ಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕರಿಗೆ ತಮ್ಮ ಕಂಪನಿಗಳು ಉದ್ಯೋಗ ಭವಿಷ್ಯ ನಿಧಿ (EPF) ಸೌಲಭ್ಯ ಕಲ್ಪಿಸಿವೆ. ಪ್ರತಿ ತಿಂಗಳು ಕೂಡ ಕೆಲಸಗಾರನ ಸಂಬಳದಲ್ಲಿ ಈ ಭವಿಷ್ಯ ನಿಧಿ ಖಾತೆಗೆ 12% ಹಣ ಜಮೆ ಆಗುತ್ತದೆ ಮತ್ತು ಉದ್ಯೋಗದಾತರು ಕೂಡ ಇಷ್ಟೇ ಮೊತ್ತದ ಹಣವನ್ನು ಆತನ ಖಾತೆಗೆ ಜಮೆ ಮಾಡುತ್ತಾರೆ.
ಕೇಂದ್ರ ಸರ್ಕಾರದ ಉದ್ಯೋಗ ಭವಿಷ್ಯ ನಿಧಿ ಸಂಸ್ಥೆಗೆ (EPFO) ಈ ವ್ಯವಹಾರವನ್ನು ನೋಡಿಕೊಳ್ಳುತ್ತದೆ ಮತ್ತು ಇದರ ಮೇಲೆ ಬಡ್ಡಿದರವನ್ನು ಕೂಡ ನಿಗದಿಪಡಿಸಿ ಉದ್ಯೋಗದಾತನು ಕೆಲಸ ಬಿಟ್ಟ ಸಮಯದಲ್ಲಿ ಅಥವಾ ಕೆಲಸ ಮಾಡುವ ಸಮಯದಲ್ಲಿ ಅದರಲ್ಲಿ ಅಲ್ಪಭಾಗದ ಮೊತ್ತವನ್ನು ಪಡೆಯಲು ಬಯಸುವುದಾದರೆ ಆ ಬಡ್ಡಿದರದ ಅನ್ವಯ ಆತನ ಹಣವನ್ನು ಕ್ಲೈಮ್ ಮಾಡುವ ಜವಾಬ್ದಾರಿಯನ್ನು ಹೊತ್ತು ಕೊಂಡಿದೆ.
ಈಗ ಈ ರೀತಿ PF ಸೌಲಭ್ಯ ಹೊಂದಿರುವ ಉದ್ಯೋಗದಾರರಿಗೂ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2023-24ರ ಮುಂಬರುವ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇಕಡಾ 8.25% ಬಡ್ಡಿದರವನ್ನು ಘೋಷಿಸಿದೆ.
ಈ ಸುದ್ದಿ ಓದಿ:-ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ.!
ಸರ್ಕಾರದ ಈ ನಿರ್ಧಾರದಿಂದ ದೇಶದಲ್ಲಿರುವ ಕೋಟ್ಯಂತರ ಉದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡಿದೆ ಎಂದೇ ಹೇಳಬಹುದು. ಕಷ್ಟಪಟ್ಟು ಗಳಿಸಿದ ಹಣದಲ್ಲಿ ಭವಿಷ್ಯಕ್ಕಾಗಿ ಉಳಿತಾಯ ಮಾಡುವ ಜನರಿಗೆ ಬಡ್ಡಿದರ ಹೆಚ್ಚಳದ ವಿಷಯವು ಅವರ ಆರ್ಥಿಕ ಪರಿಸ್ಥಿತಿ ಮೇಲೆ ಬಹಳ ಉತ್ತಮ ಬದಲಾವಣೆ ತರುವ ಲಕ್ಷಣವಾಗಿದೆ.
ಯಾಕೆಂದರೆ ಇದನ್ನೇ ಅವಲಂಬಿಸಿ ಅನೇಕರು ತಮ್ಮ ಮಕ್ಕಳ ಮದುವೆ ಅಥವಾ ಮಕ್ಕಳ ಉನ್ನತ ಶಿಕ್ಷಣ ಅಥವಾ ಮನೆ ಕಟ್ಟುವ ಕನಸು ಅಥವಾ ರಿಟೈರ್ಮೆಂಟ್ ಇಂತಹ ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ ಈಗ ಅಂತಿಮವಾಗಿ ಕೈ ಸೇರುವ ಹಣವು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಹೆಚ್ಚಿಗಿದ್ದರೆ ಇನ್ನು ಹೆಚ್ಚಿನ ಅನುಕೂಲ ಅವರಿಗೆ ಸಿಗಲಿದೆ.
EPFO ನ ಈ ನಿರ್ಧಾರವು ಭಾರತದಲ್ಲಿನ ಉದ್ಯೋಗಿಗಳ ಕಲ್ಯಾಣ ಮತ್ತು ಆರ್ಥಿಕ ಭದ್ರತೆಗೆ ಅನುಕೂಲಕರವಾಗಿದೆ. ನಿವೃತ್ತಿ ನಿಧಿ ಎಂದು ಹೆಸರಾಗಿರುವ ಈ EPFO ಸಂಸ್ಥೆಯು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಈ ಸುದ್ದಿ ಓದಿ:-ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ನಗದು.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ.!
ಈ ಹಿಂದಿನ ವರ್ಷದಲ್ಲೂ ಕೂಡ ಮಾರ್ಚ್ 2023 ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2022-23 ರ ಆರ್ಥಿಕ ವರ್ಷಕ್ಕೆ EPF ಮೇಲಿನ ಬಡ್ಡಿ ದರದಲ್ಲಿ ಸ್ವಲ್ಪ ಹೆಚ್ಚಳವನ್ನು ಘೋಷಿಸಿತ್ತು. ಅದರ ಪ್ರಕಾರ ಹೊಸ ಬಡ್ಡಿದರವು ಶೇಕಡಾ 8.15 ರಷ್ಟಾಗಿತ್ತು. ಅದರ ಹಿಂದಿನ ವರ್ಷ 2021-22 ರಲ್ಲಿ 8.10% ಇತ್ತು. ಹೀಗೆ ಕಾರಣಾಂತರಗಳಿಂದ ಕೆಲ ವಿರಳ ಸಂದರ್ಭಗಳಲ್ಲಿ ಬಡ್ಡಿತರ ಇಳಿಕೆಯಾಗಿದ್ದು ಇದೆ.
ಆದರೆ ಅಂತಿಮವಾಗಿ ಮತ್ತೊಮ್ಮೆ ಇದು ಏರುಗತಿಯಲ್ಲಿ ಸಾಗಿದ್ದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಇತ್ತೀಚೆಗೆ 2023-24ರ ಹಣಕಾಸು ವರ್ಷಕ್ಕೆ ಶೇಕಡಾ 8.25 ಬಡ್ಡಿದರವನ್ನು ನೀಡುವ ನಿರ್ಧಾರವನ್ನು ಪ್ರಕಟಿಸಿದೆ ಮತ್ತು ಫೆಬ್ರವರಿ 10 ರ ಶನಿವಾರ ನಡೆದ CBT ಸಭೆಯಲ್ಲಿ ಈ ನಿರ್ಧಾರ ಅಂಗೀಕಾರವಾಗಿದೆ ಎಂದು ತಿಳಿದು ಬಂದಿದೆ. CBT 2023-24 ರ ಆರ್ಥಿಕ ವರ್ಷಕ್ಕೆ EPF ಬಡ್ಡಿದರ 8.25% ಎಂದು ಘೋಷಣೆಯಾಗಿರುವುದನ್ನು PTI ಕೂಡ ವರದಿ ಮಾಡಿರುವುದರಿಂದ ಇದನ್ನು ಅಧಿಕೃತ ಎಂದು ನಂಬಬಹುದು.