ವಾಹನ ಸವಾರರಿಗೆ ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರಿ ನಿಯಮಗಳನ್ನು ತಿಳಿದಿರ ಬೇಕಾಗಿರುವುದು ಕಡ್ಡಾಯ ಮತ್ತು ಆಗಾಗ ಸರ್ಕಾರದ ಕಡೆಯಿಂದ ಸಾರಿಗೆ ಇಲಾಖೆಯು ಘೋಷಿಸುವ ನಿಯಮಗಳು ತಿಳಿದುಕೊಂಡು ಬದ್ಧರಾಗಿರಬೇಕು.
ಇತ್ತೀಚೆಗೆ 2019 ಏಪ್ರಿಲ್ 1 ಕ್ಕಿಂತ ಮುಂಚೆ ವಾಹನಗಳನ್ನು ಖರೀದಿಸಿರುವವರಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಬಂದಿದೆ ಮತ್ತು ಅದರಂತೆ ಕಳೆದ ಆಗಸ್ಟ್ ತಿಂಗಳಿನಿಂದ ಕರ್ನಾಟಕ ರಾಜ್ಯದ ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿದ್ದಾರೆ.
ಇದರೊಂದಿಗೆ ರಾಜ್ಯದ ಸಾರಿಗೆ ಇಲಾಖೆ ಬದಲಾಯಿಸಿರುವ ಮತ್ತೊಂದು ನಿಯಮದ ಬಗ್ಗೆ ರಾಜ್ಯದ ಜನತೆಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಈ ಬಾರಿ ಸಿಹಿ ಸುದ್ದಿಯೊಂದನ್ನು ಸಾರಿಗೆ ಇಲಾಖೆ ಹಂಚಿಕೊಂಡಿದೆ. ಅದೇನೆಂದರೆ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಬಹಳ ಸುಲಭ.
ಈ ಸುದ್ದಿ ಓದಿ:- ನೀವೇ ನಿಂತು ಮನೆ ಕಟ್ಟಿಸುವುದು ಬೆಸ್ಟಾ? ಅಥವಾ ಮೇಸ್ತ್ರಿಗೆ ವಹಿಸುವುದಾದರೆ ಯಾವೆಲ್ಲ ವಿಷಯಗಳು ಗಮನದಲ್ಲಿರಬೇಕು.!
ಸಂಚಾರಿ ನಿಯಮಗಳಲ್ಲಿ ಅತಿ ಪ್ರಮುಖವಾದದ್ದು ಏನೆಂದರೆ ವಾಹನ ಸವರನು DL ಹೊಂದಿರಬೇಕು ಎನ್ನುವುದು. DL ಎನ್ನುವುದು ಆತ ವಾಹನವನ್ನು ಸಮರ್ಥವಾಗಿ ಚಲಾಯಿಸಬಲ್ಲ ಎನ್ನುವುದನ್ನು ಪರೀಕ್ಷಿಸಿ RTO ನೀಡಿರುವ ಗುರುತಿನ ಚೀಟಿಯಾಗಿದೆ. ಇದಕ್ಕಾಗಿ ಆತ ಮೊದಲು ಡ್ರೈವಿಂಗ್ ಕಲಿತು ನಂತರ ಲರ್ನಿಂಗ್ ಲೈಸನ್ಸ್ ಪಡೆದು ಆ ಬಳಿಕ DL ಅಪ್ಲಿಕೇಶನ್ ಹಾಕಿ ಪರೀಕ್ಷೆಗಳನ್ನು ಎದುರಿಸಿ DL ಪಡೆಯಬೇಕು.
ಇದಕ್ಕಿಂತ ಮುಖ್ಯ ವಿಚಾರವೇನೆಂದರೆ 18 ವರ್ಷ ಮೇಲ್ಪಟ್ಟವರು ಮಾತ್ರ ಈ ರೀತಿ DL ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಮತ್ತು 18 ವರ್ಷ ಮೇಲ್ಪಟ್ಟವರಿಗೆ DL ಇದ್ದವರಿಗೆ ಮಾತ್ರ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಅವಕಾಶ, ಒಂದು ವೇಳೆ ಈ ನಿಯಮ ಮೀರಿದರೆ ದಂಡ ಗ್ಯಾರಂಟಿ. ಹಾಗಾಗಿ 18 ವರ್ಷ ಮೇಲ್ಪಟ್ಟವರು ವಾಹನ ಚಾಲನೆ ಮಾಡಲೇಬೇಕು ಎಂದರೆ ತಕ್ಷಣವೇ ಅರ್ಜಿ ಸಲ್ಲಿಸಿ DL ಪಡೆದುಕೊಳ್ಳುವುದು ಒಳ್ಳೆಯದು.
ಈ ಸುದ್ದಿ ಓದಿ:-ಈ ರೈತನ 1-3-6 ಟೆಕ್ನಿಕ್ ಸಖತ್ ವೈರಲ್, 1 ಎಕರೆಯಲ್ಲಿ 10 ಲಕ್ಷ ಲಾಭ, ಆ ಸೂಪರ್ ಐಡಿಯಾ ಯಾವುದು ಗೊತ್ತಾ.?.
ಈ ಹಿಂದೆ ಇದು ಸ್ವಲ್ಪ ಕಠಿಣವಾಗಿತ್ತು ಯಾಕೆಂದರೆ ನಾಗರಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು RTO ಕಚೇರಿಗಳಿಗೆ ಅಪ್ಲಿಕೇಶನ್ ಹಾಕುವುದಕ್ಕಾಗಿ ಹೋಗಬೇಕಿತ್ತು ಮತ್ತು ಅಲ್ಲಿ ಕಾಯಬೇಕಿತ್ತು. ಈ ಅನಾನುಕೂಲತೆ ತಪ್ಪಿಸಲು ಈಗ ಆನ್ಲೈನ್ ನಲ್ಲಿ DL ಗಾಗಿ ಅರ್ಜಿ ಆಹ್ವಾನ ಮಾಡಲಾಗುತ್ತಿತ್ತಾದರೂ ದಾಖಲೆಗಳ ಪರಿಶೀಲನೆಗಾಗಿ RTO ಕಚೇರಿಗೆ ಹೋಗಬೇಕಾಗಿರುವುದು ಕಡ್ಡಾಯವಾಗಿತ್ತು.
ಈಗ ಅದಕ್ಕಿಂತಲೂ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಆನ್ಲೈನ್ ನಲ್ಲಿ ಟೆಸ್ಟ್ ಕೂಡ ನೀಡಲಾಗುತ್ತಿತ್ತು ಆಯ್ಕೆ ಆದವರಿಗೆ ಲೈಸೆನ್ಸ್ ಕೊಡಲಾಗುತ್ತಿದೆ ಇದರ ಕುರಿತ ವಿವರ ಹೀಗಿದೆ ನೋಡಿ.
* ಮೊದಲಿಗೆ https://transport.karnataka.gov.in/index.php/ ವೆಬ್ ಸೈಟ್ ಗೆ ಭೇಟಿ ನೀಡಿ.
* ವೆಬ್ಸೈಟ್ ಬಲಭಾಗದಲ್ಲಿ ನೀವು ಕಲಿಕಾ ಚಾಲನ ಅನುಜ್ಞಾನ ಪತ್ರ (LL) / ಚಾಲನ ಅನುಜ್ಞಾನ ಪತ್ರ (DL) ಎನ್ನುವ ಆಪ್ಷನ್ ನೋಡುತ್ತೀರಿ
* ಚಾಲನ ಅನುದಾನ ಪತ್ರ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ಮತ್ತೆ ಎರಡು ರೀತಿಯ ಆಪ್ಷನ್ ನೋಡುತ್ತೀರಿ.
ಈ ಸುದ್ದಿ ಓದಿ:-ಕೇವಲ 14 ಲಕ್ಷದಲ್ಲಿ 2BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!
* ನೇರವಾಗಿ ನೀವು ಸಾರಥಿ 4 ಪೋರ್ಟಲ್ ಗೆ ಹೋಗಿರುತ್ತೀರಿ. ಇದರಲ್ಲಿ ನೇರವಾಗಿ ನೀವೇ ಅಪ್ಲೈ ಮಾಡುವುದು ಅಥವಾ ಹತ್ತಿರದ RTO ಕಚೇರಿಗೆ ಹೋಗಿ ಅಪ್ಲೈ ಮಾಡುವುದು ಎಂಬ ಎರಡು ಆಪ್ಷನ್ ಇರುತ್ತದೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅಪ್ಲೈ ಮಾಡಿ.
* ನೀವೇನಾದರೂ ಕಲಿಕಾ ಅನುಜ್ಞಾನ ಪರವಾನಗಿ ಪಡೆಯಲು ಅಪ್ಲೈ ಮಾಡಿದ್ದರೆ ಆನ್ಲೈನ್ ನಲ್ಲಿ 15 ಅಂಕಗಳ ಪರೀಕ್ಷೆ ತೆಗೆದುಕೊಳ್ಳಬೇಕು ಇದರಲ್ಲಿ ಡ್ರೈವಿಂಗ್ ಸಂಬಂಧಿಸಿದ 15 ಪ್ರಶ್ನೆಗಳು ಇರುತ್ತವೆ, ಕನಿಷ್ಠ 10 ಪ್ರಶ್ನೆಗಳಿಗೆ ಸರಿ ಉತ್ತರಿಸಿದರೆ ಮಾತ್ರ ನಿಮ್ಮ ಅಪ್ಲಿಕೇಶನ್ ಅಕ್ಸೆಪ್ಟ್ ಆಗುವುದು.