು ಫೆಬ್ರವರಿ 3, 2024 ರಿಂದ ಜಾರಿಗೆ ಬರುತ್ತಿದ್ದು ದೇಶೀಯ, NRO ಮತ್ತು NRE ಗ್ರಾಹಕರಿಗೆ ಅನ್ವಯಿಸುತ್ತವೆ. ಇಷ್ಟು ದೊಡ್ಡ ಮೊತ್ತದ ಸ್ಥಿರ ಠೇವಣಿಗಳನ್ನು ಬೃಹತ್ ಠೇವಣಿ ಎಂದು ಕರೆಯಲಾಗುತ್ತದೆ. ಯಾವಾಗಲೂ ಸಾಮಾನ್ಯ ಠೇವಣಿಗಳಿಗಿಂತ ಈ ಬೃಹತ್ ಸ್ಥಿರ ಠೇವಣಿಗಳಿಗೆ ಬಡ್ಡಿದರಗಳು ಹೆಚ್ಚಿಗೆ ಇರುತ್ತದೆ.