ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಮಾತಿದೆ. ಇದು ವ್ಯವಸಾಯ ಎಷ್ಟು ಮುಖ್ಯ ಹಾಗೆಯೇ ವ್ಯವಸಾಯ ಎಷ್ಟು ಕಷ್ಟ ಎನ್ನುವುದರ ಬಗ್ಗೆ ಕೂಡ ತಿಳಿಸಿದೆ. ಕಲಿಯುವವರೆಗೆ ಹೀಗೆ ಎಲ್ಲವೂ ಕೂಡ ಬ್ರಹ್ಮ ವಿದ್ಯೆ ಕಲಿತ ಮೇಲೆ ನೀರು ಕುಡಿದಷ್ಟೇ ಸುಲಭ. ಕೃಷಿ ಕೂಡ ಹಾಗೆ ಕೃಷಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ.
ಒಮ್ಮೆ ಮಣ್ಣನ್ನು ನಂಬಿ ಕೃಷಿ ಮಾಡಲೆಂದು ನಿರ್ಧರಿಸಿ ಶ್ರದ್ದೆ ಭಕ್ತಿಯಿಂದ ಮೈಬಗ್ಗಿಸಿ ದುಡಿದರೆ ಅದೇ ರೀತಿ ಆಧುನಿಕ ತಂತ್ರಜ್ಞಾನವನ್ನು ಯಂತ್ರೋಪಕರಣಗಳನ್ನು ಮತ್ತು ಆಧುನಿಕ ಕೃಷಿ ಪದ್ಧತಿಯನ್ನು ಕೃಷಿಗೆ ಅಳವಡಿಸಿಕೊಂಡರೆ ಯಾವುದೇ ಐಟಿ ಕಂಪನಿ ಗಿಂತ ಕಡಿಮೆ ಇಲ್ಲದಂತೆ ರೈತನು ಆದಾಯ ಕಾಣಬಹುದು.
ಈ ಸುದ್ದಿ ಓದಿ:- ಈ ಕಾರಣಕ್ಕೆ BPL ಕಾರ್ಡ್ ಇದ್ದವರಿಗೂ ಸಿಗುತ್ತಿಲ್ಲ ಗೃಹಲಕ್ಷ್ಮಿ ಮತ್ತು ಅಕ್ಕಿ ಹಣ.! ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್.!
ಕನಿಷ್ಠ ಒಂದು ಎಕರೆ ಜಮೀನು ಇದ್ದರೂ ಕೂಡ 10 ಲಕ್ಷದವರೆಗೆ ಲಾಭ ಪಡೆಯಬಹುದು ನಮ್ಮ ದೇಶದಲ್ಲಿ ಕೃಷಿ ಭೂಮಿಯು ಸಣ್ಣ ಪ್ರಮಾಣದಲ್ಲಿ ಹಂಚಿ ಹೋಗಿದೆ. ಕನಿಷ್ಠ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ.
ಇರುವ ಇಷ್ಟೇ ಭೂಮಿಯಲ್ಲಿ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆ ಮಾಡಿಕೊಂಡು ಮಿಶ್ರ ಬೆಳೆ, ತೋಟಗಾರಿಕೆ ಬೆಳೆ ಅಥವಾ ವಾಣಿಜ್ಯ ಬೆಳೆಗಳನ್ನು ಸರಿಯಾದ ವಿಧಾನದಲ್ಲಿ ಬೆಳೆದರೆ ಅಥವಾ ಸಮಗ್ರ ಕೃಷಿಯನ್ನು ಅನುಸರಣೆ ಮಾಡಿದರೆ ಯಾವುದೇ ಒಂದು ಕಂಪನಿಯಲ್ಲಿ ಕಾರ್ಮಿಕನಾಗಿ ದುಡಿಯುವ ಬದಲು ತನ್ನ ಸ್ವಂತ ಜಮೀನಿನಲ್ಲಿ ತನ್ನ ಸ್ವಂತ ಊರಿನಲ್ಲಿ ಇದ್ದುಕೊಂಡು ಕೈ ತುಂಬಾ ಹಣ ನೋಡಬಹುದು.
ಈ ಸುದ್ದಿ ಓದಿ:- ಕಾರ್ ಬೈಕ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ನಿಮ್ಮ ವಾಹನ ಸೀಜ್.!
ತನ್ನ ಮಕ್ಕಳಿಗೆ ಒಳ್ಳೆಯ ಎಜುಕೇಶನ್ ಕೊಡಿಸಬಹುದು ತಾನು ಆಸೆ ಪಟ್ಟ ಹಾಗೆ ಮನೆ ಕಟ್ಟಿಕೊಳ್ಳಬಹುದು, ಕೈ ತುಂಬಾ ಹಣ ನೋಡಬಹುದು. ಆದರೆ ಒಂದು ಎಕರೆ ಭೂಮಿಯಲ್ಲಿ ಇಷ್ಟೆಲ್ಲಾ ಮಾಡಲು ಸಾಧ್ಯವೇ ಎಂದರೆ ಬುದ್ಧಿವಂತಿಕೆ ಇದ್ದರೆ ಎಲ್ಲವೂ ಸಾಧ್ಯ. ಕನಿಷ್ಠ ಒಂದೇ ಎಕರೆ ಭೂಮಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿಗೆ ಆದಾಯ ಪಡೆಯುತ್ತಿರುವ ಮಹಾರಾಷ್ಟ್ರದ ವಿಶ್ವನಾಥ ಎನ್ನುವ ರೈತನ ಉದಾಹರಣೆಯನ್ನು ಇಂದು ನಾವು ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ.
ಆತನ ಯಶಸ್ಸಿನ ಸೀಕ್ರೆಟ್ ಏನೆಂದರೆ ಮಲ್ಟಿ ಲೆಯರ್ ಫಾರ್ಮಿಂಗ್ ಮಲ್ಟಿ ಕ್ರಾಪಿಂಗ್ ಮಿಶ್ರ ಬೆಳೆ ಪದ್ಧತಿ, ಈ ಪದ್ಧತಿಯನ್ನು ಬಳಸಿಕೊಂಡು ವಿಶ್ವನಾಥ್ ಮಾಡಿದ ಐಡಿಯಾ ಏನೆಂದರೆ ಮೊದಲು ಭೂಮಿಯ ಒಳಗಡೆ ಬೆಳೆಯುವ ತರಕಾರಿ ಹಾಕುವುದು, ಇದಾದ ನಂತರ ಭೂಮಿಗೆ ಅಂಟಿಕೊಳ್ಳುವ ಬೆಳೆಗಳನ್ನು ಹಾಕುವುದು.
ಈ ಸುದ್ದಿ ಓದಿ:- ಕೇವಲ 14 ಲಕ್ಷದಲ್ಲಿ 2BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!
ಇದರ ನಂತರ ಮೂರು ಅಡಿ ಉದ್ದ ಬೆಳೆಯುವ ಬೆಳೆ , ಆರು ಅಡಿ ಎತ್ತರಕ್ಕೆ ಬೆಳೆಯುವ ಬೆಳೆ ಕೊನೇದಾಗಿ ಮರದ ರೂಪಕ್ಕೆ ಬರುವ ಬೆಳೆ ಹೀಗೆ ಒಂದೇ ಬಾರಿಗೆ ಐದು ರೀತಿಯ ಬೆಳೆಯನ್ನು ಹಾಕಿ ದಿನದ ಆದಾಯ, ತಿಂಗಳ ಆದಾಯ ವರ್ಷದ ಆದಾಯ ನೋಡುತ್ತಿದ್ದಾನೆ. ಈ ಪದ್ಧತಿಯಲ್ಲಿ ಹಲವಾರು ರೀತಿಯ ಉಪಯೋಗಗಳಿದ್ದು ಭೂಮಿ ಮತ್ತು ನೀರಿನ ಸಮರ್ಪಕ ಬಳಕೆಯಾಗುತ್ತಿದೆ.
ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ಒಂದು ಬೆಳೆಯಲ್ಲಿ ನಷ್ಟವಾದರೆ ಇನ್ನೊಂದು ಬೆಳೆಯಲಿ ಕೈ ಹಿಡಿಯುತ್ತದೆ, ಭೂಮಿಫಲವತ್ತತೆ ವೃದ್ಧಿಯಾಗುತ್ತದೆ. ಅದರ ಜೊತೆಗೆ ಭೂಮಿಗೆ ಹಾಕುವ ಗೊಬ್ಬರದ ಸದ್ಭಳಕೆಯೂ ಆಗುತ್ತದೆ. ಕಡಿಮೆ ಭೂಮಿಯಲ್ಲಿ ಸೀಸನ್ ಗೆ ಅವಶ್ಯಕತೆ ಇರುವ ಮಿಶ್ರ ಬೆಳೆಗಳನ್ನು ಬೆಳೆದು ಲಾಭಗಳಿಸಬಹುದು. ಈ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
ಈ ಸುದ್ದಿ ಓದಿ:- 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..