ನೀವೇ ನಿಂತು ಮನೆ ಕಟ್ಟಿಸುವುದು ಬೆಸ್ಟಾ? ಅಥವಾ ಮೇಸ್ತ್ರಿಗೆ ವಹಿಸುವುದಾದರೆ ಯಾವೆಲ್ಲ ವಿಷಯಗಳು ಗಮನದಲ್ಲಿರಬೇಕು.!

ಈಗಿನ ಕಾಲದಲ್ಲಿ ಹೆಚ್ಚಿನ ಜನರು ಕನ್ಸ್ಟ್ರಕ್ಷನ್ ಕಂಪನಿಗಳ ಜೊತೆ ಅಗ್ರಿಮೆಂಟ್ ಮಾಡಿಕೊಂಡು ತಮ್ಮ ಮನೆ ಕಟ್ಟಿಸಿಕೊಳ್ಳುತ್ತಾರೆ. ಒಮ್ಮೆ ಈ ರೀತಿ ಕಂಪನಿಗಳಿಗೆ ಭೇಟಿ ಕೊಟ್ಟರೆ ಮನೆಗೆ ಯಾವ ಬ್ರಾಂಡ್ ಸಿಮೆಂಟ್ ಕಬ್ಬಿಣ ಹಾಕಬೇಕು, ಫಿಟ್ಟಿಂಗ್ ಗಳು ಯಾವುದು ಬೆಸ್ಟ್, ಇಂಟೀರಿಯರ್ ಡಿಸೈನ್ ಹೇಗಿರಬೇಕು ವಾಸ್ತು ಎಲ್ಲ ವಿಷಯವನ್ನು ಕೂಡ ಕಣ್ಣು ಮುಚ್ಚಿಕೊಂಡು ಮುಗಿಸಿಕೊಡುತ್ತಾರೆ.

WhatsApp Group Join Now
Telegram Group Join Now

ಆದರೆ ಈಗಲೂ ಅನೇಕ ಜನರು ಇಂಜಿನಿಯರ್ ಬಿಟ್ಟು ಮೇಸ್ತ್ರಿ ಗೆ ಕೊಟ್ಟು ಕೆಲಸ ಮಾಡಿಸುತ್ತಾರೆ ಅದು ಹಳ್ಳಿಗಳಲ್ಲಿ ಹೆಚ್ಚು ನಾವೇ ನಿಂತು ಮನೆ ಕಟ್ಟಿಸಿದರೆ ಖರ್ಚು ಕಮ್ಮಿ ಆಗಬಹುದು ಎಂದು ಈ ನಿರ್ಧಾರಕ್ಕೆ ಬಂದಿರುತ್ತಾರೆ. ಈ ರೀತಿ ನೀವೇ ಜವಾಬ್ದಾರಿ ತೆಗೆದುಕೊಂಡು ಮನೆ ಕಟ್ಟಿಸುವುದಾದರೂ ಕೆಲ ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕು ಅದರಲ್ಲೂ ಮೇಸ್ತ್ರಿ ಜೊತೆ ಮಾತನಾಡಿಕೊಂಡು ಮನೆ ಕಟ್ಟುವುದಾದರೆ ಅಗತ್ಯವಾಗಿ ನೀವು ಮಾತನಾಡಿಕೊಂಡಿರಲೇಬೇಕಾದ ಕೆಲವು ವಿಷಯಗಳ ಬಗ್ಗೆ ಮತ್ತು ಇದರ ಆಗು ಹೋಗುಗಳ ಬಗ್ಗೆ ಈ ಅಂಕಣದಲ್ಲಿ ಕೆಲ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಈ ರೈತನ 1-3-6 ಟೆಕ್ನಿಕ್ ಸಖತ್ ವೈರಲ್, 1 ಎಕರೆಯಲ್ಲಿ 10 ಲಕ್ಷ ಲಾಭ, ಆ ಸೂಪರ್ ಐಡಿಯಾ ಯಾವುದು ಗೊತ್ತಾ.?.

ಮುಖ್ಯವಾಗಿ ಮೇಸ್ತ್ರಿಗಳಿಂದ ಮನೆ ಕಟ್ಟಿಸುವುದಾದರೆ ನಿಮಗೆ ಅವರು ಪರಿಚಯಸ್ಥ ಮೇಸ್ತ್ರಿಗಳೇ ಆಗಿರಬೇಕು, ಅವರು ಕಟ್ಟಿರುವ ಬಿಲ್ಡಿಂಗ್ ಗಳನ್ನು ಈಗಾಗಲೇ ನೀವು ನೋಡಿರಬೇಕು, ಇಂತಹ ನಂಬಿಕಸ್ಥರನ್ನು ಮಾತ್ರ ನಂಬಿ ಮನೆ ಕಟ್ಟುವ ಕೆಲಸ ಕೊಡಿ ಮೇಸ್ತ್ರಿಗಳ ಜೊತೆ ಅಗ್ರಿಮೆಂಟ್ ಮಾಡಿಕೊಳ್ಳುವವರು ಕೂಡ ಕಡಿಮೆ ಈ ಬಗ್ಗೆ ಎಚ್ಚರದಲ್ಲಿ ಮತ್ತು ಮಾತುಕತೆ ಮಾಡಿದರು.

ಅದರಲ್ಲಿ ಮನೆ ಕಟ್ಟುವವರು ಬರಿ ಮನೆ ಮಾತ್ರವಲ್ಲ ಮನೆ ನಿರ್ಮಾಣದ ಜೊತೆ ಮನೆಯ ಭಾಗವೇ ಆಗಿರುವ ಸಂಪ್ ನಿರ್ಮಾಣ, ಹೊರಗೆ ಮಡ್ಡಿ ಎಳೆಯುವುದು, ಇಂಟರ್ನಲ್ ಹಾಗೂ ಎಕ್ಸ್ಟರ್ನಲ್ ಸರ್ಜಾ ಗಳು, ಕಾಂಪೌಂಡ್ ಗೋಡೆ ಮತ್ತು ಹೊರಗಿನ ಫಿನಿಶಿಂಗ್, ಪ್ಯಾರಾಫಿಟ್ ವಾಲ್, ಟಾಯ್ಲೆಟ್ ಕಟ್ಟುವುದು ಟಾಯ್ಲೆಟ್ ಒಳಗೆ ವಾಟರ್ ಪ್ರೂಫ್ ಕಾಂಪೊನೆಂಟ್ ಹಾಕಿ ಕಾಂಕ್ರೀಟ್ ಫಿನಿಶಿಂಗ್ ಈ ವಿಷಯಗಳ ಬಗ್ಗೆ ಕೂಡ ಮಾತನಾಡಿಕೊಂಡಿರಬೇಕು ಎನ್ನುವುದನ್ನು ನೆನಪಿನಲ್ಲಿ

ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ಚದರಕ್ಕೆ ಇಷ್ಟು ಎಂದು ಮಾತನಾಡಿಕೊಳ್ಳುತ್ತಾರೆ. 30*40 ಸೈಟ್ ಇದ್ದರೆ 12 ಚದರ, ಮೂರು ಫ್ಲೋರ್ ಆದರೆ 36 ಚದರ ಎಂದು ಮಾತನಾಡಿಕೊಳ್ಳುತ್ತಾರೆ ಇದು ತಪ್ಪು, 30*40 ಆದರೂ ಕೂಡ 11 ಚದರ ಬರುತ್ತದೆ ಅಷ್ಟೇ. ಒಂದು ವೇಳೆ ಕಾಂಪೌಂಡ್ ಇಲ್ಲ ಎಲ್ಲೂ ಜಾಗ ಬಿಡುವಂತಿಲ್ಲ ಎಂದಿದ್ದಾಗ ಮಾತ್ರ 12 ಚದರ. ಹಾಗಾಗಿ ಮೇಲಿನ ಫ್ಲೋರ್ ಗಳಲ್ಲಿ ರೂಫಿಂಗ್ ಏರಿಯಾ ಮೆಜರ್ಮೆಂಟ್ ತೆಗೆದುಕೊಳ್ಳಬೇಕು.

ಈ ಸುದ್ದಿ ಓದಿ:- ಈ ಕಾರಣಕ್ಕೆ BPL ಕಾರ್ಡ್ ಇದ್ದವರಿಗೂ ಸಿಗುತ್ತಿಲ್ಲ ಗೃಹಲಕ್ಷ್ಮಿ ಮತ್ತು ಅಕ್ಕಿ ಹಣ.! ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್.!

ಮೇಸ್ತ್ರಿಗಳಿಂದ ಮನೆ ಕಟ್ಟಿಸುವುದಾದರೆ ಒಂದು ಚದರಕ್ಕೆ ಕೂಲಿ 30 ರಿಂದ 32 ಸಾವಿರ ಬೀಳುತ್ತದೆ ಕೆಲವೊಮ್ಮೆ ಬಿಲ್ಡಿಂಗ್ ಅಳತೆ ಮೇಲು ಇದು ನಿರ್ಧಾರ ಆಗುತ್ತದೆ. ಕೆಲ ಮೇಸ್ತ್ರಿಗಳು ಕೆಲಸ ಅರ್ಥಕ್ಕೆ ಬಿಟ್ಟು ಹೋಗಿಬಿಡುತ್ತಾರೆ. ಹಾಗಾಗಿ ಪೇಮೆಂಟ್ ಮಾಡುವಾಗ ಎಚ್ಚರಿಕೆ ಇರಬೇಕು ಹಾಗಾಗಿ ಸ್ಟ್ರಕ್ಚರ್ ರೆಡಿ ಮಾಡುವಾಗ 50% – 60% ಮಾತ್ರ ಕೊಡಬೇಕು ನಂತರ ನಿಧಾನವಾಗಿ ಮೋಲ್ಡ್ ಹಾಕುವಾಗ ಪ್ಲಾಸ್ಟರಿಂಗ್ ಮಾಡುವಾಗ ಸ್ಲ್ಯಾಬ್ ನೋಡಿಕೊಂಡು ಕೊಡುತ್ತಾ ಹೋಗಬೇಕು.

ಯಾಕೆಂದರೆ ಕೆಲವರು ನೈಸ್ ಮಾಡಿ ಫುಲ್ ಪೇಮೆಂಟ್ ತೆಗೆದುಕೊಂಡು ನಂತರ ಕಿರಿಕ್ ಮಾಡುವವರು ಇದ್ದಾರೆ. ಯಾಕೆಂದರೆ ಪ್ಲಾಸ್ಟರಿಂಗ್ ಆದಮೇಲೂ ಕೆಲಸ ಇರುತ್ತದೆ. ಹಾಗಾಗಿ ಹಂತ ಹಂತವಾಗಿ ನೋಡಿಕೊಂಡು ಪೇಮೆಂಟ್ ಮಾಡಬೇಕು. ಈ ವಿಷಯವಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now