ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರ (Central government) ದೇಶದ ಜನರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ರೈತ, ಕಾರ್ಮಿಕ, ಮಹಿಳೆಯರು, ವಿದ್ಯಾರ್ಥಿಗಳು, ವೃದ್ದರು ಹೀಗೆ ಪ್ರತಿವರ್ಗದ ಹಿತಕ್ಕಾಗಿ ಕಳೆದ ದಶಕದಿಂದ ಹಲವಾರು ಹೊಸ ಹೊಸ ಯೋಜನೆಗಳು ಜಾರಿಯಾಗಿದೆ.

ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ಆರೋಗ್ಯದ ಕಾಳಜಿ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಯೋಜನೆಗಳು ರೂಪುಗೊಂಡಿವೆ. ಇವುಗಳಲ್ಲೊಂದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಕಡಿಮೆ ಬೆಲೆಗೆ ಗ್ಯಾಸ್ ಕಲೆಕ್ಷನ್ ನೀಡುವ ಮತ್ತು ಮಹಿಳೆಯರನ್ನು ಹೊಗೆ ಮುಕ್ತ ವಾತಾವರಣದ ರಕ್ಷಿಸಲು ಜಾರಿಗೆ ತಂದಿರುವ ಯೋಜನೆಯಾದ ಪ್ರಧಾನಮಂತ್ರಿ ಉಜ್ವಲ್ ಯೋಜನೆ (Pradana Mantri Ujwal Yojane).

ಈ ಯೋಜನೆಗೆ ಅರ್ಹ ಕುಟುಂಬ ಗಳು ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಕಲೆಕ್ಷನ್ ಜೊತೆ ಒಂದು ಸಿಲಿಂಡರ್ ಮತ್ತು ಒಂದು ಗ್ಯಾಸ್ ಸ್ಟವ್ ಒಂದು ರೆಗ್ಯುಲೇಟರ್ ಮತ್ತು ಒಂದು ಗ್ಯಾಸ್ ಲೈಟರ್ ಪಡೆಯಬಹುದು. ಇದಲ್ಲದೆ ವಾರ್ಷಿಕವಾಗಿ 12 ಸಿಲಿಂಡರ್ ವರೆಗೆ ಪ್ರತಿ ಬಾರಿಯ ಬುಕಿಂಗ್ ಮೇಲೆ 200ರೂ. ಸಬ್ಸಿಡಿ ಕೂಡ ಸಿಗುತ್ತದೆ.

ಈ ಸುದ್ದಿ ಓದಿ:- ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಿಹಿಸುದ್ದಿ, ಹಕ್ಕು ಪತ್ರ ವಿತರಣೆ.!

ಕಳೆದ ಕೆಲವು ತಿಂಗಳ ಹಿಂದೆ ಪ್ರಧಾನ ಮಂತ್ರಿಗಳು ಉಜ್ವಲ್ ಯೋಜನೆಯಡಿ ಮಾತ್ರವಲ್ಲದೇ ಸಾರ್ವತ್ರಿಕವಾಗಿ ಪ್ರತಿಯೊಬ್ಬ LPG ಸಿಲಿಂಡರ್ (LPG cylinder) ಬಳಕೆ ಮಾಡುವ ಗ್ರಾಹಕರಿಗೆ ಮತ್ತೊಮ್ಮೆ 200 ರೂಪಾಯಿಗಳ ಸಬ್ಸಿಡಿ (subsidy ) ಘೋಷಿಸಿದೆ. ಹಣದುಬ್ಬರದ ಈ ಸಮಯದಲ್ಲಿ ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆ ತಲೆಬಿಸಿ ನಡುವೆ ಬಡ ಹಾಗೂ ಮಧ್ಯಮ ವರ್ಗದ ಜನಕ್ಕಾಗಿ ಗ್ಯಾಸ್ ಸಿಲೆಂಡರ್ ಬೆಲೆ ಇಳಿಕೆ ಮಾಡಿರುವುದು ಬಹಳ ಉಪಕಾರವಾಗಿದೆ.

ಇದರಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಡಿ ಬುಕಿಂಗ್ ಮಾಡುವ ಮಹಿಳಾ ಫಲಾನುಭವಿಗಳು ಕೇವಲ 605 ರೂ. ಗಳಿಗೆ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲು ಮತ್ತೊಂದು ಇಂತಹದೇ ಸೌಲಭ್ಯವನ್ನು ಸರ್ಕಾರ ಕಲ್ಪಿಸಿ ಕೊಟ್ಟಿದೆ.

ಇದಕ್ಕೆ ಭಾರತ್ ಗ್ಯಾಸ್ (Bharath Gas Company) ಸಿಲಿಂಡರ್ ಚಾಲನೆ ನೀಡಿದ್ದು, ಭಾರತ್ ಗ್ಯಾಸ್ LPG ಸಿಲಿಂಡರ್ ಬಳಸುತ್ತಿರುವ ಪ್ರತಿಯೊಬ್ಬ ಗೃಹಿಣಿಯ ಸುರಕ್ಷತೆ ಉದ್ದೇಶದಿಂದ ಈ ಉಪಕ್ರಮ ಆರಂಭಿಸಲಾಗಿದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವಲ್ಲಿ ಅನೇಕ ವರ್ಷಗಳಿಂದ ಭಾರತದಲ್ಲಿ ಪ್ರತಿಷ್ಠಿತ ಕಂಪನಿ ಎನಿಸಿರುವ ಭಾರತ್ ಸಿಲೆಂಡರ್ ಇದೀಗ LPG ಸಿಲಿಂಡರ್ ಪಡೆಸುತ್ತಿರುವ ಗ್ರಾಹಕರಿಗೆ ಮತ್ತೊಂದು ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ.

ಈ ಸುದ್ದಿ ಓದಿ:- ಒಂದು ವರ್ಷಕ್ಕೆ 20 ಲಕ್ಷ ಆದಾಯ ತಂದು ಕೊಡುತ್ತದೆ ಈ ಮರ, ತಳಿ ನೀಡುವ ಕಂಪನಿಯೇ ಬೈ ಬ್ಯಾಕ್ ಕೂಡ ಮಾಡುತ್ತೆ.!

ಅದೇನೆಂದರೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಪ್ಯೂರ್ ಫಾರ್ ಶ್ಯೂರ್ (pure for sure) ಫೆಸಿಲಿಟಿಯನ್ನು ಒದಗಿಸಿಕೊಡಲಿದೆ. LPG ಸಿಲಿಂಡರ್ ನ ಗುಣಮಟ್ಟ ಮತ್ತು ಸಿಲಿಂಡರ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದರಿಂದ ಗ್ರಾಹಕರು ತಾವು ಬಳಕೆ ಮಾಡುತ್ತಿರುವ ಸಿಲಿಂಡರ್ ಗುಣಮಟ್ಟದ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದರಿಂದ ಹೆಚ್ಚಿನ ಸುರಕ್ಷತೆ ಸಿಗಲಿದೆ ಎಂದು ಭಾವಿಸಲಾಗಿದೆ ಈ ಪ್ರಕಾರವಾಗಿ ಇನ್ನು ಮುಂದೆ ಭಾರತ್ ಗ್ಯಾಸ್ ಪಡೆದುಕೊಳ್ಳುವ ಗ್ರಾಹಕರಿಗೆ ಸಿಲಿಂಡರ್ ಮೇಲೆ ಟಾಂಪಾರ್ ಫ್ರೂಫ್ ಸೀಲ್ ಹಾಕಲಾಗುತ್ತದೆ. ಇದರಲ್ಲಿ ಒಂದು ಕ್ಯೂಆರ್ ಕೋಡ್ (QR code) ಸ್ಕ್ಯಾನ್ ಕೂಡ ನೀಡಲಾಗಿರುತ್ತದೆ.

ಈ ಸುದ್ದಿ ಓದಿ:- 2024 ರಲ್ಲಿ ಜಮೀನು ಅಥವಾ ಮನೆಯಲ್ಲಿ ಬೋರ್ ವೆಲ್ ಕೊರೆಸಿದರೆ ಎಷ್ಟು ಖರ್ಚಾಗಲಿದೆ ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!,

ಈ QR ಕೋಡ್ ಸ್ಕ್ಯಾನ್ ಮಾಡಿದ ನಂತರ ಸಿಗ್ನೇಚರ್ ಟ್ಯೂನ್ ನೊಂದಿಗೆ pure for sure pop up ಆಗುತ್ತದೆ. ಇದರಿಂದ ಸಿಲಿಂಡರ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ನಿಂದ ಇಲ್ಲಿಯವರೆಗಿನ ಸಿಲಿಂಡರ್ ಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ಅನುಕೂಲವನ್ನು ಭಾರತ್ ಗ್ಯಾಸ್ ಭಾರತದಲ್ಲಿ ಮೊದಲಿಗೆ ತನ್ನ ಗ್ರಾಹಕರಿಗಾಗಿ ಆರಂಭಿಸಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now