ಮನೆ ಎನ್ನುವುದು ಪ್ರತಿಯೊಬ್ಬರ ಜೀವಮಾನದ ಕನಸು. ಈ ಹಿಂದೆ ಒಬ್ಬ ವ್ಯಕ್ತಿ ತಾನು ವಯಸ್ಸು ಇರುವವರೆಗೂ ಕೂಡ ದುಡಿದು ಉಳಿಸಿದ ಹಣದಲ್ಲಿ ವಯಸ್ಸಾದ ಕಾಲಕ್ಕೆ ಆಶ್ರಯಕ್ಕಾಗಿ ತನ್ನ ಉಳಿತಾಯದ ಅನುಸಾರವಾಗಿ ಮನೆ ಮಾಡಿಕೊಳ್ಳುತ್ತಿದ್ದ ಆದರೆ ಈಗ ಟ್ರೆಂಡ್ ಬದಲಾಗಿದೆ ಇರುವ ಕಡಿಮೆ ಆಯುಷ್ಯದಲ್ಲಿ ಈ ರೀತಿ ಕೊನೆವರೆಗೂ ಕೂಡ ಕನಸುಗಳಿಗಾಗಿ ಕಾಯಲು ಸಾಧ್ಯವಿಲ್ಲ ಎಂದು ಯುವ ಜನತೆ ದುಡಿಯಲು ಆರಂಭಿಸಿದ ಸಮಯದಲ್ಲಿಯೇ ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡು ಮನೆ ಕಟ್ಟುವ ಸಾಹಸಕ್ಕೆ ಕೈ ಹಾಕುತ್ತಾರೆ.
ಈಗ ಇವರ ಈ ರೀತಿಯ ಕನಸುಗಳಿಗೆ ಸರ್ಕಾರಗಳು ಕೂಡ ಕೈಜೋಡಿಸುತ್ತಿವೆ. ಮನೆ ಇಲ್ಲದವರಿಗೆ ಸ್ವಂತ ಮನೆ ನಿರ್ವಹಿಸಿಕೊಳ್ಳುವುದಕ್ಕೆ ಸರ್ಕಾರಗಳಿಂದ ವಸತಿ ಯೋಜನೆಗಳ ಮೂಲಕ ಅಲ್ಪಮಟ್ಟದ ಆರ್ಥಿಕ ನೆರವು ನೀಡಲಾಗುತ್ತಿದೆ. ಇದನ್ನು ಮೀರಿ ಹಣಕಾಸಿನ ಅವಶ್ಯಕತೆ ಇದ್ದರೆ ಖಂಡಿತವಾಗಿಯೂ ಖಾಸಗಿ ಅಥವಾ ಸರ್ಕಾರಿ ಬ್ಯಾಂಕ್ ಗಳ ಕಡೆ ಮುಖ ಮಾಡುತ್ತೇವೆ.
ಈ ಸುದ್ದಿ ಓದಿ:- KSRLPS ನೇಮಕಾತಿ 2024, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ
ಈಗ ಆಕರ್ಷಕ ರೀತಿಯ ಬಡ್ಡಿ ದರದಲ್ಲಿ ಮತ್ತು ಅತಿ ಕಡಿಮೆ EMI ಗಳಲ್ಲಿ ಕಡಿಮೆ ವರ್ಷಗಳಲ್ಲಿ ಮುಕ್ತಾಯವಾಗುವ ಅನುಕೂಲತೆಯಲ್ಲಿ ಬ್ಯಾಂಕ್ ಗಳು ಕೂಡ ಮನೆ ಸಾಲ (Home loan) ನೀಡುತ್ತಿವೆ. ನೀವು ಕೂಡ ಈ ರೀತಿ ಮನೆ ಕಟ್ಟುವ ಆಸೆ ಇದ್ದುಕೊಂಡು ಹಣಕಾಸಿನ ಪರಿಸ್ಥಿತಿ ಕಷ್ಟವಾಗುತ್ತಿದ್ದರೆ ಬ್ಯಾಂಕ್ ಲೋನ್ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ನಾವು ಈ ಲೇಖನದಲ್ಲಿ ತಿಳಿಸುತ್ತಿರುವ ವಿಚಾರಗಳನ್ನು ಗಮನಿಸಿ. ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರದಲ್ಲಿ ಎಷ್ಟು ಮೊತ್ತದವರೆಗೆ ಹೋಂ ಲೋನ್ ಸಿಗುತ್ತಿದೆ ಎನ್ನುವುದರ ವಿವರವನ್ನು ಇಲ್ಲಿ ತಿಳಿಸುತ್ತೇವೆ.
* ಬ್ಯಾಂಕ್ ಆಫ್ ಇಂಡಿಯಾ (Bank of India):- ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬಡ್ಡಿ ದರದಲ್ಲಿ ತನ್ನ ಬ್ಯಾಂಕ್ ಗ್ರಾಹಕರಿಗೆ ಗೃಹ ಸಾಲಗಳನ್ನು ನೀಡುತ್ತಿದೆ. ಈ ಬ್ಯಾಂಕ್ ನಲ್ಲಿ ಗೃಹಸಾಲದ ಮೇಲಿನ ವಾರ್ಷಿಕ ಬಡ್ಡಿದರಗಳು 8.30% ನಿಂದ ಆರಂಭವಾಗುತ್ತದೆ. ನಿಮ್ಮ ಆಸ್ತಿ ಮೌಲ್ಯದ 90% ರವರೆಗೂ ಕೂಡ ನೀವು ಗೃಹ ಸಾಲ ಪಡೆದುಕೊಳ್ಳಬಹುದು ಮತ್ತು ಗೃಹ ಸಾಲಗಳನ್ನು ತೀರಿಸಲು 30 ವರ್ಷಗಳವರೆಗೆ ಕಾಲಾವಕಾಶ ಇರುತ್ತದೆ.
ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
* ಪಂಜಾಬ್ ನ್ಯಾಷನಲ್ ಬ್ಯಾಂಕ್ (Panjab National Bank):- ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಗೃಹ ಸಾಲಗಳ ಮೇಲಿನ ವಾರ್ಷಿಕ ಬಡ್ಡಿದರ 8.45% ನಿಂದ 10.5% ವರೆಗೂ ಇರುತ್ತದೆ. ಗ್ರಾಹಕರು ಹೊಂದಿರುವ ಸಿಬಿಲ್ ಸ್ಕೋರ್ ಆಧಾರದಲ್ಲಿ ಬಡ್ಡಿದರ ನಿರ್ಧಾರ ಆಗುತ್ತದೆ. ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆಯಬಹುದು. 30 ಲಕ್ಷದಿಂದ 75 ಲಕ್ಷದವರೆಗೂ ನಿಮಗೆ ಗೃಹ ಸಾಲ ಸಿಗುತ್ತದೆ.
* ಬ್ಯಾಂಕ್ ಆಫ್ ಬರೋಡ (Bank of Baroda):- ಬ್ಯಾಂಕ್ ಆಫ್ ಬರೋಡದಲ್ಲಿ ಕೂಡ ಸಿಬಿಲ್ ಸ್ಕೋರ್ ಆಧಾರದ ಮೇಲೆ ಬಡ್ಡಿದರ ನಿರ್ಧಾರ ಆಗುತ್ತದೆ, ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಗೃಹ ಸಾಲಗಳು ಸಿಗುತ್ತವೆ. ಆ ಪ್ರಕಾರವಾಗಿ ವಾರ್ಷಿಕವಾಗಿ
8.4% ನಿಂದ 10.6% ವರೆಗೂ ಇದು ನಿರ್ಧಾರವಾಗುತ್ತದೆ.
ಈ ಸುದ್ದಿ ಓದಿ:- ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India):- ಸರ್ಕಾರಿ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಮೊದಲನೆಯದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಕೂಡ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ ಸಿಗುತ್ತದೆ. 8.4% ವಾರ್ಷಿಕ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಮಹಿಳೆಯರಿಗೆ 0.50% ರಿಯಾಯಿತಿಯಲ್ಲಿ ಗೃಹ ಸಾಲ ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ.!